Puneeth metro : ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ಹೆಸರು : ಅಭಿಮಾನಿಗಳಿಂದ ಒತ್ತಾಯ

ಕನ್ನಡದ ಪವರ್ ಸ್ಟಾರ್, ಕರುನಾಡಿನ ಮನೆಮಗ, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ಅಗಲಿ ಹೋಗಿದ್ದರೂ ಮಾನಸಿಕವಾಗಿ ಮನೆಮಗನಂತೆ ಲಕ್ಷಾಂತರ ಅಭಿಮಾನಿಗಳ ಎದೆಯಲ್ಲಿದ್ದಾರೆ. ಪುನೀತ್ (Puneet Raj Kumar)ಅಗಲಿದ ದಿನದಿಂದ ರಾಜ್ಯದಾದ್ಯಂತ ,ದೇಶದ ಹಲವೆಡೆ,ವಿದೇಶದ ಕೆಲವೆಡೆಯೂ ಪುನೀತ್ ಹೆಸರನ್ನು ವಿಭಿನ್ನವಾಗಿ ಸ್ಮರಿಸಿಕೊಳ್ಳುವ ಕೆಲಸ ಅವ್ಯಾಹತವಾಗಿ ನಡೆದಿದೆ. ಈ ಮಧ್ಯೆ ಪುನೀತ್ ಹೆಸರನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ಮೆಟ್ರೋ ನಿಲ್ದಾಣಕ್ಕೆ (Metro Station) ಪುನೀತ್ ಹೆಸರನ್ನು (Puneeth metro) ಇಡಬೇಕೆಂಬ ಒತ್ತಡ ವ್ಯಕ್ತವಾಗಿದೆ.

ಪುನೀತ್ ಅಗಲಿದ್ರೂ ಅವರ ನೆನಪು,ಅವರ ಸಾಮಾಜಿಕ ಕಾರ್ಯಗಳಿಂದ ಪ್ರತಿನಿತ್ಯ ನೂರಾರು ಜನರು ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ಇನ್ನಷ್ಟು ಕಾಲ ಪುನೀತ್ ನೆನಪನ್ನು ಚಿರಸ್ಥಾಯಿಯಾಗಿಸಲು ಅಭಿಮಾನಿಗಳು ಹೊಸ ಬೇಡಿಕೆ ಇಟ್ಟಿದ್ದಾರೆ. ಪುಲಿಕೇಶಿ ನಗರದಲ್ಲಿ‌ ನಿರ್ಮಾಣ ಹಂತದಲ್ಲಿರೋ ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ಹೆಸರು ಇಡಬೇಕೆಂಬ ಒತ್ತಡ ಎಲ್ಲೆಡೆಯಿಂದ ಕೇಳಿಬಂದಿದೆ. ಅದರಲ್ಲೂ ಕರ್ನಾಟಕ ಬಹುಜನ ಫೆಡರೇಷನ್ ಎಂಬ ಸಂಘಟನೆ ಈ ಕುರಿತು ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಮನವಿ ಸಲ್ಲಿಸಿದೆ.

ಪುಲಿಕೇಶಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಡಬೇಕೆಂದು ಒತ್ತಾಯಿಸಿರುವ ಸಂಘಟನೆ ಮುಂದಿನ ದಿನಗಳಲ್ಲಿ ಈ ಕುರಿತು ಮಾಜಿ ಕೇಂದ್ರ ಸಚಿವ ಡಿ.ಸಿ.ಸದಾನಂದ ಗೌಡ ಹಾಗೂ ಪ್ರಧಾನಿ ನರೇಂದ್ರ್ ಮೋದಿ ಹಾಗೂ ಬಿಎಂಆರ್ ಸಿಎಲ್ ಗೂ ಮನವಿ ಮಾಡುವುದಾಗಿ ಹೇಳಿದೆ. ಈಗಾಗಲೇ ನಗರದ ಹಲವು ರಸ್ತೆಗಳು, ಮೇಲುಸೇತುವೆ ಹಾಗೂ ಉದ್ಯಾನವನಗಳಿಗೆ ಪುನೀತ್ ರಾಜ್ ಕುಮಾರ್ ಹೆಸರನ್ನು ಇಡಲಾಗಿದೆ. ಅಲ್ಲದೇ ಹಲವು ಸಂಘಟನೆಗಳು ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಂಘ ಪಾಲಿಕೆ ಆವರಣದಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು ಈಗಾಗಲೇ ಪುತ್ಥಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಈ‌ಮಧ್ಯೆ ನಗರದ ಜನರ ಪ್ರಮುಖ ಸಾರಿಗೆಯಾಗಿ ಬಳಕೆಯಾಗುತ್ತಿರುವ ಮೆಟ್ರೋದಲ್ಲೂ ಪುನೀತ್ ಹೆಸರು ಸ್ಮರಣೆಯಾಗಬೇಕೆಂಬ ಕಾರಣಕ್ಕೆ ಅಭಿಮಾನಿಗಳು ಮೆಟ್ರೋ ನಿಲ್ದಾಣಕ್ಕೆ ಪುನೀತ್ ಹೆಸರು ಇಡಬೇಕೆಂಬ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಹೊಸಳ್ಳಿ ರೇಲ್ವೆ ನಿಲ್ದಾಣಕ್ಕೆ ಆದಿಚುಂಚನಗಿರಿಯ ಶ್ರೀ ಬಾಲ ಗಾಂಧಾರ ನಾಥ ಶ್ರೀಗಳ ಹೆಸರು ಇಡಲಾಗಿತ್ತು. ಈಗ ಪುನೀತ್ ಹೆಸರು ಇಡಬೇಕೆಂಬ ಒತ್ತಡ ಕೇಳಿಬಂದಿದ್ದು ಸದ್ಯದಲ್ಲೇ ನಾಮಕರಣಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ :‌ ಪುನೀತ್ ಬರೆದ್ರು ಹೊಸ ದಾಖಲೆ : ಗೂಗಲ್ ನಲ್ಲಿ ಅಪ್ಪು ರೆಕಾರ್ಡ್

ಇದನ್ನೂ ಓದಿ : ಪುನೀತ್ ರಾಜ್ ಕುಮಾರ್ ಕನಸು : ಗಂಧದಗುಡಿ ಟೀಸರ್ ತೆರೆಗೆ

ಇದನ್ನೂ ಓದಿ : ಸಿನಿಮಾ ರಂಗ ಬಿಡ್ತಾರಂತೆ ರಶ್ಮಿಕಾ : ನಿರ್ಧಾರಕ್ಕೆ ಕಾರಣವೇನು ಗೊತ್ತಾ?!

(Puneet Raj Kumar Name Metro Station Puneeth metro)

Comments are closed.