Fire-Boltt Smartwatch : ಮೂರು ಬಜೆಟ್‌ ಫ್ರೆಂಡ್ಲೀ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಫೈರ್‌–ಬೋಲ್ಟ್‌; ಫಿಟ್ನೆಸ್‌ ಪ್ರಿಯರಿಗೆ ಇದು ಬೆಸ್ಟ್‌ ವಾಚ್‌

ಇತ್ತೀಚೆಗೆ ಎಲ್ಲರ ಕೈಯಲ್ಲೂ ಸ್ಮಾರ್ಟ್‌ವಾಚ್‌ (Smartwatch) ಇರುವುದೇ ಟ್ರೆಂಡ್‌ ಆಗಿದೆ. ಇದರ ಕ್ರೇಜ್‌ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ಹೆಚ್ಚಾಗಿ ಬಜೆಟ್‌ ಶ್ರೇಣಿಯ ಸ್ಮಾರ್ಟ್‌ವಾಚ್‌ಗಳನ್ನು ಭಾರತದಲ್ಲಿ ಖರೀದಿಸಲಾಗುತ್ತದೆ. ಹಾಗಾಗಿ ಸ್ಮಾರ್ಟ್‌ವಾಚ್‌ ತಯಾರಿಕಾ ಬ್ರ್ಯಾಂಡ್‌, ಫೈರ್‌ ಬೋಲ್ಟ್‌ (Fire-Boltt Smartwatch) 3 ಹೊಸ ಸ್ಮಾರ್ಟ್‌ವಾಚ್‌ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಬೋಲ್ಟ್ ಸ್ಯಾಟರ್ನ್, ಫೈರ್-ಬೋಲ್ಟ್ ಟಾಕ್ 3 ಮತ್ತು ಫೈರ್-ಬೋಲ್ಟ್ ನಿಂಜಾ-ಫಿಟ್ ಅನ್ನುವ 3 ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ. ಅದು 120 ಸ್ಪೋರ್ಟ್‌ ಮಾಡ್ಯುಲ್‌ಗಳನ್ನು ಹೊಂದಿದ್ದು ಅದರಲ್ಲಿ ಪ್ರಮುಖವಾಗಿ ರನ್ನಿಂಗ್‌, ಸ್ಪಿಮ್ಮಿಂಗ್‌, ಸೈಕ್ಲಿಂಗ್‌, ಹಾರ್ಟ್‌ ರೇಟ್‌, ಬ್ಲಡ್‌ ಆಕ್ಸಿಜನ್‌ ಲೆವಲ್‌ ಸೆನ್ಸಾರ್‌ ಮುಂತಾದ ಆರೋಗ್ಯ ಸಂಬಂಧಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಗೂಗಲ್‌ ಅಸಿಸ್ಟಂಟ್‌ ಮತ್ತು ಸಿರಿ ಯಂತಹ AI ವಾಯ್ಸ್‌ ಅಸಿಸ್ಟಂಟ್‌ಗಳನ್ನು ಬೆಂಬಲಿಸಲಿದೆ. ಜೊತೆಗೆ ಇದು ಹವಾಮಾನ, ಆಟ, ರಿಮೈಂಡರ್ಸ್‌ ಮತ್ತು ಸಂಗೀತ ಮುಂತಾದ ವಿಶೇಷತೆಗಳನ್ನು ಹೊಂದಿದೆ. ಕಂಪನಿಯು ಎಲ್ಲಾ ಮೂರು ಸ್ಮಾರ್ಟ್ ವಾಚ್‌ಗಳನ್ನು ವಿಶೇಷವಾಗಿ ಆಫ್‌ಲೈನ್ ಮಾರುಕಟ್ಟೆಗಾಗಿ ಬಿಡುಗಡೆ ಮಾಡಿದೆ.

ಫೈರ್‌ ಬೋಲ್ಟ್‌ ನಿಂಜಾ–ಫಿಟ್‌ ಬಜೆಟ್‌ ಫ್ರೆಂಡ್ಲೀ ಸ್ಮಾರ್ಟ್‌ವಾಚ್‌ನಲ್ಲಿ 123 ಸ್ಪೋರ್ಟ್ಸ್‌ ಮೋಡ್‌ ಅನ್ನು ಪಡೆಯಬಹುದಾಗಿದೆ. ಇದು 1.69 ಇಂಚಿನ ಫುಲ್‌ HD ಡಿಸ್ಪ್ಲೇಯನ್ನು ಹೊಂದಿದೆ. ಫಿಟ್ನೆಸ್‌ ಬಗ್ಗೆ ಕಾಳಜಿ ವಹಿಸುವವರಿಗೆ ಈ ಸ್ಮಾರ್ಟ್‌ವಾಚ್‌ ಅತ್ಯುತ್ತಮವಾಗಿದೆ. ಇದನ್ನು ಬ್ಲಾಕ್‌, ಬ್ಲ್ಯೂ ಗ್ರೀನ್‌, ಸಿಲ್ವರ್‌ ಮತ್ತು ಪಿಂಕ್‌ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ವಾಚ್‌ನ ಬೆಲೆ 1,299 ರೂ. ಗಳಾಗಿದೆ.

