15 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಮೊಬೈಲ್‌

Amazon Great Indian Festival Sale ನಲ್ಲಿ 15 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸ್ಯಾಮ್‌ಸಂಗ್‌ ಎಂ 34 5G (Samsung Galaxy M34 Galaxy M34, M14 5G Samsung Galaxy S23 Samsung Galaxy S23 FE ಖರೀದಿಸಬಹುದು.

ಭಾರತ ಪ್ರಮುಖ ಇ-ಕಾಮರ್ಸ್‌ ಸೈಟ್‌ ಅಮೆಜಾನ್‌ (Amazon ) ದಸರಾ, ದೀಪಾವಳಿ ಹಬ್ಬದ ಹೊತ್ತಲ್ಲೇ ಅಮೇಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ (Amazon Great Indian Festival Sale) ಮಾರಾಟವನ್ನು ಆರಂಭಿಸಿದೆ. ಅದ್ರಲ್ಲೂ 5G ಮೊಬೈಲ್‌ ಪೋನ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದೀಗ 15 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸ್ಯಾಮ್‌ಸಂಗ್‌ ಎಂ 34 5G (Samsung Galaxy M34) ಮೊಬೈಲ್‌ ಕೊಳ್ಳುವ ಅವಕಾಶ ನಿಮ್ಮದಾಗಲಿದೆ.

ಅಮೆಜಾನ್‌ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಅತ್ಯಂತ ಕಡಿಮೆ ಬೆಲೆಗೆ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಅದ್ರಲ್ಲೂ ವಿವಿಧ ಕಂಪೆನಿಗಳ ಸ್ಮಾರ್ಟ್‌ಪೋನ್‌ಗಳ ಮೇಲೆ ಭರ್ಜರಿ ಆಫರ್‌ ಘೋಷಿಸಿದೆ. ಅಕ್ಟೋಬರ್ 8 ರಂದು ಪ್ರಾರಂಭವಾಗುವ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಆರಂಭಿಸಿದೆ.

Buy Samsung Galaxy M34 5G Mobile for less than 15೦೦೦ Samsung Galaxy M34 M14 5G Samsung Galaxy S23 Samsung Galaxy S23 FE
Image credit to Original Source

ಇ-ಕಾಮರ್ಸ್ ದೈತ್ಯ ಅಮೆಜಾನ್‌ ಇದೀಗ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಅದ್ರಲ್ಲೂ Galaxy S ಮತ್ತು Galaxy M ಸರಣಿಯ ಮೊಬೈಲ್‌ ಪೋನ್‌ಗಳ ಮೇಲೆ ಆಫರ್‌ಗಳ ಸುರಿಮಳೆಯನ್ನೇ ಸುರಿಸಲಾಗಿದೆ. ಗ್ರಾಹಕರನ್ನು ಅತೀ ಹೆಚ್ಚಾಗಿ ಆಕರ್ಷಿಸಿರುವ ಸ್ಯಾಮ್‌ಸಂಗ್‌ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿದೆ.

ಇದನ್ನೂ ಓದಿ :‌ ಕೇವಲ 16,399 ರೂ.ಗೆ ಖರೀದಿಸಿ Apple IPhone 12 : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ 34 & ಎಂ14 5G (Samsung Galaxy M34 & M14 5G) :

ಸ್ಯಾಮ್‌ಸಂಗ್‌ ಕಂಪೆನಿಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ 34 & ಎಂ14 5G (Samsung Galaxy M34 & M14 5G) ಮೊಬೈಲ್‌ ಪೋನ್‌ಗಳು ಭವಿಷ್ಯದ ತಂತ್ರಜ್ಞಾನವನ್ನು ಒಳಗೊಂಡಿವೆ. ಪ್ರಮುಖವಾಗಿ 120Hz sAMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 50MP ಟ್ರಿಪಲ್ ಕ್ಯಾಮೆರಾ ಒಳಗೊಂಡಿದೆ. ಅದ್ರಲ್ಲೂ 6000 mAh ದೀರ್ಘಕಾಲದ ಬ್ಯಾಟರಿಯನ್ನು ಒಳಗೊಂಡಿದೆ.

