Flipkart Big Billion Days Sale : ಫ್ಲಿಪ್‌ಕಾರ್ಟ್‌ ಸೇಲ್‌, ಆಫರ್‌ ಬೆಲೆಯಲ್ಲಿ ನಥಿಂಗ್ ಫೋನ್ ಹಾಗೂ ಗೂಗಲ್ ಪಿಕ್ಸೆಲ್

(Flipkart Big Billion Days Sale)ನೀವೇನಾದ್ರೂ ಹೊಸ ಪೋನ್‌ ಖರೀದಿಸುವ ಫ್ಲ್ಯಾನ್‌ ಮಾಡಿಕೊಂಡಿದ್ರೆ ನಿಮಗೆ ಇಲ್ಲಿಗೆ ಸುವರ್ಣಾವಕಾಶ. ನಥಿಂಗ್‌ ಪೋನ್‌ ಹಾಗೂ ಗೂಗಲ್‌ ಫಿಕ್ಸಲ್‌ ಪೋನ್‌ ಗಳನ್ನು ಆಫರ್‌ ಬೆಲೆಯಲ್ಲಿ ಮಾರಾಟ ಮಾಡಲು ಫ್ಲಿಪ್‌ಕಾರ್ಟ್‌ ಮುಂದಾಗಿದೆ. ನವರಾತ್ರಿಯ ಹೊತ್ತಲ್ಲೇ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಆಯೋಜಿಸಿದೆ. ಸೇಲ್‌ನಲ್ಲಿ Google Pixel 6A ಮತ್ತು Nothing Phone 1 ಸ್ಮಾರ್ಟ್‌ಫೋನ್‌ಗಳನ್ನು ಕೇವಲ ರೂ.30,000 ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

(Flipkart Big Billion Days Sale)ಬಿಗ್ ಬಿಲಿಯನ್ ಡೇಸ್ ಸೇಲ್ 2022 ರ ಕೌಂಟ್‌ಡೌನ್ ಪ್ರಸಿದ್ಧ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಸೆಪ್ಟೆಂಬರ್ 23 ರಿಂದ ಮಾರಾಟ ಆರಂಭವಾಗಿ ಸೆಪ್ಟೆಂಬರ್ 30 ರವರೆಗೆ ಖರೀದಿ ಮಾಡಬಹುದಾಗಿದೆ. ಆದಾಗ್ಯೂ, ಆದರೆ ಒಂದು ದಿನ ಮುಂಚಿತವಾಗಿ ಸೇಲ್‌ ಆರಂಭಗೊಂಡಿದೆ. ಇತ್ತೀಚೆಗೆ ಬಿಡುಗಡೆಯಾದ Google Pixel 6a (Google Pixel 6a) ಮತ್ತು ನಥಿಂಗ್ ಫೋನ್ 1 ನಲ್ಲಿ ರೂ.30,000 ಕ್ಕಿಂತ ಕಡಿಮೆ ಬೆಲೆಗೆ ಬಂಪರ್ ರಿಯಾಯಿತಿಯನ್ನು ಘೋಷಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಖರೀದಿಗೆ ಲಭ್ಯವಿದೆ.

Google Pixel 6a ವೈಶಿಷ್ಟತೆ ಮತ್ತು ಬೆಲೆ :

ಭಾರತದಲ್ಲಿ Google Pixel 6a ಸ್ಮಾರ್ಟ್‌ಫೋನ್ 6GB +128GB ಸ್ಟೋರೇಜ್ ಆಯ್ಕೆಯೊಂದಿಗೆ 43,999 ರೂ. ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಕೇವಲ 27,699 ರೂ.ಗೆ ಈ ಫೋನ್ ನಿಮ್ಮದಾಗಿಸಿಕೊಳ್ಳಬಹುದು. ನಥಿಂಗ್ ಫೋನ್ 1 6GB +128GB ಸ್ಟೋರೇಜ್ ಆಯ್ಕೆ ರೂ 37,999 ಬಿಡುಗಡೆಯಾಗಿದೆ. ನೀವು ಇದನ್ನು 28,999 ರೂಗಳಲ್ಲಿ ಪಡೆಯಬಹುದು. ಹಾಗೆ ನೀವು ಈ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ICICI ಮತ್ತು HDFC ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ, ನಿಮಗೆ ರೂ. 10 ರಷ್ಟು ರಿಯಾಯಿತಿ ದೊರೆಯಲಿದೆ.

