Google Pay App ಮೂಲಕ ಚಿನ್ನ ಖರೀದಿ ಮತ್ತು ಮಾರಾಟ ಮಾಡಬಹುದು ಎಂಬುದು ನಿಮಗೆ ಗೊತ್ತೇ? ಹೇಗೆ ಅನ್ನುತ್ತೀರಾ?


ನೀವು ನಿಮ್ಮ ಸ್ಮಾರ್ಟ್‌ಫೋನ್‌ ಅಲ್ಲಿ Google Pay App ಇನ್ಸ್ಟಾಲ್‌ ಮಾಡಿದ್ದೀರಾ? ಈ ಆಪ್‌ ಅನ್ನು ಪೇಮೆಂಟ್‌ ಮಾಡಲು, ರಿಚಾರ್ಜ್‌ ಮಾಡಲು ಹೀಗೆ ಮುಂತಾದ ಹಲವು ಬಗೆಯ ಹಣಕಾಸಿನ ವಹಿವಾಟುಗಳಿಗೆ ಉಪಯೋಗಿಸಿಕೊಳ್ಳಬಹುದು. ಆದರೆ ನಿಮಗೆ ಗೊತ್ತೇ, ಈ ಆಪ್‌ನ ಮೂಲಕ ಚಿನ್ನವನ್ನೂ ಖರೀದಿ ಮತ್ತು ಮಾರಾಟ ಮಾಡಬಹುದೆಂದು? ಹೌದು ಎನ್ನುತ್ತದೆ ಈ ಆಪ್‌. ಚಿನ್ನವನ್ನು ಡಿಜಿಟಲ್‌ ಆಗಿ ಖರೀದಿ ಮತ್ತು ಮಾರಾಟವನ್ನು ಗೂಗಲ್‌ ಪೇಯ ಎಮ್‌ಎಮ್‌ಟಿಸಿ –ಪ್ಯಾಂಪ್‌(MMTC-PAMP) ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌(MMTC-PAMP India Pvt. Ltd.) ಮುಖಾಂತರ ಈಗಿರುವ ಪೇಮೆಂಟ್‌ ಮೆಥೆಡ್‌ನಿಂದಲೇ ಮಾಡಬಹುದು. ಇದರ ಮಾಹಿತಿಯನ್ನು ಗೂಗಲ್‌ ಪೇ ಯ ಪೇಜ್‌ ಒದಗಿಸುತ್ತದೆ. ಮಾಹಿತಿಯ ಪ್ರಕಾರ 99.99 ಪ್ರತಿಶತ ಶುದ್ಧ 24 ಕ್ಯಾರೆಟ್‌ ಚಿನ್ನವನ್ನು ಯುನಿಟ್‌ಗಳಲ್ಲಿ ಖರೀದಿ ಮತ್ತು ಮಾರಾಟವನ್ನು MMTC-PAMPನಲ್ಲಿ ಕೊಡುತ್ತದೆ. ನೀವು ತೆಗೆದುಕೊಂಡಂತಹ ಚಿನ್ನವನ್ನು ಗೋಲ್ಡ್‌ ಎಕ್ಯಮಲೇಷನ್‌ ಪ್ಲಾನ್‌(GAP) ಶೇಖರಿಸಿದರೆ MMTC- PAMP ನಿರ್ವಹಣೆ ಮಾಡುತ್ತದೆ.

