ದಿನಭವಿಷ್ಯ 25 ನವೆಂಬರ್ 2023 : ಶನಿದೇವರ ಕೃಪೆಯಿಂದ ಈ ರಾಶಿಯವರಿಗೆ ಅದೃಷ್ಟ

Horoscope Today : ದಿನಭವಿಷ್ಯ 25 ನವೆಂಬರ್ 2023 ಶನಿವಾರ. ಇಂದು ದ್ವಾದಶ ರಾಶಿಗಳ ಮೇಲೆ ಅಶ್ವಿನಿ ನಕ್ಷತ್ರದ ಪ್ರಭಾವ ಇರುತ್ತದೆ. ಅಲ್ಲದೇ ಕೆಲವು ರಾಶಿಗಳು ಇಂದು ಶನಿದೇವರ ಕೃಪೆಗೆ ಪಾತ್ರವಾಗುತ್ತವೆ.

Horoscope Today : ದಿನಭವಿಷ್ಯ 25 ನವೆಂಬರ್ 2023 ಶನಿವಾರ. ಇಂದು ದ್ವಾದಶ ರಾಶಿಗಳ ಮೇಲೆ ಅಶ್ವಿನಿ ನಕ್ಷತ್ರದ ಪ್ರಭಾವ ಇರುತ್ತದೆ. ಅಲ್ಲದೇ ಕೆಲವು ರಾಶಿಗಳು ಇಂದು ಶನಿದೇವರ ಕೃಪೆಗೆ ಪಾತ್ರವಾಗುತ್ತವೆ. ಮೇಷ ರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಸಾಮಾಜಿಕವಾಗಿ ಖ್ಯಾತಿ ಹೆಚ್ಚಲಿದೆ. ವ್ಯವಹಾರ ಕ್ಷೇತ್ರದವರಿಗೆ ಅನುಕೂಲಕರ. ಖರ್ಚು ವೆಚ್ಚಗಳು ಅಧಿಕವಾಗುವ ಸಾಧ್ಯತೆಯಿದೆ. ಶುಭ ಸಮಾರಂಭಗಳ ಕುರಿತು ಮನೆಯಲ್ಲಿ ಚರ್ಚೆ ನಡೆಯಲಿದೆ. ದಿನವಿಡಿ ಸಂತೋಷವಾಗಿ ಇರುತ್ತೀರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ವೃಷಭ ರಾಶಿ ದಿನಭವಿಷ್ಯ
ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಧಾರ್ಮಿಕ ಕ್ಷೇತ್ರಗಳಿಗೆ ಇಂದು ಭೇಟಿ ನೀಡುವಿರಿ. ಕೆಲವು ದಿನಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಇಂದು ಪರಿಹಾರ ದೊರೆಯಲಿದೆ. ಕುಟುಂಬದಲ್ಲಿಂದು ಸಂತೋಷದ ವಾತಾವರಣ ಕಂಡು ಬರಲಿದೆ.

ಮಿಥುನ ರಾಶಿ ದಿನಭವಿಷ್ಯ
ಹೊಸ ವ್ಯವಹಾರ ಆರಂಭಿಸಲು ಸಕಾಲ. ಸಂಗಾತಿಯೊಂದಿಗೆ ನಿಮ್ಮ ಯೋಚನೆಗಳನ್ನು ಹಂಚಿಕೊಳ್ಳಿ. ಸಹೋದ್ಯೋಗಿಗಳ ಬೆಂಬಲ ನಿಮಗೆ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾದ ದಿನ. ಹಿರಿಯ ಸಲಹೆಯೊಂದಿಗೆ ಕಾರ್ಯಾರಂಭ ಮಾಡಿ.

ಕರ್ಕಾಟಕ ರಾಶಿ ದಿನಭವಿಷ್ಯ
ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಉದ್ಯೋಗಿಗಳು ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿ ಆಗುತ್ತಾರೆ. ಕುಟುಂಬ ಸದಸ್ಯರ ಜೊತೆಗೆ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ದೂರ ಪ್ರಮಾಣದಿಂದ ಅನುಕೂಲಕರ.

ಸಿಂಹ ರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಇಂದು ಮೇಲಾಧಿಕಾರಿಗಳು ಹೆಚ್ಚುವರಿ ಹೊಣೆಯನ್ನು ನೀಡಲಿದ್ದಾರೆ. ಅಧಿಕ ಕೆಲಸದಿಂದ ಮಾನಸಿಕ ಕಿರಿಕಿರಿ. ಎಲ್ಲಾ ವಿಚಾರಗಳಲ್ಲಿಯೂ ಜಾಗರೂಕರಾಗಿ ಇರಬೇಕು. ಹೊಂದಾಣಿಕೆಯಿಂದ ಕಾರ್ಯಾನುಕೂಲ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ.

Horoscope Today 25 November 2023 Zodiac Sign
Image Credit to Original Source

ಕನ್ಯಾ ರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳನ್ನು ನೀವು ಎಚ್ಚರಿಕೆಯಿಂದ ಮಾಡಿ. ಯಾವುದೇ ಸಂಘರ್ಷಕ್ಕೂ ಅವಕಾಶ ಮಾಡಿಕೊಡಬೇಡಿ. ಯಾವುದೇ ಕಾರ್ಯವನ್ನೂ ನೀವು ಸಂಪೂರ್ಣ ಆತ್ಮವಿಶ್ವಾಸದಿಂದಲೇ ಮಾಡಬೇಕು. ಆಗ ಮಾತ್ರ ನೀವು ಯಶಸ್ವಿಯಾಗಲು ಸಾಧ್ಯ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಇದನ್ನೂ ಓದಿ : ಹೊಸ ಆಧಾರ್ ಕಾರ್ಡ್‌ ಮಾಡಿಸಲು ಈ ದಾಖಲೆಗಳು ಕಡ್ಡಾಯ : ಹೊಸ ಮಾರ್ಗಸೂಚಿಯಲ್ಲೇನಿದೆ ?

