Rohith Chakrathirtha : ರೋಹಿತ್ ಚಕ್ರತೀರ್ಥಗೆ ಭಾರಿ ಹಿನ್ನಡೆ : ಪಠ್ಯಪುಸ್ತಕ ಸಮಿತಿ ವಿಸರ್ಜಿಸಿದ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ತಾರಕಕ್ಕೇರಿದ ಪಠ್ಯಪುಸ್ತಕ ವಿವಾದ ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ಎಲ್ಲ ಒತ್ತಡ, ವಿವಾದದ (textbook Controversy) ಬಳಿಕ ಪಠ್ಯಪುಸ್ತಕ ಸಮಿತಿಯನ್ನೇ ವಿಸರ್ಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಂಜೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಿಎಂ ಬೊಮ್ಮಾಯಿ ಅವರನ್ನು ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಸಿಎಂ ಶಿಕ್ಷಣ ಸಚಿವರ ಭೇಟಿ ಮತ್ತು ಮಾತುಕತೆ ಬಳಿಕ ರೋಹಿತ್‌ ಚಕ್ರತೀರ್ಥ (Rohith Chakrathirtha ) ನೇತೃತ್ವದ ಪಠ್ಯಸಮಿತಿ ವಿಸರ್ಜನೆ ಆದೇಶ ಹೊರಬಿದ್ದಿದೆ.

ಕೇವಲ ಸಮಿತಿ ವಿಸರ್ಜನೆ ಮಾತ್ರವಲ್ಲದೇ ಇನ್ನೂ ಹಲವು ಮಹತ್ವದ ನಿರ್ಣಯಗಳನ್ನು ಸರ್ಕಾರ ಕೈಗೊಂಡಿದೆ. ಸರ್ಕಾರ ಕೈಗೊಂಡಿರುವ ನಿರ್ಣಯಗಳು ಏನು ಅನ್ನೋದನ್ನು ನೋಡೋದಾದರೇ,

textbook Controversy Rohith Chakrathirtha committee disbanded by Government
  1. ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿರುವುದರಿಂದ ಸಮಿತಿ ವಿಸರ್ಜನೆ
  2. ಪ್ರಸ್ತುತ ಪಠ್ಯದಲ್ಲಿ ಮತ್ತೆ ಪರಿಷ್ಕರಣೆ ಇದ್ದರೆ ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ. ಬಸವಣ್ಣ ಪಠ್ಯ ಪರಿಷ್ಕರಣೆ ನಿರ್ಧಾರ.
  3. ಕುವೆಂಪು ನಾಡಗೀತೆ ಆಕ್ಷೇಪಾರ್ಹ ವಿಕೃತಗೊಳಿಸಿದ ಪಠ್ಯ ಉಲ್ಲೇಖವಾಗಿಲ್ಲ. ಇದರ ಮೂಲ ಕವನ ಬರೆದ ವ್ಯಕ್ತಿಗಳ ಬಗ್ಗೆ ಸರ್ಕಾರ ಕ್ರಮ
  4. ಬರಗೂರು ಸಮಿತಿಗಿಂತ ಈಗಿನ ಸಮಿತಿ ಕುವೆಂಪು ಅವರ ಗದ್ಯ, ಪದ್ಯವನ್ನು ಇನ್ನೂ ಮೂರು ಏರಿಕೆ ಮಾಡಿದೆ. ಮೊದಲು ಏಳು ಇತ್ತು. ಈಗ 10ಕ್ಕೆ ಏರಿಕೆ.
  5. ನಾಡಪ್ರಭು ಕೆಂಪೇಗೌಡ ಪಠ್ಯವನ್ನು ಸೇರ್ಪಡೆ
  6. ಇಸ್ಲಾಂ, ಕ್ರೈಸ್ತ ಧರ್ಮದ ಪರಿಚಯದ ಜೊತೆ ಹಿಂದೂ ಧರ್ಮ ವಿಷಯ ಸೇರ್ಪಡೆ

