Best Premium Smart watch : ದೇಶದಲ್ಲಿ ಸದ್ಯ ಹಬ್ಬದ ಸೀಸನ್ ಮುಗಿದಿದೆ. ಆದರೆ ಪ್ರತಿಷ್ಟಿತ ಆನ್ಲೈನ್ ಮಾರುಕಟ್ಟೆ ಅಮೆಜಾನ್ ಇಂದಿಗೂ ಸ್ಮಾರ್ಟ್ವಾಚ್ಗಳು, ಹೆಡ್ಫೋನ್ಗಳು, ಸ್ಮಾರ್ಟ್ಫೋನ್ಗಳು ಸೇರಿದಂತೆ ಇನ್ನೂ ಅನೇಕ ಎಲೆಕ್ಟ್ರಾನಿಕ್ಸ್ ಹಾಗೂ ಗ್ಯಾಜೆಟ್ಗಳ ಮೇಲೆ ವಿಶೇಷ ರಿಯಾಯಿತಿ ನೀಡುವುದನ್ನು ಮುಂದುವರಿಸಿವೆ.ಈಗಂತೂ ಸ್ಮಾರ್ಟ್ವಾಚ್ಗಳನ್ನು ಧರಿಸುವುದು ಟ್ರೆಂಡ್ ಆಗಿದೆ. ಹೀಗಾಗಿ ಒಳ್ಳೆಯ ಸ್ಮಾರ್ಟ್ ವಾಚ್ (Best Smart Watch) ಗಳ ಹುಡುಕಾಟದಲ್ಲಿ ನೀವಿದ್ದರೆ ಖಂಡಿತವಾಗಿಯೂ ಈ ಅವಕಾಶವನ್ನು ಮಿಸ್ಮಾಡಿಕೊಳ್ಳಬೇಡಿ.

ಫೈರ್-ಬೋಲ್ಟ್ ಇನ್ವಿನ್ಸಿಬಲ್ ಪ್ಲಸ್ (Firebolt Samartwatchs)
ಈ ಸ್ಮಾರ್ಟ್‌ವಾಚ್ ಪ್ರಸ್ತುತ 4,499 ರೂಪಾಯಿಗೆ ಲಭ್ಯವಿದೆ. ಫೈರ್-ಬೋಲ್ಟ್ ಇನ್ವಿನ್ಸಿಬಲ್ ಪ್ಲಸ್ 1.43″ AMOLED 2.5D ಡಿಸ್ಪ್ಲೇ ಜೊತೆಗೆ 460×460 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 700 NITS ಗರಿಷ್ಠ ಬ್ರೈಟ್ನೆಸ್ ಹೊಂದಿದೆ. ಒಮ್ಮೆ ನೀವು ಸ್ಮಾರ್ಟ್ ವಾಚ್ನ್ನು ಫುಲ್ ಚಾರ್ಜ್ ಮಾಡಿದರೆ ಬ್ಯಾಟರಿ ಐದು ದಿನಗಳವರೆಗೆ ಬಾಳಿಕೆ ಬರಲಿದೆ.
ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ ಈ ವಾಚ್ನ್ನು ಸಂಪೂರ್ಣ ಚಾರ್ಜ್ ಮಾಡಲು ಮೂರು ಗಂಟೆಗಳ ಸಮಯಾವಕಾಶ ಬೇಕಾಗಲಿದೆ. ತ್ವರಿತ 20 ಪರ್ಸೆಂಟ್ ಚಾರ್ಜ್ನ್ನು 20-30 ನಿಮಿಷದ ಅವಧಿಯಲ್ಲೇ ಮಾಡಿಕೊಳ್ಳಬಹುದಾಗಿದೆ. ಬಳಕೆದದಾರರು 110 ರೀತಿಯ ವಾಚ್ ಫೇಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಟೈಟಾನ್ ಸ್ಮಾರ್ಟ್ 3 ಪ್ರೀಮಿಯಂ ಸ್ಮಾರ್ಟ್ ವಾಚ್ (Titan Smart 3 Premium Watch)
ಈ ಸ್ಮಾರ್ಟ್ ವಾಚ್ ಪ್ರಸ್ತುತ 7995 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಟೈಟಾನ್ ಸ್ಮಾರ್ಟ್ 3 ಪ್ರೀಮಿಯಂ ಸ್ಮಾರ್ಟ್ ವಾಚ್ 1.96″ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್ ವಾಚ್ ನಿಮಗೆ ಸಿಂಗಲ್ ಸಿಂಕ್ ಬಿಟಿ ಕಾಲಿಂಗ್ ವೈಶಿಷ್ಟ್ಯ ಹೊಂದಿದೆ. 10 ನಿಮಿಷದ ಚಾರ್ಜಿಂಗ್ನಲ್ಲಿ ಇಡೀ ಒಂದು ದಿನ ಸ್ಮಾರ್ಟ್ ವಾಚ್ ಬಳಕೆ ಮಾಡಬಹುದಾಗಿದೆ.
