ಭಾರತದಲ್ಲಿ ಬಿಡುಗಡೆ ಆಯ್ತು Vivo Y200e 5G : ಬೆಲೆ ಎಷ್ಟು, ಏನಿದರ ವೈಶಿಷ್ಟ್ಯತೆ ?

Vivo Y200e 5G : ವಿವೋ ಕಂಪೆನಿ ಇದೀಗ ಭಾರತದಲ್ಲಿ ವಿವೋ ವೈ200e 5ಜಿ (Vivo Y200e 5G) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಅತ್ಯುತ್ತಮ ಕ್ಯಾಮರಾ ಒಳಗೊಂಡಿರುವ ಈ ಸ್ಮಾರ್ಟ್‌ಪೋನ್‌ ದೀರ್ಘಕಾಲ ಬಾಳಿಕೆಯ ಬ್ಯಾಟರಿ ಒಳಗೊಂಡಿದೆ.

Vivo Y200e 5G : ವಿವೋ ಕಂಪೆನಿ ಇದೀಗ ಭಾರತದಲ್ಲಿ ವಿವೋ ವೈ200e 5ಜಿ (Vivo Y200e 5G) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಅತ್ಯುತ್ತಮ ಕ್ಯಾಮರಾ ಒಳಗೊಂಡಿರುವ ಈ ಸ್ಮಾರ್ಟ್‌ಪೋನ್‌ ದೀರ್ಘಕಾಲ ಬಾಳಿಕೆಯ ಬ್ಯಾಟರಿ ಒಳಗೊಂಡಿದೆ. ಅಷ್ಟೇ ಅಲ್ಲದೇ ಅತ್ಯಂತ ಕಡಿಮೆ ಬೆಲೆಗೆ 5ಜಿ ಸ್ಮಾರ್ಟ್‌ಪೋನ್‌ ಕೊಳ್ಳಬಹುದಾಗಿದೆ.

ಮೊಬೈಲ್‌ ಪ್ರಿಯರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದ Vivo Y200e 5G ಸ್ಮಾರ್ಟ್‌ಫೋನ್ ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್ಫೋನ್ Qualcomm Snapdragon 4 Gen 2 SoC ಪ್ರೊಸೆಸರ ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ತಂತ್ರಜ್ಞಾನ ಯುಗದಲ್ಲಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದಂತಾಗಿದೆ.

Vivo Y200e 5G Launch In India With Special Camera Features And Price
Image Credit to Original Source

ಇನ್ನು ವಿವೋ ಬಿಡುಗಡೆ ಮಾಡಿರುವ ಹೊಸ ಸ್ಮಾರ್ಟ್‌ಪೋನ್‌ನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಸುದೀರ್ಘ ಅವಧಿಯ ವರೆಗೆ ಸ್ಮಾರ್ಟ್‌ಪೋನ್‌ ಬಳಕೆ ಮಾಡಬಹುದಾಗಿದೆ. ಬ್ಯಾಟರಿ ಸಾಮರ್ಥ್ಯ ಜಾಸ್ತಿ ಇದ್ದರೂ ಕೂಡ

Vivo Y200e 5G ಡಿಸ್ಪ್ಲೇ ವಿನ್ಯಾಸ:

vivo Y200e 5G ಸ್ಮಾರ್ಟ್‌ಫೋನ್ 6.67-ಇಂಚಿನ Samsung E4 AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 2400 × 1080 ಪಿಕ್ಸೆಲ್ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲ ಮತ್ತು 1800 nits ಗರಿಷ್ಟ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಅಲ್ಲದೆ 100% DCI-P3 ಮತ್ತು 107% NTSC ಬಣ್ಣದ ಹರವು ಹೊಂದಿದೆ. ಇದು ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ನೀಡುತ್ತದೆ.

