Prakash Padukone Biopic : ದೀಪಿಕಾ ಪಡುಕೋಣೆಗೆ ತಮ್ಮ ತಂದೆಯ ಬಯೋಪಿಕ್ ನಿರ್ಮಾಣದ ಕನಸು !

ದೀಪಿಕಾ ಪಡುಕೋಣೆ (Deepika Padukone) ಇದೀಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಅವರ ಗೆಹರಿಯಾನ್ ಚಿತ್ರ (Gehraiyaan) ಹಿಟ್ ಆಗಿದೆ ಎಂದು ಚಿತ್ರತಂಡ ಹೇಳಿದೆ. ಕ್ರೀಡಾಚಿತ್ರ 83ಕ್ಕೆ ನಿರ್ಮಾಪಕಿಯಾಗಿದ್ದರು. ಪತಿ ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರ ಮಾಡಿ ಎಲ್ಲರ ಮೆಚ್ಚುಗಳಿಸಿದ್ದರು. ‘ನಮ್ಮ ಕ್ರಿಕೆಟ್ ತಂಡವು 1983ರಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ಗೌರವವನ್ನು ಹೆಚ್ಚಿಸಿತ್ತು. ಇದಕ್ಕಿಂತ ಮೊದಲು ನಮ್ಮ ತಂದೆ ಪ್ರಕಾಶ್ ಪಡುಕೋಣೆ (Prakash Padukone Biopic) ಭಾರತದ ಕೀರ್ತಿ ಪತಾಕೆಯನ್ನು ಪ್ರಪಂಚದಲ್ಲೆಲ್ಲಾ ಹರಡುವಂತೆ ಮಾಡಿದ್ದರು. ಅವರು 1981ರಲ್ಲೇ ವಿಶ್ವಕಪ್ ಗೆದ್ದಿದ್ದರು. ಅದು ವಿಶ್ವಕಪ್ ಕ್ರಿಕೆಟ್ (World Cup Cricket) ಗೆಲ್ಲುವ ಮೊದಲು’ ಎಂದು ದೀಪಿಕಾ ಪಡುಕೋಣೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಬಾಲಿವುಡ್ ನಟಿ, ನಿರ್ಮಾಪಕಿ ದೀಪಿಕಾ ಪಡುಕೋಣೆ ಹೊಸ ಯೋಚನೆಯಲ್ಲಿದ್ದಾರೆ. ಅವರ ಪತಿ ರಣವೀರ್ ಸಿಂಗ್ (Ranveer Singh) ನಟಿಸಿದ 83 ಸಿನಿಮಾದ ಸ್ಫೂರ್ತಿಯೋ ಏನೋ ಗೊತ್ತಿಲ್ಲ. ದೀಪಿಕಾ ಹೊಸ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ. ಅದಕ್ಕೆ ರಣವೀರ್ ಬೆನ್ನುಲುಬಾಗಿ ನಿಂತಿದ್ದಾರೆ.

