Congress party symbol : ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಸರ್ಕಸ್: ಪಕ್ಷದ ಚಿಹ್ನೆ ಬದಲಿಸಿದ ನಾಯಕರು

ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಎರಡು ರಾಷ್ಟ್ರಿಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರದ ಗದ್ದುಗೆ ಏರುವ ಕನಸಿನಲ್ಲಿ ಜನರ ಮನವೊಲಿಸುವ ಸರ್ಕಸ್ ಆರಂಭಿಸಿದೆ. ಈ ಮಧ್ಯೆ ಅಧಿಕಾರಕ್ಕಾಗಿ ಕೇವಲ ಜನರ ಮನವೊಲಿಸುವುದು ಮಾತ್ರವಲ್ಲ ದೇವರು,ಅದೃಷ್ಟ ಹಾಗೂ ಭವಿಷ್ಯದ ಮೊರೆ ಹೋಗಿರೋ ಕಾಂಗ್ರೆಸ್ ತನ್ನ ಮೂಲ ಗುರುತನ್ನೆ (Congress party symbol) ಬದಲಾಯಿಸಿ ಸದ್ದು ಮಾಡಿದೆ.

ಹೌದು ಕಾಂಗ್ರೆಸ್ ಅಂದ್ರೇ ಕೈ, ಹಸ್ತ,ಕರ ಎಂಬ ಮಾತಿತ್ತು. ಆದರೆ ಈಗ ಈ ಗುರುತಿನ ಸ್ವರೂಪವನ್ನೇ ಬದಲಾಯಿಸಲು ಕಾಂಗ್ರೆಸ್ ಮುಂದಾದಂತಿದೆ. ಹೌದು ಶತಾಯ ಗತಾಯ ಅಧಿಕಾರಕ್ಕೇರುವ ಕನಸಿನಲ್ಲಿರೋ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಡಿಕೆಶಿ ಹಸ್ತದ ಸ್ವರೂಪ ಬದಲಾಯಿಸಿದ್ದಾರೆ.

1980 ರಲ್ಲಿ ಹುಟ್ಟಿಕೊಂಡಿದ್ದ ಕಾಂಗ್ರೆಸ್ ಸಿಂಬಲ್ :

ಹಸ್ತದ ಗುರುತು. ತಲೆತಲಾಂತರದಿಂದ ಕಾಂಗ್ರೆಸ್ ಇದೇ ಸಿಂಬಲ್ ಬಳಸಿ ರಾಜಕೀಯ ಮಾಡುತ್ತ ಬಂದಿತ್ತು. ಆ ಹಸ್ತದ ಗುರುತಿನಲ್ಲಿ ಮೂರು ಗೆರೆಗಳಿದ್ದವು. ಮೂರು ಗೆರೆಗಳು ಸರಿಯಲ್ಲ ಎಂಬ ಸಂಖ್ಯಾಶಾಸ್ತ್ರಜ್ಞರು ಸಲಹೆ ನೀಡಿದ್ದರು ಎನ್ನಲಾಗಿದೆ. ಅಲ್ಲದೇ ಇನ್ಮುಂದೇ ಸಮ ಸಂಖ್ಯೆ ಗೆರೆಗಳನ್ನ ಬಳಕೆ ಮಾಡಿ ಎಂದು ಸಲಹೆ ನೀಡಿದ್ದರಂತೆ. ಹೀಗಾಗಿ ಸಂಖ್ಯಾಶಾಸ್ತ್ರಜ್ಞರ ಸಲಹೆಯ ಮೇರೆಗೆ ಕಾಂಗ್ರೆಸ್‌ ಮೂರು ಗೆರೆಗಳ ಮಧ್ಯೆ ಅಡ್ಡ ಗೆರೆ ಎಳೆದ ಸಿಂಬಲ್ ಬಳಕೆ ಮಾಡುತ್ತಿದೆ. ಡಿಕೆಶಿ ಪ್ರಜಾಧ್ವನಿಯಲ್ಲಿ ಯಾತ್ರೆಯಲ್ಲಿ ಹೊಸ ಗೆರೆ ಹಸ್ತ ಬಳಕೆ ಮಾಡಲಾಗುತ್ತಿದೆ.

ದಶಕಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಈಗ ರಾಜ್ಯಗಳಲ್ಲೂ ಅಸ್ತಿತ್ವ ಕಳೆದುಕೊಳ್ಳುತ್ತ ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಇನ್ನೂ ಕರ್ನಾಟಕದಲ್ಲಿ ಸಂಖ್ಯೆ ಇದ್ದರೂ ಅಧಿಕಾರಕ್ಕೇರಲು, ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಇದೇ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ತಮ್ಮ ನಂಬುಗೆಯ ಜ್ಯೋತಿಷ್ಯಿಯೊಬ್ಬರ ಬಳಿ ಕೇಳಿದ್ದರಂತೆ‌. ಈ ವೇಳೆ ಅವರು ಪಕ್ಷದ ಗೆಲುವಿಗಾಗಿ ಹಸ್ತದಲ್ಲಿರೋ ರೇಖೆಗಳ ಸಂಖ್ಯೆ ಹೆಚ್ಚಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ : Next CM of Karnataka : ಬೊಮ್ಮಾಯಿ ಬಳಿಕ ಬಿ.ಎಲ್.ಸಂತೋಷ್ ಸಿಎಂ: ನಿಜವಾಗುತ್ತಾ ಎಚ್.ಡಿ.ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಮಾತು

ಇದನ್ನೂ ಓದಿ : ಮೋದಿ ರಾಜ್ಯ ಭೇಟಿಗೆ ಕಾಂಗ್ರೆಸ್ ಟೀಕೆ: ಸರಣಿ ಟ್ವೀಟ್ ಮೂಲಕ ಪ್ರಶ್ನೆಗಳ ಸುರಿಮಳೆಗೈಯ್ದ ಕೈಪಾಳಯ

ಇದನ್ನೂ ಓದಿ : ಫ್ಯಾಮಿಲಿ ಪಾಲಿಟಿಕ್ಸ್ ಗೆ ಟ್ವಿಸ್ಟ್ : ದೇವೇಗೌಡರ ಅಂಗಳ ತಲುಪಿದ ಭವಾನಿ ಟಿಕೇಟ್ ಬೇಡಿಕೆ

ತಕ್ಷಣವೇ ಜ್ಯೋತಿಷ್ಯಿಗಳ ಸಲಹೆಯನ್ನು ಜಾರಿಗೆ ತಂದಿರೋ ಡಿಕೆಶಿ ಪ್ರಜಾಧ್ವನಿಯಲ್ಲೇ ಹಸ್ತದ ಗುರುತಿನ ಸ್ವರೂಪ ಬದಲಾಯಿಸಿದ್ದಾರೆ.ಈ ಸಂಗತಿ ಈಗ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಆಗ್ತಿದ್ದು, ಡಿಕೆಶಿಯೇನೋ ಆಸ್ತಿಕರು ಸರಿ, ಆದರೆ ದೇವರನ್ನೇ ನಂಬದ ಸಿದ್ಧರಾಮಯ್ಯನವರು ಈ ಬದಲಾವಣೆ ಗೆ ಹೇಗೆ ಒಪ್ಪಿಕೊಂಡ್ರು ಅನ್ನೋದು ರಾಜಕೀಯ ವಲಯದಲ್ಲಿ ಕೇಳಿ ಬರ್ತಿರೋ ಪ್ರಶ್ನೆ.

Congress party symbol: Congress circus for power in Karnataka: Leaders who have changed the party symbol

Comments are closed.