Aneka Plus Kannada OTT: ಕನ್ನಡಕ್ಕೆ ಹೊಸ ಒಟಿಟಿ ಫ್ಲಾಟ್‌ಫಾರ್ಮ್ Aneka Plus; ಭರಪೂರ ಮನರಂಜನೆಯ ಭರವಸೆ; ಹೊಸಬರಿಗೆ ಇಲ್ಲಿದೆ ಅವಕಾಶ

ಕನ್ನಡದಲ್ಲಿ ಹೊಸ ರೀತಿಯ ಮತ್ತು ವೈವಿಧ್ಯಮಯ ವಿಡಿಯೋಗಳನ್ನು ಹೊರತಂದು ಯೂಟ್ಯೂಬ್ ಮೂಲಕ ಲಕ್ಷಾಂತರ ಜನರರನ್ನು ತಲುಪಿದ್ದ ಮಾಧ್ಯಮ ಅನೇಕ ಇದೀಗ ಕನ್ನಡದಲ್ಲಿ ಅತ್ಯುತ್ತಮ ಗುಣಮಟ್ಟದ ಕಂಟೆಂಟ್ ನೀಡುವ Aneka Plus ಹೆಸರಿನ ಹೊಸ OTT (ಓವರ್ ದಿ ಟಾಪ್) ಹೊರತರುತ್ತಿದೆ. Aneka Plus ಇದೀಗ Android Playstore, iOS App Store ಗಳಲ್ಲಿ ಅಲ್ಲದೆ www.anekaplus.com ವೆಬ್ಸೈಟ್ ರೂಪದಲ್ಲಿ ಕೂಡ ಲಭ್ಯವಿದೆ. Aneka Plus OTT ಯ ಮೂಲಕ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾದ ಉತ್ತಮ ಮನೋರಂಜನಾ ಕಂಟೆಂಟ್‌ ಮತ್ತು ಮಾಹಿತಿಯುಕ್ತ ವಿಷಯಗಳನ್ನು ವೀಕ್ಷಕರು ಎದುರು ನೋಡಬಹುದು (Aneka Plus Kannada OTT) ಎಂದು ಮಾಧ್ಯಮ ಅನೇಕ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದೆ.

ಮಾಧ್ಯಮ ಅನೇಕ ತನ್ನ Aneka Plus OTT Platform ಮೂಲಕ ತನ್ನ in-house productions ಗಳನ್ನು “Maadhyama Aneka Originals” ಶೀರ್ಷಿಕೆಯಡಿ ತರುತ್ತಿದ್ದು, ಹೊಸತನ ಮತ್ತು ಸದಭಿರುಚಿಯ ಅಡಿಪಾಯದ ಮೇಲೆ ಹೆಣೆದ ಕಥಾವಸ್ತುಗಳನ್ನು ವೆಬ್ ತೆರೆಯ ಮೇಲೆ ತರುವ ಧ್ಯೇಯೋದ್ದೇಶ ಹೊಂದಿದೆ. Aneka Plus ಮೂಲಕ ಪ್ರೇಕ್ಷಕರಿಗೆ ಉತ್ತಮ ಕಂಟೆಂಟ್ ನೀಡುವುದರೊಂದಿಗೆ, ಮನೋರಂಜನಾ ಉದ್ಯಮದ ಇಡೀ ಸಮುದಾಯ – ನಿರ್ಮಾಪಕರು, ನಿರ್ದೇಶಕರು, ಚಿತ್ರಕಥೆ ಬರಹಗಾರರು, ಕಲಾವಿದರು, ತಂತ್ರಜ್ಞರೂ – ಎಲ್ಲರ ಆಯಾ ಕಲಾ ಸಾಮರ್ಥ್ಯ, ಪರಿಣಿತಿಗೆ ಪೋಷಕವಾಗಿ ಒಂದು ವೇದಿಕೆ ಯಾಗಬೇಕೆನ್ನುವ ನಿಟ್ಟಿನಲ್ಲಿ ‘ಮಾಧ್ಯಮ ಅನೇಕ’ ಈ ಪ್ಲಾಟ್ಫಾರ್ಮ್ ಅನ್ನು ರೂಪಿಸುತ್ತಿದೆ. ಇಲ್ಲಿನ ಕಂಟೆಂಟ್ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಇರುತ್ತದೆ.

