ದೀಪಾವಳಿ ಹಬ್ಬವು ಸಮೀಪಿಸುತ್ತಿರೋದ್ರಿಂದ ವಿವಿಧ ಆನ್ಲೈನ್ ವ್ಯಾಪಾರ ವೆಬ್ಸೈಟ್ಗಳು ಹಾಗೂ ಶೋರೂಂಗಳಲ್ಲಿ ಎಲೆಕ್ಟ್ರಿಕ್ ವಸ್ತುಗಳು ಕಡಿಮೆ ದರದಲ್ಲಿ ಲಭ್ಯವಿದೆ. ಹೀಗಾಗಿ ಅತ್ಯಂತ ದುಬಾರಿಯೂ ಅಲ್ಲದ ಕಡಿಮೆಯೂ ಅಲ್ಲದ ಮಧ್ಯಮ ಶ್ರೇಣಿಯ ಮೊಬೈಲ್ ಖರೀದಿ (Mobile Buy) ಮಾಡಬೇಕು ಎಂದು ಕೊಂಡಿದ್ದರೆ ಇದಕ್ಕಿಂತ ಒಳ್ಳೆಯ ಸಮಯ ನಿಮಗೆ ಸಿಗಲು ಸಾಧ್ಯವಿಲ್ಲ.
ಮಧ್ಯಮ ಶ್ರೇಣಿಯ ಮೊಬೈಲ್ಗಳು ನಿಮಗೆ 35 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಲಭ್ಯವಿರುತ್ತದೆ. ಇದು ಅತ್ಯಂತ ದುಬಾರಿಯೂ ಅಲ್ಲದ ಇತ್ತ ಕಡಿಮೆ ದರದ ಕಡಿಮೆ ಗುಣಮಟ್ಟದ ಮೊಬೈಲ್ ಕೂಡ ಆಗಿರೋದಿಲ್ಲ. ಹೀಗಾಗಿ ಮಧ್ಯಮ ದರದಲ್ಲಿ ನಿಮಗೆ ಹೆಚ್ಚು ಬಾಳಿಕೆ ಬರುವ ಮೊಬೈಲ್ಗಳ ಸಾಲಿಗೆ ಈ ಶ್ರೇಣಿಯು ಸೇರಿಕೊಳ್ಳುತ್ತದೆ. ಹಾಗಾದರೆ ಈ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಒಳ್ಳೆಯ ಮೊಬೈಲ್ಗಳು ಯಾವುದು ಅನ್ನೋದನ್ನ ತಿಳಿದು ಕೊಳ್ಳೋಣ.

1. ವನ್ ಪ್ಲಸ್ ನಾರ್ಡ್ 3 5ಜಿ (One Plus Nord 3 5G) :
ವನ್ ಪ್ಲಸ್ ನಾರ್ಡ್ 3 5ಜಿ ಫ್ಯಾನ್ಸಿ ಫೋನ್ ಆಗಿದ್ದು ಉತ್ತಮ ಲುಕ್ ಹೊಂದಿದೆ. ಈ ಮೊಬೈಲ್ಗಳು 120Hz AMOLED ಸ್ಕ್ರೀನ್ಗಳನ್ನು ಹೊಂದಿರುತ್ತವೆ. ಹೀಗಾಗಿ ಈ ಫೋನ್ಗಳಲ್ಲಿ ನಿಮಗೆ ಫೋಟೋಗಳು ಹಾಗೂ ವಿಡಿಯೋಗಳು ಉತ್ತಮ ಗುಣಮಟ್ಟದಲ್ಲಿ ಕಾಣುತ್ತದೆ. ಅಲ್ಲದೇ ಈ ಮೊಬೈಲ್ಗಳು ಅತ್ಯಂತ ಸ್ಮೂತ್ ಆಗಿ ಆಪರೇಟ್ ಕೂಡ ಆಗುತ್ತವೆ.
ಇದನ್ನೂ ಓದಿ : ದೀಪಾವಳಿ ಬಿಗ್ ಸೇಲ್‌ನಲ್ಲಿ ಆಪಲ್ ಐಪೋನ್ 15 ಮೇಲೆ ಭರ್ಜರಿ ಡಿಸ್ಕೌಂಟ್
ಈ ಮೊಬೈಲ್ಗಳಲ್ಲಿ ಆಕ್ಸಿಜನ್ 13 ಸಾಫ್ಟ್ವೇರ್ ಇದ್ದು ಇದರಿಂದ ಮೊಬೈಲ್ನ್ನು ಅತ್ಯಂತ ಸರಳವಾಗಿ ಬಳಕೆ ಮಾಡಬಹುದಾಗಿದೆ. 5,000mAh ಬ್ಯಾಟರಿ ಸಾಮರ್ಥ್ಯ ಈ ಮೊಬೈಲ್‌ಗೆ ಇದ್ದು ಅತ್ಯಂತ ವೇಗವಾಗಿ ಚಾರ್ಜ್ ಆಗುತ್ತದೆ. ಈ ಮೊಬೈಲ್ನಲ್ಲಿ 16 ಜಿಬಿ ರ್ಯಾಮ್ ಇರಲಿದೆ. ಹೀಗಾಗಿ ನಿಮ್ಮ ಮೊಬೈಲ್ ಸ್ಲೋ ಆಗೋದಿಲ್ಲ. ಈ ಮೊಬೈಲ್ನ ಬೆಲೆ 35 ಸಾವಿರ ರೂಪಾಯಿ ಆಗಿದೆ.

