PUBG Addiction: ತಾಯಿ , ಒಡಹುಟ್ಟಿದವರ ಮೇಲೆಯೇ ಗುಂಡು ಹಾರಿಸಿದ 14ರ ಬಾಲಕ

PUBG Addiction: ಆನ್​ಲೈನ್​ ಗೇಮ್​​ ಪಬ್​ಜಿ ದಾಸನಾಗಿದ್ದ 14 ವರ್ಷದ ಬಾಲಕನೊಬ್ಬ ತನ್ನ ತಾಯಿ, ಇಬ್ಬರು ಸಹೋದರಿಯರು ಸೇರಿದಂತೆ ಸಂಪೂರ್ಣ ಕುಟುಂಬವನ್ನು ಗುಂಡುಹಾರಿಸಿ ಕೊಲೆಮಾಡಿದಂತಹ ಬೆಚ್ಚಿ ಬೀಳಿಸುವ ಘಟನೆಯು ಪಾಕಿಸ್ತಾನದಲ್ಲಿ ವರದಿಯಾಗಿದೆ.


ಕಳೆದ ವಾರ ಲಾಹೋರ್​ನ ಕನ್ನಾ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ 45 ವರ್ಷದ ಆರೋಗ್ಯ ಕಾರ್ಯಕರ್ತೆ ನಹೀದ್​ ಮುಬಾರಕ್​ ತನ್ನ 22 ವರ್ಷದ ಪುತ್ರ ತೈಮೂರ್​ ಹಾಗೂ 17 & 11 ವರ್ಷದ ಇಬ್ಬರು ಹೆಣ್ಣು ಮಕ್ಕಳ ಜೊತೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇಡೀ ಕುಟುಂಬದಲ್ಲಿ 14 ವರ್ಷದ ಬಾಲಕ ಮಾತ್ರ ಗಾಯಗೊಳ್ಳದೇ ಉಳಿದಿದ್ದ ಎನ್ನಲಾಗಿದೆ.ಹಾಗೂ ಈತನೇ ಕೊಲೆಗಾರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಬ್​ ಜಿ ಗೇಮ್​ ದಾಸನಾಗಿದ್ದ ಬಾಲಕ ಆಟದಿಂದ ಪ್ರಭಾವಕ್ಕೊಳಗಾಗಿ ತನ್ನ ತಾಯಿ ಹಾಗೂ ಒಡಹುಟ್ಟಿದವರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತ ದಿನದಲ್ಲಿ ಹೆಚ್ಚಿನ ಸಮಯವನ್ನು ಆನ್​ಲೈನ್​ ಆಟದಲ್ಲಿಯೇ ಕಳೆಯುತ್ತಿದ್ದ. ಹೀಗಾಗಿ ಈತನಿಗೆ ಮಾನಸಿಕವಾಗಿ ಅರೋಗ್ಯ ಕೂಡ ಸ್ಥಿಮಿತದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.


ನಹೀದ್​ ಮುಬಾರಕ್​​ ವಿಚ್ಚೇದಿತ ಮಹಿಳೆಯಾಗಿದ್ದು ಓದಿನ ಕಡೆಗೆ ಗಮನ ಹರಿಸದೇ ಇಡೀ ದಿನ ಪಬ್​ ಜಿ ಆಡುತ್ತಿದ್ದ ಪುತ್ರನಿಗೆ ಅನೇಕ ಬಾರಿ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಈ ಕೃತ್ಯ ನಡೆಯುವ ದಿನದಂದೂ ಪಬ್​ ಜಿ ಆಡುತ್ತಿದ್ದ ಮಗನಿಗೆ ನಹೀದ್ ಮುಬಾರಕ್​ ಗದರಿದ್ದರು. ಇದಕ್ಕೆ ಕೋಪಗೊಂಡ ಬಾಲಕ ಕಬೋರ್ಡ್​ನಲ್ಲಿದ್ದ ತಾಯಿಯ ಪಿಸ್ತೂಲ್​ನ್ನು ತೆಗೆದು ತನ್ನ ತಾಯಿ ಹಾಗೂ ಮೂವರು ಒಡಹುಟ್ಟಿದವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.


ಮಲಗಿದ್ದ ವೇಳೆಯಲ್ಲಿ ನಾಲ್ವರನ್ನು ಕೊಲೆ ಮಾಡಿದ್ದ ಬಾಲಕ ಬೆಳಗ್ಗೆ ಅಕ್ಕಪಕ್ಕದ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅಲ್ಲದೇ ನಾನು ಮನೆಯ ಮಹಡಿಯಲ್ಲಿದ್ದೆ. ಈ ಕೃತ್ಯ ಎಸಗಿದವರು ಯಾರೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದ . ನಹೀದ್​ ತಮ್ಮ ಕುಟುಂಬದ ಭದ್ರತೆಗಾಗಿ ಪರವಾನಿಗಿ ಹೊಂದಿದ ಪಿಸ್ತೂಲ್​ ಖರೀದಿಸಿದ್ದರು. ಆದರೆ ಈ ಕೃತ್ಯದ ಬಳಿಕ ಬಾಲಕ ಪಿಸ್ತೂಲ್​ನ್ನು ಚರಂಡಿಗೆ ಎಸದಿದ್ದ ಎನ್ನಲಾಗಿದೆ. ಇಲ್ಲಿಯವರೆಗೂ ಆ ಪಿಸ್ತೂಲ್​ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

PUBG Addiction: 14-year-old Boy Shoots Entire Family Dead

ಇದನ್ನು ಓದಿ : no night curfew : ಜನವರಿ 31ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ರದ್ದು : ಶಾಲೆಗಳು ಪುನಾರಂಭ

ಇದನ್ನೂ ಓದಿ :bs yediyurappa grand daughter soundarya : ಸೌಂದರ್ಯ ಆತ್ಮಹತ್ಯೆ ಪ್ರಕರಣ: ನಿಜಕ್ಕೂ ಅಪಾರ್ಟ್​ಮೆಂಟ್​ನಲ್ಲಿ ನಡೆದದ್ದೇನು..?ಇಲ್ಲಿದೆ ಡಿಟೈಲ್ಸ್​

Comments are closed.