Alert : ಯೂಟ್ಯೂಬ್‌ನಲ್ಲಿ ಟ್ಯೂಟೋರಿಯಲ್‌ ವೀಡಿಯೋ ನೋಡುತ್ತೀರಾ? ಎಚ್ಚರ! ನಿಮ್ಮ ಬ್ಯಾಂಕ್‌ ಅಕೌಂಟ್‌ ಖಾಲಿಯಾಗಬಹುದು…

ಈಗಿನ ಡಿಜಿಟಲ್‌ (Digital) ಯುಗದಲ್ಲಿ ಏನೇ ತಿಳಿದುಕೊಳ್ಳಬೇಕೆಂದರು ಮೊದಲು ಮಾಡುವ ಕೆಲಸ ಗೂಗಲ್‌ (Google) ಅಥವಾ ಯೂಟ್ಯೂಬ್‌ (YouTube) ನಲ್ಲಿ ಸರ್ಚ್‌ (Search) ಮಾಡುವುದು. ಕೆಲವು ಸಾಫ್ಟ್‌ವೇರ್‌ ಅಥವಾ ಗ್ಯಾಜೆಟ್‌ಗಳನ್ನು ಹೇಗೆ ಚಲಾಯಿಸಬೇಕು ಎಂದು ಜನರಿಗೆ ತಿಳಿದಿರುವುದಿಲ್ಲ. ಆಗ ಹೆಚ್ಚಿನ ಜನರು ಮೊರೆಹೋಗುವುದು ಯೂಟ್ಯೂಬ್‌ಗೆ. ಏಕೆಂದರೆ ಅಲ್ಲಿ ತಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ದೃಶ್ಯಗಳ ಮೂಲಕ ನೋಡಬಹುದು. ಹಾಗಾಗಿ ಹ್ಯಾಕರ್‌ಗಳೂ ಮಾಲ್‌ವೇರ್‌ಗಳನ್ನು ವೀಡಿಯೋಗಳಲ್ಲಿ ಸ್ಥಾಪಿಸುತ್ತಿದ್ದಾರೆ (Scam Through YouTube Video). ಇದೇ ಕಾರಣದಿಂದಲೇ ಯೂಟ್ಯೂಬ್‌ನಲ್ಲಿ ಟ್ಯುಟೋರಿಯಲ್‌ ವೀಡಿಯೋಗಳನ್ನು ನೋಡುವಾಗ ಎಚ್ಚರದಿಂದಿರಬೇಕು (Alert). ಹಾಗಾದರೆ, ಹ್ಯಾಕರ್‌ಗಳು ವೀಡಿಯೋಗಳ ಮೂಲಕ ಮಾಹಿತಿ ಕದಿಯುವುದಾದರೂ ಹೇಗೆ? ಇಲ್ಲಿದೆ ಓದಿ.

ಸೈಬರ್ ಸೆಕ್ಯುರಿಟಿ ಸಂಸ್ಥೆ ಕ್ಲೌಡ್‌ಸೆಕ್‌ನ ಸಂಶೋಧಕರು ಯೂಟ್ಯೂಬ್ ವೀಡಿಯೊಗಳ ಮೂಲಕ ನಡೆಸುವ ವಂಚನೆಗಳ ಸಂಖ್ಯೆಯು 200 ರಿಂದ 300 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಹ್ಯಾಕರ್‌ಗಳ ವೀಡಿಯೊಗಳ ಮೂಲಕ ಜನರ ಸಿಸ್ಟಮ್‌ಗಳಲ್ಲಿ ವಿಡಾರ್, ರೆಡ್‌ಲೈನ್ ಮತ್ತು ರಕೂನ್‌ನಂತಹ ಮಾಲ್‌ವೇರ್‌ಗಳನ್ನು ಸ್ಥಾಪಿಸುತ್ತಿದ್ದಾರೆ ಎಂದು ಹೇಳಿದೆ.

ಹ್ಯಾಕರ್‌ಗಳು ಮಾಹಿತಿ ಕದಿಯುವುದಾದರೂ ಹೇಗೆ?
ಮಾಹಿತಿ ಕದಿಯುವಿಕೆ ವಾಸ್ತವವಾಗಿ, ಜನರು ಟ್ಯುಟೋರಿಯಲ್‌ ವೀಡಿಯೋಗಳನ್ನು ವೀಕ್ಷಿಸಿದಾಗ ಸಂಭವಿಸುತ್ತದೆ. ಹೇಗೆಂದರೆ ಅವುಗಳಲ್ಲಿ ತೋರಿಸವು ‘ಈ ಅಪ್ಲಿಕೇಶನ್‌ ಅಥವಾ ಸಾಫ್ಟ್‌ವೇರ್‌ಗಳ ಲಿಂಕ್‌ ಅನ್ನು ಡಿಸ್ಕ್ರಿಪ್ಷನ್‌ ಬಾಕ್ಸ್‌ನಲ್ಲಿ ನೀಡಲಾಗಿದೆ. ಇದರಿಂದ ನೀವು ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು’. ಈ ರೀತಿಯ ಲಿಂಕ್‌ಗಳಲ್ಲಿ ಹ್ಯಾಕರ್‌ಗಳು ನಿಮಗೆ ಕಾಣದಂತೆಯೇ ಸಿಸ್ಟಂನಲ್ಲಿ ಮಾಲ್‌ವೇರ್‌ಗಳನ್ನು ಇನ್‌ಸ್ಟಾಲ್‌ ಆಗುವಂತೆ ಮಾಡುತ್ತಾರೆ. ನಂತರ ಅವರ ಬ್ಯಾಂಕ್‌ ವಿವರಗಳು, ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ. ಇದು ಹೆಚ್ಚಿನದಾಗಿ ಜನರು ವೀಡಿಯೋ ಮೂಲಕ ಸಾಫ್ಟ್‌ವೇರ್‌ ಅಥವಾ ಆಪ್‌ನ ಕ್ರ್ಯಾಕ್‌ ವರ್ಷನ್‌ ಹುಡುಕುವ ಸಂದರ್ಭದಲ್ಲಿ ನಡೆಯುತ್ತದೆ. ಕೆಲವರು ಅಡಾಬ್‌ ಪ್ರೀಮಿಯರ್‌ ಪ್ರೋನ ಪೇಡ್‌ ವರ್ಷನ್‌ ಅನ್ನು ಚಲಾಯಿಸಲು ಬಯಸುವುದಿಲ್ಲವಂತೆ. ಅಂತಹವರು ಯೂಟ್ಯೂಬ್‌ನಿಂದ ಸಾಫ್ಟ್‌ವೇರ್‌ನ ಕ್ರ್ಯಾಕ್ ಆವೃತ್ತಿಯನ್ನು ಡೌನ್‌ಲೋಡ್ ಮಾಡುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ನಂತರ ಪ್ರಾರಂಭವಾಗುವುದೇ ಈ ಸ್ಕ್ಯಾಮ್‌.

