Twitter Alternatives : ಟ್ವಿಟರ್‌ಗೆ ಪರ್ಯಾಯವಾಗಿ ಭಾರತದಲ್ಲಿ ನೀವು ಬಳಸಬಹುದಾದ 5 ಮೈಕ್ರೋಬ್ಲಾಗಿಂಗ್‌ ಆಪ್‌ಗಳು

ಜನಪ್ರಿಯ ಮೈಕ್ರೋಬ್ಲಾಗಿಂಗ್‌ (Microblogging) ಆಪ್‌ ಟ್ವಿಟರ್‌(Twitter) ಅನ್ನು ಎಲೋನ್‌ ಮಸ್ಕ್‌ (Elon Musk) ಸ್ವಾಧೀನಪಡಿಸಿಕೊಂಡ ನಂತರ ಅದರಲ್ಲಿ ಮಹತ್ತರ ಬದಲಾಣೆಗಳನ್ನು ಮಾಡಿದರು. ಇತ್ತೀಚಿನ ತೀವ್ರವಾದ ಬದಲಾವಣೆಗಳಿಂದ ಅನೇಕ ಬಳಕೆದರರು ಅತೃಪ್ತರಾಗಿದ್ದಾರೆ. ಇನ್ನು ಕೆಲವರು ಪರ್ಯಾಯ ಮೈಕ್ರೋಬ್ಲಾಗಿಂಗ್‌ ಆಪ್‌ ಅನ್ನು ಆರಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ನೀವೂ ಪರ್ಯಾಯ (Twitter Alternatives) ಆಪ್‌ ಹುಡುಕುತ್ತಿದ್ದರೆ ಇಲ್ಲಿ ಹೇಳಿರುವ ಆಪ್‌ಗಳನ್ನು ಆಯ್ದುಕೊಳ್ಳಬಹುದು. ಇವು ಟ್ವಿಟರ್‌ಗೆ ಅತ್ಯುತ್ತಮ ಪರ್ಯಾಯಗಳಾಗಿವೆ.

ಟ್ವಿಟರ್‌ ಪ್ಲಾಟ್‌ಫಾರ್ಮ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಪರ್ಯಾಯಗಳನ್ನು ಆಯ್ದುಕೊಳ್ಳುವು ಮೊದಲು ಅದರಲ್ಲಿರುವಂತಹ ವೈಶಿಷ್ಟ್ಯಗಳು ಯಾವ ಆಪ್‌ಗಳಲ್ಲಿದೆ ಎಂದು ತಿಳಿದುಕೊಳ್ಳುವುದು ಉತ್ತಮ. ಇಲ್ಲಿ ಕೆಲವು ಟ್ವಿಟರ್‌ ಪರ್ಯಾಯ ಮೈಕ್ರೋಬ್ಲಾಗಿಂಗ್‌ ಆಪ್‌ಗಳ ಪಟ್ಟಿ ನೀಡಲಾಗಿದೆ.

ಕೂ :
ಸದ್ಯ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಮತ್ತೊಂದು ಮೈಕ್ರೋಬ್ಲಗಿಂಗ್‌ ವೇದಿಕೆ ಎಂದರೆ ಕೂ. ಇದು ಭಾರತೀಯರಿಗಾಗಿ ಅಭಿವೃದ್ಧಿಪಡಿಸಲಾದ ವೇದಿಕೆ ಎಂದು ಹೇಳಬಹುದು. ಇದು ಬಳಕೆದಾರರಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಅದೇ ರೀತಿಯ ಆಸಕ್ತಿ ಹೊಂದಿರುವ ಇತರ ಬಳಕೆದಾರರನ್ನು ಅನುಸರಿಸಲು ಅನುಮತಿಸುತ್ತದೆ. ಬಳಕೆದಾರರು ಗರಿಷ್ಠ 400 ಅಕ್ಷರಗಳಿರುವ ಟೆಕ್ಸ್ಟ್‌ಗಳನ್ನು ಪೋಸ್ಟ್‌ ಮಾಡಬಹುದು. ಮಲ್ಟಿಮೀಡಿಯಾ ವಿಷಯವನ್ನು ಹಂಚಿಕೊಳ್ಳಬಹುದು ಮತ್ತು ಇತರ ಬಳಕೆದಾರರೊಂದಿಗೆ ಖಾಸಗಿಯಾಗಿ ಚಾಟ್ ಮಾಡಬಹುದು. ಹ್ಯಾಶ್‌ಟ್ಯಾಗ್‌ಗಳು ಮತ್ತು ಉಲ್ಲೇಖಗಳನ್ನು ಬಳಸಿಕೊಂಡು ಇತರ ಕೂ ಬಳಕೆದಾರರನ್ನು ನಮೂದಿಸಲು ಸಹ ಸಾಧ್ಯವಿದೆ. ಟ್ವಿಟರ್‌ನಲ್ಲಿರುವ ರಿಟ್ವೀಟ್ ವೈಶಿಷ್ಟ್ಯವನ್ನು ಇದರಲ್ಲಿ ರೀ-ಕೂ ಎಂದು ಕರೆಯಲಾಗುತ್ತದೆ. ಕೂ ವೇದಿಕೆಯು ಆರು ಭಾರತೀಯ ಭಾಷೆಗಳನ್ನು ಸಹ ಬೆಂಬಲಿಸುತ್ತದೆ. ಈ ಅಪ್ಲಿಕೇಶನ್ ಅನ್ನು ಇದುವರೆಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ಹತ್ತು ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾದರು ಡೌನ್‌ಲೋಡ್‌ಗಳ ಮಾಡಿಕೊಂಡಿದ್ದಾರೆ.