ಗೂಗಲ್‌ ಪೇಯ ಮುಖಾಂತರ ನೀವು ಖರೀದಿಸಿದ ಅಥವಾ ಪಡೆದುಕೊಂಡ ಚಿನ್ನವು ಗೋಲ್ಡ್‌ ಲಾಕರ್‌ನಲ್ಲಿ ಕಾಣಿಸುತ್ತದೆ. ಅಷ್ಟೇ ಅಲ್ಲದೇ ನೀವು ನಿರ್ವಹಿಸಿದ ಚಿನ್ನದ ಎಲ್ಲಾ ವಹಿವಾಟುಗಳನ್ನು MMTC PAMP ಲಾಕರ್‌ನಲ್ಲಿ ವೀಕ್ಷಿಸಬಹುದಾಗಿದೆ. ಇದರ ಜೊತೆಗೆ, ಗೂಗಲ್‌ ಪೇ ಗೋಲ್ಡ್‌ ಲಾಕರ್‌ ನಿಮ್ಮ ಸಿಮ್‌ ಮತ್ತು ಫೋನ್‌ ನಂಬರ್‌ಗೆ ಲಿಂಕ್‌ ಆಗಿರುತ್ತದೆ. ಒಂದುವೇಳೆ ನೀವು ನಿಮ್ಮ ಸಿಮ್‌ ಅಥವಾ ಫೋನ್‌ ನಂಬರ್‌ ಬದಲಾಯಿಸಿದ್ದರೆ ಆಗ ನೀವು ಮಾಹಿತಿಗಳನ್ನು ಪರೀಕ್ಷಿಸಿ ನಿಮ್ಮ ಅಕೌಂಟ್‌ಗೆ ವರ್ಗಾಯಿಸಿಕೊಳ್ಳಬೇಕಾಗುವುದು.

ಇದನ್ನೂ ಓದಿ : Government Mobile Apps:: ಯಾರ ಕಿರಿಕಿರಿಯಿಲ್ಲದೇ ಪ್ರಯಾಣ ಮಾಡಲು ಸರ್ಕಾರದ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ!

ಗೂಗಲ್‌ ಪೇಯ ಮೂಲಕ ಚಿನ್ನ ಖರೀದಿಸುವುದು ಹೇಗೆ?

  1. ಗೂಗಲ್‌ ಪೇ ಓಪನ್‌ ಮಾಡಿ.
  2. ನ್ಯೂ ಮೇಲೆ ಕ್ಲಿಕ್‌ ಮಾಡಿ.
  3. ಸರ್ಚ್‌ ಬಾರ್‌ ಮೇಲೆ ಗೋಲ್ಡ್‌ ಲಾಕರ್‌ ಎಂದು ಟೈಪ್‌ ಮಾಡಿ ಟ್ಯಾಪ್‌ ಮಾಡಿ.
  4. ಅಲ್ಲಿರುವ ಬಾಯ್‌(Buy) ಆಪ್ಷನ್‌ ಮೇಲೆ ಟ್ಯಾಪ್‌ ಮಾಡಿ. ಮಾರುಕಟ್ಟೆಯ ಪ್ರಸ್ಥುತ ದರ ಕಾಣಿಸುವುದು. ನೀವು ಖರೀದಿಸಲು ಮುಂದಾದರೆ ಆ ದರವು 5 ನಿಮಿಷಗಳ ವರೆಗೆ ಲಾಕ್‌ ಆಗಿ ಇರುವುದು. ಈ ದರವು ದಿನಪೂರ್ತಿ ಬದಲಾಗುತ್ತಿರುತ್ತದೆ ಎನ್ನುವುದನ್ನು ತಿಳಿದಿರಬೇಕು. ಬೇರೆ ಬೇರೆ ಪ್ರದೇಶಗಳಲ್ಲಿ ಪೋಸ್ಟಲ್‌ ಕೋಡ್‌ನ ಮೇರೆಗೆ ಟ್ಯಾಕ್ಸ್‌ ಸಹ ಬದಲಾಗುವುದು ಎಂದು ತಿಳಿಯಿರಿ.
  5. ನೀವು ಎಷ್ಟು ಮೊತ್ತದ ಚಿನ್ನ ಖರೀದಿಸಬೇಕೆಂದಿರುವಿರಿ ಎಂದು ಅಲ್ಲಿ ನಮೂದಿಸಿ. ಇಂತಿಷ್ಟೇ ಖರೀದಿಸಬಹುದೆಂಬ ಯಾವುದೇ ಲಿಮಿಟ್‌ ಇಲ್ಲ. ಆದರೆ ಒಂದು ದಿನಕ್ಕೆ 50,000 ರೂ ಗಳಷ್ಟನ್ನೇ ಮಾತ್ರ ಖರೀದಿಸಬಹುದಾಗಿದೆ. ಕನಿಷ್ಟ ಖರೀದಿ ಮೊತ್ತವು 1 ರೂ. ಆಗಿದೆ. ಖರೀದಿಸುವ ಮೊದಲು KYC ವಿಧಾನಗಳು ಖರೀದಸಲು ಅವಕಾಶ ನೀಡುತ್ತದೆಯೇ ಎಂದು ತಿಳಿದುಕೊಳ್ಳಲೇ ಬೇಕು.
  6. ನಂತರ ಚೆಕ್‌ ಮಾರ್ಕ್‌ ಒತ್ತಿ.
  7. ಪರದೆಯ ಮೇಲೆ ಕಾಣಿಸುವ ಪೇಮೆಂಟ್‌ ರೀತಿಯನ್ನು ಆರಿಸಿ. ವಹಿವಾಟಿನ ಮಾಹಿತಿ ಕನ್ಫರ್‍ಮ ಆದ ನಂತರ ಅದು ನಿಮ್ಮ ಲಾಕರ್‌ನಲ್ಲಿ ಕಾಣಿಸುವುದು. ಇವಲ್ಲವೂ ಕೆಲವೇ ನಿಮಿಷಗಳಲ್ಲಿ ಆಗುವುದು.

