Ginger Health Tips:ಶುಂಠಿರಸದಿಂದ ಸೈನಸ್‌, ಮೈಗ್ರೇನ್‌ ನಿವಾರಣೆ

(Ginger Health Tips)ಹಲವು ಜನರು ಸೈನಸ್‌, ಮೈಗ್ರೆನ್‌ ತೊಂದರೆಯಿಂದ ಬಳಲುತ್ತಾ ಇರುತ್ತಾರೆ. ಇದಕ್ಕೆ ಎಷ್ಟೇ ಮೆಡಿಸಿನ್‌ ಮಾಡಿದರು ಆ ಸಮಯಕ್ಕೆ ಮಾತ್ರ ಕಡಿಮೆಯಾಗಿ ಮತ್ತೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಇನ್ನು ಈ ಚಿಂತೆ ಬೇಡ ಶುಂಠಿರಸದಿಂದ ಸೈನಸ್‌ , ಮೈಗ್ರೇನ್‌ ಕಡಿಮೆ ಮಾಡಿಕೊಳ್ಳಬಹುದು.ಶುಂಠಿರಸದಿಂದ ಈ ತೊಂದರೆಯನ್ನು ಹೇಗೆ ನಿವಾರಣೆ ಮಾಡುವುದು ಎಂಬುದರ ಕುರಿತು ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Ginger Health Tips)ಬೇಕಾಗುವ ಸಾಮಾಗ್ರಿಗಳು:

  • ಶುಂಠಿ ರಸ
  • ಲವಂಗ
  • ಬೆಲ್ಲ ಅಥವ ಜೇನುತುಪ್ಪ

ಮಾಡುವ ವಿಧಾನ:
ಮೊದಲಿಗೆ ಶುಂಠಿಯ ಸೊಪ್ಪನ್ನು ತೆಗೆದುಕೊಂಡು ಸಣ್ಣದಾಗಿ ಹೆಚ್ಚಿಕೊಳ್ಳಬೇಕು ನಂತರ ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್‌ ಮಾಡಿಕೊಂಡು ರಸವನ್ನು ಒಂದು ಕಪ್‌ ನಲ್ಲಿ ಹಿಂಡಿಕೊಳ್ಳಬೇಕು. ನಂತರ ಒಂದು ಬೌಲ್‌ ಗೆ ಶುಂಠಿ ರಸವನ್ನು ಹಾಕಿಕೊಳ್ಳಬೇಕು. ಎರಡರಿಂದ ಮೂರು ಲವಂಗವನ್ನು ಪುಡಿಮಾಡಿ ಶುಂಠಿ ರಸದೊಂದಿಗೆ ಬೆರೆಸಬೇಕು ಅನಂತರ ಅದಕ್ಕೆ ಬೆಲ್ಲ ಅಥವ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಪ್ರತಿನಿತ್ಯ ಬೆಳಿಗ್ಗೆ ತಿಂಡಿ ಮತ್ತು ರಾತ್ರಿ ಊಟದ ನಂತರ ಸೇವಿಸಿದರೆ ಸೈನಸ್‌, ಮೈಗ್ರೇನ್‌ ತೊಂದರೆ ನಿವಾರಣೆ ಆಗುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಶುಂಠಿ ರಸ
ಚಕ್ಕೆ(ದಾಲ್ಚಿನಿ ಪುಡಿ)

ಮಾಡುವ ವಿಧಾನ:
ಒಂದು ಬೌಲ್‌ ಗೆ ಮೂರು ಚಮಚ ಶುಂಠಿ ರಸ , ಅರ್ಧ ಚಮಚ ಚಕ್ಕೆಯ ಪುಡಿ ಹಾಕಿ ಕಲಸಿಕೊಳ್ಳಬೇಕು ನಂತರ ಇದನ್ನು ಹಣೆಯ ಭಾಗಕ್ಕೆ ಹಚ್ಚಿ ಐದು ಗಂಟೆಯವರೆಗೆ ಬಿಟ್ಟು ಮಸಾಜ್‌ ಮಾಡಿಕೊಂಡರೆ ಮೈಗ್ರೆನ್‌ ತೊಂದರೆ ನಿವಾರಣೆ ಆಗುತ್ತದೆ.

ಇದನ್ನೂ ಓದಿ:Chemical Free Shampoo:ರಾಸಾಯನಿಕ ಮುಕ್ತ ಶಾಂಪೂ ಮನೆಯಲ್ಲಿಯೇ ತಯಾರಿಸಿಕೊಳ್ಳಿ

ಇದನ್ನೂ ಓದಿ:Coffee Powder Face Mask :ಬಿಸಿಲಿಗೆ ಟ್ಯಾನ್‌ ಆಗುವ ಚಿಂತೆಯೇ ? ಕಾಫಿ ಪೌಡರ್‌ ಫೇಸ್‌ ಮಾಸ್ಕ್‌ ಮುಖಕ್ಕೆ ಹಚ್ಚಿ

ಬೇಕಾಗುವ ಸಾಮಾಗ್ರಿಗಳು:
ತುಪ್ಪ
ಉಪ್ಪು

ಮಾಡುವ ವಿಧಾನ:
ಒಂದು ಬೌಲ್‌ ಗೆ ತುಪ್ಪವನ್ನು ಹಾಕಿಕೊಂಡು ಅದಕ್ಕೆ ಉಪ್ಪನ್ನು ಬೆರೆಸಿಸಿಕೊಂಡು ಕಲಸಿ ಕೊಳ್ಳಬೇಕು ನಂತರ ಅದನ್ನು ಹಣೆಯ ಭಾಗಕ್ಕೆ ಹಚ್ಚಿಕೊಂಡು ಮಸಾಜ್‌ ಮಾಡಿಕೊಳ್ಳುವುದರಿಂದ ತಲೆನೋವು ನಿವಾರಣೆ ಆಗುತ್ತದೆ.

ಶುಂಠಿರಸ
ಶುಂಠಿರಸದಿಂದ ಬರಿ ಶೀತ, ಕೆಮ್ಮು ಕಡಿಮೆಯಾಗುವು ಅಷ್ಟೇ ಅಲ್ಲದೆ ದೇಹದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಶುಂಠಿ ರಸವನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ಬೇಡದ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮಧುಮೇಹ ಇರುವವರು ಇದನ್ನು ಸೇವಿಸುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಹೃದಯಕ್ಕೆ ಸಂಬಂಧಪಟ್ಟಂತಹ ಕಾಯಿಲೆಯ ಅಪಾಯವನ್ನು ತಪ್ಪಿಸುವಂತಹ ಶಕ್ತಿ ಕೂಡ ಈ ಶುಂಠಿರಸಕ್ಕೆ ಇದೆ.

Ginger relieves sinus and migraine

Comments are closed.