Tsunami Alert: ಸೊಲೊಮನ್‌ ದ್ವೀಪದಲ್ಲಿ 7.3 ತೀವ್ರತೆಯ ಭೂಕಂಪ: ಸುನಾಮಿ ಅಲರ್ಟ್

ಆಸ್ಟ್ರೇಲಿಯಾ: (Tsunami Alert) ಆಸ್ಟ್ರೇಲಿಯಾದ ಸೊಲೊಮನ್‌ ದ್ವೀಪದಲ್ಲಿ 7.3 ತೀವ್ರತೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ ಸೊಲೊಮನ್‌ ದ್ವೀಪಗಳ ಸುತ್ತ ಮುತ್ತಲಿನ ವ್ಯಾಪ್ತಿಯಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಸುನಾಮಿ ಮುನ್ನೆಚ್ಚರಿಕಾ ಕೇಂದ್ರವು ಸುನಾಮಿ ಎಚ್ಚರಿಕೆಯನ್ನು ನೀಡಿದೆ.

ಸೊಲೊಮನ್ ದ್ವೀಪಗಳಲ್ಲಿ ಇಂದು ಪ್ರಬಲ ಭೂಕಂಪ(Tsunami Alert) ಸಂಭವಿಸಿದ್ದು , ಸೊಲೊಮನ್‌ ದ್ವೀಪಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಭೂ ಮೇಲ್ಮೈಯಿಂದ 15 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರವಿತ್ತು ಎಂಬುದಾಗಿ ಅಮೆರಿಕದ ಜಿಯಾಲಾಜಿಕಲ್ ಸರ್ವೇ ಹೇಳಿದೆ. ಸೊಲೊಮನ್ ದ್ವೀಪಗಳ ಸುತ್ತಮುತ್ತಲ 300 ಕಿಮೀ ವ್ಯಾಪ್ತಿಯಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಕಾಣಿಸಿಕೊಳ್ಳಬಹುದು ಎಂದು ಶಾಂತಸಾಗರದ ಸುನಾಮಿ ಮುನ್ನೆಚ್ಚರಿಕಾ ಕೇಂದ್ರ ( PTWC) ಎಚ್ಚರಿಕೆಯನ್ನು ನೀಡಿದ್ದು, ಸುನಾಮಿ ಅಲರ್ಟ್‌ ಘೋಷಣೆ ನೀಡಲಾಗಿದೆ.

ಆಸ್ಟ್ರೇಲಿಯಾದ ಪೂರ್ವ ತೀರದಲ್ಲಿ 3.2 ತೀವ್ರತೆಯ ಭೂಕಂಪವು ಮಂಗಳವಾರ ಬೆಳಗ್ಗಿನ ಜಾವ ವರದಿಯಾಗಿತ್ತು. ಜನಪ್ರಿಯ ಪ್ರವಾಸಿ ತಾಣವಾಗಿರುವ ಬಾಟೆಮನ್ಸ್​ ಬೇ ಸಮೀಪದ ಸಮುದ್ರ ತೀರದಲ್ಲಿ ಈ ಭೂಕಂಪನದ ಕೇಂದ್ರವಿತ್ತು ಎಂದು ಜಿಯೊಸೈನ್ಸ್ ಆಸ್ಟ್ರೇಲಿಯಾ ಹೇಳಿದೆ. ಈ ಭೂಕಂಪನದ ಕೇಂದ್ರವು ಭೂಮಿಯಿಂದ 10 ಕಿಮೀ ಆಳದಲ್ಲಿತ್ತು.ಈ ಪ್ರದೇಶದಲ್ಲಿನ ದ್ವೀಪಗಳಿಗೆ ಅಪಾಯಕಾರಿಯಾದ ಅಲೆಗಳು ಅಪ್ಪಳಿಸುವ ಸಾಧ್ಯವಿರುವ ಕಾರಣ ಪೆಸಿಫಿಕ್‌ ದ್ವೀಪಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಸೊಲೊಮನ್‌ ದ್ವೀಪಗಳಲ್ಲಿ ಭೂಕಂಪವು ಸಾಮಾನ್ಯ ಮಟ್ಟಕ್ಕಿಂತ ಒಂದು ಮೀಟರ್‌ ಎತ್ತರದ ಅಲೆಗಳನ್ನು ಉಂಟುಮಾಡುವ ಸಾದ್ಯತೆಗಳಿವೆ ಮತ್ತು ಪಪುವಾ ನ್ಯೂಗಿನಿಯಾ ಮತ್ತು ವನವಾಟು ತೀರಗಳಲ್ಲಿ ಸಣ್ಣ ಅಲೆಗಳು ಉಂಟಾಗಬಹುದು ಎಂದು ಕೇಂದ್ರವು ಹೇಳಿದೆ.

