ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ಫೋನ್ಗಳ ಹಲವಾರು ಆಕರ್ಷಕ ಆಯ್ಕೆಗಳೊಂದಿಗೆ ಸಿಗುತ್ತದೆ.ಮತ್ತು ಇನ್ನೂ ಹಲವಾರು ಸ್ಮಾರ್ಟ್ ಫೋನ್ ಗಳು ಬಿಡುಗಡೆ ಆಗುತ್ತಾ ಇರುವುದರಿಂದ ಉತ್ತಮವಾದದನ್ನು ಆಯ್ಕೆ ಮಾಡುವುದು ಕಷ್ಟಕರವಾಗುತ್ತದೆ. ಆದರೆ ನೀವು ಯಾವುದೇ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ಬಜೆಟ್ ಎಷ್ಟು ಎಂದು ನಿರ್ಧರಿಸಬೇಕು.ಮತ್ತು ನಿಮ್ಮ ಆಯ್ಕೆಯ ಫೋನ್ ಭಾರೀ ರಿಯಾಯಿತಿ ಮತ್ತು ಇತರ ಕೊಡುಗೆಗಳೊಂದಿಗೆ ಸಿಕ್ಕಿದರೆ, ಇನ್ನೂ ಉತ್ತಮ.(Filpkart Offer on Oppo F19S).ಯಾವುದೇ ಫೋನು ರಿಯಾಯಿತಿಯಲ್ಲಿ ಬಂದಾಗ ಎಷ್ಟು ಉತ್ತಮವಾಗಿರುತ್ತದೆ ಅಲ್ಲವೇ? ಇದೀಗ ಆನ್ಲೈನ್ ಪ್ಲಾಟ್ ಫಾರ್ಮ್ ಫ್ಲಿಪ್ ಕಾರ್ಟ್(Filpkart) ಒಪ್ಪೋ ಎಫ್19ಎಸ್ (Oppo F19s)ನಲ್ಲಿ ರಿಯಾಯಿತಿ, ವಿನಿಮಯ ಮತ್ತು ಇತರ ಕೊಡುಗೆಗಳನ್ನು ಘೋಷಿಸಿದೆ.
ಹೌದು, ಮತ್ತು ಬೆಲೆ ಕಡಿತ ಮತ್ತು ವಿನಿಮಯ ಕೊಡುಗೆಯ ಸಹಾಯದಿಂದ, ಈ ಫೋನ್ ವಾಸ್ತವವಾಗಿ 6000 ಪ್ರೈಸ್ ರೇಂಜ್ ಸ್ಮಾರ್ಟ್ಫೋನ್ಗಳಲ್ಲಿ ಬಂದಿದೆ! ಈ ಕೊಡುಗೆಗಳ ಕುರಿತು ಇನ್ನಷ್ಟು ತಿಳಿಯಲು ಇಲ್ಲಿ ವಿವರಗಳನ್ನು ಪರಿಶೀಲಿಸಿ.
ಫ್ಲಿಪ್ ಕಾರ್ಟ್ ನಲ್ಲಿ ಒಪ್ಪೋ ಎಫ್19ಎಸ್ ಬೆಲೆ
ಹೊಳೆಯುವ ಕಪ್ಪು ಬಣ್ಣದಲ್ಲಿ 6ಜಿಬಿ ರಾಮ್ ಮತ್ತು 128ಜಿಬಿ ಸ್ಟೋರೇಜ್ ಹೊಂದಿರುವ ಒಪ್ಪೋ ಎಫ್ 19ಎಸ್ ಅನ್ನು.19000 ರೂ.ಗೆ ಖರೀದಿಸಬಹುದು. ಅದರ ಮಾರುಕಟ್ಟೆ ಅಥವ ರಿಟೈಲ್ ದರದ ವಿರುದ್ಧ ಶೇಕಡಾ 13 ರ ರಿಯಾಯಿತಿಯಲ್ಲಿ ಫ್ಲಿಪ್ಕಾರ್ಟ್ನಲ್ಲಿ ರೂ 22,990. ಈ ಫೋನ್ ಖರೀದಿಸಬಹುದು. ಅಂದರೆ ನೀವು 3000ರೂ.ಗಳ ರಿಯಾಯಿತಿಯಲ್ಲಿ ಫೋನ್ ಖರೀದಿಸಬಹುದು. ಎಕ್ಸ್ಚೇಂಜ್ ಆಫರ್ ಮತ್ತು ಬ್ಯಾಂಕ್ ಆಫರ್ಗಳನ್ನು ಪಡೆಯುವ ಮೂಲಕ ನೀವು ಫೋನ್ನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.
