The Kashmiri Files : ದಿ ಕಾಶ್ಮೀರಿ ಫೈಲ್ಸ್ ಕನ್ನಡಕ್ಕೆ : ಹಿಂದುತ್ವವೇ ಬಿಜೆಪಿ ಅಜೆಂಡಾ ಎಂದ ಕಾಂಗ್ರೆಸ್

ಬೆಂಗಳೂರು : ಪಂಚ ರಾಜ್ಯ ಚುನಾವಣೆ ಬಳಿಕ ಬಿಜೆಪಿ ಹಿಂದುತ್ವದ ಅಜೆಂಡಾ ಮತ್ತಷ್ಟು ಸ್ಟ್ರಾಂಗ್ ಆದಂತಿದೆ. ಈಗಾಗಲೇ ರಾಜ್ಯದಲ್ಲಿ ಕಟ್ಟಾ ಹಿಂದುತ್ವವಾದಿಯಂತೆ ರಾಜ್ಯಭಾರ ಮಾಡ್ತಿರೋ ಬಿಜೆಪಿ 2023 ರ ಚುನಾವಣೆಗೂ ಹಿಂದುತ್ವ, ಕೇಸರಿ ಶಾಲಿನಿಂದಲೇ ಮತ ಗಳಿಸಲು ಸಜ್ಜಾಗಿದೆ. ಹಿಜಾಬ್ ಸಂದರ್ಭದಲ್ಲೂ ಹಿಂದುತ್ವದ ಪರವೇ ನಿಂತಿದ್ದ ಸರಕಾರ ಈಗ ಕಾಶ್ಮೀರಿ ಪಂಡಿತರ ವಿಚಾರವನ್ನು ಮತಗಳಿಕೆಯ ಅಸ್ತ್ರವಾಗಿ ಬಳಸುತ್ತಿದ್ದು, ಇದಕ್ಕಾಗಿ ಕಾಶ್ಮೀರಿ ಪೈಲ್ಸ್ (The Kashmiri Files) ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಲು ಸಿದ್ಧವಾಗಿದೆ.

1990 ರ‌ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಹಾಗೂ ಹಿಂಸೆಯನ್ನು ಸಾರುವ ದಿ‌ ಕಾಶ್ಮೀರಿ ಫೈಲ್ಸ್ (The Kashmiri Files) ಸಿನಿಮಾ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ ಅಧಿಕಾರದಲ್ಲಿರೋ ರಾಜ್ಯದಲ್ಲಿ ಈ ಸಿನಿಮಾಗೆ‌ ಸಂಪೂರ್ಣ ಬೆಂಬಲ ಸಿಕ್ಕಿದ್ದು, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿ ಸಹ ನೀಡಲಾಗಿದೆ‌. ಈ ಮಧ್ಯೆ ರಾಜ್ಯ ಬಿಜೆಪಿ ನಾಯಕ‌ ರೇಣುಕಾಚಾರ್ಯ ದಿ ಕಾಶ್ಮೀರಿ ಫೈಲ್ಸ್ (The Kashmiri Files) ನೋಡದವರು ದೇಶದ್ರೋಹಿಗಳು ಎಂದಿದ್ದರು‌. ದಿ‌ಕಾಶ್ಮೀರಿ ಫೈಲ್ಸ್ ಕೇವಲ ಸಿನಿಮಾ ಅಲ್ಲ ಅದು ಕಾಶ್ಮೀರಿ ಪಂಡಿತರು ಅನುಭವಿಸಿದ ನೋವು ಎಂದು ಬಿಜೆಪಿ ಹೇಳುತ್ತಿದ್ದರೇ ಈ ಸಿನಿಮಾ ಕಾಲ್ಪನಿಕ ಎಂದು ಕಾಂಗ್ರೆಸ್ ವಾದಿಸುತ್ತಿದೆ.