ವೀಡಿಯೊದ ಡಿಸ್ಕ್ರಿಪ್ಷನ್‌ ಬಾಕ್ಸ್‌ನಲ್ಲಿ ನೀಡಲಾದ ಲಿಂಕ್‌ನಿಂದ ನೇರವಾಗಿ ಅಪ್ಲಿಕೇಶನ್ ಅಥವಾ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಬಹುದು ಎಂದು ಹೇಳಲಾದ ಲಿಂಕ್ ಮೂಲಕ ಜನರು ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಿದ ತಕ್ಷಣ, ಅವರು ಸಿಸ್ಟಮ್ ಹ್ಯಾಕರ್‌ಗಳ ಕೈಗೆ ಸಿಲುಕುತ್ತಾರೆ. ನಂತರ ಅದರ ಮೂಲಕ ಅವರು ಮಾಹಿತಿಯನ್ನು ಕದಿಯುತ್ತಾರೆ. ಯೂಟ್ಯೂಬ್‌ನಲ್ಲಿ ಪ್ರತಿ ಗಂಟೆಗೆ 5 ರಿಂದ 10 ಕ್ರ್ಯಾಕ್ ಸಾಫ್ಟ್‌ವೇರ್ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅದರ ಮೂಲಕ ಬಳಕೆದಾರರು ಈ ಬಲೆಗೆ ಸಿಲುಕಿದ್ದಾರೆ ಎಂದು ಸಂಶೋಧನೆ ಹೇಳಿದೆ. ಯೂಟ್ಯೂಬ್‌ನ ಅಲ್ಗಾರಿದಮ್ ಕೂಡ ಅಂತಹ ವೀಡಿಯೊಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ.

ಈ ರೀತಿ ವಂಚನೆ ಒಳಗಾಗದಿರಲು ಏನು ಮಾಡಬೇಕು?
ವೆಬ್‌ಸೈಟ್‌ ಅಥವಾ ಮೂರನೇ ವ್ಯಕ್ತಿಯಿಂದ ನಿಮ್ಮ ಸಿಸ್ಟಂನಲ್ಲಿ ಕ್ರ್ಯಾಕ್ ಆವೃತ್ತಿಯನ್ನು ತೆಗೆದುಕೊಂಡರೆ, ಆಗ ವಂಚನೆಗೊಳಗಾಗಬಹುದು. ಅದಕ್ಕಾಗಿ ಯಾವುದೇ ಸಾಫ್ಟ್‌ವೇರ್ ಅಥವಾ ಆಪ್‌ನ ಅಧಿಕೃತ ಆವೃತ್ತಿ ಅಥವಾ ಪೇಡ್‌ ಆವೃತ್ತಿಯನ್ನು ಬಳಸಲು ಸಲಹೆ ನೀಡಲಾಗುತ್ತದೆ. ಡಿಜಿಟಲ್ ಯುಗದಲ್ಲಿ, ನಿಮ್ಮನ್ನು ಮತ್ತು ನಿಮ್ಮ ಅಗತ್ಯ ಮಾಹಿತಿಗಳನ್ನು ರಕ್ಷಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಇಂಟರ್ನೆಟ್ ಅನ್ನು ಅರಿತು ಮತ್ತು ಎಚ್ಚರಿಕೆಯಿಂದ ಬಳಸುವುದು.

ಇದನ್ನೂ ಓದಿ : Jio Prepaid Plans : ಜಿಯೋ ಬಳಕೆದಾರರೆ ಗಮನಿಸಿ; 500 ರೂ. ಗಿಂತಲೂ ಕಡಿಮೆ ದರದಲ್ಲಿದೆ 13 ಪ್ಲಾನ್‌ಗಳು

ಇದನ್ನೂ ಓದಿ :Nokia C12 : ಲೋ ಬಜೆಟ್‌ ಫೋನ್‌ ಲಾಂಚ್‌ ಮಾಡಿದ ನೋಕಿಯಾ; ಬೆಲೆ ಎಷ್ಟು ಗೊತ್ತಾ…

(Alert. Hackers are stealing users’ bank details and important data through youtube videos.)

Comments are closed.