Google Pay Bitcoin:ಗೂಗಲ್‌ ಪೇಗೂ ಬರಲಿದೆ ಬಿಟ್‌ಕಾಯಿನ್‌? ಹೊಸ ಆಪ್ಶನ್ ತರಲು ಗೂಗಲ್ ಉತ್ಸುಕ

ಬಿಟ್‌ಕಾಯಿನ್ ಸದ್ಯದ ಮಟ್ಟಿಗೆ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ. ಸದ್ಯ ಇಡೀ ಕ್ರಿಪ್ಟೋ ಉದ್ಯಮವು ತ್ವರಿತವಾಗಿ ಮುಖ್ಯವಾಹಿನಿಗೆ ಬರುತ್ತಿದೆ. ಬಿಟ್‌ಕಾಯಿನ್ ಇದೀಗ ಕುಸಿತದಲ್ಲಿರಬಹುದು. NFT ಯ ಏರಿಕೆ ಮತ್ತು ಮೆಟಾವರ್ಸ್‌ನ ಉದಯವು ಕ್ರಿಪ್ಟೋಕರೆನ್ಸಿಯ ಹೆಚ್ಚುತ್ತಿರುವ ಏರಿಕೆಗೆ ಕೊಡುಗೆ ನೀಡಿದೆ. ಅಲ್ಲದೇ ಕ್ರಿಪ್ಟೋ ಕರೆನ್ಸಿಗಳಿಗೆ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಪ್ರೋತ್ಸಾಹವನ್ನೂ ನೀಡುತ್ತಿವೆ. ಮತ್ತು ಅವುಗಳಲ್ಲಿ ಗೂಗಲ್ ಸಹ ಪ್ರಮುಖವಾಗಿದೆ. ಅಲ್ಲದೇ ಗೂಗಲ್ ಈ ಹಿಂದೆ ಪೇಪಾಲ್‌ನಲ್ಲಿ ಪ್ರಮುಖ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದ ಅರ್ನೋಲ್ಡ್ ಗೋಲ್ಡ್‌ಬರ್ಗ್ ಅವರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದೆ. ತನ್ನ ಪ್ಲಾಟ್‌ಫಾರಂಗಳಲ್ಲಿ ಬಿಟ್‌ಕಾಯಿನ್‌ನಂತಹ ಪ್ರಮುಖ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸಲು ಗೂಗಲ್ ಉತ್ಸುಕವಾಗಿದೆ (Google Pay Bitcoin) ಎಂದು ವರದಿಯಾಗಿದೆ.

ನಿಮ್ಮ Google Pay ವ್ಯಾಲೆಟ್‌ನಲ್ಲಿ ನೀವು ಬಿಟ್‌ಕಾಯಿನ್ ಅನ್ನು ಖರೀದಿಸಿ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ಅರ್ಥವಲ್ಲ.  Google Pay ಮೂಲಕ ಅಂಗಡಿಗಳಲ್ಲಿ ಸರಕುಗಳಿಗೆ ಪಾವತಿಸಲು ನಿಮ್ಮ Google Pay ಬಿಟ್‌ಕಾಯಿನ್ ಮತ್ತು ಕ್ರಿಪ್ಟೋ ಬ್ಯಾಲೆನ್ಸ್ ಅನ್ನು ನೀವು ಬಳಸಲು ಈಗಿಂದೀಗಲೇ ಸಾಧ್ಯವಾಗುತ್ತದೆ ಎಂದು ಅರ್ಥವಲ್ಲ.

Google Pay ಅಪ್ಲಿಕೇಶನ್ ಅನ್ನು ಎಲ್ಲಾ ಕಡೆ ಬಳಸಲು ಯೋಗ್ಯವಾಗುವಂತೆ ಮಾಡಲು ಗೂಗಲ್ ಕ್ರಿಪ್ಟೊ ಕರೆನ್ಸಿಗಳತ್ತ ಒಲವು ತೋರಿಸುತ್ತಿದೆ ಎನ್ನಲಾಗಿದೆ. ಗೂಗಲ್ ಪೇಯನ್ನು ಒಂದು ಸಮಗ್ರ ಡಿಜಿಟಲ್ ವ್ಯಾಲೆಟ್ ಆಗಿ ಪರಿವರ್ತನೆ ಮಾಡಿಸಲು ಈಮೂಲಕ ಕ್ರಮ ಕೈಗೊಳ್ಳಲಾಗುತ್ತದೆ. ಡಿಜಿಟಲ್ ಟಿಕೆಟ್‌ಗಳು, ಏರ್‌ಲೈನ್ ಪಾಸ್‌ಗಳು ಮತ್ತು ಲಸಿಕೆ ಪಾಸ್‌ಪೋರ್ಟ್‌ಗಳಿಗೆ ಬೆಂಬಲ ಗೂಗಲ್ ಪೇಯಲ್ಲಿ ಅವಕಾಶ ಒದಗಿಸುವ ಸಂಭವವಿದೆ. Google Pay ನ ಬಿಟ್‌ಕಾಯಿನ್ ಅಂಶಕ್ಕೆ ಸಂಬಂಧಿಸಿದಂತೆ, ಕ್ರಿಪ್ಟೋ ಜಾಗದಲ್ಲಿ ಗೂಗಲ್ ಹೆಚ್ಚಿನ ಪಾಲುದಾರಿಕೆಗಳನ್ನು ಬಯಸುತ್ತದೆ ಎಂದು ವರದಿಗಳು ತಿಳಿಸಿವೆ.