ಇದನ್ನೂ ಓದಿ : Plane crash in Columbia: ಕೊಲಂಬಿಯಾ ವಿಮಾನ ಪತನ: 8 ಮಂದಿ ಸಾವು

ಇದನ್ನೂ ಓದಿ : ಚೀನಾದ ಕಾರ್ಖಾನೆಯಲ್ಲಿ ಅಗ್ನಿ ಅವಘಡ :36 ಮಂದಿ ಸಾವು, 2 ಮಂದಿ ನಾಪತ್ತೆ

ಸೊಲೊಮನ್ ದ್ವೀಪಗಳು ಪೆಸಿಫಿಕ್ ರಿಂಗ್ ಆಫ್ ಫೈರ್‌ನಲ್ಲಿದ್ದು, ಪೆಸಿಫಿಕ್ ಮಹಾಸಾಗರದ ಅಂಚಿನಲ್ಲಿರುವ ಒಂದು ಜಾಗವಾಗಿದೆ. ಅಲ್ಲಿ ಅನೇಕ ಜ್ವಾಲಾಮುಖಿ ಸ್ಫೋಟಗಳು ಮತ್ತು ಭೂಕಂಪಗಳು ಸಂಭವಿಸುತ್ತಿರುತ್ತವೆ. ಕಳೆದ ಕೆಲವು ವಾರಗಳಲ್ಲಿ ನೇಪಾಳ, ಭಾರತ ಮತ್ತು ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ನಡೆದ ಭೂಕಂಪದಿಂದ ಕನಿಷ್ಠ 162 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದರು. ಇಂಡೋನೇಷ್ಯಾದ ಜಾವಾ ಮುಖ್ಯ ದ್ವೀಪದಲ್ಲಿ ಸಂಭವಿಸಿದ 5.4 ತೀವ್ರತೆಯ ಭೂಕಂಪದಿಂದ ಜನರಿಗೆ ಅತಿಯಾದ ನಷ್ಟ ಸಂಭವಿಸಿದೆ.

ಯುಎಸ್ ಜಿಯೋಲಾಜಿಕಲ್ ಸರ್ವೆ ಡೇಟಾ ಪ್ರಕಾರ, ಭೂಕಂಪನವು ಪಶ್ಚಿಮ ಜಾವಾದ ಸಿಯಾಂಜೂರ್ ಪಟ್ಟಣದಲ್ಲಿ 10 ಕಿಮೀ ಆಳದಲ್ಲಿ ಸಂಭವಿಸಿದೆ. ಭೂಕಂಪದಿಂದಾಗಿ ಕಟ್ಟಡಗಳು ಕುಸಿದಿದ್ದು, ಹಲವರು ಸಿಕ್ಕಿಹಾಕಿಕೊಂಡಿದ್ದಾರೆ. ಕಟ್ಟಡಗಳ ಕುಸಿತದಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.

(Tsunami Alert) The Tsunami Warning Center has issued a tsunami warning as a result of a 7.3-magnitude earthquake in Australia’s Solomon Islands, with the possibility of dangerous tsunami waves appearing in the surrounding area around the Solomon Islands.

Comments are closed.