Poco M3 battery explodes : ಪೋಕೊ M3 ಸ್ಮಾರ್ಟ್‌ಫೋನ್ ಸ್ಫೋಟದ ಸ್ಫೋಟಕ ಸುದ್ದಿಯಿದು

ಸ್ಮಾರ್ಟ್‌ಫೋನ್‌ಗಳು ಹೀಟ್ ಆಗುವುದು ಮತ್ತು ಸ್ಫೋಟವಾಗುವುದು ಹೊಸದೇನಲ್ಲ. ಇದೀಗ ಇಂತಹ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಇನ್ನೊಂದು ಸೇರ್ಪಡೆಯಾಗಿದೆ. ಅದುವೇ ಪೋಕೊ M3 ಸ್ಮಾರ್ಟ್‌ಫೋನ್ ( Poco M3 battery explodes ).  ಟ್ವಿಟರ್‌ನಲ್ಲಿ  ಪೋಕೊ M3 ಸ್ಮಾರ್ಟ್‌ಫೋನ್ ಬಳಕೆದಾರರೊಬ್ಬರು (@Mahesh08716488)ತಮ್ಮ ಡಿವೈಸ್ ಸ್ಪೋಟಗೊಂಡಿರುವುದನ್ನು ಹಂಚಿಕೊಂಡಿದ್ದಾರೆ. ಆದರೆ ಸ್ಮಾರ್ಟ್‌ಫೋನ್ ಸ್ಫೋಟಗೊಂಡ ಕಾರಣವನ್ನು ಅವರು ಹಂಚಿಕೊಂಡಿಲ್ಲ, ಅಲ್ಲದೇ ಕೆಲ ಸಮಯದ ನಂತರ ಅವರ ಟ್ವೀಟ್ ಡಿಲೀಟ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಆದರೆ ಟ್ವೀಟ್ ಡಿಲೀಟ್ ಆಗುವ ಮುನ್ನವೇ ಪೋಕೊ ಕಂಪೆನಿ ಈ ಸಮಸ್ಯೆಯ ಕುರಿತು ಪ್ರತಿಕ್ರಿಯೆ ನೀಡಿದೆ. ಪೊಕೋ ಬಳಕೆದಾರರ ಸುರಕ್ಷತೆಯ ಕುರಿತು ನಾವು ಅಗತ್ಯವಿರುವ ಎಲ್ಲ ಗಮನ ನೀಡುತ್ತೇವೆ. ಗ್ರಾಹಕರ ಸುರಕ್ಷತಯೇ ನಮ್ಮ ಆದ್ಯತೆ.  ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಕಂಪೆನಿ ಪ್ರತಿಕ್ರಿಯಿಸಿದೆ. ಅಲ್ಲದೇ ಆಂಗ್ಲ ಜಾಲತಾಣ ವೊಂದಕ್ಕೆ ಪ್ರತಿಕ್ರಿಯಿಸಿದ ಪೋಕೊ ಕಂಪನಿಯ ಮಾಧ್ಯಮ ವಕ್ತಾರರು ಪೋಕೊ M3 ಸ್ಮಾರ್ಟ್‌ಫೋನ್ ಸ್ಪೋಟಗೊಂಡಿದೆ ಎಂದು ಟ್ವೀಟ್ ಮಾಡಿರುವ ಬಳಕೆದಾರರನ್ನು ಸಂಪರ್ಕಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರು ನಮ್ಮ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡಿದರೆ ನಿಜವಾಗಿಯೂ ಸ್ಪೋಟ ಹೇಗೆ ಸಂಭವಿಸಿದೆ ಎಂಬುದು ತಿಳಿಯಲಿದೆ ಎಂದು ಹೇಳಿದ್ದಾರೆ.

