Airtel vs Jio vs Vi : ಬಂಪರ್ ಪ್ಲಾನ್ ಆಫರ್ ಘೋಷಿಸಿದ ಏರ್‌ಟೆಲ್, ಜಿಯೋ ವೊಡಾಪೋನ್‌ ಐಡಿಯಾ

ನವದೆಹಲಿ: (Airtel vs Jio vs Vi ) ದೇಶದ ಟೆಲಿಕಾಂ ವಲಯದಲ್ಲಿ (Jio)ಜಿಯೋ, (Airtel Bumper plans )ಏರ್ ಟೆಲ್ ಮತ್ತು (VI)ವೊಡಾಫೋನ್ ಐಡಿಯಾ ತನ್ನ ಚಂದಾದಾರರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಏರ್‌ಟೆಲ್‌, ಜಿಯೋ ಹಾಗೂ ವೊಡಾಪೋನ್‌ ಐಡಿಯಾ ಕಂಪನಿಯು 5G ಸೇವೆಯನ್ನು ಒದಗಿಸುವಲ್ಲಿ ನಿರತವಾಗಿದೆ. ಈ ಮಧ್ಯೆ ಜಿಯೋ ಹಿಂದಿಕ್ಕಲು (Airtel)ಏರ್ ಟೆಲ್ ಮತ್ತು (VI)ವೊಡಾಫೋನ್ ಐಡಿಯಾ ಸಂಸ್ಥೆಗಳು ಕಸರತ್ತು ನಡೆಸುತ್ತಿವೆ. ಬಜೆಟ್ ಪ್ರಿಯರಿಗೆ, ಈ ನಡುವಲ್ಲೇ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಯಲ್ಲಿ ಆಕರ್ಷಕ ಪ್ರಿಪೇಡ್ ಯೋಜನೆಗಳನ್ನು ಪರಿಚಯಿಸಿವೆ.

ಕೇವಲ 200 ರೂ.ಗೆ ಗ್ರಾಹಕರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸಿವೆ. ಈ ಪ್ಲಾನ್ ನಲ್ಲಿ ಅನಿಯಮಿತ ಕರೆ, ಉಚಿತ ಎಸ್ ಎಂಎಸ್, ಡೇಟಾ ಸಿಗಲಿದೆ. (Jio)ಜಿಯೋ, (Airtel) ಏರ್ ಟೆಲ್ ಮತ್ತು (VI)ವೊಡಾಫೋನ್ ಐಡಿಯಾ 200 ರೂ. ಯಾವುದು ಬೆಸ್ಟ್ ಪ್ಲಾನ್ ಅಂತ ನೋಡೋಣ.

(Jio)ಜಿಯೋ 200 ರೂ. ಪ್ರಿಪೇಯ್ಡ್ ಪ್ಲಾನ್:

  • ರೂ. 149: 1GB ಡೇಟಾ ಈ ಪ್ಲಾನ್ ನಲ್ಲಿ ಸಿಗಲಿದೆ. ಇದರೊಂದಿಗೆ ಅನಿಯಮಿತ ಕರೆ ಹಾಗೂ ಪ್ರತಿದಿನ 10 ಉಚಿತ ಎಸ್ ಎಮ್ ಎಸ್ ಗಳ ಸೌಲಭ್ಯ ದೊರೆಯಲಿದೆ. 20 ದಿನಗಳ ವ್ಯಾಲಿಡಿಟಿ ಹೊಂದಿದೆ.
  • ರೂ. 179: ಈ ಪ್ಲಾನ್ ನಲ್ಲಿ ಪ್ರತಿದಿನ 1GB ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಇದರೊಂದಿಗೆ ಅನಿಯಮಿತ ಕರೆ ಹಾಗೂ ಪ್ರತಿದಿನ 10 ಉಚಿತ ಎಸ್ ಎಮ್ ಎಸ್ ಗಳ ಸೌಲಭ್ಯ ದೊರೆಯಲಿದೆ. ಆದರೆ ಇದು 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
  • ರೂ. 209: 1GB ಡೇಟಾ ಪ್ರತಿದಿನ ಲಭ್ಯವಿದೆ. ಇದರೊಂದಿಗೆ ಅನಿಯಮಿತ ಕರೆ ಹಾಗೂ ಪ್ರತಿದಿನ 10 ಉಚಿತ ಎಸ್ ಎಮ್ ಎಸ್ ಗಳ ಸೌಲಭ್ಯ ದೊರೆಯಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿದೆ.

