Morena air crash: ಮೊರೆನಾದಲ್ಲಿ ರಕ್ಷಣಾ ವಿಮಾನ ಸುಖೋಯ್-30 ಮತ್ತು ಮಿರಾಜ್ 2000 ಪತನ

ಗ್ವಾಲಿಯರ್: (Morena air crash) ಸುಖೋಯ್-30 ಮತ್ತು ಮಿರಾಜ್ 2000 ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಶನಿವಾರ ಬೆಳಗ್ಗೆ ಪತನಗೊಂಡಿವೆ. ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯುನೆಲೆಯಿಂದ ತಾಲೀಮು ನಡೆಯುತ್ತಿದ್ದವು. ಈ ವೇಳೆ ವಿಮಾನಗಳು ಪತನಗೊಂಡಿವೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಅಪಘಾತದ ಸಮಯದಲ್ಲಿ Su-30 2 ಪೈಲಟ್‌ಗಳನ್ನು ಹೊಂದಿದ್ದರೆ ಮಿರಾಜ್ 2000 ಒಬ್ಬ ಪೈಲಟ್ ಅನ್ನು ಹೊಂದಿತ್ತು. ಆರಂಭಿಕ ವರದಿಗಳ ಪ್ರಕಾರ 2 ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಇನ್ನೋರ್ವ ಪೈಲಟ್‌ ನ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರಿಂದ ಅಪಘಾತದ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

“ರಕ್ಷಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅವರಿಗೆ ಭಾರತೀಯ ವಾಯುಪಡೆಯ ಎರಡು ವಿಮಾನಗಳ ಅಪಘಾತದ ಬಗ್ಗೆ ವಾಯುಪಡೆಯ ಮುಖ್ಯಸ್ಥರು ಮಾಹಿತಿ ನೀಡಿದರು. ರಕ್ಷಾ ಮಂತ್ರಿ ಅವರು ಐಎಎಫ್ ಪೈಲಟ್‌ಗಳ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ ಮತ್ತು ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಸುಖೋಯ್ -30 ರ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಹೊರತೆಗೆಯಲಾಯಿತು. ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಎಲಾಗುತ್ತಿದೆ. ಇನ್ನೂ ಮಿರಾಜ್ 2000 ನಲ್ಲಿದ್ದ ಪೈಲಟ್‌ಗಾಗಿ ಹುಡುಕಾಟ ನಡೆಯುತ್ತಿದೆ

ಈ ಕುರಿತು ಟ್ವೀಟ್ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ಮೊರೆನಾದಲ್ಲಿ ಕೊಲಾರಸ್ ಬಳಿ ವಾಯುಪಡೆಯ ಸುಖೋಯ್-30 ಮತ್ತು ಮಿರಾಜ್-2000 ವಿಮಾನಗಳು ಪತನಗೊಂಡ ಸುದ್ದಿ ತುಂಬಾ ದುಃಖ ತಂದಿದೆ. ತ್ವರಿತ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ವಾಯುಪಡೆಯೊಂದಿಗೆ ಸಹಕರಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದೇನೆ. ವಿಮಾನದ ಪೈಲಟ್‌ಗಳು ಸುರಕ್ಷಿತವಾಗಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.” ಎಂದಿದ್ದಾರೆ.

ಇದನ್ನೂ ಓದಿ : private photo viral threat: ಇನ್ಸ್ಟಾಗ್ರಾಮ್‌ ನಲ್ಲಿ ಹುಡುಗಿಯರೊಂದಿಗೆ ಸ್ನೇಹ: ಖಾಸಗಿ ಫೋಟೋ ವೈರಲ್‌ ಬೆದರಿಕೆ, 17 ವರ್ಷದ ಹುಡುಗನ ಬಂಧನ

ಇದನ್ನೂ ಓದಿ : Bail for people in drug case: ಮಂಗಳೂರು ಡ್ರಗ್ಸ್‌ ಪ್ರಕರಣ: 13 ಮಂದಿಗೆ ಜಾಮೀನು

(ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ)

Morena air crash: Defense aircraft Sukhoi-30 and Mirage 2000 crash in Morena

Comments are closed.