ಮಾಸ್ಟೋಡಾನ್‌ :
ಇತ್ತೀಚಿಗೆ ಟ್ವಿಟರ್‌ನಲ್ಲಾದ ನೀತಿ ಬದಲಾವಣೆಗಳಿಂದ ಕಂಗೆಟ್ಟಿರುವ ಬಹುಪಾಲು ಬಳಕೆದಾರಿಗೆ ಮಾಸ್ಟೋಡಾನ್‌ ಗೋ–ಟು ಪ್ಲಾಟ್‌ಫಾರ್ಮ್‌ ಆಗಿದೆ. ಓಪನ್‌ ಸೋರ್ಸ್‌ ಆಗಿರುವ ಮಾಸ್ಟೋಡಾನ್‌ ಇತ್ತೀಚಿನ ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಗಳಿಸಿದೆ. ಇದು ಟ್ವಿಟರ್‌ ರೀತಿಯ ಅನುಭವ ನೀಡುತ್ತದೆ. ಇದರಲ್ಲಿ ಬಳಕೆದಾರರು ತಮ್ಮದೇ ಆದ ನೆಟ್‌ವರ್ಕ್‌ಗಳನ್ನು ರಚಿಸಬಹುದಾಗಿದೆ. ನೀತಿ ಸಂಹಿತೆ, ಕಂಟೆಂಟ್‌ ಮಾಡರೇಶನ್, ಗೌಪ್ಯತೆ, ಸೇವಾ ನಿಯಮಗಳು ಇತ್ಯಾದಿಗಳಿಗೆ ಸಂಬಂಧಿಸಿದ ತನ್ನದೇ ಆದ ನೀತಿಗಳನ್ನು ಹೊಂದಿದೆ. ಮಾಸ್ಟೋಡಾನ್‌ ಉತ್ತಮ ಸೆಕ್ಯೂರಿಟಿಯನ್ನು ನೀಡುತ್ತದೆ.

ಟ್ರೈಬಲ್‌:
ಇದೊಂದು ವಿಶಿಷ್ಟ ಆಪ್‌ ಆಗಿದೆ. ಬಳಕೆದಾರರು ತಮ್ಮ ಪೋಸ್ಟ್‌ಗಳನ್ನು ಆಯ್ಕೆಮಾಡಿದವರಿಗೆ ತಕ್ಷಣ ತಲುಪಿಸಲು ಅನುಮತಿಸುತ್ತದೆ. ಈ ವೇದಿಕೆಯು ಬಳಕೆದಾರರಿಗೆ ಅವರ ಸುದ್ದಿಗಳನ್ನು ಸುಲಭವಾಗಿ ಕಸ್ಟಮೈಸ್‌ ಮಾಡುವ ಅವಕಾಶ ನೀಡುತ್ತದೆ. ಟ್ರೆಂಡಿಂಗ್ ಮತ್ತು ಬ್ರೇಕಿಂಗ್ ಫೀಡ್‌ಗಳು ಮತ್ತು ಹೆಚ್ಚು ಜನಪ್ರಿಯ ಪೋಸ್ಟ್‌ಗಳನ್ನು ತೋರಿಸುತ್ತವೆ. ಇದು ಟ್ವಿಟರ್ ಅನ್ನು ತೊರೆಯುತ್ತಿರುವ ಬಳಕೆದಾರಿಂದ ಖ್ಯಾತಿಯನ್ನು ಗಳಿಸಿದೆ.

