Benefits of Papaya : ಉತ್ತಮ ಆರೋಗ್ಯಕ್ಕೆ ರಾಮಬಾಣ ಪಪ್ಪಾಯ ಹಣ್ಣು

Benefits of Papaya : ಹಣ್ಣುಗಳೆಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ, ಅದ್ರಲ್ಲೂ ಈ ಪಪ್ಪಾಯ ಹಣ್ಣಗಳು ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಹಣ್ಣನ್ನ ಇಷ್ಟ ಪಟ್ಟು  ತಿಂತಾರೆ. ಹಾಗೂ ಎಲ್ಲಾ ಋತುಗಳಲ್ಲಿ ದೊರೆಯು ಈ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ. ಪರಂಗಿ ಹಣ್ಣು ಸೇವಿಸುವುದರಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುವುದು ಹಾಗು ಪಪ್ಪಾಯ ಹಣ್ಣು ಉಪಯೋಗಿಸಿದರೆ ಮನುಷ್ಯನ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಇದರ ಸೇವನೆಯಿಂದ ಹೆಚ್ಚಿನ ಜೀವಸತ್ವ ಮತ್ತು ಖನಿಜಾಂಶಗಳೂ ಸಹ ಸಿಗುತ್ತದೆ. ಅಲ್ಲದೇ ಕ್ಯಾನ್ಸರ್, ಅಸ್ತಮಾ, ಮಧುಮೇಹದಂತಹ ರೋಗ ತಡೆಗಟ್ಟುವಲ್ಲಿ ಕೂಡ ಇದು  ಸಹಕಾರಿಯಾಗಿದೆ. ವಿಟಮಿನ್ “ಇ” ಸೌಂದರ್ಯ ವರ್ಧಕ ಅಂಶವನ್ನು ಸಹ ಇದು ಹೊಂದಿದೆ. ಚರ್ಮದ ಕಾಂತಿಗೆ ಮತ್ತು ಕೂದಲಿನ ಆರೋಗ್ಯಕ್ಕೂ ಇದು ತುಂಬಾ ಉಪಯೋಗಕಾರಿಯಾಗಿದೆ.

ತೂಕ ಇಳಿಸಿಕೊಳ್ಳುವವರಿಗೆ ರಾಮಬಾಣ
ಪಪ್ಪಾಯ ಹಣ್ಣು  ತೂಕ ಇಳಿಸಿಕೊಳ್ಳ ಬೇಕು ಎಂದು ಕೊಳ್ಳುವವರಿಗೆ ಬಹಳ ಉಪಯುಕ್ತವಾಗಿದೆ. ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವುದರ ಜೊತೆಗೆ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ಮತ್ತು ಇದು ಮಲಬದ್ಧತೆಯನ್ನು ಸಹ ತಡೆಯುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಗೆ ಇದನ್ನು ತಿಂದರೆ ಆರೋಗ್ಯಕ್ಕೆ  ಒಳ್ಳೆಯದು ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುವ ಪಪ್ಪಾಯ ಉತ್ತಮವಾದ ಫೈಬರ್ ಗಳ ಮೂಲವಾಗಿದೆ. ಜೊತೆಗೆ ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಸಹಕಾರಿ
ಮಧುಮೇಹಕ್ಕೆ ಸಕ್ಕರೆ ಅಂಶ ಮತ್ತು ಗ್ಲೈಸೆಮಿಕ್ ಸೂಚ್ಯಂಕ ಕಡಿಮೆಯಾಗಿದ್ದವರಿಗೆ ಈ ಪಪ್ಪಾಯ ರಾಮಬಾಣವಾಗಿದೆ. ಹಲವಾರು ಸಂಶೋಧನೆಗಳ ಪ್ರಕಾರ, ಪಪ್ಪಾಯಿ ಸಾರವು ವಾಸ್ತವವಾಗಿ ಟೈಪ್‌ 2 ಮಧುಮೇಹದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

