Smart Watches : ಎರಡು ಸಾವಿರ ರೂಪಾಯಿಗಳ ಒಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್ ವಾಚ್‌ಗಳು

ಈಗ ವಾಚ್ ಟ್ರೆಂಡ್ (Trend) ಆಗಿಬಿಟ್ಟಿದೆ. ಇಂದು ಪ್ರತಿಯೊಬ್ಬರು ಸ್ಮಾರ್ಟ್ ವಾಚ್ (Smart Watches) ಧರಿಸಲು ಬಯಸುತ್ತಾರೆ. ಆಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ದೊಡ್ಡ ಕಂಪನಿಗಳ ಸ್ಮಾರ್ಟ್‌ವಾಚ್‌ಗಳು ತುಂಬಾ ದುಬಾರಿಯಾಗಿದೆ. ಅದನ್ನು ಎಲ್ಲರೂ ಖರೀದಿಸಲು ಸಾಧ್ಯವಿಲ್ಲ. ನಿಮ್ಮ ಬಜೆಟ್‌ನಲ್ಲಿ ಖರೀದಿಸಬಹುದಾದ ಸರಿಯಾದ ಸ್ಮಾರ್ಟ್ ವಾಚ್‌ಗಳ ಪಟ್ಟಿ ಇಲ್ಲಿದೆ. ಕೇವಲ 2,000 ರೂಪಾಯಿಗಳ ಬಜೆಟ್‌ನಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ ವಾಚ್ ಅನ್ನು ಖರೀದಿಸಬಹುದು. ವಿಶೇಷವೆಂದರೆ ಈ ಸ್ಮಾರ್ಟ್‌ವಾಚ್‌ಗಳಲ್ಲಿ ಹಲವಾರು ಬಣ್ಣದ ಆಯ್ಕೆಗಳನ್ನು ಸಹ ಇವೆ.

2000 ರೂ.ಗಳಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು

ಬೋಟ್ ವೇವ್ ಆರ್ಮರ್ ಸ್ಮಾರ್ಟ್ ವಾಚ್:
ಬೋಟ್ ವೇವ್ ಆರ್ಮರ್ ಸ್ಮಾರ್ಟ್‌ವಾಚ್‌ನ ಬೆಲೆ 2,299 ರೂ. ಆಗಿದೆ. ಇದನ್ನು Amazon ಮತ್ತು ಬೋಟ್‌ನ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು. ಈ ಸ್ಮಾರ್ಟ್ ವಾಚ್‌ 1.83 ಇಂಚಿನ ಡಿಸ್ಪ್ಲೇ, 410 mAh ಬ್ಯಾಟರಿ ಮತ್ತು ಹೆಲ್ತ ಸೂಟ್ ಅನ್ನು ನೀಡುತ್ತದೆ. ಸ್ಮಾರ್ಟ್ ವಾಚ್ ಅನ್ನು ಪೂರ್ಣವಾಗಿ ಚಾರ್ಜ್ ಮಾಡಿದರೆ, ಇದು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 25 ದಿನಗಳವರೆಗೆ ಮತ್ತು ಸಾಮಾನ್ಯ ಬಳಕೆಯಲ್ಲಿ 7 ದಿನಗಳವರೆಗೆ ಇರುತ್ತದೆ. ಈ ವಾಚ್‌ನಲ್ಲಿ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳು, 20 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳು, ಹೃದಯ ಬಡಿತ ಮಾನಿಟರ್, ರಕ್ತದ ಆಮ್ಲಜನಕ ಮಾನಿಟರ್, ಸ್ಟೆಪ್ ಎಣಿಕೆ ಇತ್ಯಾದಿಗಳನ್ನು ನೋಡಬಹುದಾಗಿದೆ.

ಬೋಟ್ ವೇವ್ ಲೀಪ್ ಕಾಲ್ ಸ್ಮಾರ್ಟ್ ವಾಚ್:
ಬೋಟ್ ವೇವ್ ಲೀಪ್ ಕಾಲ್ ಸ್ಮಾರ್ಟ್‌ವಾಚ್‌ನಲ್ಲಿ, 1.83 ಇಂಚಿನ ಡಿಸ್ಪ್ಲೇ, 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳು, ಡಯಲ್ ಪ್ಯಾಡ್ ಮತ್ತು 240 mAh ಬ್ಯಾಟರಿ ಇದೆ. ಹೃದಯ ಬಡಿತ ಮಾನಿಟರ್, ರಕ್ತದ ಆಮ್ಲಜನಕ ಮಾನಿಟರ್, ಸ್ಟೆಪ್ ಎಣಿಕೆ ಮುಂತಾದ ಹಲವು ವೈಶಿಷ್ಟ್ಯಗಳು ಸ್ಮಾರ್ಟ್ ವಾಚ್‌ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆಯನ್ನು ಸಹ ಬೆಂಬಲಿಸುತ್ತದೆ. ಇದನ್ನು ಅಮೆಜಾನ್‌ನಿಂದ 1,799 ರೂ. ಕ್ಕೆ ಖರೀದಿಸಬಹುದು.

