ಐಪೋನ್ ಖರೀದಿ ಮಾಡಬೇಕು ಅನ್ನುವವರಿಗೆ ಇದು ಬೆಸ್ಟ್ ಸಮಯ. ಯಾಕೆಂದ್ರೆ ಆಪಲ್ (Apple) ಕಂಪೆನಿ ಇತ್ತೀಚಿಗಷ್ಟೆ ಐಪೋನ್ 15 (Iphone 15) ಬಿಡುಗಡೆ ಮಾಡಿದೆ. ಐಪೋನ್ 15 ಖರೀದಿಯ ಮೇಲೆ 40,000 ರೂಪಾಯಿ ಬಂಪರ್ ಆಫರ್ ಲಭ್ಯವಾಗುತ್ತಿದೆ.

ಭಾರತ ಪ್ರಖ್ಯಾತ ಇ-ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್‌ಕಾರ್ಟ್ Apple iPhone 15 ಸ್ಮಾರ್ಟ್‌ಪೋನ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ ಫ್ಲಿಪ್ ಕಾರ್ಟ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಬರೋಬ್ಬರಿ 40,000 ರೂಪಾಯಿ ಆಫರ್ ಘೋಷಣೆ ಮಾಡಿದೆ.
ಆಪಲ್ ಐಪೋನ್ 15 128GB ಸ್ಟೊರೇಜ್ ಮಾದರಿಯ ಸ್ಮಾರ್ಟ್ ಪೋನ್ ಬೆಲೆ ಭಾರತದಲ್ಲಿ 79,900 ರೂ. ಇದೆ. ಆದರೆ ಫ್ಲಿಪ್ ಕಾರ್ಟ್ ಘೋಷಣೆ ಮಾಡಿರುವ ಎಲ್ಲಾ ರಿಯಾಯಿತಿಗಳ ಮೇಲೆ 39,250 ರೂ.ಗೆ ಖರೀದಿಸಬಹುದು. ಈ ಮೂಲಕ ಈ ಪೋನ್ ಬೆಲೆಯ ಮೇಲೆ ಬರೋಬ್ಬರಿ 40,650ಕ್ಕೆ ಇಳಿಕೆಯಾಗಲಿದೆ.
ಇದನ್ನೂ ಓದಿ : ಆ್ಯಪಲ್ ಐಪೋನ್ 11 ಪ್ರೋ Max ಬೆಲೆಯಲ್ಲಿ ಬಾರೀ ಇಳಿಕೆ : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಸುವರ್ಣಾವಕಾಶ
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಐಪೋನ್ ೧೫ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಮಾತ್ರವಲ್ಲದೇ ವಿವಿಧ ಬ್ಯಾಂಕುಗಳ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಖರೀದಿ ಮಾಡಿದ್ರೆ ಇನ್ನಷ್ಟು ಹೆಚ್ಚುವರಿ ಆಫರ್‌ಗಳನ್ನು ಪಡೆಯಬಹುದಾಗಿದೆ.
ಪ್ರಮುಖವಾಗಿ ICICI ಬ್ಯಾಂಕ್ ಡೆಬಿಟ್ ಕಾರ್ಡ್ EMI ಮೂಲಕ ಖರೀದಿ ಮಾಡಿದ್ರೆ ಗ್ರಾಹಕರು ರೂ.1500 ರಿಯಾಯಿತಿಯನ್ನು ಪಡೆಯಬಹುದು. ಇದರಿಂದಾಗಿ ಐಪೋನ್ 15 ಮೊಬೈಲ್ ಬೆಲೆಯು 78,400ರೂ.ಗೆ ಇಳಿಕೆಯಾಗಿದೆ. ಅಷ್ಟೇ ಅಲ್ಲದೇ ಫ್ಲಿಪ್‌ಕಾರ್ಟ್ ಐಫೋನ್ 15 ನಲ್ಲಿ ಎಕ್ಸ್‌ಚೇಂಜ್ ಆಫರ್ ಕೂಡ ಘೋಷಣೆ ಮಾಡಿದೆ.
ಇದನ್ನೂ ಓದಿ : ಅಮೆಜಾನ್ ಬಿಗ್ ಸೇಲ್ : ಕೇವಲ 14,449 ರೂಪಾಯಿಗೆ ಸಿಗುತ್ತೆ ಜಿಯೋ ಲ್ಯಾಪ್‌ಟಾಪ್
ಉತ್ತಮ ಸ್ಥಿತಿಯಲ್ಲಿರುವ ಬ್ರ್ಯಾಂಡೆಡ್ ಹಳೆಯ ಸ್ಮಾರ್ಟ್‌ಪೋನ್ ಗಳನ್ನು ವಿನಿಮಯ ಮಾಡಿಕೊಂಡಿದೆ ಆ ಮೂಲ 39,150ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಇದರಿಂದ ಐಫೋನ್ 15 ಬೆಲೆ ರೂ.39,250ಕ್ಕೆ ಇಳಿಕೆಯಾಗಲಿದೆ. ಅಂದರೆ ನೀವು ಫ್ಲಿಪ್‌ಕಾರ್ಟ್‌ನಲ್ಲಿ ರೂ.39,250 ಕ್ಕೆ iPhone 15 ಅನ್ನು ಎಲ್ಲಾ ಬ್ಯಾಂಕ್ ಕೊಡುಗೆಗಳು ಮತ್ತು ರಿಯಾಯಿತಿಗಳೊಂದಿಗೆ ಪಡೆಯಬಹುದು.

