ASUS ROG Phone 6 Series : ಈಗ ಭಾರತದಲ್ಲೂ ಲಭ್ಯ ಆಸಸ್‌ ROG ಫೋನ್‌ 6 ಮತ್ತು ROG ಫೋನ್‌ 6 ಪ್ರೋ; ಬೆಲೆ ಮತ್ತು ವೈಶಿಷ್ಟ್ಯ

ಪವರ್‌–ಪ್ಯಾಕ್ಡ್‌ ಗೇಮಿಂಗ್‌ ಮೊಬೈಲ್‌ಗಳ ಮೇಲೆ ಕಣ್ಣಿಟ್ಟಿರುವವರಿಗೆ ಈಗ ಸಂತಸದ ಸುದ್ದಿ. ಏಕೆಂದರೆ ಆಸಸ್‌ (ASUS) ಕೊನೆಗೂ ಭಾರತದಲ್ಲಿ ತನ್ನ ಹೊಸ ROG ಫೋನ್‌ 6 ಸರಣಿಯ (ASUS ROG Phone 6 Series) ಸ್ಮಾರ್ಟ್‌ಫೋನ್‌ (Smartphone) ಗಳು ಲಭ್ಯವಾಗುವಂತೆ ಮಾಡಿದೆ. ಈ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳನ್ನು ಈಗ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ ಖರೀದಿಸಬಹುದಾಗಿದೆ. ಆಸಸ್‌ ಭಾರತದಲ್ಲಿ ROG ಫೋನ್‌ 6 ಮತ್ತು ROG ಫೋನ್‌ 6 ಪ್ರೋ ಅನ್ನು ಬಿಡುಗಡೆ ಮಾಡಿದೆ.

ಆಸಸ್‌ ROG ಫೋನ್ 6 ವೈಶಿಷ್ಟ್ಯಗಳು :
ಆಸಸ್‌ ROG ಫೋನ್‌ 6 ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ HD+ AMOLED ಡಿಸ್ಪ್ಲೇ ಯನ್ನು ಹೊಂದಿದೆ. ಇದು 165Hz ರಿಫ್ರೆಶ್ ರೇಟ್ ಸ್ಕ್ರೀನ್ ಮತ್ತು 720Hz ಟಚ್ ಸ್ಯಾಂಪ್ಲಿಂಗ್ ರೇಟ್‌ನೊಂದಿಗೆ ಬರುತ್ತದೆ. ಈ ಫೋನ್‌ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನೊಂದಿಗೆ 2.5D ಕರ್ವ್ಡ್ ಗ್ಲಾಸ್ ಅನ್ನು ಒಳಗೊಂಡಿದೆ. ROG ಫೋನ್ 6 ಇದು 12GB RAM ನೊಂದಿಗೆ ಸ್ನಾಪ್‌ಡ್ರಾಗನ್‌ 8+ Gen 1 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಇದರ ಆಂತರಿಕ ಸಂಗ್ರಹಣೆಯು 256GB ಗಳಾಗಿದೆ. ಇದು ಗೇಮಿಂಗ್‌ ಅನ್ನು ಬೆಂಬಲಿಸುವುದರಿಂದ ಹೊಸ ಕೂಲಿಂಗ್‌ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಇದು ಟೆಂಪ್ರೆಚರ್‌ ಅನ್ನು 10 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಆಸಸ್‌ ROG ಫೋನ್ 6 ಪ್ರೋ ನ ವೈಶಿಷ್ಟ್ಯಗಳು :
ಆಸಸ್‌ನ ROG ಫೋನ್‌ 6 ನ ಸರಣಿಯ ಫೋನುಗಳಲ್ಲಿ ಅಷ್ಟೇನೂ ವ್ಯತ್ಯಾಸಗಳಿಲ್ಲ. ROG ಫೋನ್ 6 ಪ್ರೋ ಕೂಡಾ 6.78 ಇಂಚಿನ ಫುಲ್‌ HD+ AMOLED ಡಿಸ್ಪ್ಲೇ ಯನ್ನು ಹೊಂದಿದೆ. ಇದರ ರಿಫ್ರೆಶ್‌ ರೇಟ್‌ ಸ್ಕ್ರೀನ್‌ 165Hz ಮತ್ತು ಟಚ್‌ ಸ್ಯಾಂಪ್ಲಿಂಗ್‌ ರೇಟ್‌ 720Hz ಆಗಿದೆ. ಇದೂ ಕೂಡ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನೊಂದಿಗೆ 2.5D ಕರ್ವ್ಡ್ ಗ್ಲಾಸ್ ಅನ್ನೇ ಒಳಗೊಂಡಿದೆ. ROG ಫೋನ್ 6 ಪ್ರೋ18GB RAM ನೊಂದಿಗೆ ಸ್ನಾಪ್‌ಡ್ರಾಗನ್‌ 8+ Gen 1 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಇದರ ಆಂತರಿಕ ಸಂಗ್ರಹಣೆಯು 512GB ಅಂದರೆ ROG ಫೋನ್ 6 ನ ಎರಡರಷ್ಟಿದೆ.
ಆಸಸ್‌ ROG ಫೋನ್ 6 ಪ್ರೋ ಕೂಡಾ ಗೇಮಿಂಗ್‌ ಅನ್ನು ಬೆಂಬಲಿಸುವುದರಿಂದ ROG ಫೋನ್ 6 ನಂತೆಯೇ ಕೂಲಿಂಗ್‌ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಆದರೆ ROG ಫೋನ್ 6 ಪ್ರೊ ಕಸ್ಟಮೈಸ್ ಮಾಡಬಹುದಾದ ಹಿಂಭಾಗದಲ್ಲಿ ದ್ವಿತೀಯ P-MOLED ಡಿಸ್ಪ್ಲೇಯನ್ನು ಪಡೆಯುತ್ತದೆ.

