ಭಾನುವಾರ, ಏಪ್ರಿಲ್ 27, 2025
HometechnologyAirtel 49 Rs Recharge Plan : ಕೇವಲ 49 ರೂಪಾಯಿಗೆ ಅನ್‌ಲಿಮಿಟೆಡ್‌ ಡೇಟಾ, ಉಚಿತ...

Airtel 49 Rs Recharge Plan : ಕೇವಲ 49 ರೂಪಾಯಿಗೆ ಅನ್‌ಲಿಮಿಟೆಡ್‌ ಡೇಟಾ, ಉಚಿತ ಕರೆ : ಏರ್‌ಟೆಲ್‌ ಹೊಸ ರಿಚಾರ್ಜ್‌ ಫ್ಲ್ಯಾನ್‌

- Advertisement -

Airtel Rs 49 Recharge Plan : ಭಾರತದ ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಏರ್‌ಟೆಲ್‌ (Airtel) ತನ್ನ ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್‌ (Airtel New Recharge Plan)  ಫ್ಲ್ಯಾನ್‌ಗಳನ್ನು ಪರಿಚಯಿಸಿದೆ. ಇದೀಗ ಅತ್ಯಂತ ಕಡಿಮೆ ಬೆಲೆಗೆ ಹೊಸ ರಿಚಾರ್ಜ್‌ ಫ್ಲ್ಯಾನ್‌ ಘೋಷಣೆ ಮಾಡಿದೆ. ಇದರಲ್ಲಿ ಅನಿಯಮಿತ ಡೇಟಾ (Airtel Unlimited Data) ಹಾಗೂ ಕರೆ ಮಾಡುವ ಸೌಲಭ್ಯವನ್ನು ಪಡೆಯಬಹುದಾಗಿದೆ.

Airtel Rs 49 Recharge Plan Unlimited Data Free Calling at just Rs 49 Airtel New Recharge Plan
Image Credit to Original Source

ಅತ್ಯುತ್ತಮ ದರ್ಜೆಯ ನೆಟ್‌ವರ್ಕ್‌ ಮೂಲಕವೇ ಈಗಾಗಲೇ ಗ್ರಾಹಕರ ಗಮನ ಸೆಳೆದಿರುವ ಏರ್‌ಟೆಲ್‌ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್‌ ಫ್ಲ್ಯಾನ್‌ಗಳನ್ನು ನೀಡುತ್ತಿದೆ. ಈಗಾಗಲೇ 5ಜಿ ಲಾಂಚ್‌ ಮಾಡಿರುವ ಏರ್‌ಟೆಲ್‌ ಅನಿಯಮಿತ ಕರೆ ಹಾಗೂ ಡೇಟಾ ಫ್ಲ್ಯಾನ್‌ಗಳನ್ನು ನೀಡುತ್ತಿದೆ.

ಇದೀಗ ಏರ್‌ಟೆಲ್‌ ಕಂಪೆನಿ 49 ರೂಪಾಯಿಗಳ ರಿಚಾರ್ಜ್‌ ಫ್ಲ್ಯಾನ್‌ ಪರಿಚಿಸಿದೆ. ಈ ಯೋಜನೆಯಲ್ಲಿ ಉಚಿತ ಕರೆಗಳ ಜೊತೆಗೆ ಅನಿಯಮಿತ ಡೇಟಾ ಬಳಕೆ ಮಾಡಬಹುದಾಗಿದೆ. ಈ ಹಿಂದೆ 49 ರೂಪಾಯಿ ರಿಚಾರ್ಜ್‌ ಫ್ಲ್ಯಾನ್‌ನಲ್ಲಿ ಕೇವಲ 20 ಜಿಬಿ ಡೇಟಾ ಸೇವೆಯನ್ನು ಮಾತ್ರವೇ ಪಡೆಯಬಹುದಾಗಿತ್ತು. ಆದ್ರೀಗ ಕಂಪೆನಿ ಈ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಿಕೊಂಡಿದೆ.

ಇದನ್ನೂ ಓದಿ : ಭಾರತದಲ್ಲಿ ಬಿಡುಗಡೆ ಆಯ್ತು Vivo Y200e 5G : ಬೆಲೆ ಎಷ್ಟು, ಏನಿದರ ವೈಶಿಷ್ಟ್ಯತೆ ?

ಮಾಸಿಕ ರಿಚಾರ್ಜ್‌ ಫ್ಲ್ಯಾನ್‌ ಮುಗಿದು ಹೋದ್ರೆ 49 ರೂಪಾಯಿಯ ಫ್ಲ್ಯಾನ್‌ ಟಾಪ್‌ ಅಪ್‌ ಆಗಿ ಬಳಕೆ ಮಾಡಬಹುದು. ಅನ್‌ಲಿಮಿಟೆಡ್‌ ಆಗಿ ಈ ಯೋಜನೆ ಯನ್ನು ಒಂದು ದಿನಗಳ ಕಾಲ ಬಳಕೆ ಮಾಡಲು ಏರ್‌ಟೆಲ್‌ ಅವಕಾಶ ಕಲ್ಪಿಸಿಕೊಟ್ಟಿದೆ. ಕೇವಲ 49 ರೂಪಾಯಿಯ ಫ್ಲ್ಯಾನ್‌ ಮಾತ್ರವಲ್ಲ 99 ರೂಪಾಯಿ ಯೋಜನೆಯಲ್ಲಿಯೂ ಬದಲಾವಣೆ ಮಾಡಲಾಗಿದೆ.

Airtel Rs 49 Recharge Plan Unlimited Data Free Calling at just Rs 49 Airtel New Recharge Plan
Image Credit to Original Source

ಇದನ್ನೂ ಓದಿ : OnePlus 12R: 50MP ಕ್ಯಾಮೆರಾ, ಅತ್ಯಧಿಕ ಕಡಿಮೆ ಬೆಲೆ, ಇಂದಿನಿಂದ ಒನ್‌ಪ್ಲಸ್‌ 12R ಭಾರತದಲ್ಲಿ ಮಾರಾಟ ಆರಂಭ

99  ರೂಪಾಯಿಯ ಫ್ಲ್ಯಾನ್‌ನಲ್ಲಿ ಗ್ರಾಹಕರಿಗೆ 2 ದಿನಗಳ ಕಾಲಾವಧಿ ಲಭಿಸುತ್ತಿದ್ದು, ಅನ್‌ಲಿಮಿಟೆಡ್‌ ಕರೆ ಹಾಗೂ ಡೇಟಾವನ್ನು ಬಳಕೆ ಮಾಡಲು ಅವಕಾಶವಿದೆ. ಜಿಯೋಗೆ ಸಡ್ಡು ಹೊಡೆದಿರುವ ಏರ್‌ಟೆಲ್‌ ಇದೀಗ ಅತ್ಯಂತ ಕಡಿಮೆ ಬೆಲೆಗೆ ಅನ್‌ಲಿಮಿಟೆಡ್‌ ಯೋಜನೆಯನ್ನು ಪ್ರಕಟಿಸಿದೆ.

ಇದನ್ನೂ ಓದಿ : Motorola Razr 40 ಅಲ್ಟ್ರಾ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಶೇ.42% ರಿಯಾಯಿತಿ ಘೋಷಿಸಿದ ಅಮೇಜಾನ್

ಏರ್‌ಟೆಲ್‌ ಈ ಫ್ಲ್ಯಾನ್‌ ಮಾತ್ರವಲ್ಲ 29 ರೂಪಾಯಿಯ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯ ಮೂಲಕ ಒಂದು ದಿನದ ವ್ಯಾಲಿಡಿಟಿ ದೊರೆಯಲಿದ್ದು, 2 ಜಿಬಿ ಡೇಟಾವನ್ನು ಬಳಕೆ ಮಾಡಬಹುದಾಗಿದೆ. ಅಲ್ಲದೇ 181 ರೂಪಾಯಿಯ ಯೋಜನೆಯಲ್ಲಿ ನೀವು ಪ್ರತೀ ದಿನ 1 ಜಿಬಿಯಂತೆ 30 ದಿನಗಳ ವರೆಗೆ 30 ಜಿಬಿ ಉಪಯೋಗಿಸಿಕೊಳ್ಳಬಹುದಾಗಿದೆ.

Airtel Rs 49 Recharge Plan : Unlimited Data, Free Calling at just Rs 49 : Airtel New Recharge Plan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular