ಸೋಮವಾರ, ಏಪ್ರಿಲ್ 28, 2025
HometechnologyFacebook Messenger Update: ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಹೊಸ ಅಪ್‌ಡೇಟ್; ಸ್ಕ್ರೀನ್‌ಶಾಟ್ ತೆಗೆದರೆ ಥಟ್ಟನೆ ಗೊತ್ತಾಗುತ್ತೆ!

Facebook Messenger Update: ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಹೊಸ ಅಪ್‌ಡೇಟ್; ಸ್ಕ್ರೀನ್‌ಶಾಟ್ ತೆಗೆದರೆ ಥಟ್ಟನೆ ಗೊತ್ತಾಗುತ್ತೆ!

- Advertisement -

ಫೇಸ್‌ಬುಕ್ ಮೆಸೆಂಜರ್‌ನಲ್ಲಿ (Facebook Messenger Update) ಹೊಸದೊಂದು ಅಪ್‌ಡೇಟ್ ಮಾಡಲಾಗಿದೆ.  ಸೀಕ್ರೆಟ್ ಮೆಸೇಜ್ ಫೀಚರ್‌ನಲ್ಲಿ ಹೊದೊಂದು ಅಪ್‌ಡೇಟ್ ನವೀಕರಿಸಲಾಗಿದೆ. ಇದು ಬಳಕೆದಾರರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ (E2EE) ಸಂವಹನ ಮಾಡುವ ಅವಕಾಶ ನೀಡುತ್ತದೆ.  ಮೆಸೆಂಜರ್ ಒಳಗೆ ಸ್ಕ್ರೀನ್‌ಶಾಟ್‌ಗಳನ್ನು ತೆಗೆದರೆ ಬಳಕೆದಾರರಿಗೆ ತಿಳಿಸುತ್ತದೆ. ಇದು ಈಗ ಮೆಸೇಜ್ ರಿಯಾಕ್ಷನ್, ಜಿಐಎಫ್‌ಗಳು ಮತ್ತು ಸ್ಟಿಕ್ಕರ್‌ಗಳಂತಹ ಸಾಮಾನ್ಯ ಸಂಭಾಷಣೆಗಳನ್ನು ಸಹ ಸಪೋರ್ಟ್ ಮಾಡುತ್ತದೆ.

ಸೀಕ್ರೆಟ್ ಚಾಟ್‌ಗಳಲ್ಲಿ  ಸಂದೇಶಗಳಿಗೆ ಪ್ರತ್ಯುತ್ತರಿಸಲು ಮತ್ತು ಇತರ ಸಂಭಾಷಣೆಗಳಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡಲು ಬಳಕೆದಾರರು ಸ್ವೈಪ್ ಮಾಡಲು ಸಾಧ್ಯವಾಗುತ್ತದೆ. ಕಂಪನಿಯ ಪ್ರಕಾರ ಬಳಕೆದಾರರು ಮೆಸೆಂಜರ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಗ್ರೂಪ್ ಚಾಟ್‌ಗಳು ಮತ್ತು ಕಾಲ್ಸ್ ಮಾಡಬಹುದು. ಇನ್ನು ಮುಂದೆ  ರಿಸಿವರ್ಸ್ ಸಂಭಾಷಣೆಯ ಸ್ಕ್ರೀನ್‌ಶಾಟ್ ತೆಗೆದುಕೊಂಡಾಗ ಮೆಸೇಜ್ ಕಳುಹಿಸಿದ ವ್ಯಕ್ತಿಗೆ ಎಚ್ಚರಿಕೆ ನೀಡುವ ಸಾಮರ್ಥ್ಯದೊಂದಿಗೆ ಮೆಸೆಂಜರ್‌ನ ಸೀಕ್ರೆಟ್ ಚಾಟ್ ವೈಶಿಷ್ಟ್ಯವನ್ನು ನವೀಕರಿಸಲಾಗಿದೆ ಎಂದು ಕಂಪನಿಯು ಗುರುವಾರ ಹೇಳಿದೆ.

