Be Careful on Google Search : ಗೂಗಲ್ ಸರ್ಚ್‌ ಮಾಡುವ ಮುನ್ನ ಎಚ್ಚರಿಕೆ

Be Careful on Google Search : ಗೂಗಲ್ ನಮಗೆ ಬೇಕಾದ ಮಾಹಿತಿಯನ್ನು ಹುಡುಕಲು ಇರುವ ಅತ್ಯುತ್ತಮ ವ್ಯವಸ್ಥೆ. ಬಹಳಷ್ಟು ಮಂದಿ ದಿನನಿತ್ಯದ ಆಗು ಹೋಗುಗಳನ್ನು ತಿಳಿಯಲು ಗೂಗಲ್ ಅನ್ನು ಅವಲಂಬಿಸಿರುತ್ತಾರೆ. ಹೀಗೆ ಗೂಗಲ್ ಬಳಸಿ ಮಾಹಿತಿ ಪಡೆಯುವ ಭರದಲ್ಲಿ ನಾವೇನಾದರೂ ಈ ಐದು ವಿಷಯಗಳನ್ನು ಸರ್ಚ್ ಮಾಡಿದರೆ ಜೈಲು ಸೇರ ಬೇಕಾಗ ಬಹುದು. ಗೂಗಲ್  ಸುರಕ್ಷತೆಯ ಬಗ್ಗೆ ಬಹಳ ಎಚ್ಚರಿಕೆಯ ಕ್ರಮಗಳನ್ನು ಪಾಲಿಸುತ್ತದೆ. ಗೂಗಲ್ ಕಂಪನಿಯು ಭದ್ರತೆಗೆ ಸಂಬಂಧಿಸಿದಂತೆ ತನ್ನದೇ ಆದ ಪ್ರತ್ಯೇಕ ನೀತಿಯನ್ನು ಹೊಂದಿದೆ. ಅಲ್ಲದೆ ಅದರ ನೀತಿಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ. ಅಲ್ಲದೆ ಗೂಗಲ್ ಕಾರ್ಯನಿರ್ವಹಿಸುವ ದೇಶವು ಆ ದೇಶದ ಸ್ಥಳೀಯ ನಿಯಮಗಳನ್ನು ಅನುಸರಿಸುತ್ತದೆ. ಹೀಗಾಗಿ ನಾವು ಗೂಗಲ್ನಲ್ಲಿ ಏನನ್ನಾದರೂ ಹುಡುಕುವ ಮೊದಲು ಯೋಚಿಸಬೇಕು.

ಚೈಲ್ಡ್ ಪಾರ್ನ್ ವಿಡಿಯೋ
ಭಾರತ ಸರ್ಕಾರವು ಈ ವಿಷಯದ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದೆ. ನಾವೇನಾದರೂ ಗೂಗಲ್ ನಲ್ಲಿ ಈ ವಿಷಯವನ್ನು ಹುಡುಕಿದರೆ ಪೋಕ್ಸೋ ಕಾಯಿದೆ 2012ರ ಸೆಕ್ಷನ್ 14ರ ಅಡಿಯಲ್ಲಿ,  5 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಗೂಗಲ್ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಹಂಚಿಕೊಳ್ಳುವುದು ವೀಕ್ಷಿಸುವುದು ಶಿಕ್ಷಾರ್ಹ ಅಪರಾಧ.

ಪೈರಸಿ ಅಥವಾ ಚಲನಚಿತ್ರ ಸೋರಿಕೆ ಮಾಡುವುದು
ಫಿಲ್ಮ್ ಪೈರಸಿಯಲ್ಲಿ ತೊಡಗಿಸಿಕೊಂಡರೆ,  ಸಿನಿಮಾಟೋಗ್ರಫಿ ಆಕ್ಟ್ 1952ರ ಅಡಿಯಲ್ಲಿ ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು ಮತ್ತು ರೂ 10 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಯಾವುದೇ ಚಲನಚಿತ್ರವನ್ನು ಇಂಟರ್ನೆಟ್ ಇಂದ ಡೌನ್ಲೋಡ್ ಮಾಡುವುದು ಅಥವಾ ಹಂಚಿಕೊಳ್ಳುವಂತಿಲ್ಲ.

ಗರ್ಭಪಾತದ ಕುರಿತು
ಗರ್ಭಪಾತ ಮಾಡುವ ವಿಧಾನದ ಕುರಿತು ಗೂಗಲ್ ನಲ್ಲಿ ಹುಡುಕುವುದು ಶಿಕ್ಷಾರ್ಹ ಅಪರಾಧವಾಗಿದೆ. ಭಾರತದಲ್ಲಿ ಗರ್ಭಪಾತ ಮಾಡಿಸುವುದು ಕಾನೂನು ಬಾಹಿರ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದು ತಿಳಿದುಬಂದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಖಾಸಗಿ ಪೋಟೋ ಅಥವಾ ವಿಡಿಯೋ ಹಂಚಿಕೊಳ್ಳುವುದು
ಗೂಗಲ್ ಮಾತ್ರವಲ್ಲದೆ ಯಾರೊಬ್ಬರ ಅನುಮತಿಯಿಲ್ಲದೆ ಯಾರ ಫೋಟೋ ಅಥವಾ ವೀಡಿಯೊವನ್ನು ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಹಾಗಾಗಿ ಅನುಮತಿಯಿಲ್ಲದೆ ಗೂಗಲ್ ಅಥವಾ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಥವಾ ವಿಡಿಯೋ ಹಂಚಿಕೊಳ್ಳುವಂತಿಲ್ಲ.

ಬಾಂಬ್ ತಯಾರಿಕೆ
ಬಾಂಬ್ ತಯಾರಿಸುವುದು ಹೇಗೆ ಎಂದು ಗೂಗಲ್‌ನಲ್ಲಿ ಹುಡುಕಿದರೆ ಜೈಲಿಗೆ ಹೋಗಬೇಕಾಗಬಹುದು. ಬಾಂಬ್ ತಯಾರಿಕಾ ಕ್ರಮಗಳ ಬಗ್ಗೆ ಮೊಬೈಲ್,  ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಸರ್ಚ್ ಮಾಡಿದರೆ ನಮ್ಮ ಐಪಿ ವಿಳಾಸವು ನೇರವಾಗಿ ಭದ್ರತಾ ಏಜೆನ್ಸಿಗಳನ್ನು ತಲುಪುತ್ತದೆ. ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಜೈಲು ಸೇರುವುದು ಗ್ಯಾರೆಂಟಿ. ಅಷ್ಟೇ ಅಲ್ಲದೆ 10 ಲಕ್ಷದ ವರೆಗೂ ದಂಡ ತೆರಬೇಕಾಗುತ್ತದೆ. ಹೀಗಾಗಿ ಈ ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡದಿರುವುದೇ ಉತ್ತಮ.

ಇದನ್ನೂ ಓದಿ: Benefits of Papaya: ಉತ್ತಮ ಆರೋಗ್ಯಕ್ಕೆ ರಾಮಬಾಣ ಪಪ್ಪಾಯ ಹಣ್ಣು

ಇದನ್ನೂ ಓದಿ: Instagram To Help Small Business: ಸಣ್ಣ ಉದ್ಯಮಗಳಿಗೆ ನೆರವಾಗಲಿದೆ ಇನ್ಸ್ಟಾಗ್ರಾಮ್

(Be careful When You search for These Five Things on Google)

Comments are closed.