ಸೋಷಿಯಲ್ ಮೀಡಿಯಾ ಅಂದರೆ ಹಾಗೆ ಬಹಳಷ್ಟು ಗದ್ದಲ(Cut Noise on Twitter). ಎಷ್ಟರಮಟ್ಟಿಗೆ ಎಂದರೆ ಸಾಮಾಜಿಕ ಮಾಧ್ಯಮದಲ್ಲಿರುವ ಸುದ್ದಿಗಳು ಹೆಚ್ಚಿನ ಸಮಯದಲ್ಲಿ ಗಮನವನ್ನೇನೋ ಸೆಳೆಯುತ್ತವೆ ಆದರೆ ಉಪಯುಕ್ತ ಮತ್ತು ಮಾಹಿತಿ ಕೊಡುವ ಸುದ್ದಿಯಿಂದ ದೂರವಿರುತ್ತವೆ. ಆದರೂ, ನಿಮ್ಮಲ್ಲಿ ಯಾರಾದರು ಸೋಷಿಯಲ್ ಮೀಡಿಯಾದಿಂದ ಪ್ರಯೋಜನ ಪಡೆದುಕೊಳ್ಳಬೇಕು ಎಂದುಕೊಂಡಿದ್ದರೆ, ಉದಾಹರಣೆಗೆ ಟ್ವಿಟರ್ ನಲ್ಲಿ ನಿಮಗೆ ಬೇಕಾದ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಹುಡುಕಬಹುದಾಗಿದೆ. ಹೇಗೆಂದರೆ, ಟ್ವಿಟರ್‌ನಲ್ಲಿಯ ಬಹಳ ಪ್ರಯೋಜನಕಾರಿಯಾದ ಟೂಲ್ ‘ಲಿಸ್ಟ್ಸ್’ನಿಂದ. ಹೇಗೆಂದರೆ ಲಿಸ್ಟ್ಸ್ ಅನ್ನು ರಚಿಸುವುದರ ಮೂಲಕ ನೀವೇ ಆರಿಸಿದ ವ್ಯಕ್ತಿಗಳ ಟ್ವೀಟ್‌ಗಳನ್ನು ಮಾತ್ರ ನೋಡಬಹುದಾಗಿದೆ. ಇದರಿಂದ ಅನುಪಯುಕ್ತ ಟ್ವೀಟ್‌ಗಳಿಂದ ದೂರವಿರಬಹುದು.
ಕೆಲವು ಸರಳ ಹಂತಗಳನ್ನು ಪಾಲಿಸಿ ಟ್ವಿಟರ್‌ನಲ್ಲಿ ನಿಮ್ಮದೇ ಆದ ಲಿಸ್ಟ್ಸ್ ರಚಿಸಿಕೊಳ್ಳಿ. ಬೇಡದ ಟ್ವಿಟ್‌ಗಳಿಂದ ದೂರವಿರಿ.
ಟ್ವಿಟರ್‌ನಲ್ಲಿ ಲಿಸ್ಟ್ ಕ್ರಿಯೇಟ್ ಮಾಡಲು ಹೀಗೆ ಮಾಡಿ:
- ನಿಮ್ಮ ವೆಬ್ ಬ್ರಾಸರ್‌ನಲ್ಲಿ twitter.com ತೆರೆಯಿರಿ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟ್ವಿಟರ್ ಆಪ್ ಅನ್ನು ತೆರೆಯಿರಿ. ನಿಮ್ಮದೇ ಅಕೌಂಟ್‌ನಲ್ಲಿ ಲಾಗಿನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
- ನೀವು ಸ್ಮಾರ್ಟ್‌ಫೋನ್‌ನಲ್ಲಾದರೆ ನಿಮ್ಮ ಪ್ರೊಫೈಲ್ ಚಿತ್ರದ ಎಡ ಮೂಲೆಯಲ್ಲಿರುವ ಮೆನು ವನ್ನು ಟ್ಯಾಪ್ ಮಾಡುವುದರ ಮೂಲಕ ತೆರೆಯಿರಿ. ಡೆಸ್ಕ್‌ಟಾಪ್ ನಲ್ಲಿಯೂ ಇದೇ ರೀತಿ ಮಾಡಿ.
- ಮೆನ್ಯುದಲ್ಲಿರುವ ಲಿಸ್ಟ್ಸ್ ಆಪ್ಷನ್ ಕ್ಲಿಕ್ಕಿಸಿ.
- ನೀವು ಲಿಸ್ಟ್ಸ್ ಮಾಡಬೇಕಾದ ಪುಟ ತೆರೆಯುವುದು. ಆ ಪುಟದಲ್ಲಿ ಮೂರು ವಿಭಾಗಗಳಿರುತ್ತದೆ. ಪಿನ್ನಡ ಲಿಸ್ಟ್ಸ್, ಡಿಸ್ಕವರ್ ನ್ಯೂ ಲಿಸ್ಟ್ಸ್ ಮತ್ತು ಯುವರ್ ಲಿಸ್ಟ್ಸ್ ಎಂದು.