ಈ ವೈಶಿಷ್ಟ್ಯವನ್ನು ಹಿಂದೆ ವ್ಯಾನಿಶ್ ಮೋಡ್‌ನಲ್ಲಿ ನೀಡಲಾಗಿತ್ತು ಮತ್ತು ಕಂಪನಿಯ ಪ್ರಕಾರ,  ವನಿಷ್ ಸಂದೇಶಗಳನ್ನು ಸಕ್ರಿಯಗೊಳಿಸಿದ ಎಲ್ಲಾ ಸೀಕ್ರೆಟ್ ಚಾಟ್ಸ್  ಹೊರತರುತ್ತದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ತಮ್ಮ ಪತ್ನಿ ಪ್ರಿಸ್ಸಿಲ್ಲಾ ಚೆನ್ ಅವರೊಂದಿಗೆ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮೆಸೆಂಜರ್ 2022 ರಲ್ಲಿ( E2EE)  ಅನ್ನು ಡೀಫಾಲ್ಟ್ ಆಗಿ ಆನ್ ಮಾಡಲು ಯೋಜಿಸಿತ್ತು, ಆದರೆ ಕಂಪನಿಯು 2023 ಕ್ಕೆ ವಿಳಂಬವಾಗಿದೆ ಎಂದು ಕೆಲವು ತಿಂಗಳ ಹಿಂದೆ ಘೋಷಿಸಿತು.

ಭದ್ರತೆ ಮತ್ತು ಗೌಪ್ಯತೆ ತಜ್ಞರು ಪ್ರಬಲವಾದ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಪರವಾಗಿ ವಾದಿಸಿದರೂ,  ಇಂಗ್ಲೆಂಡ್ ಸರ್ಕಾರ, ಮಕ್ಕಳ ಪರ ಗುಂಪುಗಳು ಮತ್ತು ಇಂಟರ್‌ಪೋಲ್‌ನಂತಹ ಕಾನೂನು ಜಾರಿ ಸಂಸ್ಥೆಗಳಿಂದ  ಮೆಟಾ ಒತ್ತಡವನ್ನು ಎದುರಿಸುತ್ತಿದೆ. ಫೇಸ್‌ಬುಕ್ ಮೆಸೆಂಜರ್ ಎನ್‌ಕ್ರಿಪ್ಶನ್‌ಗಾಗಿ ವ್ಯಾಪಕವಾಗಿ ಬಳಸಲಾಗುವ ಸಿಗ್ನಲ್ ಪ್ರೋಟೋಕಾಲ್ ಅನ್ನು ಬಳಸುತ್ತದೆ, ಇದನ್ನು ವಾಟ್ಸಾಪ್ ಮೆಸೆಂಜರ್‌ನಲ್ಲಿಯೂ ಬಳಸಲಾಗುತ್ತದೆ.

ಸೀಕ್ರೆಟ್ ಚಾಟ್ ಗಳಲ್ಲಿ ಸಂದೇಶಗಳನ್ನು ಫಾರ್ವರ್ಡ್ ಮಾಡುವ ಸಾಮರ್ಥ್ಯವನ್ನು ಸಹ ಮೆಸೆಂಜರ್ ಸೇರಿಸಿದೆ. ಈ ಎರಡೂ ವೈಶಿಷ್ಟ್ಯಗಳು ಈ ಹಿಂದೆ ಸೆಕ್ಯೂರ್ಡ್ ಚಾಟ್ ವೈಶಿಷ್ಟ್ಯದ ಹೊರಗೆ ಲಭ್ಯವಿದ್ದವು. ಬಳಕೆದಾರರು ವಿಷಯದ ಮೇಲೆ ಸೀಕ್ರೆಟ್ ಚಾಟ್ ಗಳಲ್ಲಿ  ಕಳುಹಿಸಲಾದ ವೀಡಿಯೊಗಳು ಮತ್ತು ಚಿತ್ರಗಳನ್ನು ಸೇವ್ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Nokia G21: ನೋಕಿಯಾದ ಹೊಸ ಸ್ಮಾರ್ಟ್‌ಫೋನ್ ಜಿ21; 50-ಮೆಗಾಪಿಕ್ಸೆಲ್ ಕ್ಯಾಮೆರಾ, ಫೆಬ್ರವರಿಯಲ್ಲಿ ಬಿಡುಗಡೆ

ಇದನ್ನೂ ಓದಿ: Micromax In Note 2: ಮೈಕ್ರೊಮ್ಯಾಕ್ಸ್ ಇನ್ ನೋಟ್ 2 ಬಿಡುಗಡೆ; ರೂ 13,490 ಕ್ಕೆ ಉತ್ತಮ ಸ್ವದೇಶಿ ಫೋನ್

(Facebook Messenger Update Adds Screenshot Alerts GIF Stickers Reactions More to Secret Conversations)

RELATED ARTICLES

Most Popular