Elon Musks : ಉಪಗ್ರಹದಿಂದ ಇಂಟರ್‌ನೆಟ್ ಒದಗಿಸುವ ಸ್ಟಾರ್‌ಲಿಂಕ್ ಭಾರತಕ್ಕೆ! ಇಲ್ಲಿದೆ ಖುಷಿ ಕೊಡುವ ಅಪ್‌ಡೇಟ್

ಜಾಗತಿಕ ಮಟ್ಟದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಕಂಪೆನಿ ಸ್ಟಾರ್‌ಲಿಂಕ್ ಈಗಾಗಲೇ ಹಲವು ದೇಶಗಳಲ್ಲಿ ಜನರ ಮನೆಬಾಗಿಲಿಗೆ ಇಂಟರ್‌ನೆಟ್ ಸೇವೆ ಒದಗಿಸುತ್ತಿದೆ. ಆದರೆ ಭಾರತಕ್ಕೆ ಸ್ಟಾರ್‌ಲಿಂಕ್ ಅಂತರ್ಜಾಲ ಸೇವೆ ( satellite Internet services )ದೊರೆಯುವುದು ಯಾವಾಗ ಎಂಬ ಪ್ರಶ್ನೆಗೆ ಈವರೆಗೂ ನಿರ್ದಿಷ್ಟ ಉತ್ತರ ಸಿಕ್ಕಿಲ್ಲ. ಆದರೆ ಎಲಾನ್ ಮಸ್ಕ್ (Elon Musks) ಅವರ ಸ್ಟಾರ್‌ಲಿಂಕ್ ಉಪಗ್ರಹ ಆಧಾರಿತ ಇಂಟರ್ನೆಟ್ ನೀಡುವ ತನ್ನ ಸೇವೆಯನ್ನು ಭಾರತದಲ್ಲಿ ಒದಗಿಸಲು 2022ರ ಜನವರಿ 31 ಅಥವಾ ಅದಕ್ಕೂ ಮುನ್ನವೇ ಅನುಮತಿಗಾಗಿ ಅರ್ಜಿ ಹಾಕುವುದಾಗಿ ತಿಳಿಸಿದೆ.

ಗಗನ ಮುಟ್ಟಿರುವ ಅಂತರ್ಜಾಲ ಸೇವೆಗಳ ದರ, ಸಮರ್ಪಕ ಸೇವೆ ದೊರೆಯದೇ ಇರುವುದು, ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಇಂಟರ್ನೆಟ್ ಅಥವಾ ಮೊಬೈಲ್ ಸಿಗ್ನಲ್ ಸಹ ಸಿಗದೇ ಇರುವುದು ಇಂತಹ ಅನೇಕಾನೇಕ ಸಮಸ್ಯೆಗಳೇ ಭಾರತದಲ್ಲಿ ಸಂವಹನ ಸಾಧ್ಯತೆಗಳ ಬೆಳವಣಿಗೆಯನ್ನು ಕಡಿಮೆಗೊಳಿಸಿದ್ದವು. ಆದರೆ ಜಿಯೋ ಬಂದಮೇಲೆ ಆದ ಕ್ರಾಂತಿಕಾರಿ ಬೆಳವಣಿಗೆಗಳು ಅಂತರ್ಜಾಲ ಬಳಕೆಯ ಮಟ್ಟವನ್ನು ವೇಗವಾಗಿ ಬೆಳೆಸಿದವು. ಇದಕ್ಕೂ ಮಿರಿ ಉಪಗ್ರಹದಿಂದ ನೇರವಾಗಿ ಟೆಲಿವಿಶನ್ ಸಿಗ್ನಲ್‌ನಂತೆ ಇಂಟರ್ನೆಟ್ ಇಳಿದುಬರುವ ಕಾಲಕ್ಕಾಗಿ ಕಾಯುತ್ತಿರುವ ಭಾರತೀಯರಿಗೆ ಒಳ್ಳೆ ಸುದ್ದಿಯೊಂದು ಸಿಕ್ಕಿದೆ.  