ಗೂಗಲ್ ಪೇ ಅಪ್ಲಿಕೇಶನ್‌ನಲ್ಲೇ ಬಿಟ್ ಕಾಯಿನ್ ಚಲಾವಣೆಗೆ ಅವಕಾಶ ನೀಡಲು ಗೂಗಲ್ ಪೇ ಆಪ್ಶನ್ ನೀಡುತ್ತದೆಯೇ ಅಥವಾ ಹೊಸ ಅಪ್ಲಿಕೇಶನ್ ಆರಂಭಿಸುತ್ತದೆಯೇ ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಆದರೆ ಗೂಗಲ್ ಪೇ ಕ್ರಿಪ್ಟೊ ಕರೆನ್ಸಿ, ಬಿಟ್ ಕಾಯಿನ್ ಚಲಾವಣೆಯತ್ತ ಅತ್ಯಂತ ಉತ್ಸುಕತೆಯನ್ನು ತೋರಿಸುತ್ತಿದೆ ಎಂಬುದನ್ನೂ ಸತ್ಯ.

ಗೂಗಲ್ ಪೇಯಲ್ಲಿ ಎಫ್‌ಡಿ ಅಕೌಂಟ್ ಮಾಡಿ!
ನೀವು ಫಿಕ್ಸೆಡ್ ಡೆಪಾಸಿಟ್ (Fixed Deposit) ತೆರೆಯಲು ಯೋಜನೆ ಮಾಡುತ್ತಿದ್ದೀರಾ? ಹಾಗಾದ್ರೆ ಇನ್ಮುಂದೆ ಗೂಗಲ್ ಪೇ ಮೂಲಕವೂ (FD on Google Pay) ಫಿಕ್ಸೆಡ್ ಡಿಪೋಸಿಟ್ ಅಕೌಂಟ್ (Fixed Deposit Account on Google Pay ) ತೆರೆಯಲು ಸಾಧ್ಯವಿದೆ. ನೀವು ಗೂಗಲ್ ಪೇ ಖಾತೆಯನ್ನು ಹೊಂದಿದ್ದರೆ ನೀವು ಅದನ್ನು ಸುಲಭವಾಗಿ ಮಾಡಬಹುದು. ಗೂಗಲ್ ಪೇ ನಿಯಮಿತ ಯುಪಿಐ (UPI) ಪಾವತಿ ಸೇವೆಯನ್ನು ಮಾತ್ರವಲ್ಲದೆ ಇತರ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು (FD on Google Pay) ಸಹ ನೀಡುತ್ತದೆ.

ಗೂಗಲ್ ಪೇ ಇತ್ತೀಚೆಗೆ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದ್ದು ಅದು ಬಳಕೆದಾರರಿಗೆ ಫಿಕ್ಸೆಡ್ ಡೆಪಾಸಿಟ್ ಮಾಡಲು ಅನುಮತಿಸುತ್ತದೆ. ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಬಳಕೆದಾರರಿಗೆ ಎಫ್ ಡಿ ಮಾಡಲು ಅನುಮತಿಸುವ ಸಲುವಾಗಿ ಗೂಗಲ್ ಪೇ ಎಕ್ವಿಟಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Equitas Small Finance Bank’) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ವೈಶಿಷ್ಟ್ಯದೊಂದಿಗೆ, ಗೂಗಲ್ ಪೇ ಬಳಕೆದಾರರು ಕೆಲವೇ ಸರಳ ಕ್ಲಿಕ್‌ಗಳಲ್ಲಿ ಸ್ಥಿರ ಠೇವಣಿ ಬುಕ್ ಮಾಡಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ಇದನ್ನೂ ಓದಿ: 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

ಇದನ್ನೂ ಓದಿ: FD on Google Pay: ಗೂಗಲ್‌ ಪೇಯಲ್ಲೇ ಎಫ್‌ಡಿ ಅಕೌಂಟ್ ತೆರೆಯಬಹುದು!

(Google Pay Bitcoin move may introduce bitcoin)

Comments are closed.