ತುಲಾ ರಾಶಿ ದಿನಭವಿಷ್ಯ
ಆಸ್ತಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ. ಮನೆಯಲ್ಲಿ ಸಂತೋಷ ಸಮೃದ್ದಿ ಹೆಚ್ಚಲಿದೆ. ಸ್ನೇಹಿತರ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ಹಳೆಯ ಸ್ನೇಹಿತರ ಭೇಟಿಯಿಂದ ನೆಮ್ಮದಿ. ಸಂಗಾತಿಯೊಂದಿಗೆ ಸುಂದರ ಕ್ಷಣ ನಿಮ್ಮದಾಗಲಿದೆ.

ವೃಶ್ಚಿಕ ರಾಶಿ ದಿನಭವಿಷ್ಯ
ಆರ್ಥಿಕವಾಗಿ ಸದೃಢರಾಗಲು ಸಾಕಷ್ಟು ಅವಕಾಶಗಳನ್ನು ಇಂದು ಪಡೆಯುತ್ತೀರಿ. ಕುಟುಂಬ ಸದಸ್ಯರು ಇಂದು ನಿಮ್ಮೊಂದಿಗೆ ಪಾರ್ಟಿ ಆಯೋಜನೆ ಮಾಡಲಿದ್ದಾರೆ. ಕುಟುಂಬದಲ್ಲಿನ ಯಾವುದೇ ಕಲಹಗಳು ಇಂದು ಕೊನೆಯಾಗಲಿದೆ. ಸಹೋದರಿಯ ಮದುವೆಯ ಕುರಿತು ಮಾತುಕತೆ ನಡೆಯಲಿದೆ.

ಧನಸ್ಸುರಾಶಿ ದಿನಭವಿಷ್ಯ
ಹಣಕಾಸಿನ ವಹಿವಾಟು ಮಾಡುವ ಮೊದಲು ತಂದೆಯ ಸಹಕಾರವನ್ನು ಪಡೆಯಿರಿ. ಇಲ್ಲವಾದ್ರೆ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತದೆ. ತಂದೆಯ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿ ಇರಬೇಕು.

ಇದನ್ನೂ ಓದಿ : ಪತ್ನಿ, ಮಗಳಿಗೆ ಹಾವು ಕಚ್ಚಿಸಿ ಹತ್ಯೆ : 1 ತಿಂಗಳ ಬಳಿಕ ಬಯಲಾಯ್ತು ಹತ್ಯೆಯ ಸೀಕ್ರೆಟ್‌

ಮಕರ ರಾಶಿ ದಿನಭವಿಷ್ಯ
ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣ ಗೊಳ್ಳಲಿದೆ. ಇಂದು ನೀವು ಸಂತೋಷವಾಗಿ ಇರುತ್ತೀರಿ. ಹೊಂದಾಣಿಕೆಯಿಂದ ಎಲ್ಲಾ ಕಾರ್ಯಗಳಲ್ಲಿಯೂ ಗೆಲುವು. ನ್ಯಾಯಾಲಯದಲ್ಲಿನ ವ್ಯಾಜ್ಯ ಪರಿಹಾರವಾಗಲಿದೆ.

ಕುಂಭ ರಾಶಿ ದಿನಭವಿಷ್ಯ
ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮೊದಲು ಹಲವು ಬಾರಿ ಯೋಚಿಸಿ. ಸಾಮಾಜಿಕವಾಗಿ ನಿಮ್ಮ ಗೌರವ ಇಂದು ಹೆಚ್ಚಲಿದೆ. ಸಂಗಾತಿಯಿಂದ ನೀವು ಯಾವುದೇ ತೊಂದರೆ ಅನುಭವಿಸುತ್ತಿದ್ದರೆ ಅದು ಇಂದು ಕೊನೆಯಾಗಲಿದೆ. ಪ್ರೀತಿ ಪಾತ್ರರ ಜೊತೆಗೆ ಪುಣ್ಯಕ್ಷೇತ್ರಗಳ ಭೇಟಿ ಸಾಧ್ಯತೆ.

ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ

ಮೀನ ರಾಶಿ ದಿನಭವಿಷ್ಯ
ಮನೆಗೆ ಇಂದು ಅತಿಥಿಗಳ ಆಗಮನವಾಗಲಿದೆ. ಖರ್ಚುಗಳು ಇಂದು ಹೆಚ್ಚಳವಾಗುವ ಸಾಧ್ಯತೆಯಿದೆ. ವ್ಯಾಪಾರಿಗಳ ಪಾಲಿಗೆ ಇಂದು ಅಪಾಯಕಾರಿ ದಿನ. ಯಾವುದೇ ಪ್ರಯೋಜನ ಪಡೆಯ ಬೇಕಾದ್ರೆ ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ದೂರ ಪ್ರಯಾಣ ನಿಮಗೆ ಲಾಭವನ್ನು ತಂದುಕೊಡಲಿದೆ

Horoscope Today 25 November 2023 Zodiac Sign

Comments are closed.