Google Mapನಲ್ಲಿ ನಿಮ್ಮ ಮನೆಯ ಅಡ್ರೆಸ್‌ ಬದಲಾಯಿಸಬಹುದು! ಹೇಗೆ ಗೊತ್ತೇ?

ಪ್ರತಿದಿನ ನಾವು ಗೂಗಲ್‌(Google)ನ ಹಲವಾರು ಅಪ್ಲಿಕೇಶನ್‌ಗಳನ್ನು ಉಪಯೋಗಿಸುತ್ತಲೇ ಇರುತ್ತೇವೆ. ಅದರಲ್ಲೂ ಯಾರಿಗಾದರೂ ನಮ್ಮ ಮನೆಯ ವಿಳಾಸ(Address) ಹೇಳಬೇಕೆಂದರೆ ನಾವು ಅವಲಂಬಿಸುವುದು ಗೂಗಲ್‌ ಮ್ಯಾಪ್‌(Google Map) ಅನ್ನೇ. ಟೆಕ್ನಾಲಜಿಯಲ್ಲಿ ಮುಂಚೂಣಿಯಲ್ಲಿರುವ ಗೂಗಲ್‌ ಅನೇಕ ಸೇವೆಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಅದರಲ್ಲಿ ಗೂಗಲ್‌ ಮ್ಯಾಪ್‌ ಅತ್ಯಂತ ಜನಪ್ರಿಯವಾದ ನ್ಯಾವಿಗೇಷನ್‌ ಅಪ್ಲಿಕೇಶನ್‌ ಆಗಿದೆ. ಇದು ಉತ್ತಮ ಮಾರ್ಗದರ್ಶಿಯೂ ಹೌದು. ಅದು ಹೇಳುವ ಸುಲಭದ ದಾರಿ ನಮ್ಮ ಗಮ್ಯ ತಲುಪಲು ಸಹಕಾರಿಯಾಗಿದೆ. ಈ ಗೂಗಲ್‌ ಮ್ಯಾಪ್‌ ಬಳಕೆದಾರರಿಗೆ ಕೆಲವು ಫೀಚರ್‌ಗಳನ್ನೂ ನೀಡಿದೆ. ಅದರಲ್ಲೊಂದು ನಮ್ಮ ಮನೆಯ ತಪ್ಪಾದ ವಿಳಾಸವನ್ನು ನಾವೇ ಸರಿಪಡಿಸಬಹುದಾಗಿದೆ.

ವೆಬ್‌ ಬ್ರೌಸರ್‌ನ ಗೂಗಲ್‌ ಮ್ಯಾಪ್‌ನಲ್ಲಿ ತಪ್ಪಾದ ವಿಳಾಸವನ್ನು ಸರಿಪಡಿಸಲು ಹೀಗೆ ಮಾಡಿ?

  • ಮೊದಲು ನಿಮ್ಮ ಅಕೌಂಟ್‌ನಲ್ಲಿ ಲಾಗ್‌ ಇನ್‌ ಆಗಿದ್ದೀರಾ ಅನ್ನುವುದನ್ನು ಖಚಿತಪಡಿಸಿಕೊಳ್ಳಿ.
  • ನೆವಿಗೇಷನ್‌ ಬಾರ್‌ನಲ್ಲಿ ಗೂಗಲ್‌ ಮ್ಯಾಪ್‌ ಎಂದು ಟೈಪ್‌ ಮಾಡಿ ಮತ್ತು ಅದನ್ನೇ ಆಯ್ದುಕೊಳ್ಳಿ
  • ಗೂಗಲ್‌ ಮ್ಯಾಪ್‌ ವೆಬ್‌ಸೈಟ್‌ನ ಎಡಭಾಗದಲ್ಲಿರುವ ಸರ್ಚ್‌ನಲ್ಲಿ ನಿಮ್ಮ ಅಡ್ರೆಸ್‌ ಹುಡುಕಿ
  • ಎಡಭಾಗದಲ್ಲಿಯ ಸರ್ಚ್‌ ಬಾರ್‌ನ ಕೆಳಗಡೆ ಇರುವ ಎಡಿಟ್‌ ಪ್ಲೇಸ್‌ಗೆ ಹೋಗಿ
  • ಸಜೆಸ್ಟ್‌ ಆ್ಯನ್‌ ಎಡಿಟ್‌ ವಿಂಡೋ ತೆರಯುವುದು ಅದರಲ್ಲಿ ಎರಡು ಆಯ್ಕೆ ಸಿಗುವುದು. ಅದರಲ್ಲಿ ಹೆಸರು ಅಥವಾ ಇತರೆ ವಿವರ ಬದಲಾಯಿಸಿ ಅನ್ನುವ ಆಯ್ಕೆ ಕ್ಲಿಕ್‌ ಮಾಡಿ.
  • ನೀವು ಬಯಸಿದ ವಿಳಾಸ ವಿವರಗಳನ್ನು ಬದಲಾಯಿಸಿ.