ಇನ್ನು ಮೊಬೈಲ್‌ 8 RAM+ ನಿಂದ 16GB RAMಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ 4ನೇ ತಲೆಮಾರಿನ OS ನವೀಕರಣ ಹೊಂದಿರುವ ಆಂಡ್ರಾಯ್ಡ್‌ ಬಳಕೆ ಮಾಡಲಾಗಿದೆ. ಜೊತೆಗೆ ಐದು ವರ್ಷಗಳ ಕಾಲ ಸೆಕ್ಯೂರಿಟಿ ಫಿಚರ್ಸ್‌ಗಳನ್ನು ನೀಡಲಾಗಿದೆ. ಇದೀಗ ಅಮೆಜಾನ್‌ ಹಬ್ಬದ ಪ್ರಯುಕ್ತ ಕೇವಲ 14,499 ರೂಪಾಯಿ ಸ್ಮಾರ್ಟ್‌ಪೋನ್‌ ಮಾರಾಟ ಮಾಡುತ್ತಿದೆ.

ಇದನ್ನೂ ಓದಿ : ಆ್ಯಪಲ್ ಐಪೋನ್‌ 11 ಪ್ರೋ Max ಬೆಲೆಯಲ್ಲಿ ಬಾರೀ ಇಳಿಕೆ : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಸುವರ್ಣಾವಕಾಶ

5nm ಪ್ರೊಸೆಸರ್, 2 Gen OS ಅಪ್‌ಗ್ರೇಡ್ ಮತ್ತು 4-ವರ್ಷದ ಭದ್ರತಾ ಅಪ್‌ಡೇಟ್ಸ್‌ಗಳನ್ನು ಹೊಂದಿರುವ Galaxy M14 5G ಸ್ಮಾರ್ಟ್‌ಪೋನ್‌ ಅನ್ನು ಅಮೆಜಾನ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅಂದ್ರೆ ಕೇವಲ 10,490ರೂ.ಗೆ ಖರೀದಿ ಮಾಡಬಹುದಾಗಿದೆ. ಈ ಎರಡೂ ಮೊಬೈಲ್‌ಗಳ ತಂತ್ರಜ್ಞಾನದಲ್ಲಿ ಕೆಲವೊಂದು ಬದಲಾವಣೆಗಳಿಗೆ.

Buy Samsung Galaxy M34 5G Mobile for less than 15೦೦೦ Samsung Galaxy M34 M14 5G Samsung Galaxy S23 Samsung Galaxy S23 FE 2
Image Credit to Original Source

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌23(Samsung Galaxy S23 )

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌23 (Galaxy S23) ಸ್ಮಾರ್ಟ್‌ಪೋನ್‌ ಅತ್ಯಂತ ವೇಗವಾದ Snapdragon 8 Gen 2 ತಂತ್ರಜ್ಞಾನವನ್ನು ಒಳಗೊಂಡಿದೆ. ವೇಗದ ಜೊತೆಗೆ ಈ ಸ್ಮಾರ್ಟ್‌ ಪೋನ್‌ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒಳಗೊಂಡಿದೆ. ಇನ್ನು ಈ ಮೊಬೈಲ್‌ ಪೋನ್‌ನ ವಿಶೇಷತೆಯೇ ನೈಟೋಗ್ರಫಿ ಮೋಡ್.

ಈ ಮೋಡ್‌ ಬಳಸಿಕೊಂಡು ನಿಮ್ಮ ರಾತ್ರಿಯ ಭಾವಚಿತ್ರಗಳು ಮತ್ತು ಮಂದ ಬೆಳಕಿನಲ್ಲಿರುವ ವೀಡಿಯೊಗಳನ್ನು ಕಲಾಕೃತಿಗಳನ್ನು ಸೆರೆಹಿಡಿಯಬಹುದಾಗಿದೆ. ಅಲ್ಲದೇ Corning® Gorilla® Glass Victus® 2 ಒಳಗೊಂಡಿದೆ. ನಿಮ್ಮ ಕೈತಪ್ಪಿ ಮೊಬೈಲ್‌ ಕೆಳಗೆ ಬಿದ್ದರೂ ಕೂಡ ನಿಮ್ಮ ಮೊಬೈಲ್‌ನ ಮುಂಭಾಗ ಹಾಗೂ ಹಿಂಭಾಗದ ಗಾಜು ಒಡೆಯುವುದಿಲ್ಲ.