ಕುಟುಂಬ್‌:
ಇದು ಸಮುದಾಯಗಳ ಸಾಮಾಜಿಕ ನೆಟ್‌ವರ್ಕಿಂಗ್‌ ಅಪ್ಲಿಕೇಷನ್‌ ಆಗಿದೆ. ಇದು ಮೇಡ್‌ ಇನ್‌ ಇಂಡಿಯಾ ಆಪ್‌ ಅನ್ನುವುದು ವಿಶೇಷ. ಈ ಆಪ್‌ ಮೂಲತಃ ಮರಾಠಿ, ಹಿಂದಿ ಮತ್ತು ಗುಜರಾತಿ ಮುಂತಾದ ಸ್ಥಳೀಯ ಭಾಷೆಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಇದು ಸುವಿಚಾರ್‌ ವೈಶಿಷ್ಟ್ಯವನ್ನು ಬಳಕೆದಾರರಿಗೆ ನೀಡುತ್ತದೆ. ಇದರಿಂದ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸ್ಪೂರ್ತಿದಾಯಕ ದೈನಂದಿನ ವಿಷಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಈ ಸಮುದಾಯದಲ್ಲಿರುವ ಸದಸ್ಯರು ಸಮಸ್ಯೆಗಳನ್ನು ಚರ್ಚಿಸಬಹುದಾಗಿದೆ ಮತ್ತು ಐಡೆಂಟಿಟಿಯನ್ನು ರಚಿಸಿಬಹುದಾಗಿದೆ.

ಕೊಹೋಸ್ಟ್‌:
ಕೆಲವು ತಿಂಗಳುಗಳ ಹಿಂದೆ ಪ್ರಾರಂಭವಾದ ಕೊಹೋಸ್ಟ್‌ ಇನ್ನೂ ಪ್ರಾರಂಭದ ಹಂತದಲ್ಲಿದೆ. ಇದು ಬ್ಲಾಗ್‌ಗೆ ಹೋಲುತ್ತದೆ. ಇದರಲ್ಲಿಯ ಪೋಸ್ಟ್‌ಗಳು ಫೇಸ್‌ಬುಕ್‌ನಂತೆಯೇ ವರ್ಟಿಕಲ್‌–ಸ್ಕ್ರೋಲಿಂಗ್‌ ಟೈಮ್‌ಲೈನ್‌ ನಲ್ಲಿ ಬೀಳುತ್ತವೆ. ಟ್ವಿಟರ್‌ ಆರಂಭದಲ್ಲಿ ಹೇಗಿತ್ತೊ ಅದೇ ರೀತಿಯಲ್ಲಿದೆ. ಆದರೆ ಇದರಲ್ಲಿ ನ್ಯಾವಿಗೇಷನ್‌ ಸುಲಭವಾಗಿದೆ. ಇದರಲ್ಲಿ ಪೋಸ್ಟ್‌ಗಳನ್ನು ಕಸ್ಟಮೈಸ್‌ ಮಾಡಬಹುದಾಗಿದೆ. ಆದರೆ ಕೊಹೋಸ್ಟ್‌ ಬಳಕೆದಾರರಿಗೆ ಉಚಿತವಾಗಿ ದೊರೆಯುವುದಿಲ್ಲ. ಭವಿಷ್ಯದಲ್ಲಿ ಈ ಪ್ಲಾಟ್‌ಫಾರ್ಮ್‌ ಬದಲಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Mastodon App : ಓಪನ್‌ ಸೋರ್ಸ್‌ ಮೈಕ್ರೋಬ್ಲಾಗಿಂಗ್‌ ಸೈಟ್‌ ಮಾಸ್ಟೋಡಾನ್‌ ಬಗ್ಗೆ ನಿಮಗೆ ಗೊತ್ತಾ; ಇದರಲ್ಲಿ ಖಾತೆ ರಚಿಸುವುದಾದರೂ ಹೇಗೆ…

ಇದನ್ನೂ ಓದಿ : Fake Twitter Account : ಟ್ವೀಟರ್ ನಲ್ಲಿ ಹೆಚ್ಚಾಯ್ತು ನಕಲಿ ಖಾತೆ :ಟ್ವೀಟರ್ ಬ್ಲೂ ಟಿಕ್‌ ಚಂದಾದಾರಿಕೆ ಸ್ಥಗಿತ

(Five Twitter Alternatives in India. Koo, Mastodon, Tribel, Kutumb and cohost)

Comments are closed.