Google New AI Chatbot : ಚಾಟ್‌ಜಿಪಿಟಿಗೆ ಠಕ್ಕರ್‌ ಕೊಡಲು ಮುಂದಾದ ಗೂಗಲ್‌; ಶೀಘ್ರವೇ ಲಾಂಚ್‌ ಆಗಲಿದೆ ‘ಬಾರ್ಡ್‌’

ದಿನೇ ದಿನೇ ಹಲವಾರು ತಂತ್ರಜ್ಞಾನಗಳು ಬರುತ್ತಿವೆ. ಈಗಾಗಲೇ ಇರುವ ತಂತ್ರಜ್ಞಾನಗಳಲ್ಲಿಯೂ ಅನೇಕ ಬದಲಾವಣೆಗಳು ಆಗುತ್ತಿವೆ. ಇದರಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣಬಹುದಾಗಿದೆ. ಈಗಂತೂ ಎಲ್ಲಡೆ ಹೊಸ AI ಚಾಟ್‌ಬಾಟ್‌, ಚಾಟ್‌ಜಿಪಿಟಿ (ChatGPT) ಯದೇ ಮಾತು. ಇದು ಜನರು ಕೇಳುವ ಪ್ರಶ್ನೆಗಳಿಗೆ ನಿಖರವಾದ ಉತ್ತರ ನೀಡುತ್ತದೆ. ಹಾಗಾಗಿ, ಇದಕ್ಕೆ ಪೈಪೋಟಿ ನೀಡಲು ಗೂಗಲ್‌ (Google) ಸಹ ತನ್ನ ಹೊಸ ಚಾಟ್‌ಬಾಟ್‌ (Chatbot) ಅನ್ನು ಪ್ರಾರಂಭಿಸಲು ಹೊರಟಿದೆ. ಅದಕ್ಕಾಗಿ ಗೂಗಲ್‌ ತಾನು ಸಿದ್ಧಪಡಿಸುತ್ತಿರುವ AIನಲ್ಲಿ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಗೂಗಲ್ ತನ್ನ ಚಾಟ್‌ಬಾಟ್‌ಗೆ ಬಾರ್ಡ್ (Bard) (Google New AI Chatbot) ಎಂದು ಹೆಸರಿಸಿದೆ. ಬಳಕೆದಾರರ ಪ್ರತಿಕ್ರಿಯೆಗಾಗಿ ಬಾರ್ಡ್ ಅನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲರಿಗೂ ಲಭ್ಯವಿರಲಿದೆ.

ಆಲ್ಫಾಬೆಟ್‌ ಕಂಪನಿ ಮತ್ತು ಅದರ ಅಂಗಸಂಸ್ಥೆ ಗೂಗಲ್‌ LLC ಯ ಸಿಇಒ ಸುಂದರ್‌ ಪಿಚೈ ಅವರು ಚಾಟ್‌ಜಿಪಿಟಿಗೆ ಕಠಿಣ ಸ್ಪರ್ಧೆ ನೀಡಲು ಎಲ್ಲರಿಗೂ ಶೀಘ್ರದಲ್ಲೇ ಬಾರ್ಡ್‌ (Bard) ಅನ್ನು ಪ್ರಾರಂಭಿಸಲಾಗುವುದು ಎಂದು ಖಚಿತಪಡಿಸಿದ್ದಾರೆ. ಸದ್ಯ ಕಂಪನಿಯು ಹೊಸ AI ಚಾಟ್‌ಬಾಟ್‌ನ ಪ್ರತಿಕ್ರಿಯೆಗಾಗಿ ಇದನ್ನು ಪ್ರಾರಂಭಿಸಿದೆ. ಗೂಗಲ್ ಸಿಇಒ ಸುಂದರ್ ಪಿಚೈ, ಕಂಪನಿಯು ಬಳಕೆದಾರರಿಂದ ಪ್ರತಿಕ್ರಿಯೆಯನ್ನು ಪಡೆಯಲು ಬಾರ್ಡ್ ಎಂಬ ಸಂವಾದಾತ್ಮಕ AI ಸೇವೆಯನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದರು. ಸದ್ಯ ನಡೆಸುತ್ತಿರುವ AI ಚಾಟ್‌ಬಾಟ್‌ನ ಪರೀಕ್ಷೆ ಮುಗಿದ ನಂತರ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : Chat GPT : ಏನಿದು ಚಾಟ್‌ ಜಿಪಿಟಿ : ಹೊಸ AI ಚಾಟ್‌ಬಾಟ್‌ ಶಿಕ್ಷಣದ ಮೇಲೆ ಪ್ರಭಾವ ಬೀರಲಿದೆಯೇ?

ಚಾಟ್‌ಜಿಪಿಟಿ, ಗೂಗಲ್‌ಗೆ ಸವಾಲಾಗಿ ಪರಿಣಮಿಸಿದ್ದು ಹೇಗೆ?
ಕಳೆದ ವರ್ಷದ ಕೊನೆಯಲ್ಲಿ ಓಪನ್‌ AI, ಮೈಕ್ರೋಸಾಫ್ಟ್‌ ಬೆಂಬಲದೊಂದಿಗೆ ಚಾಟ್‌ಜಿಪಿಟಿಯನ್ನು ಪ್ರಾರಂಭಿಸಿತು. ಅದು ಕೆಲವೇ ದಿನಗಳಲ್ಲಿ ಗೂಗಲ್‌ನಂತಹ ಟೆಕ್‌ ದೈತ್ಯ ಕಂಪನಿಗೆ ಸವಾಲೊಡ್ಡಿತು. ಬಹಳಷ್ಟು ಜನರು ಚಾಟ್‌ಜಿಪಿಟಿ ಕಡೆಗೆ ಒಲವನ್ನು ತೋರಿಸಿದರು. ಆದರೆ ಗೂಗಲ್‌ ಈಗ ಚಾಟ್‌ಜಿಪಿಟಿಗೆ ಪೈಪೋಟಿ ನೀಡಲು ಸಿದ್ಧತೆಗಳನ್ನು ವೇಗವಾಗಿ ನಡೆಸುತ್ತಿದೆ. ಇದಲ್ಲದೆ, ಗೂಗಲ್ ತನ್ನ ಸರ್ಚ್ ಎಂಜಿನ್‌ಗೆ AI ವೈಶಿಷ್ಟ್ಯಗಳನ್ನು ಸೇರಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಿಇಒ ಪ್ರಕಾರ, ಬಾರ್ಡ್ (Bard) ಆರಂಭದಲ್ಲಿ LaMDA ಯ ಲೈಟರ್‌ ಆವೃತ್ತಿಯಲ್ಲಿ ಕೆಲಸ ಮಾಡುತ್ತದೆ. ಅದಕ್ಕೆ ಕಡಿಮೆ ಕಂಪ್ಯೂಟಿಂಗ್ ಪವರ್ ಅಗತ್ಯವಿದೆ. ಇದರಿಂದ ಹೆಚ್ಚು ಹೆಚ್ಚು ಬಳಕೆದಾರರು ಇದನ್ನು ಬಳಸಬಹುದು.

ಇದನ್ನೂ ಓದಿ : Poco X5 Pro: ಭಾರತದ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್‌ ಲಗ್ಗೆ; ಇಂದು ಬಿಡುಗಡೆಯಾಗುತ್ತಿರುವ ಪೋಕೊ X5 ಪ್ರೋ ಸ್ಮಾರ್ಟ್‌ಫೋನ್‌

(Google New AI Chatbot is ready to compete with chatGPT)

Comments are closed.