ಈ ವಿಚಾರದ ಬಗ್ಗೆ ಸಿಎಂ ಭೇಟಿ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ರಾಜ್ಯದಲ್ಲಿ ಅನೇಕ ಬಾರಿ ಪಠ್ಯ ಪರಿಷ್ಕರಣೆ ಆಗಿದೆ.ಆಗೆಲ್ಲ ವಿರೋಧ ವ್ಯಕ್ತವಾಗಿದೆ
ಬರಗೂರು ಸಮಿತಿ ಬಗ್ಗೆ ಆಕ್ಷೇಪ ಬಂದಾಗ ಹೊಸ ಸಮಿತಿ ರಚನೆ ಮಾಡಲಾಯಿತು. ಸರ್ಕಾರ ವರದಿಯನ್ನು ಪಡೆದು ಪುಸ್ತಕ ಪ್ರಿಂಟ್ ಮಾಡಿ ಹಲವು ಜಿಲ್ಲೆಗಳಿಗೆ ಈಗಾಗಲೇ ಕಳುಹಿಸಲಾಗಿದೆ. ಹಿಂದಿನ ಸರ್ಕಾರದ ಬರಗೂರು ರಾಮಚಂದ್ರ ಸಮಿತಿಯಲ್ಲಿ ಬಸವಣ್ಣ ಪಾಠ ಪರಿಷ್ಕರಣೆಯಾಗಿತ್ತು. ಇಂದಿನ ಸಮಿತಿ ಕೂಡ ಅದನ್ನ ಮುಂದುವರೆಸಿತ್ತು, ಆದರೆ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ಕೆಲ ಸ್ವಾಮೀಜಿಗಳ ಬಸವಣ್ಣನ ಪಠ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

textbook Controversy Rohith Chakrathirtha committee disbanded by Government

ಹೀಗಾಗಿ ಬಸವಣ್ಣನ ಪಠ್ಯವನ್ನ ಯಾರ ಭಾವನೆಗೂ ದಕ್ಕೆಯಾಗದಂತೆ ಪರಿಷ್ಕರಣೆ ಮಾಡಲಾಗುವುದು. ನಾಡಗೀತೆ ಬಗ್ಗೆ ಅವಹೇಳಕಾರಿಯಾಗಿ ಬರೆದವರ ಬಗ್ಗೆ ತನಿಖೆಗಾಗಿ ಸೈಬರ್ ಕ್ರೈಂ ತಿಳಿಸಲಾಗಿದೆ. ನಾರಾಯಣ ಗುರು, ಭಗತ್ ಸಿಂಗ್ ಪಾಠ ಬಿಟ್ಟಿಲ್ಲ. ರಾಷ್ಟ್ರ ಕವಿ ಕುವೆಂಪಯರವರ ಪಠ್ಯದಲ್ಲಿ ಹಿಂದರ ೮ ಇದ್ದನ್ನ ೭ ಮಾಡಲಾಗಿತ್ತು. ನಾವು 7 ರಿಂದ 10 ಮಾಡಿದ್ದೇವೆ. ನಾಡಪ್ರಭು ಕೆಂಪೆಗೌಡರ ಪಠ್ಯ ಸೇರಿಸಲಾಗಿದೆ. ಪ್ರಸಕ್ತ ಪಠ್ಯ ಪರಿಷ್ಕರಣೆ ಮುಗಿದಿರುವದರಿಂದ ಪ್ರಸ್ತುತ ಸಮಿತಿಯನ್ನ ವಿಸರ್ಜಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : Karnataka CET 2022 Hall Ticket  : ಸಿಇಟಿ ಹಾಲ್ ಟಿಕೆಟ್ ಬಿಡುಗಡೆ : ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : Dalit cm in Karnataka : ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಲ್ಲಾ : ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಮುಂದಿನ ಸಿಎಂ

textbook Controversy Rohith Chakrathirtha committee disbanded by Government

Comments are closed.