ಫೈರ್‌ ಬೋಲ್ಟ್‌ ಟಾಕ್‌ 3 ಸ್ಮಾರ್ಟ್‌ವಾಚ್‌ ಅನ್ನು2,199 ರೂ. ಗಳಿಗೆ ಬಿಡುಗಡೆ ಮಾಡಿದೆ. ಬ್ಲೂಟೂತ್‌ ಕಾಲಿಂಗ್‌ ಇದರ ವೈಶಿಷ್ಟ್ಯವಾಗಿದೆ. 1.28 ಇಂಚಿನ ರೌಂಡ್‌ ಡಿಸ್ಪ್ಲೇ ಮತ್ತು ಹೆಚ್ಚಿನ ರೆಸಲ್ಯೂಶನ್‌ ಹೊಂದಿದೆ. 123 ಸ್ಪೋರ್ಟ್ಸ್‌ ಮಾಡ್ಯುಲ್‌ಗಳಿದ್ದು, ಹೆಲ್ತ್‌ ಟ್ರಾಕ್‌ ವೈಶಿಷ್ಟ್ಯವೂ ಇದೆ. ಇದು 7 ದಿನಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ನೀಡಬಲ್ಲದು. ಜೊತೆಗೆ ಇದು ನೀರು ಮತ್ತು ದೂಳಿನಿಂದ ರಕ್ಷಣೆ ಒದಗಿಸುವ ವಾಟರ್‌ ಫ್ರೂಫ್‌ ಫೀಚರ್‌ ಅನ್ನು ಸಹ ಹೊಂದಿದೆ.

ಫೈರ್‌ ಬೋಲ್ಟ್‌ ಸ್ಯಾಟರ್ನ್‌ ಸ್ಮಾರ್ಟ್‌ವಾಚ್‌ 1.78 ಇಂಚಿನ ಸ್ಕ್ವೇರ್‌ ಡಯಲ್‌ ಹೊಂದಿದ್ದು 368X448 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಹೊಂದಿದೆ. ಫೈರ್‌ ಬೋಲ್ಟ್‌ ಈ ಸ್ಮಾರ್ಟ್‌ವಾಚ್‌ನ ಬೆಲೆಯನ್ನು 3,999 ರೂ, ಗಳಿಗೆ ನಿಗದಿಪಡಿಸಿದೆ. ಇದನ್ನು ಬ್ಲಾಕ್‌, ಬ್ಲ್ಯೂ, ಪಿಂಕ್‌, ಗ್ರೇ, ಸಿಲ್ವರ್‌ ಮತ್ತು ಗೋಲ್‌ ಬ್ಲಾಕ್‌ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಮತ್ತು ಫೈರ್‌ ಬೋಲ್ಟ್‌ ಸ್ಯಾಟರ್ನ್‌ ಸ್ಮಾರ್ಟ್‌ವಾಚ್‌ ಅನ್ನು ಆಫ್‌ಲೈನ್‌ ಸ್ಟೋರ್ಸ್‌ಗಳಲ್ಲಿಯೂ ಖರೀದಿಸಬಹುದಾಗಿದೆ.

ಇದನ್ನೂ ಓದಿ : Sunroof Cars : ಸನ್‌ರೂಫ್‌ ಕಾರ್‌ಗಳು : ಇವುಗಳನ್ನು 10 ಲಕ್ಷದ ಬಜೆಟ್‌ನಲ್ಲೂ ಖರೀದಿಸಬಹುದು

ಇದನ್ನೂ ಓದಿ : Royal Enfield Super Meteor 650 : ಬೈಕ್‌ ಪ್ರಿಯರ ರಾಯಲ್‌ ಎನ್‌ಫೀಲ್ಡ್‌ ಸೂಪರ್‌ ಮೀಟಿಯರ್‌ 650 ಯ ವೈಶಿಷ್ಟ್ಯಗಳು

(Fire-Boltt Smartwatch introduces a unique collection of smartwatches in the Indian market)

Comments are closed.