byndoor : ಕಾಲು ಸಂಕ ದಾಟುವಾದ ಜಾರಿಬಿದ್ದ 7 ವರ್ಷದ ಬಾಲಕಿ ನೀರುಪಾಲು

ಉಡುಪಿ : byndoor : ಶಾಲೆ ಮುಗಿದ ಬಳಿಕ ಮನೆ ದಾರಿ ಹಿಡಿದ್ದ ಎರಡನೇ ತರಗತಿಯ ವಿದ್ಯಾರ್ಥಿನಿಯು ಕಾಲು ಸಂಕದಿಂದ ಜಾರಿ ಬಿದ್ದ ಪರಿಣಾಮ ನೀರುಪಾಲಾದ ದಾರುಣ ಘಟನೆಯು ಉಡುಪಿ ಜಿಲ್ಲೆ ಬೈಂದೂರಿನ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಸಂಭವಿಸಿದೆ. ನೀರುಪಾಲಾದ ಬಾಲಕಿಯನ್ನು ಏಳು ವರ್ಷದ ಸನ್ನಿಧಿ ಎಂದು ಗುರುತಿಸಲಾಗಿದೆ. ಕಾಲ್ತೋಡಿನ ಬೊಳಂಬಳ್ಳಿಯ ಮಕ್ಕಿಮನೆ ನಿವಾಸಿಯಾದ ಪ್ರದೀಪ್​ ಪೂಜಾರಿ ಹಾಗೂ ಸುಮಿತ್ರಾ ದಂಪತಿಯ ಪುತ್ರಿ ಸನ್ನಿಧಿ ಶಾಲೆಯಿಂದ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಸ್ನೇಹಿತರ ಜೊತೆಯಲ್ಲಿ ಕಾಲು ಸಂಕವನ್ನು ದಾಟುತ್ತಿದ್ದಳು. ಆದರೆ ಈಕೆಗೆ ಕಾಲು ಜಾರಿದ ಪರಿಣಾಮ ಹೊಳೆಗೆ ಬಿದ್ದಿದ್ದಾಳೆ. ಭಾರೀ ಮಳೆಯಿಂದಾಗಿ ಹೊಳೆ ಕೂಡ ರಭಸದಿಂದ ಹರಿಯುತ್ತಿದ್ದ ಪರಿಣಾಮ ಈಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.


ಬಾಲಕಿ ಹೊಳೆಯಲ್ಲಿ ಕೊಚ್ಚಿ ಹೋದ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದ ಸ್ಥಳೀಯರು ಆಕೆಯ ಪತ್ತೆಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೈಂದೂರಿನ ಪೊಲೀಸರು, ಅಗ್ನಿಶಾಮಕದಳ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದಾರೆ. ಸಂಜೆಯಾದರೂ ಬಾಲಕಿಯ ಸುಳಿವು ಪತ್ತೆಯಾಗಿಲ್ಲ. ನೀರಿನ ರಭಸ ಹೆಚ್ಚಿದ್ದು ಬೆಳಕಿನ ಕೊರತೆ ಕೂಡ ಉಂಟಾದ ಹಿನ್ನೆಲೆಯಲ್ಲಿ ಸಂಜೆ ಕಾರ್ಯಾಚರಣೆ ಸ್ಥಗಿತಗೊಳಿಸಿ ಇಂದು ಮತ್ತೆ ಬಾಲಕಿಗಾಗಿ ಹುಡುಕಾಟ ನಡೆದಿದೆ.


ಇನ್ನು ಬಾಲಕಿಯ ಕಾಲು ಸಂಕದಲ್ಲಿ ಬಿದ್ದು ನೀರುಪಾಲಾದ ಘಟನೆ ವರದಿಯಾಗುತ್ತಿದ್ದಂತೆಯೇ ಬೈಂದೂರು ಶಾಸಕ ಸುಕುಮಾರ್​ ಶೆಟ್ಟಿ, ಜಿಲ್ಲಾ ಪಂಚಾಯತ್​ ಮಾಜಿ ಅಧ್ಯಕ್ಷ ರಾಜು ಪೂಜಾರಿ, ತಹಶೀಲ್ದಾರ್​ ಕಿರಣ್​ ಗೋರಯ್ಯ ಸೇರಿದಂತೆ ವಿವಿಧ ಅಧಿಕಾರಿಗಳು ಬಾಲಕಿ ಸನ್ನಿಧಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ .


ಬೀಜಮಕ್ಕಿ ಗ್ರಾಮದಲ್ಲಿ ಈ ರೀತಿ ಮಳೆಗಾಲದಲ್ಲಿ ಸಂಕಷ್ಟ ಎದುರಾಗುವುದು ಇದೇ ಮೊದಲೇನಲ್ಲ. ಮಳೆಗಾಲದಲ್ಲಿ ಕಾಲು ಸಂಕವನ್ನು ದಾಟುವುದು ಈ ಭಾಗದ ಜನತೆಗೆ ದುಸ್ವಪ್ನವೇ ಸರಿ. ಸೂಕ್ತ ಸೇತುವೆಯನ್ನು ನಿರ್ಮಿಸಿಕೊಡುವಂತೆ ಈ ಭಾಗದ ಜನತೆಗೆ ಈಗಾಗಲೇ ಸಾಕಷ್ಟು ಬಾರಿ ಸರ್ಕಾರಿ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಶಾಶ್ವತ ಸೇತುವೆ ವ್ಯವಸ್ಥೆಗಾಗಿ ಬೀಜಮಕ್ಕಿ ಭಾಗದ ಜನತೆಯ ಕೂಗು ಇನ್ನೂ ಸರ್ಕಾರದ ಕಿವಿಗೆ ಮುಟ್ಟಿರುವಂತೆ ಕಾಣುತ್ತಿಲ್ಲ. ಇಂದು ಬಾಲಕಿ ಸನ್ನಿಧಿಗಾದ ಗತಿ ನಾಳೆ ನಮ್ಮ ಮಕ್ಕಳಿಗೂ ಬಂದರೆ ಎಂಬ ಭಯದಲ್ಲಿ ಬೀಜಮಕ್ಕಿ ಗ್ರಾಮಸ್ಥರು ಇನ್ಮುಂದೆ ಮಕ್ಕಳನ್ನು ಶಾಲೆಗೆ ಕಳುಹಿಸಲೂ ಹೆದರುವಂತಾಗಿದೆ.

ಇದನ್ನು ಓದಿ : Dipika Pallikal : ಕಂಚಿನ ಪದಕ ಗೆದ್ದ ದಿನೇಶ್ ಕಾರ್ತಿಕ್ ಪತ್ನಿ, ಅವಳಿ ಮಕ್ಕಳ ತಾಯಿ ದೀಪಿಕಾ

ಇದನ್ನೂ ಓದಿ : Arrested For Raping Cows: ಹಸುಗಳ ಮೇಲೆ ಅತ್ಯಾಚಾರ : ಬೆಂಗಳೂರಿನಲ್ಲಿ ಕಾಮುಕ ಅರೆಸ್ಟ್‌

7 year girl washed out while crossing wooden bridge in byndoor

Comments are closed.