Flipkart Big Saving Days Offers: ಡಿಸೆಂಬರ್ 21ರ ಒಳಗೆ ಸ್ಮಾರ್ಟ್‌ಫೋನ್‌ ಖರೀದಿಸಲು ಪ್ಲಿಫ್‌ಕಾರ್ಟ್‌ ಬಿಗ್ ಸೇವಿಂಗ್ ಡೇ ಆಫರ್ ಬಂದಿದೆ

ಪ್ಲಿಫ್‌ಕಾರ್ಟ್ ಬಿಗ್ ಸೇವಿಂಗ್ ಡೇ (Flipkart Big Saving Days) ಮತ್ತೆ ಆರಂಭವಾಗಿದೆ. ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ಅಗತ್ಯ ಉಪಕರಣಗಳನ್ನು ಖರೀದಿಸಲು ಉತ್ತಮ ಆಫರ್‌ಗಳು ಶುರುವಾಗಿ ಈಗಾಗಲೇ ಎರಡು ದಿನಗಳು ಆಗಿಬಿಟ್ಟಿದೆ. ಆದರೂ ತೊಂದರೆಯಿಲ್ಲ, ಏಕೆಂದರೆ ಡಿಸೆಂಬರ್ 21ರವರೆಗೂ ಈ ಬಿಗ್ ಸೇವಿಂಗ್ ಡೇ ಇರಲಿದ್ದು ಅಲ್ಲಿಯವರೆಗು ಉತ್ತಮ ಆಫರ್‌ಗಳಲ್ಲಿ (Discount Offers) ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ. ಅಂತಹ ಒಳ್ಳೊಳ್ಳೆ ಸ್ಮಾರ್ಟ್‌ಫೋನ್‌ಗಳ (Smartphones) ಪಟ್ಟಿಯನ್ನು ನ್ಯೂಸ್ ನೆಕ್ಸ್ಟ್‌ ನಿಮ್ಮ ಮುಂದೆ ತೆರೆದಿಡಲಿದೆ.

ಸ್ಮಾರ್ಟ್‌ಫೋನ್‌ಗಳಲ್ಲಿ ಆಗಾಗ ಹೊಸ ಹೊಸ ಮಾಡೆಲ್‌ಗಳು ಬರುತ್ತಲೇ ಇರುತ್ತವೆ. ಹೀಗಾಗಿ ತೀರಾ ದೊಡ್ಡ ಬಜೆಟ್‌ನ ಸ್ಮಾರ್ಟ್‌ಫೋನ್ ಖರೀದಿಸುವುದಕ್ಕಿಂತ ಬಜೆಟ್ ಸ್ಮಾರ್ಟ್‌ಫೋನ್ ಖರೀದಿಸುವುದು  ನಮಗೆ ನಾವೇ ಕೊಟ್ಟುಕೊಳ್ಳಬಹುದು. ಹಾಗಾದರೆ ಸುಮಾರು 20 ಸಾವಿರದ ಒಳಗೆ ಯಾವೆಲ್ಲ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು? ಫ್ಲಿಫ್‌ಕಾರ್ಟ್‌ ಬಿಗ್ ಸೇವಿಂಗ್ ಡೇಯಲ್ಲಿ ಯಾವೆಲ್ಲ ಸ್ಮಾರ್ಟ್‌ಫೋನ್‌ಗಳಿವೆ ಎಂದು ತಿಳಿದುಕೊಳ್ಳಿ.

ಮೊಟೊರೊಲಾ,  ರಿಯಲ್‌ಮಿ ಮತ್ತು ಕೆಲ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಇಪ್ಪತ್ತು ಸಾವಿರದ ಒಳಗೆ ಬಿಗ್ ಸೇವಿಂಗ್ ಡೇಯಲ್ಲಿ ಲಭ್ಯವಿದೆ.

ಮೊಟೊರಾಲಾ- Motorola Moto G60
ಮೊಟೊರೊಲಾದ Moto G60s  ಪ್ಲಿಫ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಯ ಅತ್ಯುತ್ತಮ ಆಫರ್‌ಗಳಲಿ ಒಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್‌ ಬಳಸಿ 1 ಸಾವಿರ ಡಿಸ್ಕೌಂಟ್‌ನ್ನು ಸಹ ಮೊಟೊ G60 ಸ್ಮಾರ್ಟ್‌ಫೋನ್‌ ಮೇಲೆ ಪಡೆಯಬಹುದಾಗಿದೆ. ಜೊತೆಗೆ Motorola Edge 20 ಸ್ಮಾರ್ಟ್‌ಫೋನ್ ಸಹ ₹27,999ಕ್ಕೆ ಲಭ್ಯವಿದ್ದು, ಮೂಲಬೆಲೆ ₹3,000ದಷ್ಟು ಕಡಿಮೆ ಬೆಲೆಗೆ ಲಭ್ಯವಿದೆ ಎಂಬುದು ವಿಶೇಷವಾಗಿದೆ.

ರಿಯಲ್‌ಮಿ ಜಿಟಿ ನಿಯೊ 2 Realme GT Neo 2
ರಿಯಲ್‌ಮಿ ಜಿಟಿ ನಿಯೊ 2 (Realme GT Neo 2) ಸ್ಮಾರ್ಟ್‌ಫೋನ್ 4 ಸಾವಿರ ಡಿಸ್ಕೌಂಟ್‌ನಲ್ಲಿ ಪ್ಲಿಫ್‌ಕಾರ್ಟ್ ಬಿಗ್ ಸೇವಿಂಗ್ ಡೇಯಲ್ಲಿ ಲಭ್ಯವಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ನ ಮೂಲಬೆಲೆ ₹31,999. ಸ್ನಾಪ್‌ಡ್ರಾಗನ್ 870, 120Hz OLED ಡಿಸ್‌ಪ್ಲೇ, 64MPಯ ಟ್ರಿಪಲ್ ಕ್ಯಾಮರಾ, 65W fast ಚಾರ್ಚಿಂಗ್ ಸೌಲಭ್ಯಗಳು ಸಹ ರಿಯಲ್‌ಮಿ ಜಿಟಿ ನಿಯೊ 2 ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ.

iPhone 12
ನಿಮಗೆ ಗೊತ್ತೇ ? ಆ್ಯಪಲ್  ಸ್ಮಾರ್ಟ್‌ಫೋನ್‌ ಸಹ 20 ಸಾವಿರದ ಒಳಗೆ ಪ್ಲಿಫ್‌ಕಾರ್ಟ್ ಬಿಗ್ ಸೇವಿಂಗ್ ಡೇಯಲ್ಲಿ ಪಡೆಯಬಹುದಾಗಿದೆ. iPhone 12 ಸ್ಮಾರ್ಟ್‌ಫೋನ್ 54,999ಕ್ಕೆ ನಿಮಗೆ ದೊರೆಯಲಿದೆ.  ಅಲ್ಲದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಜೊತೆ ಒಂದು ಸಾವಿರ ಡಿಸ್ಕೌಂಟ್ ಸಹ ದೊರೆಯಲಿದೆ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

(Flipkart Big Saving Days mobile deals on Moto G60 iPhone 12 Realme GT Neo 2)

Comments are closed.