ಬ್ಯಾಟರಿ ಕ್ಷಮತೆ:
ROG ಫೋನ್ 6 ಸರಣಿಯ ಎರಡೂ ಸ್ಮಾರ್ಟ್‌ಫೋನ್‌ಗಳು 65W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತವೆ. ಇವುಗಳನ್ನು ದೈತ್ಯಾಕಾರದ 6,000mAh ಬ್ಯಾಟರಿಯೊಂದಿಗೆ ಪ್ಯಾಕ್ ಮಾಡಲಾಗಿದೆ. ROG ಫೋನ್ 6 ಬೈಪಾಸ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇದರಿಂದ ಬಳಕೆದಾರರು ಬ್ಯಾಟರಿ ಮತ್ತು ಆಟವನ್ನು ಸಂರಕ್ಷಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ:
ಇನ್ನು ಕ್ಯಾಮೆರಾಗಳಲ್ಲಿಯೂ ಎರಡೂ ROG ಫೋನ್ 6 ಸ್ಮಾರ್ಟ್‌ಫೋನ್‌ಗಳು ಒಂದೇ ರೀತಿಯ ಕ್ಯಾಮೆರಾ ಸೆಟಪ್ ಅನ್ನು ಪಡೆದುಕೊಂಡಿದೆ. ಇವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 50-ಮೆಗಾಪಿಕ್ಸೆಲ್‌ Sony IMX766 ಮುಖ್ಯ ಸಂವೇದಕ, 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಫೋನ್‌ನ ಮುಂಭಾಗವು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಆಸಸ್‌ ROG ಫೋನ್ 6, ROG ಫೋನ್ 6 ಪ್ರೊ ಬೆಲೆಗಳು :
ಆಸಸ್‌ ಭಾರತದಲ್ಲಿ ROG ಫೋನ್ 6 ಅನ್ನು ಒಂದೇ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ. ಅದು 12GB RAM ಮತ್ತು 256GB ಸಂಗ್ರಹಣೆಯಾಗಿದೆ. ಇದರ ಬೆಲೆಯು 71,999 ರೂ. ಗಳು. ಅದೇ ರೀತಿ ROG ಫೋನ್ 6 ಪ್ರೋ ಸಹ ಏಕೈಕ ರೂಪಾಂತರದಲ್ಲಿ ಖರೀದಿಗೆ ಲಭ್ಯವಿದೆ. ಅದು 18GB RAM ಮತ್ತು 512GB ಸಂಗ್ರಹಣೆಯಾಗಿದೆ. ROG ಫೋನ್ 6 ಪ್ರೋ ನ ಬೆಲಯು 89,999 ರೂ. ಗಳಾಗಿದೆ.

ಇದನ್ನೂ ಓದಿ : Used EV Purchase : ನಿಮಗಿದು ಗೊತ್ತಾ; ಸೆಕೆಂಡ್‌ ಹ್ಯಾಂಡ್‌ ಇಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವ ಮೊದಲು ಏನೇನು ಚೆಕ್‌ ಮಾಡಬೇಕು ಎಂದು…

ಇದನ್ನೂ ಓದಿ : Whatsapp Data leak: ವಾಟ್ಸಪ್ ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್: 500 ಮಿಲಿಯನ್ ಬಳಕೆದಾರರ ಮಾಹಿತಿ ಹ್ಯಾಕ್ ಮಾಡಿ ಮಾರಾಟಕ್ಕಿಟ್ಟಿದ್ದಾರಂತೆ ಕ್ರಿಮಿನಲ್ಸ್

(ASUS ROG Phone 6 Series now available in India. Know the price and Specifications)

Comments are closed.