Apple iPhone 15: ನೀವು ಆಪಲ್ ಐಪೋನ್ ( Apple iPhone) ಪ್ರಿಯರಾ ? ಹಾಗಾದ್ರೆ ಐಪೋನ್ನ ಹೊಸ ಆವೃತ್ತಿ ಮೊಬೈಲ್ ಬಿಡುಗಡೆ ಮಾಡಿದೆ. ಅದ್ರಲ್ಲೂ ಭಾರತದಲ್ಲೇ ತಯಾರಿಸಲಾಗಿರುವ ಪೋನ್ ಅನ್ನು ಆಪಲ್ ಕಂಪೆನಿ ಬಿಡುಗಡೆ ಮಾಡಲು ಸಜ್ಜಾಗಿದೆ. ಆಪಲ್ ಕಂಪೆನಿ ಈ ಬಾರಿ ಐಪೋನ್ 15 (iPhone 15), ಐಪೋನ್ 15 ಪ್ರೋ (iPhone 15 Pro ), ಐಪೋನ್ 15 ಪ್ರೋ ಮ್ಯಾಕ್ಸ್ (iPhone 15 Pro Max) ಅಥವಾ ಅಲ್ಟ್ರಾ ( Ultra ) ಮತ್ತು ಐಪೋನ್ 15 ಪ್ಲಸ್ ( iPhone 15 Plus ) ಮಾದರಿಯಲ್ಲಿ ಮೊಬೈಲ್‌ಗಳನ್ನು ಬಿಡುಗಡೆ ಮಾಡಲಿದೆ.

ಐಪೋನ್ 15 ಶ್ರೇಣಿಯು ಐಪೋನ್ 14 ಶ್ರೇಣಿಗಳಿಗೆ ಹೋಲಿಸದ್ರೆ ಹೆಚ್ಚಿನ ಬದಲಾವಣೆಯ ಜೊತೆಗೆ ತನ್ನ ಗ್ರಾಹಕರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. iPhone 15 ಉತ್ಪಾದನಾ ತಂಡವು iPhone 15 ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಅದರ ಬಿಡುಗಡೆಯು ಶೀಘ್ರದಲ್ಲೇ ಸಮೀಪಿಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ : ಜಿಯೋ ಡೇಟಾ ಪ್ಯಾಕ್ : ಅತೀ ಕಡಿಮೆ ಬೆಲೆಗೆ 90 ದಿನ ವ್ಯಾಲಿಡಿಟಿ, 5g ಡೇಟಾ, ಅನಿಯಮಿತ ಕರೆ
ಐಪೋನ್ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಮೊಬೈಲ್‌ಗಳ ಮಾಹಿತಿ ಈಗಾಗಲೇ ಲೀಕ್ ಆಗಿದ್ದು, ಐಪೋನ್ ಅಭಿಮಾನಿಗಳು ಕುತೂಹಲ ಬರಿತರಾಗಿದ್ದಾರೆ. ವರದಿಯ ಪ್ರಕಾರ, iPhone 15 ಅನ್ನು ಭಾರತದಲ್ಲಿಯೇ ತಯಾರಿಸಲಾಗಿದೆ. ಹೀಗಾಗಿ ಬೆಲೆಯಲ್ಲಿಯೂ ಮೊದಲಿಗಿಂತಲೂ ಕಡಿಮೆಯಾಗಿರಲಿದೆ.

