Amazon Prime Video Mobile Plan: ಅಮೆಜಾನ್‌ ಪ್ರೈಮ್‌ ವೀಡಿಯೋದಿಂದ 599 ರೂ.ಗಳ ಹೊಸ ಪ್ಲಾನ್‌ ಲಾಂಚ್‌..

ಅಮೆಜಾನ್‌ (Amazon) ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಸಿನಿಮಾ, ವೆಬ್‌ ಸೀರೀಸ್‌, ಶೋ ಗಳನ್ನು ಬಳಕೆದಾರರು ಪಡೆದುಕೊಳ್ಳಲು ಹೊಸ ಪ್ರೈಮ್‌ ವೀಡಿಯೊ ಮೊಬೈಲ್‌ ಪ್ಲಾನ್‌ (Amazon Prime Video Mobile Plan) ಅನ್ನು ಲಾಂಚ್‌ ಮಾಡಿದೆ. ಈ ವೀಡಿಯೊ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಚಂದಾದರಿಕೆ ಅವಧಿಯ ಮಾನ್ಯತೆಯ ಮೇರೆಗೆ ಈಗಾಗಲೇ 3 ಪ್ಲಾನ್‌ಗಳನ್ನು ಪರಿಚಯಿಸಿದೆ. ಈಗ ಇದು ಬಳಕೆದಾರರಿಗೆ ಅಗ್ಗದ ವಾರ್ಷಿಕ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸಿದೆ. ಈ ಸೇವೆಯು ಮೊಬೈಲಿಗೆ ಮಾತ್ರ ಸೀಮಿತವಾಗಿರುತ್ತದೆ.

ವಾರ್ಷಿಕ 599 ರೂ.ಗಳ ಈ ಹೊಸ ಯೋಜನೆಯು SD ಗುಣಮಟ್ಟದ ಚಿತ್ರಗಳನ್ನು ನೀಡುತ್ತದೆ. ಇದು ಜನರು ಖರೀದಿಸಬಹುದಾದ ಅಗ್ಗದ ಯೋಜನೆಯಾಗಿದೆ. ಈ ಯೋಜನೆಯು ಚಿತ್ರಗಳನ್ನು ಆಫ್‌ಲೈನ್‌ನಲ್ಲಿ ವೀಕ್ಷಿಸುವ ಅವಕಾಶವನ್ನು ನೀಡಿದೆ. ಇದು ವಿಶೇಷವಾಗಿ ಲೈವ್‌ ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ಒದಗಿಸುತ್ತದೆ. ಬಳಕೆದಾರರು ಭಾರತೀಯ ಮತ್ತು ಅಂತರಾಷ್ಟ್ರೀಯ ಶೋಗಳು ಅಥವಾ ಚಲನಚಿತ್ರಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ಅಮೆಜಾನ್‌ ಪ್ರೈಮ್‌ ವೀಡಿಯೊದ ಮೊಬೈಲ್‌ ಆವೃತ್ತಿಯನ್ನು ಮೊದಲ ಬಾರಿಗೆ ಭಾರ್ತಿ ಏರ್‌ಟಲ್‌ ಕಳೆದ ವರ್ಷ ಪ್ರಾರಂಭಿಸಿತ್ತು. ಇದು ಆರಂಭದಲ್ಲಿ ಪ್ರೀಪೇಯ್ಡ್‌ ಯೋಜನೆಗಳನ್ನು ಖರೀದಿಸುವವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಅಮೆಜಾನ್‌ ಅಧಿಕೃತವಾಗಿ ಬಿಡುಗಡೆ ಮಾಡಿರುವದರಿಂದ ಎಲ್ಲರಿಗೂ ಲಭ್ಯವಿದೆ. ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಚಂದಾದಾರಿಕೆಯ ಪ್ರೀಪೇಯ್ಡ್‌ ಯೋಜನೆಯು ಮಾಸಿಕ 89 ರೂ. ಗಳಿಂದ ಪ್ರಾರಂಭವಾಗುತ್ತದೆ. ಇದು ಸಹ SD ಗುಣಮಟ್ಟವನ್ನೆ ಹೊಂದಿದೆ.

ಅಮೆಜಾನ್ ಪ್ರೈಮ್ ವೀಡಿಯೊ ಮಾಸಿಕ ಯೋಜನೆಯು179 ರೂ. ಗಳದ್ದಾಗಿದೆ. ತ್ರೈಮಾಸಿಕ ಯೋಜನೆಗೆ ಇದು 459 ರೂ. ಆಗಿದೆ. ವಾರ್ಷಿಕ ಚಂದಾದಾರಿಕೆ ವೆಚ್ಚವು 1,499 ರೂ. ಆಗಿದೆ.

ಇದನ್ನೂ ಓದಿ : Mukesh Ambani : ‘ಮೆಟ್ರೋ AG ಕ್ಯಾಶ್‌ ಆಂಡ್‌ ಕ್ಯಾರಿ ಇಂಡಿಯಾ’ ಖರೀದಿಸಲು ಮುಂದಾದ ರಿಲಯನ್ಸ್‌

ಇದನ್ನೂ ಓದಿ : Lava Blaze 5G :ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ ಲಾವಾ ಬ್ಲೇಜ್‌ 5G ಪಾಕೆಟ್‌–ಫ್ರೆಂಡ್ಲೀ ಸ್ಮಾರ್ಟ್‌ಫೋನ್‌

(Amazon Prime Video Mobile Plan Rs 599 per year launched)

Comments are closed.