Android Phone Security: ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ ಬಳಸಿ ಮೊಬೈಲನ್ನು ಸುರಕ್ಷಿತವಾಗಿಡುವುದು ಹೇಗೆ?

Android Phone Security : ಇಂದು ಸ್ಮಾರ್ಟ್‌ಫೋನ್ ಬಳಕೆ ಮಾಡುವವರ ಅತಿ ದೊಡ್ಡ ಸಮಸ್ಯೆ ಎಂದು ವೈರಸ್ (Virus) ಹಾಗೂ ಮಾಲ್‌ವೇರ್ (Malware). ನೀವು ಮೊಬೈಲ್ ಮಾಲ್‌ವೇರ್ ಬಗ್ಗೆ ಚಿಂತೆ ಮಾಡುತ್ತಿದ್ದರೆ, ನಿಮ್ಮ ಫೋನ್‌ನಲ್ಲಿ ಆಂಟಿವೈರಸ್ ಅಪ್ಲಿಕೇಶನ್ (Antivirus App) ಅನ್ನು ಡೌನ್ಲೋಡ್ ಮಾಡಬಹುದಾಗಿದೆ. ಇದಕ್ಕಾಗಿ ಸಾಕಷ್ಟು ಫ್ರೀ ಹಾಗೂ ಪೈಡ್ ಉತ್ತಮ ಭದ್ರತಾ ಅಪ್ಲಿಕೇಶನ್‌ಗಳಿವೆ. ಇವುಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಕಾನ್ಫಿಗರೇಶನ್ (Configuration) ಅಗತ್ಯವಿಲ್ಲ. ಅಥವಾ ನಿಮ್ಮ ಪ್ರೈವಸಿ ಡೀಟೈಲ್ (Privacy Details) ಸುರಕ್ಷಿತವಾಗಿರಿಸಲು ನೀವು ಗೂಗಲ್ ನ ಸ್ವಂತ ಪ್ಲೇ ಪ್ರೊಟೆಕ್ಟ್ (Play Protect) ಸೌಲಭ್ಯವನ್ನು ಬಳಸಬಹುದು.

ಆದರೆ ಆಂಡ್ರಾಯ್ಡ್ ಮಾಲ್‌ವೇರ್ ಹೆಚ್ಚಳವು ಯಾವುದೇ ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ ಎಂದು ಸೂಚಿಸುತ್ತದೆ. ನಿಮ್ಮ ಫೋನ್ ಅನ್ನು ಸರಿಯಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನೀವು ಮಾಡಬೇಕಾದ ಸೆಕ್ಯೂರಿಟಿ ಚೆಕಿಂಗ್ ಏನೆಲ್ಲ ಎಂದು ಇಲ್ಲಿ ವಿವರಿಸಲಾಗಿದೆ.

