Best Smartphones Under 5000: ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್‌; 5 ಸಾವಿರದೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳಿವು

ಸ್ಮಾರ್ಟ್‌ಫೋನ್ ಖರೀದಿಸುವುದು ಜನಸಾಮಾನ್ಯರ ಕನಸು. ಆದರೆ, ಎಲ್ಲ ಫೀಚರ್ಸ್ ಹೊಂದಿದ ಬೆಸ್ಟ್ ಕ್ವಾಲಿಟಿ ಫೋನುಗಳು ಕಡಿಮೆ ಬೆಲೆಗೆ ಸಿಗುವುದು ಬಹಳ ಅಪರೂಪ. 2021ರವರೆಗೆ ಒಳ್ಳೆ ಫೀಚರ್ಸ್ ಫೋನ್‌ಗಳು ಐದು ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿರಲಿಲ್ಲ. ಆದರೆ, ಹೊಸ ಹೊಸ ಬ್ರ್ಯಾಂಡ್ ಆಗಮನದಿಂದ ಮಾರ್ಕೆಟ್ ನಲ್ಲಿ ಟಫ್ ಕಾಂಪಿಟೇಶನ್ ಇದ್ದು, ಗ್ರಾಹಕರ ಸೆಳೆಯುವ ಸಲುವಾಗಿ ಹೊಸ ವರ್ಷಕ್ಕೆ ಡಿಸ್ಕೌಂಟ್ ನೀಡಲಾಗಿದೆ.
ಹಾಗಾದ್ರೆ ಐದು ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುವ ಟಾಪ್ 5 ಸ್ಮಾರ್ಟ್ ಫೋನ್ (Best Smartphones Under 5000) ಯಾವುವು ಅಂತ ತಿಳಿಯುವ ಕುತೂಹಲ ಇದ್ದರೆ, ಈ ಲೇಖನ ಓದಿ.

ಸ್ಯಾಮ್ಸಂಗ್ ಗಾಲಕ್ಸಿ ಎಂ1 ಕೋರ್
ಇದು ಎಂಟ್ರಿ ಲೆವೆಲ್ ಫೋನ್ ಆಗಿದ್ದು, ಆಂಡ್ರಾಯ್ಡ್10 ವರ್ಷನ್ ನಲ್ಲಿ ರನ್ ಆಗುತ್ತದೆ. ಇದು 1 ಜಿಬಿ ರಾಮ್ ಹಾಗೂ16 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ್ದು, 5000ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಇದರಲ್ಲೇ 2 ಜಿಬಿ +32 ಜಿಬಿ ವೇರಿಯಂಟ್ ಇದ್ದು 5000ಕ್ಕಿಂತ ತುಸು ಜಾಸ್ತಿ ಬೆಲೆ ಇದೆ.
ಮೆಮೊರಿ ಕಾರ್ಡ್ ಮೂಲಕ 512 ಜಿಬಿ ವರೆಗೂ ಸ್ಟೋರೇಜ್ ಎಕ್ಸ್ಟೆಂಡ್ ಮಾಡುವ ಅವಕಾಶವಿದೆ. ಈ ಫೋನು 3000 ಎಂ ಎ ಎಚ್ ಬ್ಯಾಟರಿ ಕೆಪಸಿಟಿ ಹೊಂದಿದೆ.
ಕ್ಯಾಮೆರಾ 8 ಎಂಪಿ ಬ್ಯಾಕ್ ಕ್ಯಾಮೆರಾ ಹಾಗೂ 5 ಎಂಪಿ ಸೆಲ್ಫಿ ಕ್ಯಾಮೆರಾ ಈ ಫೋನ್ ಹೊಂದಿದೆ. ಜೊತೆಗೆ 5.3 ಇಂಚಿನ ಫುಲ್ ಎಚ್ಡಿ ಪ್ಲಸ್ ಡಿಸ್ಪ್ಲೇ ಇದ್ದು 150 ಗ್ರಾಮ್ ಭಾರವನ್ನು ಹೊಂದಿದೆ. ನೀಲಿ, ಕೆಂಪು ಹಾಗೂ ಕಪ್ಪು ಬಣ್ಣಗಳಲ್ಲಿ ಈ ಫೋನ್ ಲಭ್ಯವಿವೆ. ಬೆಲೆ: 5199

