ಸಿಮ್​ ಇಲ್ಲದೆಯೂ ಇನ್ಮೇಲೆ ವಾಟ್ಸಾಪ್​ ಲಾಗಿನ್​ ಆಗಬಹುದು : ಅದ್ಹೇಗೆ ಅಂತೀರಾ..? ಇಲ್ಲಿದೆ ಮಾಹಿತಿ

whatsapp login without phone number : ಒಟಿಪಿ ಇಲ್ಲದೆಯೇ ನೀವು ವಾಟ್ಸಾಪ್​ಗೆ ಲಾಗಿನ್​ ಆಗಲು ಸಾಧ್ಯವಿಲ್ಲ. ಮೊಬೈಲ್​ ಸಂಖ್ಯೆ ಇಲ್ಲದೆಯೇ ನೀವು ವಾಟ್ಸಾಪ್​ ಲಾಗಿನ್​ ಆಗೋಕೆ ಅಸಾಧ್ಯದ ಕೆಲಸವಾಗಿದೆ. ಆದರೆ ಈ ಸಮಸ್ಯೆಗೆ ಪರಿಹಾರ ಹುಡುಕೋಖೆ ವಾಟ್ಸಾಪ್ ಮುಂದಾಗಿದೆ.

Whatsapp new features : ಹೊಸ ಫೋನ್​ ಖರೀದಿ ಮಾಡಿದ್ದೀರೇ..? ಹಾಗಾದರೆ ವಾಟ್ಸಾಪ್​ನ್ನು (Whatsapp)  ನಿಮ್ಮ ಮೊಬೈಲ್​ನಲ್ಲಿ ಲಾಗಿನ್​ ಮಾಡಿಕೊಳ್ಳಬೇಕು ಅಂದ್ರೆ ನಿಮ್ಮ ಸಿಮ್​ಗೆ ಬರುವ ಒಟಿಪಿಯನ್ನು ಬಳಕೆ ಮಾಡಿ ನೀವು ಲಾಗಿನ್​ ಆಗಬಹುದು ಅನ್ನೋದು ಎಲ್ರಿಗೂ ತಿಳಿದಿರೋ ವಿಚಾರ. ಆದರೆ ಒಂದು ವೇಳೆ ನಿಮ್ಮ ಫೋನ್​ ಸಂಖ್ಯೆ ಸಕ್ರಿಯವಾಗಿ ಇಲ್ಲದೇ ಇದ್ದರೆ ಅಥವಾ ಯಾರಾದರೂ ನಿಮ್ಮ ಫೋನ್​ ಕದ್ದಿದ್ದರೆ ಏನು ಮಾಡುತ್ತೀರಿ..?

whatsapp will soon Allow User to login to ther Account without phone number
Image Credit to Original Source

ಒಟಿಪಿ ಇಲ್ಲದೆಯೇ ನೀವು ವಾಟ್ಸಾಪ್​ಗೆ ಲಾಗಿನ್​ ಆಗಲು ಸಾಧ್ಯವಿಲ್ಲ. ಮೊಬೈಲ್​ ಸಂಖ್ಯೆ ಇಲ್ಲದೆಯೇ ನೀವು ವಾಟ್ಸಾಪ್​ ಲಾಗಿನ್​ ಆಗೋಕೆ ಅಸಾಧ್ಯದ ಕೆಲಸವಾಗಿದೆ. ಆದರೆ ಈ ಸಮಸ್ಯೆಗೆ ಪರಿಹಾರ ಹುಡುಕೋಖೆ ವಾಟ್ಸಾಪ್ ಮುಂದಾಗಿದೆ. ಮೊಬೈಲ್​ ಸಂಖ್ಯೆಯ (Mobile Numbers) ಬದಲಾಗಿಯೂ ಇಮೇಲ್​ ಮೂಲಕ ವಾಟ್ಸಾಪ್​ಗೆ ಲಾಗಿನ್​ ಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯವನ್ನು ಹೊರತರಲು ಮೆಟಾ (Meta) ಕಂಪನಿ ಪ್ಲಾನ್​ ಮಾಡುತ್ತಿದೆ ಎನ್ನಲಾಗಿದೆ.

ಇದರಿಂದ ನೀವು ಮೊಬೈಲ್​ ಸಂಖ್ಯೆ ಇಲ್ಲದಿದ್ದರೂ ಸಹ ಇಮೇಲ್​ಗೆ ಒಟಿಪಿ ಪಡೆಯುವ ಮೂಲಕ ವಾಟ್ಸಾಪ್​ಗೆ ಲಾಗಿನ್​ ಆಗಲು ಸಾಧ್ಯವಾಗುತ್ತದೆ. ಈ ವೈಶಿಷ್ಠ್ಯವು ಸಿಮ್​ ಕಳೆದು ಹೋದ ಅಥವಾ ಡ್ಯಾಮೇಜ್​ ಆದ ಸಂದರ್ಭದಲ್ಲಿ ನಿಜಕ್ಕೂ ಸಹಕಾರಿಯಾಗಲಿದೆ. ವಾಟ್ಸಾಪ್​ನ ಇಮೇಲ್​ ವೇರಿಫೇಕಷನ್​ ವೈಶಿಷ್ಟ್ಯವು ಪ್ರಸ್ತುತ ಆಂಡ್ರಾಯ್ಡ್​ ಹಾಗೂ ಐಓಎಸ್​ಗಳಲ್ಲಿ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ.