ಇದನ್ನೂ ಓದಿ:Google Pay App ಮೂಲಕ ಚಿನ್ನ ಖರೀದಿ ಮತ್ತು ಮಾರಾಟ ಮಾಡಬಹುದು ಎಂಬುದು ನಿಮಗೆ ಗೊತ್ತೇ? ಹೇಗೆ ಅನ್ನುತ್ತೀರಾ?

ಎಂಡ್ರಾಯ್ಡ್‌ ಅಥವಾ ಐಫೋನ್‌ನ ಗೂಗಲ್‌ ಮ್ಯಾಪ್‌ನ ಅಡ್ರೆಸ್‌ ಸರಿಪಡಿಸಲು ಈ ಕ್ರಮ ಅನುಸರಿಸಿ:

  • ಸ್ಮಾರ್ಟ್‌ಫೋನ್‌ನಲ್ಲಿಯ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ ಓಪನ್‌ ಮಾಡಿ.
  • ಕೆಳಗಡೆ ಇರುವ ಸೇವ್‌ ಆಪ್ಷನ್‌ ಆಯ್ಕೆ ಮಾಡಿ.
  • ಸ್ಕ್ರೋಲ್‌ ಮಾಡಿ ಯುವರ್‌ ಲಿಸ್ಟ್ಸ್‌ ನಲ್ಲಿ ಲೇಬಲ್ಡ್‌ ಆಪ್ಷನ್‌ ತೆಗೆದುಕೊಳ್ಳಿ.
  • ಮೂರು ಚುಕ್ಕೆಗಳಿರುವ ಆಯ್ಕೆ ಟ್ಯಾಪ್‌ ಮಾಡಿ ಮತ್ತು ಮನೆಯ ವಿಳಾಸ ಎಡಿಟ್‌ ಆಯ್ಕೆ ಮಾಡಿ.
  • ಅದರಲ್ಲಿ ನಿಮ್ಮ ಮನೆ ಮತ್ತು ಕೆಲಸದ ವಿಳಾಸ ಆಯ್ದುಕೊಳ್ಳಿ
  • ನಿಮ್ಮ ಕೆಲಸದ ಅಡ್ರೆಸ್‌ ಎಡಿಟ್‌ ಮಾಡಲು ಬಯಸಿದರೆ ವರ್ಕ್‌ ಪ್ಲೇಸ್‌ ಅಡ್ರೆಸ್‌ ಆಯ್ದುಕೊಳ್ಳಿ.
  • ಈಗಾಗಲೇ ಇರುವ ಅಡ್ರೆಸ್‌ ಅಳಿಸಿ ಮತ್ತು ಹೊಸ ಅಡ್ರೆಸ್‌ ಸೇರಿಸಿ.
  • ನಂತರ ಸೇವ್‌ ಮಾಡುವುದರಿಂದ ನೀವು ಬದಲಾಯಿಸಿದ ಅಡ್ರೆಸ್‌ ಗೂಗಲ್‌ ಮ್ಯಾಪ್‌ನಲ್ಲಿ ಸೇವ್‌ ಆಗಿರುವುದು.

ಇದನ್ನೂ ಓದಿ: itel A49 ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌! ಭಾರತದಲ್ಲಿ ಇದು ಕೇವಲ 6499 ರೂಪಾಯಿಗಳಿಗೆ

(Google Map How to update your home and work address in Google Map)

Comments are closed.