ಇದನ್ನೂ ಓದಿ : 200 MP ಕ್ಯಾಮೆರಾ, 8GB RAM… ಅಬ್ಬಬ್ಬಾ Motorola Edge 30 Ultra 5G ಫೀಚರ್ಸ್ ನೋಡಿದ್ರೆ ಸುಸ್ತಾಗೋದು ಗ್ಯಾರಂಟಿ
ಇದು 110+ ಸ್ಪೋರ್ಟ್ಸ್ ಮೋಡ್‌ಗಳು, 200+ ವಾಚ್ ಫೇಸ್‌ಗಳು, AI ಧ್ವನಿ ಸಹಾಯಕ ಮತ್ತು ಸ್ವಯಂ ಒತ್ತಡದ ಮಾನಿಟರಿಂಗ್, 24×7 ಹೃದಯ ಬಡಿತ ಟ್ರ್ಯಾಕಿಂಗ್, ನಿದ್ರೆ ಮಾನಿಟರಿಂಗ್, Spo2 ಮಾಪನ ಮತ್ತು ಮಹಿಳೆಯರ ಆರೋಗ್ಯ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಸಮಗ್ರ ಆರೋಗ್ಯ ಮೇಲ್ವಿಚಾರಣೆಯನ್ನು ಹೊಂದಿದೆ. ಒಂದು ಬಾರಿ ನೀವು ಟೈಟಾನ್ ಸ್ಮಾರ್ಟ್ 3 ಪ್ರೀಮಿಯಂ ಸ್ಮಾರ್ಟ್ ವಾಚ್ ನ್ನು ಸಂಪೂರ್ಣ ಚಾರ್ಜ್ ಮಾಡಿದರೆ ನಿಮಗೆ ಏಳು ದಿನಗಳವರೆಗೆ ಸ್ಮಾರ್ಟ್ ವಾಚ್ನ್ನು ಬಳಕೆ ಮಾಡಬಹುದಾಗಿದೆ.

ಫಾಸಿಲ್ ಜೆನ್ 6 ಡಿಸ್‌ಪ್ಲೇ ವೆಲ್‌ನೆಸ್ ಎಡಿಷನ್ ಬ್ಲಾಕ್ ಸ್ಮಾರ್ಟ್ ವಾಚ್ (fazil Gen Smartwatch)
ಫಾಸಿಲ್ ಜೆನ್ 6 ಡಿಸ್‌ಪ್ಲೇ ವೆಲ್‌ನೆಸ್ ಎಡಿಷನ್ ಬ್ಲ್ಯಾಕ್ ಸ್ಮಾರ್ಟ್‌ವಾಚ್ ಪ್ರಸ್ತುತ ₹9,598 ರೂಪಾಯಿಗೆ ಮಾರಾಟವಾಗುತ್ತಿದೆ. Google ನಿಂದ Wear OS ಗೆ ಹೊಂದಿಕೆಯಾಗುವ ಈ ಸ್ಮಾರ್ಟ್‌ವಾಚ್, Android ಮತ್ತು iOS ಸಾಧನಗಳೊಂದಿಗೆ ಸಂಯೋಜಿಸುತ್ತದೆ , ರೋಮಾಂಚಕ ಬಣ್ಣಗಳ ಆನ್ ಡಿಸ್‌ಪ್ಲೇ, ಕೇವಲ ಅರ್ಧ ಗಂಟೆಯಲ್ಲಿ ಕ್ಷಿಪ್ರ ಚಾರ್ಜಿಂಗ್ ಮತ್ತು ವಿವಿಧ ಕಸ್ಟಮೈಸ್ ಮಾಡಬಹುದಾದ ವಾಚ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಇದು ಹೊಂದಿದೆ.
ಇದನ್ನೂ ಓದಿ : ಶೀಘ್ರದಲ್ಲೇ ಮಾರುಕಟ್ಟೆಗೆ ಬರ್ತಿದೆ 15 ಸಾವಿರಕ್ಕೂ ಕಡಿಮೆ ದರದ ಜಿಯೋ ಲ್ಯಾಪ್ಟಾಪ್
ಇದರ 3 ATM ವಿನ್ಯಾಸ ಮತ್ತು 24 Hr + ಬಹು-ದಿನದ ವಿಸ್ತೃತ ಮೋಡ್ ವೈವಿಧ್ಯಮಯ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಗಡಿಯಾರವು ಆರೋಗ್ಯ ಮೆಟ್ರಿಕ್‌ಗಳನ್ನು ಸ್ವಯಂಚಾಲಿತವಾಗಿ ಟ್ರ್ಯಾಕ್ ಮಾಡುತ್ತದೆ, ಹಲವಾರು ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ . ನೋಟಿಫಿಕೇಶನ್, ಕರೆಗಳು ಮತ್ತು ಸಿಂಕ್ ಮಾಡುವ ಸಾಮರ್ಥ್ಯಗಳೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತದೆ.
Best Premium Smart watches 2023 samsung galaxy Apple google firebolt titans