ಆಸಕ್ತ ಚಿತ್ರಕಥೆ ಬರಹಗಾರರು, ಕಥೆಗಾರರು, ತಮ್ಮ ಯಾವುದೇ ಕಥಾವಸ್ತುವಾಗಲಿ ಅಥವಾ ತಮ್ಮ ಸಿದ್ಧ ಚಿತ್ರಕಥೆ / ಸ್ಕ್ರಿಪ್ಟ್‌ ಗಳ ಪರಿಕಲ್ಪನೆಗಳನ್ನು ‘ಮಾಧ್ಯಮ ಅನೇಕ’ ಕಂಟೆಂಟ್ ಕ್ಯುರೇಟರ್ ಗಳಿಗೆ ಕಳುಹಿಸಬಹುದು. ವಸ್ತು ವಿಷಯ ವೆಬ್ ಸೀರೀಸ್ ಅಥವಾ ಡಾಕ್ಯುಮೆಂಟರಿ ಗೆ ಪೂರಕವಾಗಿ ಇರುವಂತಹದ್ದಾಗಿರಬೇಕು.

OTT ಪ್ಲಾಟ್‌ಫಾರ್ಮ್‌ಗಳು ಯುವ ಚಲನಚಿತ್ರ ನಿರ್ಮಾಪಕರಿಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿವೆ ಮತ್ತು ಪರಿಣಿತ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ವಿಭಿನ್ನ ಪರಿಕಲ್ಪನೆಗಳು ಮತ್ತು ಕಥಾಹಂದರವನ್ನು ಪ್ರಯೋಗಿಸುವ ಸ್ವಾತಂತ್ರ್ಯವನ್ನು ದೊರಕಿಸಿಕೊಡುತ್ತಿವೆ. ಆದರೆ ಯಾವುದೇ ಪ್ರಮುಖ ಪ್ರಾದೇಶಿಕ OTT streaming platform ಕನ್ನಡ ಭಾಷೆಯಲ್ಲಿ original content ಅನ್ನು ಸಕ್ರಿಯವಾಗಿ ಪೂರೈಸುವುದನ್ನು ನಾವಿನ್ನೂ ಕಾಣಬೇಕಾಗಿದೆ. ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳಾದ Amazon Prime Video, Netflix, ಮತ್ತು Hotstar ಇನ್ನೂ ಕನ್ನಡದಲ್ಲಿ ಭಾರಿ ಪ್ರಮಾಣದ ಆಸಕ್ತಿ ತೋರಿಸಬೇಕಾಗಿದೆ. ಈ ಕೊರತೆಯನ್ನು ಮಾಧ್ಯಮ ಅನೇಕ ಪ್ರಾದೇಶಿಕ ಭಾಷೆಗಳಿಗೆ, ವಿಶೇಷವಾಗಿ ಕನ್ನಡ ಭಾಷೆಗೆ ಇರುವ ಒಂದು ಸದಾವಕಾಶವೆಂದು ಪರಿಗಣಿಸುತ್ತಿದೆ. ಅಂತೆಯೇ ‘ಮಾಧ್ಯಮ ಅನೇಕ’ 2020 ರಲ್ಲಿ ವೆಬ್ ಪ್ಲ್ಯಾಟ್‌ಫಾರ್ಮ್‌ಗಳಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ತಯಾರಿಸುವತ್ತ ಗಮನ ಹರಿಸಲು ಪ್ರಾರಂಭಿಸಿತು. ಇದೀಗ ವೆಬ್ ಪ್ಲಾಟ್ಫಾರ್ಮ್ ಗಳಲ್ಲಿ ಪ್ರಾದೇಶಿಕ ಭಾಷೆಗಳ ಕಾರ್ಯಕ್ರಮಗಳಿಗೆ, ಅವುಗಳ ನಿರ್ಮಾಪಕರಿಗೆ ಬೇಡಿಕೆ ಹೆಚ್ಚುತ್ತಿರುವ ಈ ಹಂತದಲ್ಲಿ ಮಾಧ್ಯಮ ಅನೇಕ ತನ್ನ OTT ಪ್ರಕಟಣೆ ಹೊರತರುತ್ತಿದೆ ಎಮದು ಮಾಧ್ಯಮ ಅನೇಕ ತಿಳಿಸಿದೆ.

ಇದನ್ನೂ ಓದಿ: Best Smartphones Under 5000: ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್‌; 5 ಸಾವಿರದೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳಿವು

Comments are closed.