ಭಾರತದಲ್ಲಿ ಐಫೋನ್‌ನ ತಯಾರಿಕೆಯು ಅದರ ಅಂತಿಮ ಬೆಲೆಯ ಮೇಲೆ ಪರಿಣಾಮ ಬೀರುತ್ತದೆಯೇ ? ಎಂಬ ಪ್ರಶ್ನೆಗಳಿಗೆ ಇನ್ನೂ ನಿಖರ ಉತ್ತರ ಸಿಕ್ಕಿಲ್ಲ. ಐಫೋನ್ 15 ಭಾರತದಲ್ಲಿ ತಯಾರಾದ ಮೊದಲ ಐಫೋನ್ ಆಗಿರುವುದಿಲ್ಲ. ಐಫೋನ್‌ನ ಹಿಂದಿನ ಆವೃತ್ತಿಗಳಾದ iPhone 13 ಮತ್ತು iPhone 14 ಕೂಡ ಭಾರತದಲ್ಲಿಯೇ ತಯಾರಾಗಿತ್ತು. ಆದ್ರೂ ಕೂಡ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಇದನ್ನೂ ಓದಿ : Google AI ಗೂಗಲ್ ಚಾಲಿತ ಹುಡುಕಾಟ ಭಾರತದಲ್ಲಿ ಲಭ್ಯ : ಹೊಸ ತಂತ್ರಜ್ಞಾನದ ವೈಶಿಷ್ಟ್ಯತೆಯನ್ನು ಬಳಸುವುದು ಹೇಗೆ ?
iPhone 13 ರ 128GB ರೂಪಾಂತರವನ್ನು ಭಾರತದಲ್ಲಿ ರೂ 79,900 ಬೆಲೆಗೆ ಬಿಡುಗಡೆ ಮಾಡಲಾಗಿದೆ. ಅಂತೆಯೇ, iPhone 14 ನ ಮೂಲ ರೂಪಾಂತರವನ್ನು ಭಾರತದಲ್ಲಿ ರೂ 79,900 ಬೆಲೆಗೆ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯ ಸಮಯದಲ್ಲಿ ಎರಡೂ ಫೋನ್‌ಗಳ US ಬೆಲೆ $799 ಆಗಿತ್ತು.

ಭಾರತದಲ್ಲಿ ಫೋನ್ ಅನ್ನು ತಯಾರಿಸುವುದರಿಂದ ಅದರ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಭಾರತದಲ್ಲಿ ಐಫೋನ್ 15 ಅಗ್ಗವಾಗಿಲ್ಲದಿದ್ದರೂ, ಇದನ್ನು ಇಲ್ಲಿ ತಯಾರಿಸಲಾಗುತ್ತಿದೆ. ಆದ್ರೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದಂತೆಯೇ ಭಾರತೀಯ ಗ್ರಾಹಕರಿಗೂ ಅತೀ ಶೀಘ್ರದಲ್ಲಿಯೇ ಲಭ್ಯವಾಗಲಿದೆ.

ಇದನ್ನೂ ಓದಿ : 15 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಖರೀದಿಸಿ ಈ 5G ಸ್ಮಾರ್ಟ್ ಪೋನ್
ಯುಎಸ್, ಯುರೋಪ್, ಯುಕೆ ಮತ್ತು ಇತರ ಮಾರುಕಟ್ಟೆಗಳಲ್ಲಿ ಜನರು ಜಾಗತಿಕವಾಗಿ ಬಿಡುಗಡೆಯಾದ ಕ್ಷಣದಲ್ಲಿಯೇ ಗ್ರಾಹಕರ ಕೈ ಸೇರುತ್ತಿದೆ. ಅಂತಹ ಐಫೋನ್‌ಗಳನ್ನು ಪಡೆಯಲು ಭಾರತೀಯರು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಯಬೇಕಾಗುತ್ತಿತ್ತು. ಆದ್ರೆ ಇದೀಗ ಹೊಸ ಮಾದರಿಯ ಪೋನುಗಳು ಅತೀ ಶೀಘ್ರದಲ್ಲಿಯೇ ಲಭ್ಯವಾಗುತ್ತಿದೆ.
ಇನ್ನುಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಆಪಲ್ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಐಫೋನ್ 15 ಬಿಡುಗಡೆ ಮಾಡಲು ಸಜ್ಜಾಗಿದೆ. ಬ್ಲೂಮ್‌ಬರ್ಗ್ ವರದಿಯು ಈ ಹಿಂದೆ ಭಾರತದ ತಮಿಳುನಾಡಿನಲ್ಲಿ ಐಫೋನ್ 15 ಉತ್ಪಾದನೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ಹೇಳಿತ್ತು. ಶ್ರೀಪೆರಂಬದೂರಿನ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ಘಟಕವು ಹೊಸ ಸರಣಿಯ ಐಫೋನ್‌ಗಳನ್ನು ತಯಾರಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ.
Apple IPhone 15 Ready To Launch First Made In India IPhone Price Feature