12 days Banks closed : ಫೆಬ್ರವರಿಯಲ್ಲಿ 12 ದಿನಗಳ ಕಾಲ ಬ್ಯಾಂಕ್‌ ರಜೆ

ನವದೆಹಲಿ : ಬ್ಯಾಂಕಿಂಗ್‌ ವ್ಯವಹಾರ ಮಾಡುವವರು ಫೆಬ್ರವರಿ ತಿಂಗಳಲ್ಲಿ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಅನ್ನೋದನ್ನು ತಿಳಿದುಕೊಳ್ಳಲೇ ಬೇಕಾಗಿದೆ. ಯಾಕೆಂದ್ರ ಮುಂದಿನ ತಿಂಗಳು ಬರೋಬ್ಬರಿ 12 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ರಜಾ ಪಟ್ಟಿಯ ಪ್ರಕಾರ 12 ದಿನಗಳ (12 days Banks closed ) ಕಾಲ ಬ್ಯಾಂಕ್‌ ರಜೆಯಿದ್ದರೂ ಕೂಡ ದೇಶದ ಎಲ್ಲಾ ರಾಜ್ಯಗಳಿಗೂ ಈ ರಜೆ ಅನ್ವಯವಾಗುವುದಿಲ್ಲ.

ಬ್ಯಾಂಕ್ ವ್ಯವಹಾರಕ್ಕೆ ಹಾಜರಾಗಲು ಮನೆಯಿಂದ ಹೊರಡುವ ಮೊದಲು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿ. ಫೆಬ್ರವರಿ 2022 ರಲ್ಲಿ, ಬಸಂತ್ ಪಂಚಮಿ, ಗುರು ರವಿದಾಸ್ ಜಯಂತಿ ಮತ್ತು ಡೋಲ್ಜಾತ್ರಾ ಸೇರಿದಂತೆ ಆರು ರಜಾದಿನಗಳ ಕಾಲ ಇರುತ್ತವೆ. ಈ ದಿನಗಳಲ್ಲಿ ದೇಶಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ವಾರದ ರಜೆ ಇರುತ್ತದೆ. ಹೀಗಾಗಿ ಫೆಬ್ರವರಿ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್ ಗಳಲ್ಲಿ ವ್ಯವಹಾರ ಇರುವುದಿಲ್ಲ. ಈ ಸಮಯದಲ್ಲಿ ಗ್ರಾಹಕರು ಎಟಿಎಂಗಳು, ಇಂಟರ್ನೆಟ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮತ್ತು ಇತರ ಸೇವೆಗಳನ್ನು ಬಳಸಿಕೊಳ್ಳಬಹುದಾಗಿದೆ.

ಫೆಬ್ರವರಿ 2022 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ

ಫೆಬ್ರವರಿ 2 : ಸೋನಮ್ ಲೋಚಾರ್ (ಗ್ಯಾಂಗ್ಟಾಕ್‌ನಲ್ಲಿ ರಜಾದಿನ)

ಫೆಬ್ರವರಿ 5 : ಸರಸ್ವತಿ ಪೂಜೆ/ಶ್ರೀ ಪಂಚಮಿ/ಬಸಂತ್ ಪಂಚಮಿ (ಅಗರ್ತಲಾ, ಭುವನೇಶ್ವರ್, ಕೋಲ್ಕತ್ತಾದಲ್ಲಿ ಬ್ಯಾಂಕುಗಳಿಗೆ ರಜೆ)

ಫೆಬ್ರವರಿ 15: ಮೊಹಮ್ಮದ್ ಹಜರತ್ ಅಲಿ ಜನ್ಮದಿನ/ಲೂಯಿಸ್-ನಾಗೈ-ನೀ (ಇಂಫಾಲ್, ಕಾನ್ಪುರ್, ಲಕ್ನೋದಲ್ಲಿ ಬ್ಯಾಂಕ್‌ಗಳಿಗೆ ರಜೆ)

ಫೆಬ್ರವರಿ 16: ಗುರು ರವಿದಾಸ್ ಜಯಂತಿ (ಚಂಡೀಗಢದಲ್ಲಿ ಬ್ಯಾಂಕುಗಳಿಗೆ ರಜೆ )

ಫೆಬ್ರವರಿ 18: ಡೊಲ್ಜಾತ್ರಾ ( ಕೋಲ್ಕತ್ತಾದಲ್ಲಿ ಬ್ಯಾಂಕುಗಳಿಗೆ ರಜೆ)

ಫೆಬ್ರವರಿ 19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೆಲಾಪುರ, ಮುಂಬೈ, ನಾಗ್ಪುರದಲ್ಲಿ ಬ್ಯಾಂಕುಗಳಿಗೆ ರಜೆ )

ಈ ವಾರಾಂತ್ಯದಲ್ಲಿ ಬ್ಯಾಂಕುಗಳು ಸಹ ಮುಚ್ಚಲ್ಪಡುತ್ತವೆ

6 ಫೆಬ್ರವರಿ: ಭಾನುವಾರ (ಸಾಪ್ತಾಹಿಕ ಬ್ಯಾಂಕ್ ರಜಾದಿನಗಳು)

12 ಫೆಬ್ರವರಿ: ತಿಂಗಳ 2ನೇ ಶನಿವಾರ (ಸಾಪ್ತಾಹಿಕ ಬ್ಯಾಂಕ್ ರಜಾದಿನಗಳು)

13 ಫೆಬ್ರವರಿ: ಭಾನುವಾರ (ವಾರದ ರಜೆ)

20 ಫೆಬ್ರವರಿ: ಭಾನುವಾರ (ವಾರದ ರಜೆ)

26 ಫೆಬ್ರವರಿ: ತಿಂಗಳ 4ನೇ ಶನಿವಾರ (ವಾರದ ರಜೆ)

ಫೆಬ್ರವರಿ 27: ಭಾನುವಾರ (ವಾರದ ರಜೆ).

ಇದನ್ನೂ ಓದಿ : Best 365 Day Plans: ಯಾವ ಸಿಮ್‌ನ ಯಾವ ರೀಚಾರ್ಜ್ ಬೆಸ್ಟ್? ಕಡಿಮೆ ದುಡ್ಡಿಗೆ ಹೆಚ್ಚು ಲಾಭ ಕೊಡುವ ಇಂಟರ್‌ನೆಟ್ ಪ್ಯಾಕ್‌ಗಳಿವು

ಇದನ್ನೂ ಓದಿ : ಗೂಗಲ್‌ ಪೇಗೂ ಬರಲಿದೆ ಬಿಟ್‌ಕಾಯಿನ್‌? ಹೊಸ ಆಪ್ಶನ್ ತರಲು ಗೂಗಲ್ ಉತ್ಸುಕ

( Banks to remain closed for 12 days in February, check Bank holidays list )

Comments are closed.