ಸಿನಿಮಾದ ಕಥೆ ಬೇರಾರದು ಅಲ್ಲ ಅವರ ತಂದೆ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಅವರದ್ದು. ಹೌದು, ದೀಪಿಕಾ ತಂದೆಯ ಕ್ರೀಡಾ ಬದುಕನ್ನು ಹಿರಿತೆರೆಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 83 ನಂತರದ ಇದು ಎರಡನೇ ಕ್ರೀಡಾ ಸಿನಿಮಾ. ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ವಿವರಗಳನ್ನು ಹಂಚಿಕೊಂಡಿರುವ ದೀಪಿಕಾ, ‘ನಮ್ಮ ತಂದೆ ಚಾಂಪಿಯನ್ ಆಗಲು ಪಟ್ಟ ಕಷ್ಟಗಳು ಏನು, ಒಬ್ಬ ಕ್ರೀಡಾಪಟುವಾಗಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಮಿನುಗಿಸಿದ ಬಗೆ ಹೇಗೆ, ಅದರ ಹಿಂದಿನ ಶ್ರಮ, ಯೋಚನೆ ಹೀಗೆ, ತಂದೆಯ ಬದುಕನ್ನು ಆಧರಿಸಿದ ಬಯೋಗ್ರಫಿಯನ್ನು ಮಾಡುವ ಆಸೆ ನನಗಿದೆ’ ಎಂದು ದೀಪಿಕಾ ಕನಸನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಆಗಿನ ಕಾಲದಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಒಳ್ಳೆ ಸೌಲಭ್ಯಗಳಾಗಲೀ, ಸೌಕರ್ಯಗಳಾಗಲಿ ಇರಲಿಲ್ಲ. ಎಲ್ಲವನ್ನೂ ಮೀರಿ ಪ್ರಕಾಶ್ ಪಡುಕೋಣೆ ಅದ್ಬುತ ಆಟಗಾರರಾಗಿದ್ದರು. ಅದು ಹೇಗೆ ಅನ್ನೋದನ್ನು ದೀಪಿಕಾ ಹೇಳಿದ್ದಾರೆ, ‘ಆಕಾಲದಲ್ಲಿ ಕ್ರೀಡೆ ಅಂಥ ಸೌಲಭ್ಯಗಳು ಇರಲಿಲ್ಲ. ನಮ್ಮ ತಂದೆ ಕಲ್ಯಾಣ ಮಂಟಪದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು. ಅದೇ ಅವರಿಗೆ ಬ್ಯಾಡ್ಮಿಂಟನ್ ಕೋರ್ಟ್. ಅವರು ಕಲ್ಯಾಣ ಮಂಟಪದ ಬೀಮ್ ಗಳನ್ನು ಬಳಸಿಕೊಂಡು ಶಾಟ್ ಗಳನ್ನು ನಿಖರವಾಗಿ ಹೊಡೆಯಲು ಪ್ರಯತ್ನಿಸುತ್ತಿದ್ದರು. ಬೀಮ್ ಗಳು ಆಟಆಡಲು ಅಡ್ಡಿಯಾಗುತ್ತಿತ್ತು, ಆದರೆ ಇವರು ಅದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ತಾಲೀಮು ಮಾಡುತ್ತಿದ್ದರು. ಇವತ್ತಿನಂತೆ ಸೌಲಭ್ಯಗಳು ಏನಾದರು ಆಗ ಇದ್ದಿದ್ದರೆ ನಮ್ಮ ತಂದೆ ಮತ್ತಷ್ಟು ಸಾಧನೆ ಮಾಡುತ್ತಿದ್ದುದರಲ್ಲಿ ಸಂಶಯವಿಲ್ಲ’ ಎಂದು ದೀಪಿಕಾ ತಂದೆಯ ಕಷ್ಟಗಳನ್ನು ನೆನಪಿಸಿಕೊಂಡಿದ್ದರೆ.

ದೀಪಿಕಾ ಪಡುಕೋಣೆ ಅಭಿನಯದ ಭಾರೀ ಸುದ್ದಿ ಮಾಡಿದ ಗೆಹ್ರಿಯಾನ್ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪ್ರಸ್ತುತ ಅವರು ತೆಲುಗಿನ ಪ್ರಭಾಸ್ ನಾಯಕ ನಟನಾಗಿ ನಟಿಸುತ್ತಿರುವ ಪ್ರಾಜಕ್ಟ್ ಕೆ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಶಾರುಖ್ ಜೊತೆಗಿನ ಪಠಾಣ್, ಹೃತಿಕ್ ರೋಷನ್ ಅವರ ಫೈಟರ್ ಸಿನಿಮಾದಲ್ಲೂ ದೀಪಿಕಾ ನಾಯಕನಟಿಯಾಗಿದ್ದಾರೆ. ಎರಡು ಸಿನಿಮಾಗಳು ಬಿಡುಗಡೆಯಾಗಬೇಕಿದೆ.

ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

(Deepika Padukone confirms her father Prakash Padukone Biopic)

Comments are closed.