Google Pixel 6a ಸ್ಮಾರ್ಟ್‌ಫೋನ್ 6.1-ಇಂಚಿನ ಪೂರ್ಣ HD+ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಗೂಗಲ್ ಟೆನ್ಸರ್ GS101 SoC ಪ್ರೊಸೆಸರ್ ಅನ್ನು ಹೊಂದಿದೆ ಮತ್ತು ಬಾಕ್ಸ್ ಹೊರಗೆ Android 12 ಅನ್ನು ರನ್ ಮಾಡುತ್ತದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಮುಖ್ಯ ಕ್ಯಾಮೆರಾವು 12-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ ಮತ್ತು ಎರಡನೇ ಕ್ಯಾಮೆರಾವು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 12.2-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

ಇದು 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಇದು 4,306mAh ಬ್ಯಾಟರಿಯನ್ನು ಹೊಂದಿದೆ. ಇದು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 72 ಗಂಟೆಗಳವರೆಗೆ ಬ್ಯಾಕಪ್ ಅನ್ನು ಒಳಗೊಂಡಿರುವ ಬ್ಯಾಟರಿ ಸೇವರ್ ಮೋಡ್ ಹೊಂದಿದೆ. ಬ್ಯಾಟರಿಗೆ ಸರಿಹೊಂದುವಂತೆ ವೇಗದ ಚಾರ್ಜರ್ ಆಯ್ಕೆಯನ್ನು ಸಹ ನೀಡಲಾಗಿದೆ.

ನಥಿಂಗ್ ಪೋನ್‌ನ ವೈಶಿಷ್ಟತೆ ಮತ್ತು ಬೆಲೆ :

ನಥಿಂಗ್ ಫೋನ್ (1) 6.55-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಶಕ್ತಿಯುತವಾದ Qualcomm Snapdragon 778G+ SoC ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು Android 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಮೊದಲ ಕ್ಯಾಮರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸಂವೇದಕವನ್ನು ಹೊಂದಿದೆ. ಎರಡನೇ ಕ್ಯಾಮರಾ 50-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ JN1 ಸಂವೇದಕವನ್ನು ಹೊಂದಿದೆ.

ಇದನ್ನೂ ಓದಿ : ನಿಮ್ಮ ಫೋನ್‌ನಲ್ಲೂ ಇರಬಹುದು ಭಯಾನಕ ‘ಸೋವಾ ವೈರಸ್’

ಇದನ್ನೂ ಓದಿ : 64 ಮೆಗಾಪಿಕ್ಸೆಲ್‌ ನೈಟ್‌ ಕ್ಯಾಮೆರಾದೊಂದಿಗೆ ಬಿಡುಗಡೆಗೆ ಸಿದ್ಧವಾದ ವಿವೊ V25 ಸ್ಮಾರ್ಟ್‌ಫೋನ್‌

ಇದನ್ನೂ ಓದಿ : ಪ್ರತಿ ತಿಂಗಳು ಎಕ್ಟ್ರಾ 2GB ಡಾಟಾ ಕೊಡುಗೆ ನೀಡುತ್ತಿರುವ ವೊಡಾಫೋನ್‌ ಐಡಿಯಾ : ಈ ಕೊಡುಗೆ ಪಡೆಯಲು ಹೀಗೆ ಮಾಡಿ

16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದು 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಬೆಂಬಲಿಸಲಿದೆ.

Flipkart’s Big Billion Days sale: Nothing Phone, Google Pixel Phone will get on offer price

Comments are closed.