ಫ್ಲಿಪ್ ಕಾರ್ಟ್ ನಲ್ಲಿ ಒಪ್ಪೋ ಎಫ್19ಎಸ್ ಬೆಲೆ: ಎಕ್ಸ್ಛೇಂಜ್ ಕೊಡುಗೆ
ನೀವು ಒಪ್ಪೋ ಎಫ್19ಎಸ್ ಅನ್ನು ಎಕ್ಸ್ಛೇಂಜ್ ಜೊತೆ ಖರೀದಿಸಿದರೆ ನೀವು ಫ್ಲಿಪ್ಕಾರ್ಟ್ನಲ್ಲಿ 14,800 ರುಗೆ ರಿಯಾಯಿತಿ ಪಡೆಯುವಿರಿ. ಆದಾಗ್ಯೂ, ನೀವು ನಿಮ್ಮ ಪಿನ್ ಕೋಡ್ ಅನ್ನು ನಮೂದಿಸಬೇಕು ಮತ್ತು ಎಕ್ಸ್ಛೇಂಜ್ ಕೊಡುಗೆಯು ನಿಮ್ಮ ಸ್ಥಳದಲ್ಲಿ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೆ, ಎಕ್ಸ್ಚೇಂಜ್ನೊಂದಿಗೆ ಆಫರ್ ಬೆಲೆಯು ನೀವು ಎಕ್ಸ್ಛೇಂಜ್ ಮಾಡಿಕೊಳ್ಳುತ್ತಿರುವ ಫೋನ್ನ ಮಾದರಿ ಮತ್ತು ಅದರ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ಫ್ಲಿಫ್ ಕಾರ್ಟ್ ನಲ್ಲಿ ಒಪ್ಪೋ ಎಫ್19ಎಸ್ ಬೆಲೆ: ಬ್ಯಾಂಕ್ ಕೊಡುಗೆ
ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನಲ್ಲಿ 5 ಪ್ರತಿಶತ ಅನಿಯಮಿತ ಕ್ಯಾಶ್ಬ್ಯಾಕ್ ನೀಡಲಾಗುತ್ತಿದೆ. ಆದಾಗ್ಯೂ, ಅರ್ಜಿ ಸಲ್ಲಿಸುವ ಮೊದಲು ವೆಬ್ಸೈಟ್ನಲ್ಲಿ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಬೇಕು.
ಒಪ್ಪೋ ಎಫ್19ಎಸ್ ಬಗ್ಗೆ
ಈಗಾಗಲೇ ಹೇಳಿದಂತೆ ಫೋನ್ 6ಜಿಬಿ ರಾಮ್ ಮತ್ತು 128ಜಿಬಿ ಸ್ಟೋರೇಜ್ ಜೊತೆ ಬರುತ್ತದೆ . ಮತ್ತು ಇದನ್ನು 256ಜಿಬಿ ವರೆಗೆ ವಿಸ್ತರಿಸಬಹುದಾಗಿದೆ. ಇದು 6.43 ಇಂಚಿನ ಪೂರ್ಣಎಚ್ಡಿ+ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಕ್ವಾಲ್ ಕಾಮ್ ಸ್ನಾಪ್ ಡ್ರಾಗನ್ 662(Qualcomm Snapdragon 662) ಪ್ರೊಸೆಸರ್ ಜೊತೆಗೆ 5000ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಕ್ಯಾಮೆರಾಗಳಿಗೆ ಬರುವಾಗ, ಫೋನ್ 48ಎಂಪಿ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮರಾವನ್ನು ಬೆಂಬಲಿಸುತ್ತದೆ. ಮುಂಭಾಗದ ಕ್ಯಾಮರಾ 16ಎಂಪಿ ಆಗಿದೆ.
ಇದನ್ನೂ ಓದಿ: Best Places in Bangalore: ಬೆಂಗಳೂರಿನ ಅತ್ಯುತ್ತಮ 5 ಪ್ರವಾಸಿ ತಾಣಗಳಿವು; ಪ್ರವಾಸಕ್ಕೆಂದು ಪ್ಯಾಕ್ ಮಾಡುವ ಮುನ್ನ ಈ ಮಾಹಿತಿ ತಿಳಿದಿರಲಿ
(Flipkart offer on Oppo F19S smartphone great deals are here)