April Fools Day 2023 : ಮೂರ್ಖರ ದಿನ ಏಪ್ರಿಲ್‌ ಒಂದಕ್ಕೆ ಏಕೆ? ಮೂರ್ಖರನ್ನಾಗಿಸುವ ಹಿಂದಿನ ಕಥೆ ನಿಮಗೆ ಗೊತ್ತಾ…

ಏಪ್ರಿಲ್‌ ಒಂದರಂದು (April 1st) ಜಗತ್ತಿನಾದ್ಯಂತ ಮೂರ್ಖರ ದಿನ ಅಂದರೆ ಏಪ್ರಿಲ್‌ ಫೂಲ್‌ ಡೇ (April Fools Day 2023) ಆಚರಿಸಲಾಗುತ್ತದೆ. ಈ ದಿನ ಜನರು ತಮ್ಮ ಗೆಳೆಯ-ಗೆಳೆತಿಯರನ್ನು, ತಮ್ಮ ಹತ್ತಿರದ ಸಂಬಂಧಿಕರನ್ನು ಮೂರ್ಖರನ್ನಾಗಿಸುತ್ತಾರೆ. ಅವರ ಜೊತೆ ಪ್ರಾಂಕ್‌ ಮಾಡಿ ಏಪ್ರಿಲ್‌ ಫೂಲ್‌ ಹೇಳಿ ನಗುತ್ತಾರೆ. ಮೊದಲು ಈ ದಿನವನ್ನು ಫ್ರಾನ್ಸ್‌ ಮತ್ತು ಯುರೋಪಿನ ಇತರ ದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಕಾಲಕ್ರಮೇಣ ಜಗತ್ತಿನಾದ್ಯಂತ ಈ ದಿನವನ್ನು ಏಪ್ರಿಲ್‌ ಫೂಲ್‌ ಡೇ ಎಂದು ಆಚರಿಸುತ್ತಿದ್ದಾರೆ. ಏಪ್ರಿಲ್‌ ಫೂಲ್‌ ಅನ್ನು ಏಪ್ರಿಲ್‌ ತಿಂಗಳಿನ ಮೊದಲನೇ ದಿನವನೇ ಆಚರಿಸುವ ಹಿಂದೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಕೆಲವು ಪ್ರಮುಖ ಕಥೆಗಳು ಯಾವವು ಇಲ್ಲಿದೆ ಓದಿ.

ಏಪ್ರಿಲ್‌ ಫೂಲ್‌ ಡೇ ಪ್ರಾರಂಭವಾದದ್ದು ಹೇಗೆ?
ಏಪ್ರಿಲ್‌ 1 ರಂದೇ ಈ ದಿನವನ್ನು ಆಚರಿಸುವುದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳಲ್ಲ. ಅದರ ಬಗ್ಗೆ ಅನೇಕ ಕಥೆಗಳು ಚಾಲ್ತಿಯಲ್ಲಿವೆ. ಒಂದು ಕಥೆಯ ಪ್ರಕಾರ, ಏಪ್ರಿಲ್ ಫೂಲ್‌ ಡೇ ಯು 1381 ರಲ್ಲಿ ಪ್ರಾರಂಭವಾಯಿತು. ಆ ಸಮಯದಲ್ಲಿ ಕಿಂಗ್ ರಿಚರ್ಡ್ ಜೀತೀ ಮತ್ತು ಬೊಹೆಮಿಯಾದ ರಾಣಿ ಅನ್ನಿ ಅವರು ಮಾರ್ಚ್ 32, 1381 ರಂದು ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಘೋಷಿಸಿದರು ಎಂದು ಹೇಳಲಾಗುತ್ತದೆ. ನಿಶ್ಚಿತಾರ್ಥದ ಸುದ್ದಿಯನ್ನು ಕೇಳಿ ಸಾರ್ವಜನಿಕರು ಸಂತೋಷಪಟ್ಟರು, ಆದರೆ ಮಾರ್ಚ್ 31, 1381 ರಂದು, ಜನರು ಅರ್ಥಮಾಡಿಕೊಂಡರು ಮಾರ್ಚ್ ನಲ್ಲಿ 32 ದಿನಗಳು ಬರುವುದಿಲ್ಲ ಎಂದು . ನಂತರ ಜನರು ತಾವು ಮೂರ್ಖರಾಗಿದ್ದಾರೆ ಎಂದು ಅರ್ಥಮಾಡಿಕೊಂಡರು. ಅಂದಿನಿಂದ ಮಾರ್ಚ್ 32, ಅಂದರೆ ಏಪ್ರಿಲ್ 1 ಅನ್ನು ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಕೆಲವು ಕಥೆಗಳ ಪ್ರಕಾರ, ಹೊಸ ವರ್ಷವನ್ನು ಮೊದಲು ಯುರೋಪಿಯನ್ ದೇಶಗಳಲ್ಲಿ ಏಪ್ರಿಲ್ 1 ರಂದು ಆಚರಿಸಲಾಗುತ್ತಿತ್ತು. ಆದರೆ, ಪೋಪ್ ಗ್ರೆಗೊರಿ 13, ಹೊಸ ಕ್ಯಾಲೆಂಡರ್ ಅನ್ನು ಅಳವಡಿಸಿಕೊಳ್ಳಲು ಆದೇಶಿಸಿದಾಗ, ಹೊಸ ವರ್ಷವನ್ನು ಜನವರಿ 1 ರಿಂದ ಆಚರಿಸಲು ಪ್ರಾರಂಭಿಸಿತು. ಆದರೆ, ಕೆಲವು ಜನರು ಇನ್ನೂ ಏಪ್ರಿಲ್ 1 ರಂದು ಹೊಸ ವರ್ಷವನ್ನು ಆಚರಿಸುತ್ತಿದ್ದರು. ಆಗ ಅಂಥವರನ್ನು ಮೂರ್ಖರೆಂದು ಪರಿಗಣಿಸಿ ಗೇಲಿ ಮಾಡಲಾಯಿತು. ಹೀಗೆ ಏಪ್ರಿಲ್ ಫೂಲ್ ಡೇ ಶುರುವಾಯಿತು ಎಂದು ಹೇಳಲಾಗುತ್ತದೆ. 19 ನೇ ಶತಮಾನದ ವೇಳೆಗೆ, ಏಪ್ರಿಲ್ ಫೂಲ್‌ ಡೇ ಸಾಕಷ್ಟು ಜನಪ್ರಿಯವಾಯಿತು.

ಇದನ್ನೂ ಓದಿ : Smart Watches : ಎರಡು ಸಾವಿರ ರೂಪಾಯಿಗಳ ಒಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್ ವಾಚ್‌ಗಳು

ಭಾರತದಲ್ಲಿ ಆರಂಭವಾದದ್ದು ಯಾವಾಗ?
ಪ್ರಪಂಚದಾದ್ಯಂತ ಏಪ್ರಿಲ್ 1 ರಂದು ಮೂರ್ಖರ ದಿನವನ್ನು ಆಚರಿಸಲು ವಿವಿಧ ವಿಧಾನಗಳಿವೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಫ್ರಿಕನ್ ದೇಶಗಳ ಬಗ್ಗೆ ನಾವು ಮಾತನಾಡಿದರೆ, ಅಲ್ಲಿ ಏಪ್ರಿಲ್ ಫೂಲ್‌ ಡೇಯನ್ನು 12 ಗಂಟೆಯವರೆಗೆ ಮಾತ್ರ ಆಚರಿಸಲಾಗುತ್ತದೆ. ಅದೇ ಸಮಯದಲ್ಲಿ, ಏಪ್ರಿಲ್ 1 ರಂದು ಕೆನಡಾ, ಅಮೇರಿಕಾ, ರಷ್ಯಾ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಲ್ಲಿ ಏಪ್ರಿಲ್ ಫೂಲ್‌ ಡೇ ದಿನವಿಡೀ ಆಚರಿಸಲಾಗುತ್ತದೆ. ಕೆಲವು ವರದಿಗಳ ಪ್ರಕಾರ, ಈ ದಿನವನ್ನು 19 ನೇ ಶತಮಾನದಲ್ಲಿ ಬ್ರಿಟಿಷರು ಭಾರತದಲ್ಲಿ ಪ್ರಾರಂಭಿಸಿದರು. ಇಂದಿನ ಕಾಲದಲ್ಲಿ, ಭಾರತದಲ್ಲಿಯೂ ಸಹ, ಜನರು ಈ ದಿನದಂದು ಪ್ರಾಂಕ್‌ ಮಾಡಿ ಆಚರಿಸುತ್ತಾರೆ.

ಇದನ್ನೂ ಓದಿ : Ram Navami 2023 : ರಾಮ ನವಮಿ ಯಾವಾಗ? ದಿನ, ಮಹೂರ್ತ, ಮತ್ತು ಮಹತ್ವ

(April Fools Day 2023. Why it is celebrated on 1st April. Know the history, meaning, and interesting facts)

Comments are closed.