ಇದನ್ನೂ ಓದಿ : ಆಪಲ್‌ ಐಪೋನ್‌ 15 ಖರೀದಿಯ ಮೇಲೆ ಭರ್ಜರಿ 40,000 ರೂ. ರಿಯಾಯಿತಿ

Samsung Galaxy S23 ಸ್ಮಾರ್ಟ್‌ಪೋನ್‌ 8GB Ram/128 GB ಸ್ಟೊರೇಜ್‌ ಸಾಮರ್ಥ್ಯವನ್ನು ಒಳಗೊಂಡಿರುವ ಈ ಮೊಬೈಲ್‌ ಪೋನ್‌ ಅನ್ನು ಅಮೆಜಾನ್‌ ಆಫರ್‌ನಲ್ಲಿ ಕೇವಲ ₹ 61,999 ಕ್ಕೆ ಪಡೆಯಬಹುದಾಗಿದೆ. ಸ್ಯಾಮ್‌ಸಂಗ್‌ ಮೊಬೈಲ್‌ ಪರಿಚಯಿಸಿರುಬವ ಈ ಮೊಬೈಲ್‌ ದುಬಾರಿ ಮೊಬೈಲ್‌ಗಳ ಸಾಲಿನಲ್ಲಿದೆ.

Buy Samsung Galaxy M34 5G Mobile for less than 15೦೦೦ Samsung Galaxy M34 M14 5G Samsung Galaxy S23 Samsung Galaxy S23 FE 2
Image Credit to Original Source

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್23 FE (Samsung Galaxy S23 FE)‌

Samsung Galaxy S23 FE ಸ್ಮಾರ್ಟ್‌ಪೋನ್‌ ಅನ್ನು ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಬಳಸಿ ಸಿದ್ದಪಡಿಸಲಾಗಿದೆ. ಈ ಸ್ಮಾರ್ಟ್‌ಪೋನ್‌ 4nm Exynos 2200 ಚಿಪ್‌ಸೆಟ್‌ ಜೊತೆಗೆ ಪ್ರಭಾವಶಾಲಿ ಪವರ್‌ ಗೇಮಿಂಗ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 50MP ಪ್ರೈಮರಿ ಕ್ಯಾಮೆರಾ, 12MP ಅಲ್ಟ್ರಾವೈಡ್ ಲೆನ್ಸ್ ಮತ್ತು 8MP ಟೆಲಿಫೋಟೋ ಸೆನ್ಸಾರ್ ನೈಟೋಗ್ರಫಿ ಫೀಚರ್ಸ್‌ ಒಳಗೊಂಡಿದೆ.

ಇದನ್ನೂ ಓದಿ : ಫ್ಲಿಪ್‌ಕಾರ್ಟ್ ಸೇಲ್ 2023 ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ ಈ ಮೊಟೊರೊಲಾ ಸ್ಮಾರ್ಟ್‌ಪೋನ್‌ : ಅಷ್ಟಕ್ಕೂ ಏನಿದರ ಫೀಚರ್ಸ್‌ ?

ಡೈನಾಮಿಕ್ AMOLED 2X ಡಿಸ್‌ಪ್ಲೇ ನೀವು ಆನ್‌ಲೈನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ ಅಥವಾ ಸರ್ಫ್ ಮಾಡುವಾಗ ಉತ್ತಮ ದೃಶ್ಯ ಅನುಭವ ವನ್ನು ನೀಡುತ್ತದೆ. ಇಂತಹ ಅತ್ಯುತ್ತಮ ಮೊಬೈಲ್‌ ಪೋನ್‌ ಅನ್ನು ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಕೇವಲ ₹ 49,999 ರೂಪಾಯಿಗೆ ಲಭ್ಯವಿದೆ.

Buy Samsung Galaxy M34 5G Mobile for less than 15 thousand Samsung Galaxy M34 & M14 5G Samsung Galaxy S23 Samsung Galaxy S23 FE

Comments are closed.