(Airtel)ಏರ್ ಟೆಲ್ 200 ರೂ. ಪ್ರಿಪೇಯ್ಡ್ ಪ್ಲಾನ್:

  • ರೂ. 155: ಈ ಯೋಜನೆಯಲ್ಲಿ 1GB ಡೇಟಾ ಉಚಿತವಾಗಿ ಲಭ್ಯವಿದೆ. ಇದರೊಂದಿಗೆ ಅನಿಯಮಿತ ಕರೆ ಹಾಗೂ 300 ಉಚಿತ ಎಸ್ ಎಮ್ ಎಸ್ ಸೌಲಭ್ಯ ಸಹ ದೊರೆಯಲಿದೆ. 24 ದಿನಗಳ ವ್ಯಾಲಿಡಿಟಿ ಹೊಂದಿದೆ. ಜೊತೆಗೆ, ನೀವು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆಯನ್ನು ಪಡೆಯಬಹುದು.
  • ರೂ. 179: ಈ ಯೋಜನೆಯಲ್ಲಿ ಒಟ್ಟು 2GB ಡೇಟಾ ಲಭ್ಯವಿದೆ. ಇದರೊಂದಿಗೆ ಅನಿಯಮಿತ ಕರೆ ಹಾಗೂ 300 ಉಚಿತ ಎಸ್ ಎಮ್ ಎಸ್ ಸೌಲಭ್ಯ ಸಹ ದೊರೆಯಲಿದೆ. 24 ದಿನಗಳ ವ್ಯಾಲಿಡಿಟಿ ಹೊಂದಿದೆ. ಜೊತೆಗೆ, ನೀವು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆಯನ್ನು ಪಡೆಯಬಹುದು.
  • ರೂ. 209: 1GB ಡೇಟಾ ಪ್ರತಿದಿನ ಲಭ್ಯವಿದೆ. ಇದರೊಂದಿಗೆ ಅನಿಯಮಿತ ಕರೆ ಹಾಗೂ 300 ಉಚಿತ ಎಸ್ ಎಮ್ ಎಸ್ ಸೌಲಭ್ಯ ಸಹ ದೊರೆಯಲಿದೆ. 21 ದಿನಗಳ ವ್ಯಾಲಿಡಿಟಿ ಹೊಂದಿದೆ. ಜೊತೆಗೆ, ನೀವು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆಯನ್ನು ಪಡೆಯಬಹುದು.
  • ರೂ. 239: ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಸಿಗಲಿದೆ. ಅನಿಯಮಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 100 ಉಚಿತ ಎಸ್ ಎಮ್ ಎಸ್ ಗಳ ಸೌಲಭ್ಯವಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಜೊತೆಗೆ, ನೀವು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆಯನ್ನು ಪಡೆಯಬಹುದು.

(VI)ವೊಡಾಫೋನ್ ಐಡಿಯಾ 200 ರೂ. ಪ್ರಿಪೇಯ್ಡ್ ಪ್ಲಾನ್:

  • ರೂ. 179: ಈ ಯೋಜನೆಯಲ್ಲಿ ಒಟ್ಟು 2GB ಡೇಟಾ ಲಭ್ಯವಿದೆ. ಇದರೊಂದಿಗೆ ಅನಿಯಮಿತ ಕರೆ ಹಾಗೂ 300 ಉಚಿತ ಎಸ್ ಎಮ್ ಎಸ್ ಸೌಲಭ್ಯ ಸಹ ದೊರೆಯಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಜೊತೆಗೆ, ನೀವು vi ಸಂಗೀತ ಮತ್ತು ಟಿವಿ ಚಂದಾದಾರಿಕೆಯನ್ನು ಪಡೆಯುತ್ತೀರಿ.

ಇದನ್ನೂ ಓದಿ: ಭಾರತ ವಿರುದ್ಧ ಸೋತ ಬೆನ್ನಲ್ಲೇ ಪ್ರೇಯಸಿಗೆ “ಲವ್ ಪ್ರಪೋಸ್” ಮಾಡಿದ ಹಾಂಕಾಂಗ್ ಆಟಗಾರ

ಇದನ್ನೂ ಓದಿ: ಗಣಪತಿ ಬಪ್ಪ ಮೋರೆಯಾ: ಭಾರತೀಯರಿಗೆ ಗಣೇಶ ಚತುರ್ಥಿ ಶುಭಾಶಯ ಕೋರಿದ ಆಸ್ಟ್ರೇಲಿಯಾ ಕ್ರಿಕೆಟರ್ ದೇವಿಡ್ ವಾರ್ನರ್

  • ರೂ. 195: ಈ ಯೋಜನೆಯಲ್ಲಿ ಒಟ್ಟು 2GB ಡೇಟಾ ಲಭ್ಯವಿದೆ. ಇದರೊಂದಿಗೆ ಅನಿಯಮಿತ ಕರೆ ಹಾಗೂ 300 ಉಚಿತ ಎಸ್ ಎಮ್ ಎಸ್ ಸೌಲಭ್ಯ ಸಹ ದೊರೆಯಲಿದೆ. ಇದು ಒಂದು ತಿಂಗಳ ವ್ಯಾಲಿಡಿಟಿ ಹೊಂದಿದೆ. ಜೊತೆಗೆ, ನೀವು vi ಸಂಗೀತ ಮತ್ತು ಟಿವಿ ಚಂದಾದಾರಿಕೆಯನ್ನು ಪಡೆಯುತ್ತೀರಿ.

Airtel vs Jio vs Vi: Bumper plans by Airtel, Jio, VI

Comments are closed.