U-19 World Cup Semi-Final : ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ

ಬಾರ್ಬಡೋಸ್ : ನಾಯಕ ಯಶ್‌ ದುಲ್‌ ಶತಕ ಹಾಗೂ ಶೇಖ್‌ ರಶೀದ್‌ ಅಬ್ಬರದ ಬ್ಯಾಟಿಂಗ್‌ ಹಾಗೂ ವಿಕ್ಕಿ ಓಸ್ತ್ವಾಲ್ ಅವರ ಬೌಲಿಂಗ್‌ ನೆರವಿನಿಂದ U-19 ವಿಶ್ವಕಪ್‌ ನಲ್ಲಿ ಭಾರತ ತಂಡ ಫೈನಲ್‌ ಪ್ರವೇಶಿಸಿದೆ. ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಸಮಿಫೈನಲ್‌ (U-19 World Cup Semi-Final) ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬರೋಬ್ಬರಿ 96 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ವಿಶ್ವಕಪ್‌ ಗೆಲ್ಲುವ ಅಂತಿಮ ಹಂತಕ್ಕೆ ತಲುಪಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆರಂಭಿಕರಾದ ರಘುವಂಶಿ ೬ ರನ್‌ ಹಾಗೂ ಹರ್ನೂರ ಸಿಂಗ್‌ ೧೬ ರನ್‌ ಗಳಿಸಿ ಬಹುಬೇಗನೆ ವಿಕೆಟ್‌ ಒಪ್ಪಿಸಿದ್ದಾರೆ. ನಂತರದಲ್ಲಿ ತಂಡದ ನಾಯಕ ಯಶ್‌ ದುಲ್‌ ಹಾಗೂ ಶೇಖ್‌ ರಶೀದ್‌ ಮೂರನೇ ವಿಕೆಟ್‌ಗೆ ೨೪೧ರನ್‌ಗಳ ದಾಖಲೆಯ ಜೊತೆಯಾಟ ಆಡಿದ್ದಾರೆ. ನಂತರದಲ್ಲಿ ರಾಜವರ್ಧನ್‌ ೧೩, ನಿಶಾಂತ್‌ ಸಿಂಧು ೧೨, ದಿನೇಶ್‌ ಬಾನಾ ೨೦ರನ್‌ ನೆರವಿನಿಂದ ಭಾರತ ತಂಡ ೫೦ ಓವರ್‌ಗಳಲ್ಲಿ ೫ ವಿಕೆಟ್‌ ಕಳೆದುಕೊಂಡು ೨೯೦ ರನ್‌ ಗಳಿಸಿತ್ತು.

ನಂತರ ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ರವಿ ಕುಮಾರ್‌ ಆರಂಭಿಕ ಆಘಾತವನ್ನು ನೀಡಿದ್ರು. ಟೀಗ್ ವೈಲ್ಲಿ ಕೇವಲ ೧ ರನ್‌ಗೆ ವಿಕೆಟ್‌ ಒಪ್ಪಿಸುತ್ತಿದ್ದಂತೆಯೇ ಕ್ಯಾಂಪ್‌ಬೆಲ್ ಕೆಲ್ಲವೇ ಜೊತೆಯಾದ ಕೋರೆ ಮಿಲ್ಲರ್ ಉತ್ತಮ ಜೊತೆಯಾಟದ ಭರವಸೆಯನ್ನು ನೀಡಿದ್ರು. ಆದರೆ ರಘುವಂಶಿ ಹಾಗೂ ವಿಕ್ಕಿ ಓಸ್ತ್ವಾಲ್ ಸತತ ವಿಕೆಟ್‌ ಕಬಳಿಸಿದ್ದಾರೆ. ಇನ್ನು ನಾಯಕ ಕೂಪರ್ ಕೊನೊಲಿ ಆಟ ಕೇವಲ ೩ರನ್‌ಗಳಿಗೆ ಅಂತ್ಯವಾಯ್ತು. ನಂತರ ಕ್ರೀಸ್‌ಗೆ ಬಂದ ಲಾಚ್ಲಾನ್ ಶಾ ಭರ್ಜರಿ ೫೧ ರನ್‌ ಬಾರಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆರಂಭ ಯಾವೊಬ್ಬ ಆಟಗಾರರು ಕೂಡ ತಂಡವನ್ನು ಗೆಲಿಸುವಲ್ಲಿ ಸಾಧ್ಯವಾಗಿಲ್ಲ. ನಿಶಾಂತ್ ಸಿಂಧು (12) ಮತ್ತು ದಿನೇಶ್ ಬಾನಾ (20) ರನ್‌ ಬಾರಿಸಿದ್ದಾರೆ. ಟೀಂ ಇಂಡಿಯಾ ಪರ ರವಿಕುಮಾರ್‌ ೨, ವಿಕ್ಕಿ ಓಸ್ತ್ವಾಲ್‌ ೩, ನಿಶಾಂತ್‌ ಸಿಂಧು ೨ ಹಾಗೂ ತಾಂಬೆ ಹಾಗೂ ರಘುವಂಶಿ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ. ಭಾರತ U-19 ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿಗೆ ಫೈನಲ್‌ ಪ್ರವೇಶಿಸಿದ ಸಾಧನೆಯನ್ನು ಮಾಡಿದೆ. ಫೈನಲ್‌ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

ತಂಡಗಳು:

ಆಸ್ಟ್ರೇಲಿಯಾ U19 : ಕ್ಯಾಂಪ್‌ಬೆಲ್ ಕೆಲ್ಲವೇ, ಟೀಗ್ ವೈಲ್ಲಿ, ಕೋರೆ ಮಿಲ್ಲರ್, ಕೂಪರ್ ಕೊನೊಲಿ (ಸಿ), ಲಾಚ್ಲಾನ್ ಶಾ, ನಿವೇತನ್ ರಾಧಾಕೃಷ್ಣನ್, ವಿಲಿಯಂ ಸಾಲ್ಜ್‌ಮನ್, ಟೋಬಿಯಾಸ್ ಸ್ನೆಲ್ (w), ಜಾಕ್ ಸಿನ್‌ಫೀಲ್ಡ್, ಟಾಮ್ ವಿಟ್ನಿ, ಜ್ಯಾಕ್ ನಿಸ್ಬೆಟ್

ಭಾರತ U19 : ಅಂಗ್‌ಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಯಶ್ ಧುಲ್(ಸಿ), ನಿಶಾಂತ್ ಸಿಂಧು, ರಾಜ್ ಬಾವಾ, ಕೌಶಲ್ ತಾಂಬೆ, ದಿನೇಶ್ ಬಾನಾ(ಡಬ್ಲ್ಯೂ), ರಾಜವರ್ಧನ್ ಹಂಗರ್‌ಗೇಕರ್, ವಿಕ್ಕಿ ಓಸ್ತ್ವಾಲ್, ರವಿ ಕುಮಾರ್

ಇದನ್ನೂ ಓದಿ : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡ್ತಾರೆ RCB ಮಾಜಿ ಆಟಗಾರ ಹರ್ಷಲ್ ಪಟೇಲ್

ಇದನ್ನೂ ಓದಿ : Ishan Kishan : IPL 2022 ರಲ್ಲಿ RCB ಪರ ಆಡುತ್ತಾರೆ ಇಶಾನ್ ಕಿಶನ್

(U-19 World Cup Semi-Final 2: Dhull, Rasheed 204-Run Stand Help India Beat Australia By 96 Runs To Reach Fourth Consecutive Final)

Comments are closed.