ಕಳಪೆ ನೆಟ್‌ವರ್ಕ್‌ನಿಂದ ಬೇಸತ್ತು ಹೋಗಿದ್ದೀರಾ? ಹೊಸ ವರ್ಷಕ್ಕೆ ಬಿಎಸ್‌ಎನ್‌ಎಲ್‌ನಿಂದ ಹೊಸ ಸೇವೆ ಪ್ರಾರಂಭ

BSNL Wi Fi Plan: ಭಾರತ ಸರ್ಕಾರದ ಅಧೀನದಲ್ಲಿರುವ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತನ್ನ ಕೋಟ್ಯಂತರ ಗ್ರಾಹಕರಿಗೆ ಒಂದರ ಮೇಲೆ ಒಂದು ಅಚ್ಚರಿಗಳನ್ನು ನೀಡುತ್ತಿದೆ.

ಇತ್ತೀಚೆಗೆ ಕಂಪನಿಯು ಬಳಕೆದಾರರಿಗೆ ತನ್ನ ನಾಲ್ಕು ಜನಪ್ರಿಯ ಯೋಜನೆಗಳಲ್ಲಿ ಹೆಚ್ಚಿನ ಡೇಟಾ ಪ್ರಯೋಜನಗಳನ್ನು ನೀಡುವುದಾಗಿ ಘೋಷಿಸಿತ್ತು. ಇದೀಗ ಹೊಸ ವರ್ಷದ ಆರಂಭದಲ್ಲಿ ಕಂಪನಿಯು ಮತ್ತೊಂದು ದೊಡ್ಡ ಅಚ್ಚರಿ ನೀಡುತ್ತಿದೆ.

ಗುರುವಾರ, ಬಿಎಸ್ಎನ್ಎಲ್ ದೇಶಾದ್ಯಂತ ವಾಯ್ಸ್ ಓವರ್ ವೈ-ಫೈ ಅಂದರೆ ವೈ-ಫೈ ಕರೆ ಸೇವೆಯನ್ನು ಪರಿಚಯಿಸಿದೆ. ಈ ಸೇವೆ ಜನವರಿ 1 ರಿಂದ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಲಭ್ಯವಾಗಿದೆ. ಇದಕ್ಕೆ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಬಿಎಸ್‌ಎನ್‌ಎಲ್‌ ನ ವೈ–ಫೈ ಕರೆ ಸೇವೆ ಎಂದರೇನು?

ಬಹಳ ಸುಲಭವಾಗಿ ಹೇಳುವುದಾದರೆ ಬಿಎಸ್‌ಎನ್‌ಎಲ್‌ ನ ವೈ–ಫೈ ಕರೆ ಸೇವೆ ಎಂದರೆ ಬಿಎಸ್‌ಎನ್‌ಎಲ್‌ ಬಳಕೆದಾರರು ಯಾವುದೇ ವೈ–ಫೈ ನೆಟ್‌ವರ್ಕ್‌ ಮೂಲಕ ಕರೆಗಳನ್ನು ಸ್ವೀಕರಲು ಹಾಗೂ ಮಾಡಲು ಅನುವು ಮಾಡಿಕೊಡುತ್ತದೆ.

ಇದರಲ್ಲಿ ಸಂದೇಶಗಳನ್ನು ಕಳುಹಿಸುವ ಸೌಲಭ್ಯವೂ ಇರುತ್ತದೆ. ಈ ಸೇವೆಯ ಮುಖ್ಯ ಗುರಿಯೆಂದರೆ ಒಳಾಂಗಣ, ಕಛೇರಿ, ದುರ್ಬಲ ನೆಟ್‌ವರ್ಕ್‌ ವ್ಯಾಪ್ತಿ ಪ್ರದೇಶ ಗಳಲ್ಲಿ ಉತ್ತಮ ಕರೆ ಸಂಪರ್ಕವನ್ನು ನೀಡುವುದಾಗಿದೆ. ಅಂತಹ ಪರಿಸ್ಥಿತಿಯಲ್ಲಿ ವೈ–ಫೈ ಕರೆ ಸೇವೆಯು ಗ್ರಾಹಕರಿಗೆ ವರದಾನವಾಗಿದೆ.

ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ

ಬಿಎಸ್‌ಎನ್‌ಎಲ್‌ ನ ಈ ವೈ–ಫೈ ಕರೆ ಮಾಡಲು ಯಾವುದೇ ಥರ್ಡ್‌ ಪಾರ್ಟಿ ಆಪ್‌ಗಳ ಅಗತ್ಯವಿಲ್ಲ ಎಂದು ಬಿಎಸ್‌ಎನ್‌ಎಲ್‌ ಸ್ಪಷ್ಟವಾಗಿ ಹೇಳಿದೆ.

ಬಳಕೆದಾರರು ತಮ್ಮ ಈಗಿರುವ ಸಂಖ್ಯೆಯನ್ನು ಬಳಸಿಕೊಂಡು ತಮ್ಮ ಫೋನ್‌ನ ನಿಯಮಿತ ಡಯಲರ್‌ನಿಂದ ನೇರವಾಗಿ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ.

ಈ ಸೇವೆಯು ಐಎಂಎಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಕರೆಗಳ ಸಮಯದಲ್ಲಿ ವೈ-ಫೈ ಮತ್ತು ಮೊಬೈಲ್ ನೆಟ್‌ವರ್ಕ್‌ಗಳ ನಡುವೆ ಸರಾಗವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: 10,000ಕ್ಕೆ ಬೆಸ್ಟ್ 5G ಸ್ಮಾರ್ಟ್‌ಫೋನ್‌ಗಳು: ಸ್ಯಾಮ್‌ಸಂಗ್, ರೆಡ್ಮಿ ಮತ್ತು ಪೊಕೊ ಯಾವುದು ಬೆಸ್ಟ್?

ಯಾವ ಪ್ರದೇಶಗಳಲ್ಲಿ ಹೆಚ್ಚು ಪ್ರಯೋಜನಕಾರಿ

ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ದುರ್ಬಲವಾಗಿರುವ ಪ್ರದೇಶಗಳಲ್ಲಿ ವಾಸಿಸುವ ಗ್ರಾಮೀಣ ಭಾಗದ ಜನರಿಗೆ ಈ ಸೇವೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ಬಳಕೆದಾರರು ಯಾವುದೇ ಅಡೆತಡೆಗಳಲ್ಲಿದೆ ಸಂಪರ್ಕವನ್ನು ಸಾಧಿಸಬಹುದಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories