Apple Smart Watch : ವ್ಯಕ್ತಿಯ ಜೀವ ಉಳಿಸಿದ ಆಪಲ್ ಸ್ಮಾರ್ಟ್ ವಾಚ್

Apple Watch Save Life : ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ವಾಚ್‌ಗಳಲ್ಲಿ ಆಪಲ್ ವಾಚ್ ಮುಂಚೂಣಿಯಲ್ಲಿದೆ. ಆಪಲ್ ಕಂಪೆನಿಯ ವಾಚಗಳು ಬೇರೆಲ್ಲ ವಾಚ್ ಗಳಿಗಿಂತ ಭಿನ್ನವಾಗಿದ್ದು ವಿಭಿನ್ನ ರೀತಿಯ ಫಿಚರ್ ಗಳನ್ನು ಹೊಂದಿದೆ. ಅದರಲ್ಲೂ ಪ್ರಮುಖವಾಗಿ ಆಪಲ್ ಸ್ಮಾರ್ಟ್ಫೋನ್ ಗಳಲ್ಲಿನ ಹೆಲ್ತ್ ಟ್ರ್ಯಾಕರ್ ಬೇರೆಲ್ಲಾ ಸ್ಮಾರ್ಟ್ ಫೋನ್ ಗಳಿಗಿಂತ ಹೆಚ್ಚಿನ ಕಾರ್ಯನಿರ್ವಹಿಸುವುದಲ್ಲದೆ, ವರದಿಗಳ ಪ್ರಕಾರ ಇದರಲ್ಲಿನ ತಂತ್ರಜ್ಞಾನ ವ್ಯಕ್ತಿಯ ಜೀವ ಉಳಿಸುವ ಸಾಮರ್ಥ್ಯವನ್ನೂ ಹೊಂದಿದೆ.

ಇದರಲ್ಲಿ ಫೋನ್ ಕಾಲ್ ಮೆಸೇಜ್ ಹೊರತಾಗಿ ಈ ಮೇಲ್ ಆರೋಗ್ಯಕ್ಕೆ ಸಂಬಂಧಿಸಿದ ಕೆಲ ಆಪ್ ಗಳು ಸುಲಭವಾಗಿ ಕಾರ್ಯ ನಿರ್ವಹಿಸಬಹುದು. ವರದಿಗಳ ಪ್ರಕಾರ ಆಪಲ್ ಸ್ಮಾರ್ಟ್ ವಾಚ್ ಬಹಳಷ್ಟು ಜನರ ಜೀವ ಉಳಿಸಿದೆ ಅದರಲೂ ಹೆಚ್ಚಾಗಿ ಮಹಿಳೆಯರ ಸ್ತನ ಕ್ಯಾನ್ಸರ್ ಹಾಗೂ ಹಾರ್ಟ್ ಅಟ್ಯಾಕ್ ಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ಹಲವರನ್ನು ಉಳಿಸಿದೆ. ತಾಂತ್ರಿಕವಾಗಿ ಬಹಳಷ್ಟು ಸಧೃಡ ಫೀಚರ್ ಹೊಂದಿರುವ ಹಾರ್ಟ್ ಬೀಟ್, ನಮ್ಮ ಚಲನ ವಲನಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಈ ವಾಚಗಳು ಅಪಾಯದ ಮುನ್ಸೂಚನೆಯನ್ನು ನೀಡುತ್ತವೆ.

ಇತ್ತೀಚಿಗೆ ಆಪಲ್‌ನ ಸ್ಮಾರ್ಟ್‌ವಾಚ್ ಮತ್ತೊಂದು ಜೀವವನ್ನು ಉಳಿಸಿ ಸುದ್ದಿಯಲ್ಲಿದೆ. ಹೊಸ ವರದಿಯೊಂದರ ಪ್ರಕಾರ ಆಪಲ್ ವಾಚ್ ಅಮೆರಿಕಾದ ವ್ಯಕ್ತಿ ಯೊಬ್ಬರ ದೇಹದಲ್ಲಿನ ಅಪರೂಪದ ಗೆಡ್ಡೆಯನ್ನು ಪತ್ತೆಹಚ್ಚಿದೆ. ಆಪಲ್ ವಾಚ್ ಸತತ ಎರಡು ದಿನಗಳಿಂದ ಮುನ್ನೆಚ್ಚರಿಕೆಯ ನೋಟಿಫಿಕೇಶನ್ ಗಳನ್ನು ಕಳುಹಿಸಿ ಆ ಮೂಲಕ ಜೀವ ಉಳಿಸಿದೆ.

2015 ರಲ್ಲಿ ಆರಂಭಗೊಂಡ ಆಪಲ್ ಸ್ಮಾರ್ಟ್ ವಾಚ್ ನಲ್ಲಿ ಇದೀಗ ಅನೇಕ ಬದಲಾವಣೆಗಳಾಗಿದ್ದು, ಅನೇಕ ಹೋಸ ಫೀಚರ್ ಗಳು ಸೇರ್ಪಡೆಗೊಂಡಿವೆ. ಅದಕ್ಕೆ ಸಾಕ್ಷಿ ಎಂಬಂತೆ ಆಪಲ್ ಸ್ಮಾರ್ಟ್ ವಾಚ್ ಅನೇಕರ ಜೀವ ಉಳಿಸಿ ಸೈ ಎನಿಸಿಕೊಂಡಿದೆ. ಆಪಲ್ ಕಂಪನಿಯ ಒಂದೇ ಒಂದು ನ್ಯೂನ್ಯತೆ ಎಂದರೆ ಇದರ ಯಾವುದೇ ಉತ್ಪನ್ನಗಳು ಸಾಮಾನ್ಯ ಜನರ ಕೈಗೆಟಗುವ ದರದಲ್ಲಿರುವುದಿಲ್ಲ. ಕೇವಲ ಶ್ರೀಮಂತರಿಗಷ್ಟೇ ಆಪಲ್ ಕಂಪೆನಿ ಉತ್ಪನ್ನಗಳು ಸೀಮಿತವಾದೆ.

ಇದನ್ನೂ ಓದಿ: Krishi Bhagya Scheme: ಕೃಷಿ ಭಾಗ್ಯ ಯೋಜನೆ

ಇದನ್ನೂ ಓದಿ: Umesh Katthi : ಬಿಜೆಪಿಯಲ್ಲೂ ಶುರುವಾಯ್ತು ಸಿಎಂ ಅಭ್ಯರ್ಥಿ ಚರ್ಚೆ : ಮುಖ್ಯಮಂತ್ರಿಯಾಗಲು ನಾನು ಸಿದ್ಧನೆಂದ ಉಮೇಶ್​ ಕತ್ತಿ

(Apple Watch Save Life Again)

Comments are closed.