ಒಂದು ಹೆಜ್ಜೆ ಮುಂದೇ ಹೋಗಿರುವ ಬಿಜೆಪಿ ನಾಯಕರು ಈ ಸಿನಿಮಾವನ್ನು ತಮ್ಮತ್ತ ಮತದಾರರನ್ನು ಸೆಳೆಯುವ ಅಸ್ತ್ರವಾಗಿ ಬಳಸಲು ಸಿದ್ಧವಾಗಿದ್ದಾರೆ. ಕರ್ನಾಟಕದಲ್ಲಿ ಇನ್ನಷ್ಟು ಜನರು ದಿ ಕಾಶ್ಮೀರಿ ಫೈಲ್ಸ್ ನೋಡಬೇಕು. ಆ ಮೂಲಕ ಹಿಂದುತ್ವ, ಬಿಜೆಪಿಯತ್ತ ಮುಖಮಾಡಬೇಕು ಎಂಬ ಕಾರಣಕ್ಕೆ ಬಿಜೆಪಿ ದಿ ಕಾಶ್ಮೀರಿ ಫೈಲ್ಸ್ (The Kashmiri Files) ಸಿನಿಮಾ ವನ್ನು ಕನ್ನಡಕ್ಕೆ ಡಬ್ ಮಾಡಲು ಸಿದ್ದತೆ ನಡೆಸಿದೆ. ಸದ್ಯ ಹಿಂದಿ ಯಲ್ಲಿರುವ ಸಿನಿಮಾಗೆ ಇಂಗ್ಲೀಷ್ ನಲ್ಲಿ ಸಬ್ ಟೈಟಲ್ ಇದೆ. ಆದರೆ ಇದು ಬಹುತೇಕ ಕನ್ನಡಿಗರಿಗೆ ಅರ್ಥವಾಗೋದಿಲ್ಲ. ಆ ಕಾರಣಕ್ಕಾಗಿ ಸಿನಿಮಾವನ್ನು ಕನ್ನಡಕ್ಕೆ ತರೋದು ಬಿಜೆಪಿ ಚಿಂತನೆ.

ಇನ್ನೂ ಬಿಜೆಪಿ ಈ ತಂತ್ರಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದ್ದು, ಬಿಜೆಪಿ ಜಾತಿ ಆಧಾರಿತ, ಧರ್ಮ ಆಧಾರಿತ ರಾಜಕಾರಣ ಮಾಡಲು ಹೊರಟಿದ್ದು ಇದರಿಂದ ಹಿಂಸೆ, ಸಾಮಾಜಿಕ ಅಶಾಂತಿ ವಾತಾವಣರ ಸೃಷ್ಟಿಯಾಗಲಿದೆ ಎಂದು ಆರೋಪಿಸಿದೆ. ಒಟ್ಟಿನಲ್ಲಿ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ರಾಜ್ಯದಲ್ಲಿ ಚುನಾವಣೆ ಕಣ ರಂಗೇರುತ್ತಿದ್ದು, ಹಿಂದುತ್ವದ ಲೆಕ್ಕಾಚಾರದಲ್ಲಿರೋ ಬಿಜೆಪಿ ಏನೆಲ್ಲ ಮಾಡುತ್ತೆ ಕಾದು ನೋಡಬೇಕಿದೆ.

ಇದನ್ನೂ ಓದಿ : ಓಟಿಟಿ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನಕ್ಕೇರಿದ ಲವ್ ಮಾಕ್ಟೆಲ್ -2

ಇದನ್ನೂ ಓದಿ :  ಕರ್ನಾಟಕದಲ್ಲಿ ಆರ್ ಆರ್ ಆರ್ ಫ್ರೀ ರಿಲೀಸ್ ಇವೆಂಟ್ : ಪುನೀತ್ ನಮನ ಸಲ್ಲಿಸಲಿರೋ ಚಿತ್ರತಂಡ

The Kashmiri Files movie dubbing in Kannada

Comments are closed.