ಫೈರ್ ಬೋಲ್ಟ್ ಫೀನಿಕ್ಸ್ ಪ್ರೊ:
ಫೈರ್ ಬೋಲ್ಟ್ ಫೀನಿಕ್ಸ್ ಪ್ರೊ ಸ್ಮಾರ್ಟ್‌ವಾಚ್‌, 1.39 ಇಂಚಿನ ಡಿಸ್‌ಪ್ಲೇ, 120 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳು, ಧ್ವನಿ ಸಹಾಯಕ, ಫೈಂಡ್ ಮೈ ಫೋನ್ ಮತ್ತು ಹೆಲ್ತ್ ಸೂಟ್ ಅನ್ನು ಪಡೆಯಬಹುದಾಗಿದೆ. ಈ ಸ್ಮಾರ್ಟ್ ವಾಚ್ IP68 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಬ್ಲೂಟೂತ್ ಕರೆಯನ್ನು ಬೆಂಬಲಿಸುತ್ತದೆ. 1,799 ರೂ. ಗಳಿಗೆ ಇದನ್ನು ಇ-ಕಾಮರ್ಸ್ ವೆಬ್‌ಸೈಟ್‌ನಿಂದ ಖರೀದಿಸಬಹುದು.

ನಾಯ್ಸ್ ಕಲರ್‌ಫಿಟ್ ಐಕಾನ್ 2 ಸ್ಮಾರ್ಟ್‌ವಾಚ್:
ಫ್ಲಿಪ್‌ಕಾರ್ಟ್‌ನಲ್ಲಿ 1,899 ರೂ.ಗಳಿಗೆ ನಾಯ್ಸ್‌ ಕಾಲರ್‌ಫಿಟ್‌ ಐಕಾನ್ 2 ಸ್ಮಾರ್ಟ್‌ವಾಚ್ ಅನ್ನು ಖರೀದಿಸಬಹುದು. ಈ ಸ್ಮಾರ್ಟ್ ವಾಚ್‌ನಲ್ಲಿ, 60 ಸ್ಪೋರ್ಟ್ಸ್ ಮೋಡ್‌ಗಳು, 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳು, ಹೃದಯ ಬಡಿತ ಮಾನಿಟರ್, ರಕ್ತದೊತ್ತಡ ಮಾನಿಟರ್ ಮತ್ತು ಅನೇಕ ಇಂಟರ್ನಲ್‌ ಆಟಗಳನ್ನು ಪಡೆಯಬಹುದು. ಈ ಸ್ಮಾರ್ಟ್ ವಾಚ್‌ 1.8 ಇಂಚಿನ ಡಿಸ್ಪ್ಲೇ ಮತ್ತು ಸ್ಪೀಡ್ ಡಯಲ್ ಸೌಲಭ್ಯವನ್ನು ಪಡೆದುಕೊಂಡಿದೆ.

ಗಮನಿಸಿ : ಕಾಲಕಾಲಕ್ಕೆ ಸ್ಮಾರ್ಟ್ ವಾಚ್‌ಗಳ ಬೆಲೆಯಲ್ಲಿ ಬದಲಾವಣೆಗಳು ಆಗುತ್ತಿರುತ್ತದೆ. ನಿಖರವಾದ ಮಾಹಿತಿಗಾಗಿ, ವೆಬ್‌ಸೈಟ್‌ಗೆ ಭೇಟಿ ನೀಡಿ.

ಇದನ್ನೂ ಓದಿ : ಪ್ಯಾನ್-ಆಧಾರ್ ಲಿಂಕ್ ಅವಧಿ ವಿಸ್ತರಣೆ : ಷರತ್ತುಗಳು ಅನ್ವಯ

ಇದನ್ನೂ ಓದಿ : US Visiting Visa In India : ಇನ್ಮುಂದೆ ಬೇಗ ಸಿಗಲಿದೆ ಭಾರತೀಯರಿಗೆ ಯುಎಸ್ಎ ವಿಸಿಟಿಂಗ್ ವೀಸಾ

(Best Smart Watches under rs 2000. You can buy this from an e-commerce platform. Know the features)

Comments are closed.