ಕಣ್ಣುಗಳನ್ನು ರಕ್ಷಿಸುತ್ತದೆ
ಪಪ್ಪಾಯಗಳು ಮಿಟಮಿನ್‌ ಎ ಮತ್ತು ಬೀಟಾ -ಕ್ಯಾರೋಟಿನ್‌  ಝೀಕ್ಸಾಂಥಿನ್‌  ಸೈಟೋಟಾಂಥಿನ್‌ ಮತ್ತು ಲ್ಯೂಟಿನ್‌ ನಂತಹ ಫ್ಲೇವೊನೈಡ್ಸ್‌ಗಳು ಸಮೃದ್ಧವಾಗಿವೆ. ಇದು ವಯಸ್ಸಿಗೆ ಸಂಬಂಧಿಸಿದ ಸ್ನಾಯುವಿನ ಅವನತಿಗೆ ಅಪಾಯವನ್ನುಂಟು ಮಾಡುತ್ತದೆ. ಲ್ಯೂಟಿನ್‌ ಮತ್ತು ಝೀಕ್ಸಾಂಥಿನ್‌ ಎರಡು ಗ್ಲಾಕೋಮಾ ಕಣ್ಣಿನ ಪೊರೆ ಹಾಗೂ ಇತರ ದೀರ್ಘ‌ಕಾಲದ ಕಣ್ಣಿನ ರೋಗಗಳನ್ನು ತಡೆಗಟ್ಟುತ್ತದೆ.

ಬಾಣಂತಿಯರಿಗೆ ಸಹ ಉಪಯೋಗಕಾರಿ
ಪಪ್ಪಾಯ ಬಾಣಂತಿಯರಿಗೆ ಎದೆಹಾಲನ್ನು ಹೆಚ್ಚಿಸುತ್ತದೆ. ಅಲ್ಲದೇ ಮಕ್ಕಳಿಗೆ ಹಾಲು ಉಣಿಸುವ ತಾಯಂದಿರಿಗೆ ಪಪ್ಪಾಯು ಶಕ್ತಿದಾಯಕ ಆಹಾರವಾಗಿದೆ.

ಒತ್ತಡ ಕಡಿಮೆ ಮಾಡುತ್ತದೆ
ಪಪ್ಪಾಯದಲ್ಲಿ ಇರುವ ವಿಟಮಿನ್‌ ಸಿ ಒತ್ತಡದ ಹಾರ್ಮೋನುಗಳ ಹರಿವನ್ನು ನಿಯಂತ್ರಿಸುತ್ತದೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳು ಪಪ್ಪಾಯವನ್ನ ದಿನನಿತ್ಯದ ಆಹಾರದಲ್ಲಿ ಬಳಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಇಷ್ಟೇ ಅಲ್ಲದೆ ಪಪ್ಪಾಯ ಹಣ್ಣು 12 ಕ್ಕು ಹೆಚ್ಚು ರೋಗಗಳಿಗೆ ರಾಮಬಾಣ ವಾಗಿದ್ದು ಆರೋಗ್ಯಕ್ಕೆ  ಬಹಳಷ್ಟು  ಪ್ರಯೋಜನಗಳಿಂದ ಕೂಡಿದ ಹಣ್ಣಾಗಿದೆ.

ಇದನ್ನೂ ಓದಿ: Dental Care: ನಿಮ್ಮ ಹಲ್ಲುಗಳ ಆರೋಗ್ಯಕ್ಕೆ ಈ ಪಾನೀಯಗಳನ್ನು ಸೇವಿಸಲೇಬೇಡಿ

ಇದನ್ನೂ ಓದಿ: Flipkart Big Saving Day Sale : ಜುಲೈ 23 ರಿಂದ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ ಆರಂಭ !!ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆ ಭಾರಿ ರಿಯಾಯಿತಿ!!

(Health Benefits of Papaya)

Comments are closed.