  1. ನಿಮ್ಮ ಫೋನ್ ಆಂಟಿ- ಮಾಲ್ವೇರ್ ಪ್ರೊಟೆಕ್ಷನ್ ಖಚಿತಪಡಿಸಿ
    ಎಫ್-ಸೆಕ್ಯೂರಿಟಿ ಎವಿ ಟೆಸ್ಟ್ ( F- secure AV test) ಟೂಲ್ ಬಳಸಿ ಫೋನ್ ಪ್ರೊಟೆಕ್ಷನ್ ಟೆಸ್ಟ್ ಮಾಡಬಹುದು.
    ಇದಕ್ಕಾಗಿ ಎಫ್-ಸೆಕ್ಯೂರಿಟಿ ಎವಿ ಟೆಸ್ಟ್ ಆ್ಯಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ಲೋಡ್ ಮಾಡಬಹುದು. ಇದು ರಿಯಲ್ ಟೈಮ್ ಪ್ರೊಟೆಕ್ಷನ್ ಬಳಸಿ ಮಾಲ್ವೇರ್ ಬ್ಲಾಕ್ ಮಾಡುತ್ತದೆ. ಇಲ್ಲವಾದಲ್ಲಿ, ಮ್ಯಾನುವಲ್ ಆಗಿ ಮಾಡಬಹುದು.
  2. ಫೋನ್ ಸೆಟಿಂಗ್ಸ್ ಸ್ಕ್ಯಾನ್ ಮಾಡಿ.
    ಮೊಬೈಲ್‌ನಲ್ಲಿರುವ ಅನ್ ಸೇಫ್ ಫೀಚರ್ಸ್ ಆಫ್ ಮಾಡಿ ಸೇಫ್ ಫೀಚರ್ಸ್ ಆನ್ ಮಾಡಿ. ಇಲ್ಲವಾದಲ್ಲಿ ” ಸೇಫ್ ಮಿ” ಡೌನ್ಲೋಡ್ ಮಾಡಿಕೊಳ್ಳಬಹುದು.
  3. ಆ್ಯಪ್‌ ಪರ್ಮಿಷನ್ ಸೇಫ್ ಇದೆಯೇ ಎಂದು ಚೆಕ್ ಮಾಡಿ.
    ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಆ್ಯಪ್‌ ಡೌನ್ಲೋಡ್ ಮಾಡುವಾಗ ಬಿಲ್ಟ್ ಇನ್ ಆ್ಯಪ್‌ ಪರ್ಮಿಷನ್ ಕೇಳುತ್ತವೆ. ಇದಕ್ಕಾಗಿ ಸೆಟಿಂಗ್ಸ್> ಆ್ಯಪ್‌ & ನೋಟಿಫಿಕೇಶನ್>ಅಡ್ವಾನ್ಸ್ಡ್> ಪರ್ಮಿಷನ್ ಮ್ಯಾನೇಜರ್ ನಲ್ಲಿ ಸೆಟಿಂಗ್ಸ್ ಚೇಂಜ್ ಮಾಡಬೇಕು. ಇಲ್ಲವೇ, ಆ್ಯಪ್‌ ಪರ್ಮಿಷನ್ ಡಾಶ್ ಬೋರ್ಡ್ (App permission dashboard) ಆಪ್ ಡೌನ್ಲೋಡ್ ಮಾಡಿ. ಇದು ಯಾವ ಆ್ಯಪ್‌ ಎಷ್ಟು ಪರ್ಸನಲ್ ಡಾಟಾ ಕದಿಯುತ್ತದೆ ಎಂದು ರೆಕಾರ್ಡ್ ಮಾಡುತ್ತದೆ.
  4. ಯಾವುದೇ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಸೆಕ್ಯೂರಿಟಿ ಚೆಕ್ ಮಾಡಿ.
    ದಿಫಾಲ್ಟ್ ಸೆಟಿಂಗ್ಸ್ ಚೇಂಜ್ ಮಾಡದೇ ಇದ್ದಲ್ಲಿ, ಪ್ರೈವೇಟ್ ಡೀಟೈಲ್ ಲೀಕ್ ಆಗಬಹುದು. ಇದಕ್ಕಾಗಿ ಜಂಬೋ ಆ್ಯಪ್‌ ಡೌನ್ಲೋಡ್ ಮಾಡಿಕೊಳ್ಳಬಹುದು.
  5. ಯಾವೆಲ್ಲ ಆ್ಯಪ್‌ ಬ್ಯಾಕ್ ಗ್ರೌಂಡ್‌ನಲ್ಲಿ ರನ್ ಆಗುತ್ತದೆ ಎಂದು ಪರಿಶೀಲಿಸಿ.
    ಹೆಚ್ಚಿನ ಆ್ಯಪ್‌ ಬ್ಯಾಕ್ ಗ್ರೌಂಡ್ ಡಾಟಾ ಬಳಸುತ್ತವೆ. ಇದು ಬ್ಯಾಟರಿ ಹಾಗೂ ರಾಮ್ ಅನ್ನು ಹೆಚ್ಚು ಕನ್ಸ್ಯುಮ್ ಮಾಡುತ್ತದೆ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

ಇದನ್ನೂ ಓದಿ : Google search Engine : ಗೂಗಲ್ ಇಲ್ಲದಿರುವ ದೇಶಗಳೂ ಇವೆ !

ಇದನ್ನೂ ಓದಿ : ವಾಟ್ಸಾಪಲ್ಲಿ ವಾಯ್ಸ್ ಮೆಸೇಜ್ ಕಳಿಸುವ ಮುನ್ನ ನಿಮ್ಮ ಮೆಸೇಜನ್ನ ನೀವೇ ಕೇಳುವುದು ಹೇಗೆ?

ಇದನ್ನೂ ಓದಿ : HTC Wildfire E2 Plus : ಮಾರುಕಟ್ಟೆಗೆ ರೀ ಎಂಟ್ರಿ ನೀಡಿದ ಎಚ್‌ಟಿಸಿ ಬ್ರಾಂಡ್; 13,400 ರೂ.ಗೆ ದೊರೆಯುವ ಎಚ್‌ಟಿಸಿ ಸ್ಮಾರ್ಟ್‌ಫೋನ್‌ ವೈಶಿಷ್ಟ್ಯವೇನು?

(Android Phone Security Essential tricks and tips)

Comments are closed.