ಜೊತೆಗೆ ಮುಂದುವರೆದು ಹೇಳಿರುವ ಅವರು, ಪೋಕೊ ಕಂಪನಿಯ ಎಲ್ಲ ಸ್ಮಾರ್ಟ್‌ಫೋನ್ ಮತ್ತು ಡಿವೈಸ್‌ಗಳನ್ನು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ನಡೆಸಿಯೇ ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಉತ್ಪನ್ನಗಳು ಸ್ಫೋಟದಂತಹ ಗಂಭೀರ ಪ್ರಕರಣಗಳು ಘಟಿಸಲು ಸಾಧ್ಯವೇ ಇಲ್ಲ ಎಂದು ಸಹ ಅವರು ಸ್ಪಷ್ಟನೆ ನೀಡಿದ್ದಾರೆ. ಸ್ಪೋಟದ ನಿಜವಾದ ಕಾರಣವನ್ನು ತಿಳಿಯಲು ಸಹ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: Elon Musk: ಉಪಗ್ರಹದಿಂದ ಇಂಟರ್‌ನೆಟ್ ಒದಗಿಸುವ ಸ್ಟಾರ್‌ಲಿಂಕ್ ಭಾರತಕ್ಕೆ! ಇಲ್ಲಿದೆ ಖುಷಿ ಕೊಡುವ ಅಪ್‌ಡೇಟ್

ಇತ್ತೀಚಿಗಷ್ಟೇ OnePlus Nord 2 ಸ್ಮಾರ್ಟ್‌ಫೋನ್‌ನ ಹಲವು ಬಳಕೆದಾರರು ಸ್ಪೋಟಗೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಪೋಕೊ M3 ಬಳಕೆದಾರರೂ ಸಹ ತಮ್ಮ ಸ್ಮಾರ್ಟ್‌ಫೋನ್ ಸ್ಪೋಟಗೊಂಡಿರುವ ಕುರಿತು ಹಂಚಿಕೊಂಡಿರುವುದು ಭಯ ಹುಟ್ಟಿಸಿದೆ ಎಂದು ಸಹ ಇನ್ನೋರ್ವ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಪೋಕೊದ M3 ಮಾತ್ರವಲ್ಲದೇ ಪೋಕೋ X3 ಸ್ಮಾರ್ಟ್‌ಫೋನ್ ಮಾಡೆಲ್ ಸಹ ಇಂತಹುದೇ ಕಾರಣಕ್ಕೆ ಈಮುನ್ನ ಸುದ್ದಿಯಾಗಿತ್ತು. ಹಲವು ಬಳಕೆದಾರರು ಸ್ಮಾರ್ಟ್‌ಫೋನ್ ಸ್ಪೋಟಗೊಂಡಿರುವುದಾಗಿ ಹೇಳಿಕೊಂಡಿದ್ದರು. ಚೀನಾಮೂಲದ ಕಂಪನಿಯಾಗಿರುವ ಪೋಕೊ ಸ್ಮಾರ್ಟ್‌ಫೋನ್‌ನ ಕೆಲವು ಮಾಡೆಲ್‌ಗಳು ಹೀಗೆ ಸ್ಪೋಟಗೊಳ್ಳುತ್ತಿರುವ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಲೇ ಇರುವುದು ಆತಂಕಕ್ಕೂ ಕಾರಣವಾಗಿದೆ. ಆದರೆ ಪೋಕೋ ಕಂಪನಿ ಮಾತ್ರ ಈ ಎಲ್ಲ ಸ್ಪೋಟಕ ಸುದ್ದಿಗಳನ್ನು ನಿರಾಕರಿಸುತ್ತಲೆ ಬಂದಿದೆ.

ಇದನ್ನೂ ಓದಿ : Micro-camera : ಉಪ್ಪಿನ ಕಣದ ಗಾತ್ರದ ಕ್ಯಾಮರಾ ಅನ್ವೇಷಿಸಿದ ವಿಜ್ಞಾನಿಗಳು..!

ಇದನ್ನೂ ಓದಿ : Work from Home : ಓಮಿಕ್ರಾನ್‌ ಆರ್ಭಟ : ಐಟಿ ಕಂಪೆನಿ ಉದ್ಯೋಗಿಗಳಿಗೆ ಮತ್ತೆ ವರ್ಕ್‌ ಫ್ರಂ ಹೋಮ್‌

(Poco M3 battery explodes user shared video in twitter company says investigating goes on)

Comments are closed.