- ನಿಮ್ಮ ಸ್ಮಾರ್ಟ್‌ಫೊನ್‌ನಲ್ಲಿ ಫ್ಲೋಟಿಂಗ್ ಬಟನ್ ಅನ್ನು ಕೆಳಗಡೆ ಬಲಭಾಗದಲ್ಲಿ ನೋಡಬಹುದು. ಬಟನ್ ಮೇಲಿನ ಐಕಾನ್, ಬಲ ಮೇಲಿನ ತುದಿಯಲ್ಲಿರುವ ಪ್ಲಸ್ ಐಕಾನ್ ತರಹವೇ ಕಾಣಿಸುವುದು. ನಿಮ್ಮ ಡೆಸ್ಕಟಾಪ್‌ನಲ್ಲಾದರೆ ಅದೇ ಐಕಾನ್ ಮಧ್ಯ ಭಾಗದ ಮೇಲಿನ ಬಲ ತುದಿಯಲ್ಲಿ ಕಾಣಿಸುವುದು. ಅದನ್ನು ಕ್ಲಿಕ್ಕಿಸಿ.
- ಈಗ ನೀವು ನಿಮ್ಮ ಲಿಸ್ಟ್‌ಗೆ ಹೆಸರು ಕೊಡಿ. ಅದರಲ್ಲಿ ನೀವು ಡಿಸ್ಕ್ರಿಪ್ಷನ್ ಮತ್ತು ಕವರ್ ಇಮೇಜ್‌ಅನ್ನೂ ಹಾಕಬಹುದಾಗಿದೆ. ನಿಮ್ಮ ಲಿಸ್ಟ್ ಬೇರೆಯವರಿಗೆ ಕಾಣಿಸದಂತೆ ಮಾಡಲು ಪ್ರೈವೇಟ್ ಆಪ್ಷನ್ ಎನೇಬಲ್ ಮಾಡಿ.
- ಮುಂದಿನ ಹಂತ ನಿಮ್ಮ ಲಿಸ್ಟ್‌ಗೆ ವ್ಯಕ್ತಿಗಳನ್ನು ಸೇರಿಸಿ. ಸರ್ಚ್ ಬಾಕ್ಸ್‌ನ ಸಹಾಯದಿಂದ ವ್ಯಕ್ತಿಗಳನ್ನು ಲಿಸ್ಟ್‌ಗೆ ಸೇರಿಸಿಕೊಳ್ಳುತ್ತಾ ಹೋಗಿ.
- ಈಗ ನಿಮ್ಮ ಲಿಸ್ಟ್ ತಯಾರಾಯಿತು. ಮುಂದಿನ ಸಲ ನಿಯಮಿತವಾಗಿ ಮಾಡುತ್ತಿರುವ ಪೋಸ್ಟ್‌ಗಳು ನಿಮ್ಮ ಅಭಿರುಚಿಯದ್ದೇ ಆಗಿದ್ದರೆ ಹಿಂಜರಿಯದೇ ಅವರನ್ನು ಖಂಡಿತ ನಿಮ್ಮ ಲಿಸ್ಟ್ಸ್‌ಗೆ ಸೇರಿಸಿಕೊಳ್ಳಿ.
ನಿಮ್ಮ ಲಿಸ್ಟ್ ತೆರೆಯಲು ಹೀಗೆ ಮಾಡಿ, ಟ್ವಿಟರ್ ಹೋಮ್‌ನಲ್ಲಿರುವ ಬಲಗಡೆಯಲ್ಲಿಯ ಮೆನ್ಯು ಲಿಸ್ಟ್ ತೆರೆಯಿರಿ. ನಿಮಗೆ ಬೇಕಾದ ಮಾಹಿತಿಯನ್ನು ಸಿಲೆಕ್ಟ್ ಮಾಡಿ.
ಇದನ್ನೂ ಓದಿ :WhatsApp Chat Lock : ನಿಮ್ಮ ಮುಖ್ಯವಾದ ವಾಟ್ಸ್‌ಅಪ್‌ನ ಚಾಟ್‌ಗಳನ್ನು ಬೇರೆಯವರು ಓದದಂತೆ ಲಾಕ್ ಮಾಡುವುದು ಹೇಗೆ ಗೊತ್ತೇ?
ಇದನ್ನೂ ಓದಿ : Twitter Article: ಟ್ವಿಟರ್ ಆರ್ಟಿಕಲ್ ಫೀಚರ್; ಉದ್ದ ಪೋಸ್ಟ್ ಟ್ವೀಟ್ ಮಾಡಲು ಸಿಗಲಿದೆ ಅವಕಾಶ
(Cut Noise on Twitter Create a List on Twitter to cut Noise)