ಇದನ್ನೂ ಓದಿ : ಆಪಲ್‌ ಐಪೋನ್‌ 16 ನಿಂದ ಸ್ಯಾಮಸಂಗ್‌ ಗ್ಯಾಲಕ್ಸಿ ಎಸ್‌ 24 ವರೆಗೆ : 2024ರಲ್ಲಿ ಬಿಡುಗಡೆ ಆಗಲಿವೆ ಈ ಟಾಪ್ 5 ಸ್ಮಾರ್ಟ್‌ಫೋನ್

Vivo Y200e 5G ಪ್ರೊಸೆಸರ್:

Vivo Y200e 5G ಸ್ಮಾರ್ಟ್‌ಫೋನ್ Qualcomm Snapdragon 4 Gen 2 SoC ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ಬೆಂಬಲದೊಂದಿಗೆ Android 14 ಆಧಾರಿತ Fun Touch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು 6GB RAM ಮತ್ತು 128 GB ಮತ್ತು 8GB RAM ಮತ್ತು 128 GB ಆಂತರಿಕ ಸಂಗ್ರಹಣೆಯ ಆಯ್ಕೆಗಳೊಂದಿಗೆ ಬರುತ್ತದೆ. ಇದು 8GB ವರೆಗೆ ವರ್ಚುವಲ್ RAM ಅನ್ನು ಸಹ ಒಳಗೊಂಡಿದೆ. ಮೆಮೊರಿ ಕಾರ್ಡ್ ಮೂಲಕ ಶೇಖರಣಾ ಸಾಮರ್ಥ್ಯವನ್ನು 1TB ವರೆಗೆ ವಿಸ್ತರಿಸಬಹುದಾಗಿದೆ.

ಇದನ್ನೂ ಓದಿ : Motorola Razr 40 ಅಲ್ಟ್ರಾ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಶೇ.42% ರಿಯಾಯಿತಿ ಘೋಷಿಸಿದ ಅಮೇಜಾನ್

Vivo Y200e 5G ಕ್ಯಾಮೆರಾ:

Vivo Y200e 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಒಳಗೊಂಡಿದೆ. ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು, ಎರಡನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಬೊಕೆ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2-ಮೆಗಾಪಿಕ್ಸೆಲ್ ಫ್ಲಿಕರ್ ಸಂವೇದಕವಾಗಿದೆ. ಇದು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

Vivo Y200e 5G Launch In India With Special Camera Features And Price
Image Credit to Original Source

Vivo Y200e 5G ಬ್ಯಾಟರಿ ಮತ್ತು ಇನ್ನಷ್ಟು:

Vivo Y200e 5G ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯಿಂದ ಚಾಲಿತವಾಗಿದ್ದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇತರ ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, Wi-Fi 802.11ac, ಬ್ಲೂಟೂತ್ 5.0, GPS ಮತ್ತು USB-C ಪೋರ್ಟ್ ಸೇರಿವೆ.

ಇದನ್ನೂ ಓದಿ : OnePlus 12R: 50MP ಕ್ಯಾಮೆರಾ, ಅತ್ಯಧಿಕ ಕಡಿಮೆ ಬೆಲೆ, ಇಂದಿನಿಂದ ಒನ್‌ಪ್ಲಸ್‌ 12R ಭಾರತದಲ್ಲಿ ಮಾರಾಟ ಆರಂಭ

ಭಾರತದಲ್ಲಿ Vivo Y200e 5G ಬೆಲೆ ಎಷ್ಟು ?

vivo Y200e 5G ಸ್ಮಾರ್ಟ್‌ಫೋನ್ ಭಾರತದಲ್ಲಿ 6GB + 128GB ಸ್ಟೋರೇಜ್ ಆಯ್ಕೆಯ ಸ್ಮಾರ್ಟ್‌ಪೋನ್‌ 20,999 ರೂ.ಗೆ ಲಭ್ಯವಿದೆ. ಅಲ್ಲದೇ ಸ್ಮಾರ್ಟ್‌ಫೋನ್ ಬ್ಲ್ಯಾಕ್ ಡೈಮಂಡ್ ಮತ್ತು ಕೇಸರಿ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಸ್ಮಾರ್ಟ್‌ಫೋನ್ ಪ್ರಸ್ತುತ ವಿವೋ ಇಂಡಿಯಾ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಭಾರತದ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದೆ. ಇದು ಫೆಬ್ರವರಿ 27 ರಿಂದ ಖರೀದಿಗೆ ಲಭ್ಯವಿರುತ್ತದೆ.

Vivo Y200e 5G Launch In India With Special Camera Features And Price

Comments are closed.