ರೆಡ್ಮಿ ಗೋ
ಈ ಫೋನ್ ಬೇಸಿಕ್ ಫೀಚರ್ಸ್ ಹೊಂದಿದ್ದು, ಆಂಡ್ರಾಯ್ಡ್ ಗೋ ಒಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 5 ಇಂಚಿನ ಡಿಸ್ಪ್ಲೇ, 16:9 ಆಸ್ಪೆಕ್ಟ್ ರೇಷಿಯೋ ಹಾಗೂ 720×1080 ರಿಸಲ್ಯೂಷನ್ ಒಳಗೊಂಡಿದೆ. ಅಷ್ಟೇ ಅಲ್ಲದೆ 3000 ಎಂ ಎ ಎಚ್ ಬ್ಯಾಟರಿ ಇದೆ. 1 ಜಿಬಿ ರಾಮ್ ಹಾಗೂ 8ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಕಡಿಮೆ ಸ್ಟೋರೇಜ್ ಇರುವುದರಿಂದ ಇದು ಗೇಮಿಂಗ್ ಗೆ ಸೂಕ್ತವಲ್ಲ. 8 ಎಂಪಿ ರಿಯರ್ ಕ್ಯಾಮೆರಾ ಹಾಗೂ 5 ಎಂಪಿ ಸೆಲ್ಫಿ ಕ್ಯಾಮೆರಾ ಇದ್ದು ಕಪ್ಪು ಹಾಗೂ ನೀಲಿ ಬಣ್ಣಗಳಲ್ಲಿ ಲಭ್ಯವಿದೆ.
ಬೆಲೆ: 5999

ಜಿಯೋನಿ ಎಫ್8 ನಿಯೋ
ಜಿಯೋನಿ ಎಫ್8 ನಿಯೋ ಬಜೆಟ್ ಫ್ರೆಂಡ್ಲಿ ಫೋನ್ ಆಗಿದ್ದು ಓಕ್ಟ ಕೋರ್ ಪ್ರೊಸೆಸರ್ ಹೊಂದಿದೆ. ಇದು ಫೇಸ್ ಅನ್ಲಾಕ್, ಬ್ಯುಟಿ ಮೋಡ್, ಇನ್ ಬಿಲ್ಟ್ ಫಿಂಗ ಪ್ರಿಂಟ್ ಸೆನ್ಸರ್ ಹಾಗೂ ನೈಟ್ ಮೋಡ್ ಹೊಂದಿದೆ. ಸ್ಟೋರೇಜ್ ಕೂಡ ಬೆಟರ್ ಆಗಿದ್ದು 2 ಜಿಬಿ ರಾಮ್ ಹಾಗು 32 ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ. ಎಸ್ ಡಿ ಕಾರ್ಡ್ ಮೂಲಕ 256 ಜಿಬಿ ತನಕ ಮೆಮೊರಿ ಏಕ್ಸ್ಪ್ಯಾನ್ಡ್ ಮಾಡಬಹುದು.
ಇದು 3000 ಎಂ ಎ ಎಚ್ ಬ್ಯಾಟರಿ, 8 ಎಪಿ ರಿಯರ್ ಕ್ಯಾಮೆರಾ ಹಾಗೂ 5 ಎಂಪಿ ಸೆಲ್ಫಿ ಕ್ಯಾಮೆರ ಹೊಂದಿದೆ.
ಬೆಲೆ:5199-5899

ಲಾವಾ ಝೆಡ್1
2021 ರಲ್ಲಿ ಬಿಡುಗಡೆಗೊಂಡ ಈ ಫೋನ್ ಅಪ್ಪಟ ಭಾರತೀಯ ಆಗಿದೆ. 5 ಇಂಚಿನ ಡಿಸ್ಪ್ಲೇ ಹಾಗೂ ಗೋರಿಲ್ಲ ಗ್ಲಾಸ್ 3 ಹೊಂದಿದೆ. ಇದು 2ಜಿಬಿ ರಾಮ್ ಹಾಗೂ 32 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ.
ಈ ಸ್ಮಾರ್ಟ್ ಫೋನ್ 5 ಎಂಪಿ ಫ್ರಾಂಟ್ ಹಾಗೂ ಬ್ಯಾಕ್ ಕ್ಯಾಮೆರಾ ಹೊಂದಿದ್ದು, 3100 ಎಂ ಎಎಚ್ ಬ್ಯಾಟರಿ ಇದ್ದು ನೀಲಿ ಹಾಗೂ ಕೆಂಪು ಬಣ್ಣಗಳಲ್ಲಿ ಲಭ್ಯವಿವೆ.
ಬೆಲೆ:5999

ನೋಕಿಯಾ 1
2018 ಮಾರ್ಚ್‌ನಲ್ಲಿ ಬಿಡುಗಡೆ ಗೊಂಡ ಈ ಫೋನ್ ಆಂಡ್ರಾಯ್ಡ್ 8.1 ಓರಿಯೋನಲ್ಲಿ ರನ್ ಆಗುತ್ತದೆ. ಇದು 1 ಜಿಬಿ ರಾಮ್ ಹಾಗೂ 8 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 ಜಿಬಿ ತನಕ ಮೆಮೊರಿ ಎಕ್ಸ್ ಟೆಂಡ್ ಮಾಡಬಹುದು.
ಬ್ಯಾಟರಿ ಕುರಿತು ಹೇಳುವುದಾದರೆ, 2250 ಎಂಎಎಚ್ ಬ್ಯಾಟರಿ ಹೊಂದಿದೆ. ಜೊತೆಗೆ 5 ಎಂಪಿ ಬ್ಯಾಕ್ ಕ್ಯಾಮೆರಾ ಹಾಗೂ ಎಂಪಿ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.
ಬೆಲೆ:5688

ಇದನ್ನೂ ಓದಿ: 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

(Best Smartphones Under 5000 must check before buy)

Comments are closed.