ಇದನ್ನೂ ಓದಿ : ಹೆಚ್ಚುವರಿ ಸಿಮ್‌ಕಾರ್ಡ್‌ ಇಟ್ಟುಕೊಳ್ಳುವಂತಿಲ್ಲ: ಸಿಮ್‌ಕಾರ್ಡ್‌ ಖರೀದಿಗೂ ಹೊಸ ರೂಲ್ಸ್‌, ಈ ನಿಯಮ ಮೀರಿದ್ರೆ 10 ಲಕ್ಷ ರೂ. ದಂಡ

ಸೆಟ್ಟಿಂಗ್ಸ್​ ವಿಭಾಗದಲ್ಲಿ ಈ ಹೊಸ ವೈಶಿಷ್ಟ್ಯವನ್ನು ಸೇರ್ಪಡೆ ಮಾಡಬಹುದಾಗಿದೆ. ವಾಟ್ಸಾಪ್​ನಲ್ಲಿ ಇಮೇಲ್​ ವೆರಿಫೇಕಶನ್​ ಆಯ್ಕೆಯನ್ನು ಸೇರಿಸಲಾಗಿದೆ. ವಾಟ್ಸಾಪ್​ಗೆ ನಿಮ್ಮ ಇಮೇಲ್​ ಖಾತೆಯನ್ನು ಲಿಂಕ್​ ಮಾಡುವ ಮೂಲಕ ಎಸ್​ಎಂಎಸ್​ ಜೊತೆಯಲ್ಲಿ ಇಮೇಲ್​ ಮೂಲಕವೂ ವಾಟ್ಸಾಪ್​ಗೆ ಲಾಗಿನ್​ ಆಗುವ ಆಯ್ಕೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : Oppo A79 5G : 50MP ಕ್ಯಾಮೆರಾ, 5G ಮೊಬೈಲ್‌, ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಒಪ್ಪೋ ಎ 79 5ಜಿ

ವಾಟ್ಸಾಪ್​ ಇನ್ನೂ ಈ ಹೊಸದಾದ ಇಮೇಲ್​ ವೇರಿಫಿಕೇಶನ್​ ವೈಶಿಷ್ಟ್ಯದ ಬಗ್ಗೆ ಪರಿಶೀಲನೆ ನಡೆಸುತ್ತಲೇ ಇದೆ. ಬೀಟಾ ಆವೃತ್ತಿಯ 2.23.24.10 ನವೀಕರಣ ಹೊಂದಿದವರಿಗೆ ಮಾತ್ರ ಈ ಇಮೇಲ್​ ವೆರಿಫಿಕೇಶನ್​ ಸದ್ಯ ಲಭ್ಯವಾಗಿದೆ. ಪ್ರಸ್ತುತ ಇದು ಬೀಟಾ ಆವೃತ್ತಿಯನ್ನು ಬಳಸುವ ಕೆಲವೇ ಜನರಿಗೆ ಈ ಆಯ್ಕೆ ಲಭ್ಯವಿದ್ದರೂ ಸಹ ವಾಟ್ಸಾಪ್​​ ಶೀಘ್ರದಲ್ಲಿಯೇ ಈ ಆಯ್ಕೆಯನ್ನು ತನ್ನೆಲ್ಲ ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ.

whatsapp will soon Allow User to login to ther Account without phone number
Image Credit to Original Source

ಇದನ್ನೂ ಓದಿ : ಕಾರು ಅಪಘಾತವಾದ್ರೆ ಜೀವ ಉಳಿಸುತ್ತೆ ಗೂಗಲ್‌ ! ಭಾರತದಲ್ಲಿ ರಿಲಿಸ್‌ ಆಯ್ತು ಗೂಗಲ್‌ ಫಿಕ್ಸೆಲ್‌ ಫೀಚರ್ಸ್‌

ಈ ಮಧ್ಯೆ ಬಳಕೆದಾರರ ಅನುಭವ ಹಾಗೂ ಸುರಕ್ಷತೆಯನ್ನು ಸುಧಾರಿಸುವ ಸಲುವಾಗಿ ವಾಟ್ಸಾಪ್​​ ಇತರೆ ವೈಶಿಷ್ಟ್ಯಗಳನ್ನ ತರುವ ಬಗ್ಗೆಯೂ ಕಾರ್ಯ ನಿರ್ವಹಿಸುತ್ತದೆ. ಎಐ ಚಾಲಿತ ಸಪೋರ್ಟ್ ಚಾಟ್​ ಸೇರಿದಂತೆ ಇನ್ನೂ ಆಯ್ಕೆಗಳನ್ನು ನೀಡುವ ಬಗ್ಗೆಯೂ ಮೆಟಾ ಕಂಪನಿಯು ಕೆಲಸ ಮಾಡುತ್ತಿದೆ.

whatsapp will soon Allow User to login to ther Account without phone number

Comments are closed.