ಮುಂದಿನ ವರ್ಷದ ಅತ್ಯದೊಳಗೆ ಇಡೀ ಭಾರತದಲ್ಲಿ ಸುಮಾರು ಎರಡು ಲಕ್ಷ ಸ್ಟಾರ್‌ಲಿಂಕ್ ಡಿವೈಸ್‌ಗಳನ್ನು ಸ್ಥಾಪಿಸಲು ಸ್ಟಾರ್‌ಲಿಂಕ್ ಯೋಜನೆ ರೂಪಿಸಿದೆ. ಈಕುರಿತು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿರುವ ಸ್ಟಾರ್‌ಲಿಂಕ್‌ನ ಭಾರತ ವಿಭಾಗದ ಮುಖ್ಯಸ್ಥ ಸಂಜಯ್ ಭಾರ್ಗವ್, ಭಾರತದ ಗ್ರಾಮೀಣ ಭಾಗಗಳನ್ನೇ ಹೆಚ್ಚು ಫೋಕಸ್ ಮಾಡುವುದಾಗಿ ತಿಳಿಸಿದ್ದಾರೆ.

ಅಲ್ಲದೇ ಅನುಮತಿ ಪಡೆದುಕೊಂಡ ನಂತರ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನದೇ ಬ್ಯಾಂಕ್ ಖಾತೆಗಳನ್ನು ತೆರಯಬಹುದು, ವ್ಯವಹಾರ ನಡೆಸಬಹುದು. ಈಗಾಗಲೇ ಸ್ಟಾರ್‌ಲಿಂಕ್ ಸೇವೆಗಳಿಗಾಗಿ ಭಾರತದಿಂದ ಐದು ಸಾವಿರ ಮುಂಚಿತ ಆರ್ಡರ್‌ಗಳು ತಮಗೆ ಬಂದಿದೆ ಎಂದು ಸಹ ಸಂಜಯ್ ಭಾರ್ಗವ್ ತಿಳಿಸಿದ್ದಾರೆ. ಆದರೆ ಸದ್ಯ ಅದು ಭಾರತದ ಗ್ರಾಹಕರಿಂದ ಯಾವುದೇ ಆರ್ಡರ್‌ಗಳನ್ನು ಪಡೆಯುತ್ತಿಲ್ಲ. ಕಾರಣ ಭಾರತದಲ್ಲಿ ಕಾರ್ಯನಿರ್ವಹಿಸಲು ಸ್ಟಾರ್‌ಲಿಂಕ್ ಪರವಾನಗಿ ಹೊಂದಿಲ್ಲ ಎಂಬುದೇ ಆಗಿದೆ ಜೊತೆಗೆ ಕೇಂದ್ರ ಸರ್ಕಾರವು ಕಳೆದ ವಾರವಷ್ಟೇ ಸ್ಟಾರ್‌ಲಿಂಕ್‌ಗೆ ಸದ್ಯ ಚಂದಾದಾರರಾಗಬೇಡಿ ಎಂದು ಜನರಿಗೆ ಸಲಹೆ ನೀಡಿತ್ತು. ಪರವಾನಗಿ ಇಲ್ಲದೇ ಬುಕ್ಕಿಂಗ್ ಮತ್ತು ಸೇವೆಗಳನ್ನು ನೀಡುವುದನ್ನು ತಡೆಯಲು ಸ್ಟಾರ್‌ಲಿಂಕ್ ಕಂಪನಿಗೆ ಆದೇಶಿಸಿದೆ.

ಇದನ್ನೂ ಓದಿ: UPI : ಇಂಟರ್‌ನೆಟ್‌ ಇಲ್ಲದೇ ಮಾಡಬಹುದು ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಯುಪಿಐ ವಹಿವಾಟು

(Elon Musks Starlink to apply for license to offer satellite Internet services in India January 2022)

Comments are closed.