Apple ಈ ವರ್ಷ iPhone 15 ಸರಣಿಯಲ್ಲಿ ನಾಲ್ಕು ಮಾದರಿಯ ಮೊಬೈಲ್ ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ, ಐಫೋನ್ 15 ಮೂಲ ಮಾದರಿಯಾಗಿದೆ. ಮೇಡ್ ಇನ್ ಇಂಡಿಯಾ Apple iPhone 15 ಬಿಡುಗಡೆಯಾದ ದಿನದಿಂದಲೂ ಗ್ರಾಹಕರ ಮನ ಗೆದ್ದಿದೆ. ಅದ್ರಲ್ಲೂ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಿರುವ ವೈಶಿಷ್ಟ್ಯತೆಗಳು ಹಾಗೂ ಅಪ್ಡೇಟ್ಸ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ : ಫ್ಲಿಪ್‌ಕಾರ್ಟ್ ಸೇಲ್ 2023 ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ ಈ ಮೊಟೊರೊಲಾ ಸ್ಮಾರ್ಟ್‌ಪೋನ್ : ಅಷ್ಟಕ್ಕೂ ಏನಿದರ ಫೀಚರ್ಸ್ ?
ಆಪಲ್ ಐಪೋನ್ 15 ಆಪಲ್ iPhone 14 ಸ್ಮಾರ್ಟ್‌ಪೋನ್ ಮಾದರಿಯನ್ನೇ ಹೋಲುತ್ತಿದೆ. ಆದರೆ ತಂತ್ರಜ್ಞಾನದ ವಿಚಾರದಲ್ಲಿ ನೋಡಿದ್ರೆ ಎರಡೂ ಮೊಬೈಲ್‌ಗಳು ವಿಭಿನ್ನವಾಗಿವೆ. Apple iPhone 15 ಅನ್ನು ಸ್ಲಿಮ್ ಬೆಜೆಲ್‌ಗಳು, ನಾಚ್‌ಲೆಸ್ ವಿನ್ಯಾಸ, ಹಿಂಭಾಗದಲ್ಲಿ ಫ್ರಾಸ್ಟೆಡ್ ಗ್ಲಾಸ್, ಸ್ವಲ್ಪ ದೊಡ್ಡ ಕ್ಯಾಮೆರಾ ಲೆನ್ಸ್‌ನೊಂದಿಗೆ ಹೊಸ ನೋಟದಲ್ಲಿ ಬಿಡುಗಡೆ ಮಾಡಲಾಗಿದೆ.

ಇನ್ನು ಐಪೋನ್ ಸ್ಮಾರ್ಟ್‌ಪೋನ್ USB-C ಪೋರ್ಟ್ ಒಳಗೊಂಡಿದೆ. ಹೊಸ iPhone 15 ಐಫೋನ್ 14 ಪ್ರೊ ಮಾದರಿಯಲ್ಲಿ 48MP ಪ್ರಮುಖ ಕ್ಯಾಮೆರಾವನ್ನು ಒಳಗೊಂಡಿದ್ದು, ಎರಡನೇ ಕ್ಯಾಮೆರಾವು 12MP ಒಳಗೊಂಡಿದೆ. ಇನ್ನು Apple iPhone 15ನ ಮತ್ತೊಂದು ವೈಶಿಷ್ಟ್ಯತೆಯೇ 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ.

iPhone 15 ಬಯೋನಿಕ್ ಚಿಪ್ ಒಳಗೊಂಡಿದ್ದು, ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ಒಳಗೊಂಡಿದೆ. ಜೊತೆಗೆ iOS 17 ನಲ್ಲಿ ಚಾಲನೆ ಆಗುತ್ತಿದೆ. ಜೊತೆಗೆ 6GB LPDDR5 RAM ಹೊಂದಿರುವ iPhone 15 ಬಳಕೆದಾರರಿಗೆ ಒಟ್ಟಾರೆ ಅತ್ಯುತ್ತಮ ದರ್ಜೆಯ ಅನುಭವವನ್ನು ನೀಡುತ್ತಿದೆ.
Apple IPhone 15 purchase just Rs 40,000 Bumper Discount On Flipkart big billion day sale 2023