ಐಪಿಎಲ್ 2024ರಲ್ಲಿ ಆಡ್ತಾರಾ ವಿರಾಟ್ ಕೊಹ್ಲಿ ? ಹೀಗೇ ಹೇಳಿದ್ಯಾಕೆ ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌

Virat Kohli Will play for IPL 2024 : ಭಾರತ ಕ್ರಿಕೆಟ್‌ ತಂಡದ ಖ್ಯಾತ ಆಟಗಾರ ವಿರಾಟ್‌ ಕೊಹ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯನ್ನು ತಪ್ಪಿಸಿಕೊಂಡ ಬೆನ್ನಲ್ಲೇ ಕೊಹ್ಲಿ ಐಪಿಎಲ್‌ನಲ್ಲೂ ದೂರ ಉಳಿಯುತ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ

Virat Kohli Will play for IPL 2024 : ಭಾರತ ಕ್ರಿಕೆಟ್‌ ತಂಡದ ಖ್ಯಾತ ಆಟಗಾರ ವಿರಾಟ್‌ ಕೊಹ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯನ್ನು (India vs England test series)  ತಪ್ಪಿಸಿಕೊಂಡ ಬೆನ್ನಲ್ಲೇ ಕೊಹ್ಲಿ ಐಪಿಎಲ್‌ನಲ್ಲೂ ದೂರ ಉಳಿಯುತ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ. ಮಾತ್ರವಲ್ಲ ಟೀಂ ಇಂಡಿಯಾದ ಖ್ಯಾತ ಆಟಗಾರ ಸುನಿಲ್‌ ಗವಾಸ್ಕರ್‌ ಇಂತಹದ್ದೊಂದು ಪ್ರಶ್ನೆ ಹುಟ್ಟು ಹಾಕಿದ್ದಾರೆ.

Virat Kohli Will play for IPL 2024 Sunil Gavaskar Questioned about Kohli’s participation
Image Credit to Original Source

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ 2024 ರಲ್ಲಿ ಕೊಹ್ಲಿ ಭಾಗವಹಿಸುವ ಬಗ್ಗೆ ಭಾರತದ ಮಾಜಿ ಸ್ಟಾರ್ ಸುನಿಲ್ ಗವಾಸ್ಕರ್ ಪ್ರಶ್ನೆ ಎತ್ತಿದ್ದಾರೆ. ವಿರಾಟ್‌ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಇದೀಗ ಎರಡನೇ ಮಗುವಿನ ಜನ್ಮ ನೀಡಿದ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ IND vs ENG ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಆದರೆ ಅವರು ಐಪಿಎಲ್ 2024 ಕ್ಕೆ ಕೊಹ್ಲಿ ಕ್ರಮಕ್ಕೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಾರ್ಚ್ 22 ರಂದು ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ (RCB) ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಸೆಣಸಲಿದೆ. ಭಾರತ ಮತ್ತು ಇಂಗ್ಲೆಂಡ್‌ (IND vs ENG) ವಿರುದ್ದದ ಸರಣಿ ಆರಂಭಕ್ಕೂ ಒಂದು ವಾರ ಮೊದಲು ಕೊಹ್ಲಿ ಟೀಂ ಇಂಡಿಯಾ ಪರ ಆಡುತ್ತಿಲ್ಲ ಅನ್ನೋ ಮಾಹಿತಿ ಹೊರ ಬಿದ್ದಿತ್ತು.

ಇದನ್ನೂ ಓದಿ : WTC Points Table 2023-25: ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಸರಣಿ ಗೆಲುವು, ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಂಕಪಟ್ಟಿಯಲ್ಲಿ ಭಾರತಕ್ಕೆ 2 ನೇ ಸ್ಥಾನ

ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಭಾಗವಹಿಸುವಿಕೆಯ ಕುರಿತು ಸುನಿಲ್‌ ಗವಾಸ್ಕರ್‌ ಉತ್ತರಿಸಿದ್ದಾರೆ. ಅಲ್ಲದೇ ಅವರು ಎತ್ತಿರುವ ಪ್ರಶ್ನೆ ಇದೀಗ ಹಲವು ಅನುಮಾನಗಳನ್ನು ಹುಟ್ಟುಕಾಹಿದೆ. ವೈಯಕ್ತಿಕ ಕಾರಣಗಳಿಗಾಗಿ ಕೊಹ್ಲಿ ಆರಂಭದಲ್ಲಿ ಮೊದಲ 2 IND vs ENG ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಕೊಹ್ಲಿ ಸರಣಿಯಲ್ಲಿ ಯಾವುದೇ ಪಂದ್ಯವನ್ನು ಆಡುವುದಿಲ್ಲ ಎಂದು ಬಿಸಿಸಿಐ ನಂತರ ಸ್ಪಷ್ಟಪಡಿಸಿದೆ. ಇದಾದ ಬಳಿಕ ಕಳೆದ ವಾರ ಕೊಹ್ಲಿ ತನ್ನ ಪತ್ನಿ ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ಮಗುವಿಗೆ ಜನ್ಮ ನೀಡಿರುವುದಾಗಿ ಘೋಷಿಸಿದ್ದಾರೆ.

Virat Kohli Will play for IPL 2024 Sunil Gavaskar Questioned about Kohli’s participation
Image Credit to Original Source

ಇದನ್ನೂ ಓದಿ : IPL 2024 : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರುತುರಾಜ್‌ ಗಾಯಕ್ವಾಡ್‌ ನಾಯಕ

ಮಗುವಿನ ಕಾರಣದಿಂದಾಗಿ ವಿರಾಟ್‌ ಕೊಹ್ಲಿ ಸದ್ಯ ಲಂಡನ್‌ನಲ್ಲಿದ್ದಾರೆ. ಇಂಗ್ಲೆಂಡ್‌ ವಿರುದ್ದ ಗೆಲುವು ಸಾಧಿಸಿದ ಬೆನ್ನಲ್ಲೇ ಭಾರತ ತಂಡಕ್ಕೆ ವಿರಾಟ್‌ ಕೊಹ್ಲಿ ಅಭಿನಂದನೆಯನ್ನು ಸಲ್ಲಿಸಿದ್ದರು. ಇದೀಗ ಐಪಿಎಲ್‌ ಅಂಗಳದಲ್ಲಿ ವಿರಾಟ್‌ ಕೊಹ್ಲಿ ಅವರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಭಾಗವಹಿಸುವುದು ಮುಖ್ಯವಾಗಲಿದೆ.

ಇದನ್ನೂ ಓದಿ : T20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ರೋಹಿತ್‌ ಶರ್ಮಾ ನಾಯಕ : ಭಗ್ನವಾಯ್ತು ಹಾರ್ದಿಕ್‌ ಪಾಂಡ್ಯ ಕನಸು

Virat Kohli Will play for IPL 2024 ? Sunil Gavaskar Questioned about Kohli’s participation

Comments are closed.