Amazon Great Indian Festival Sale 2022 : ‘ಪೈಮ್‌ ಸದಸ್ಯರಿಗೆ’ ಲೈವ್‌ ಆದ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2022

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2022 (Amazon Great Indian Festival Sale 2022) ಪ್ರಾರಂಭವಾಗಿದೆ. ಆದರೆ ಮೊದಲಿಗೆ ಈ ಸೇಲ್‌ ಪೈಮ್‌ ಸದಸ್ಯರಿಗೆ (Prime Members) ಮಾತ್ರ ಲೈವ್‌ (Live) ಆಗಿದೆ. ಖರೀದಿದಾರರು ಪೈಮ್‌ ಸದಸ್ಯತ್ವವನ್ನು ಉಪಯೋಗಿಸಿಕೊಂಡು ಈಗಲೇ ಖರೀದಿಸಿಬಹುದಾಗಿದೆ. ಈ ಸೇಲ್‌ನಲ್ಲಿ ಭಾರಿ ರಿಯಾಯತಿ ಕೊಡುಗೆಯೊಂದಿಗೆ ಸ್ಮಾರ್ಟ್ಫೋನ್‌, ಟಿವಿ, ಕಂಪ್ಯೂಟರ್‌ ಮತ್ತು ಇತರ ಸಾಮಾನುಗಳನ್ನು ಖರೀದಿಸಬಹುದಾಗಿದೆ. ಈ ಬಾರಿಯ ಫೆಸ್ಟೀವ್‌ ಸೀಸನ್‌ ಸೇಲ್‌ ಅನ್ನು ಸ್ಯಾಮ್‌ಸಂಗ್‌ Galaxy M series ಮತ್ತು iQoo ಪ್ರಾಯೋಜಿಸಿದೆ. ಇದರಿಂದ ಈ ಬ್ರಾಂಡ್‌ಗಳ ಉತ್ಪನ್ನಗಳ ಮೇಲೆ ಒಳ್ಳೆಯ ಡೀಲ್‌ ನೋಡಬಹುದಾಗಿದೆ. ಅಮೆಜಾನ್‌ನಲ್ಲಿ ಸೆಪ್ಟೆಂಬರ್‌ 9 ರಿಂದ ಪ್ರಾರಂಭವಾಗಿರುವ ಕಿಕ್‌–ಸ್ಟಾರ್ಟ್‌ ಡೀಲ್‌ ಸೆಪ್ಟೆಂಬರ್‌ 25 ರವರೆಗೆ ನಡೆಯಲಿದೆ.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ ಲೈವ್‌ ಆದ ಮೇಲೆ ಅಮೆಜಾನ್‌ ಪ್ರೈಮ್‌ ಸದಸ್ಯರು ಇದರ ಲಾಭ ಪಡೆಯಬಹುದಾಗಿದೆ. ಹಾಗೆ ನಿಯಮಿತ ಗ್ರಾಹಕರು ಈ ಸೇಲ್‌ನ ಲಾಭ ಪಡೆಯಲು ರಾತ್ರಿ 12 ಗಂಟೆಯ ವರೆಗೆ ಕಾಯಬೇಕಿದೆ. ಅಮೆಜಾನ್‌, ಗ್ರೇಟ್‌ ಇಂಡಿಯನ್‌ ಫೆಸ್ಟೀವ್‌ ಸೇಲ್‌ ಯಾವಾಗ ಕೊನೆಗೊಳ್ಳಲಿದೆ ಎಂದು ತಿಳಿಸಿಲ್ಲ. ಈ ಸೇಲ್‌ನಲ್ಲಿ SBI ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ಹೋಲ್ಡರ್‌ಗಳಿಗೆ 10 ಪ್ರತಿಶತ ರಿಯಾಯಿತಿ ದೊರಯಲಿದೆ. ಹಾಗೂ ಇದರಲ್ಲಿ ನೀವು ಸೀಮಿತ ಅವಧಿಯ ಲೈಟನಿಂಗ್‌ ಡೀಲ್‌ಗಳ ಲಾಭವನ್ನು ಪಡೆಯಬಹುದಾಗಿದೆ.

Amazon Great Indian Festival Sale 2022

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ ನಲ್ಲಿ ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌, ಹೆಡ್‌ಫೋನ್‌ ಮುಂತಾದವುಗಳಿಗೆ ಶೇಕಡಾ 75 ರವರೆಗೆ ಆಫರ್‌ ಪಡೆಯಬಹುದಾಗಿದೆ. ಈ ಸೇಲ್‌ನಲ್ಲಿ ಶೇಕಡಾ 40 ರಷ್ಟು ಸ್ಮಾರ್ಟ್‌ಫೋನ್‌ ಮತ್ತು ಎಕ್ಸ್‌ಸಿರೀಸ್‌ ಗಳ ಮೇಲೆ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. LG, Sony, ಮುಂತಾದ ಬ್ರಾಂಡ್‌ಗಳ ಟಿವಿಯ ಮೇಲೆ ಆಕರ್ಷಕ ಡಿಸ್ಕಾಂಟ್‌ ಪಡೆದುಕೊಳ್ಳಬಹುದಾಗಿದೆ. ಸೇಲ್‌ನಲ್ಲಿ ಖರೀದಿಸಿದ ವಸ್ತುಗಳ ಇನ್ಸ್ಟಂಟ್‌ ಡಿಸ್ಕೌಂಟ್‌ ನ ಜೊತೆಗೆ No Cost EMI ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : Heart Attack in Gym : ಹೃದಯಾಘಾತದ ಹಿಂದೆ ಇರುವ ಅಪಾಯಕಾರಿ ಅಂಶಗಳ ಬಗ್ಗೆ ನಿಮಗೆ ಗೊತ್ತಾ

ಇದನ್ನೂ ಓದಿ : Savings accounts:ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆಯಬಹುದೇ ? ಇಲ್ಲಿದೇ ಕಂಪ್ಲೀಟ್‌ ಡಿಟೇಲ್ಸ್‌

(Amazon Great Indian Festival Sale 2022 live started for prime members)

Comments are closed.