2. ಐಕ್ಯೂ ನಿಯೋ 7 ಪ್ರೋ 5ಜಿ ( IQ nio 7 Pro 5G)
ಐಕ್ಯೂ ನಿಯೋ 7 ಪ್ರೋ 5ಜಿ ತುಂಬಾ ದುಬಾರಿಯೂ ಅಲ್ಲದ ಉತ್ತಮ ಲುಕ್ ಹೊಂದಿರುವ ಮೊಬೈಲ್ಗಳ ಸಾಲಿಗೆ ಇದು ಕೂಡ ಸೇರುತ್ತದೆ. ಇದು ಸ್ನಾಪ್ಡ್ರ್ಯಾಗನ್ 8 ಪ್ಲಸ್ ಜನರೇಷನ್ 1 ಚಿಪ್ ಹೊಂದಿದೆ. ಇಂತಹ ಚಿಪ್ ಹೊಂದಿರುವ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತೀ ಕಡಿಮೆ ಮೌಲ್ಯದ ಮೊಬೈಲ್ ಎಂದರೆ ಇದೇ ಆಗಿದೆ.
ಇದನ್ನೂ ಓದಿ : Xiaomi 12 Pro 5G ಮೊಬೈಲ್‌ಗೆ ಬಾರೀ ಡಿಸ್ಕೌಂಟ್ : 62,999 ರೂ. ಮೊಬೈಲ್ ಕೇವಲ ರೂ.27,999ಕ್ಕೆ ಸೇಲ್
ಇದು ಕೂಡ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ದೀರ್ಘಕಾಲದವರೆಗೆ ಚಾರ್ಜ್ ನಿಲ್ಲುವುದು ಮಾತ್ರವಲ್ಲದೇ ಬೇಗನೇ ಚಾರ್ಜ್ ಕೂಡ ಆಗುತ್ತದೆ. ಕ್ಯಾಮರಾ ಕೂಡ ಉತ್ತಮ ಕ್ಲಾರಿಟಿ ಹೊಂದಿದೆ. ಅಲ್ಲದೇ ಇದರ ದರ ಕೂಡ ಅಂತಹ ದುಬಾರಿ ಏನಲ್ಲ. ನಿಯೋ 7ಗಿಂತ ನಿಯೋ 7 ಪ್ರೋ ಉತ್ತಮ ಆಯ್ಕೆಯಾಗಿದೆ.

3. ಮೊಟೊರೋಲಾ ಎಡ್ಜ್ 40 5ಜಿ ( Motorola Edge 40 5G) :
ಮೊಟೊರೋಲಾ ಎಡ್ಜ್ 40 5ಜಿ ಇದು ಕೂಡ ಮಧ್ಯಮ ಶ್ರೇಣಿಯ ಮೊಬೈಲ್ ಖರೀದಿ ಮಾಡಬೇಕು ಎಂದುಕೊಂಡವರಿಗೆ ಅತ್ಯಂತ ಉತ್ತಮ ಆಯ್ಕೆಯಾಗಿದೆ. . ಇದರ ಬೆಲೆ ಕೇವಲ 29,999 ರೂಪಾಯಿ ಆಗಿದೆ. ಫ್ಲಿಪ್ಕಾರ್ಟ್ನಲ್ಲಿ ಈ ಮೊಬೈಲ್ 27 ಸಾವಿರ ರೂಪಾಯಿಗೆ ಲಭ್ಯವಿದೆ. ಹೀಗಾಗಿ ಈ ಮೊಬೈಲ್ ಖರೀದಿಸಬೇಕು ಎಂದುಕೊಂಡವರಿಗೆ ಫ್ಲಿಪ್ಕಾರ್ಟ್ ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ : ಸಿಮ್ ಇಲ್ಲದೆಯೂ ಇನ್ಮೇಲೆ ವಾಟ್ಸಾಪ್ ಲಾಗಿನ್ ಆಗಬಹುದು : ಅದ್ಹೇಗೆ ಅಂತೀರಾ..? ಇಲ್ಲಿದೆ ಮಾಹಿತಿ
ಈ ಮೊಬೈಲ್ ಕೇವಲ 1 ವರ್ಷನ್ನಲ್ಲಿ ಮಾತ್ರ ಲಭ್ಯವಿದ್ದು 8 ಜಿಬಿ ರ್ಯಾಮ್ ಹಾಗೂ 256 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಒಂದೇ ವರ್ಷನ್ ಇರೋದ್ರಿಂದ ನಿಮಗೆ ಇಲ್ಲಿ ಗೊಂದಲಕ್ಕೆ ಜಾಗವಿಲ್ಲ. ಮೆಟಲ್ ಫ್ರೇಮ್ ನ್ನು ಹೊಂದಿದ್ದು ಗ್ಲಾಸ್ ಅಥವಾ ವೇಗನ್ ಲೆದರ್ ಬ್ಯಾಕ್ ನಡುವೆ ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತೆ. ಇದು ಧೂಳು ಹಾಗೂ ನೀರಿನಿಂದ ನಿಮ್ಮ ಮೊಬೈಲ್ನ್ನು ಕಾಪಾಡಬಲ್ಲದು. ಇದನ್ನು ನೀವು ವೈರ್ಲೆಸ್ ಆಗಿ ಚಾರ್ಜ್ ಕೂಡ ಮಾಡಬಹುದಾಗಿದೆ. ವಿಡಿಯೋವನ್ನು ನೀವು 5ಕೆ ರೆಸಲ್ಯೂಷನ್ನಲ್ಲಿ ರೆಕಾರ್ಡ್ ಮಾಡಬಹುದಾಗಿದೆ.
Are you thinking of buying a new mobile ? Don’t forget to check this mobile One Plus Nord 3 5G, IQ nio 7 Pro 5G Motorola Edge 40 5G