ಇನ್ನೊಂದು ವಿಷಯ ನೆನಪಿರಲಿ ಖರೀದಿಸಿ ವಹಿವಾಟಾಗುತ್ತಿರುವಾಗ ನೀವು ಅದನ್ನು ಕ್ಯಾನ್ಸಲ್‌ ಮಾಡಲು ಆಗುವುದಿಲ್ಲ. ನೀವು ಬೇಕಾದರೆ ಅದನ್ನು ಮಾರಾಟ ಮಾಡಬಹುದು. ಪೇಮೆಂಟ್‌ ಫೇಲ್‌ ಆದರೆ 3 ವ್ಯಾವಹಾರಿಕ ದಿನಗಳಲ್ಲಿ ಅದು ನಿಮಗೆ ರೀಫಂಡ್‌ ಆಗುವುದು.

ಗೂಗಲ್‌ ಪೇ ಮೂಲಕ ಚಿನ್ನ ಮಾರಾಟ ಮಾಡುವುದು ಹೇಗೆ?

  1. ಗೂಗಲ್‌ ಪೇ ಓಪನ್‌ ಮಾಡಿ.
  2. ಅದರಲ್ಲಿ ನ್ಯೂ ಗೆ ಹೋಗಿ.
  3. ಸರ್ಚ್‌ ಬಾರ್‌ನಲ್ಲಿ ಗೋಲ್ಡ್‌ ಲಾಕರ್‌ ಎಂದು ಬರೆಯಿರಿ ಮತ್ತು ಅದನ್ನೇ ಆಯ್ದುಕೊಳ್ಳಿ.
  4. ಸೆಲ್‌(sell) ಆಯ್ದು ಕೊಳ್ಳಿ. ಪ್ರಸ್ಥುತ ಚಿನ್ನದ ದರ ಕಾಣಿಸುವುದು. ನೀವು ಸೆಲ್‌ ಮಾಡಲು ಪ್ರಾರಂಭಿಸಿದರೆ ಅದು 8 ನಿಮಿಷಗಳವರೆಗೆ ಲಾಕ್‌ ಆಗುವುದು. ಈ ದರವೂ ಸಹ ದಿನಪೂರ್ತಿ ಬದಲಾಗುತ್ತಲೇ ಇರುತ್ತದೆ. ಚಿನ್ನ ಮಾರಾಟಕ್ಕೆ ಟ್ಯಾಕ್ಸ್‌ ತಗಲುವುದಿಲ್ಲ ಎಂದು ತಿಳಿದಿರಲಿ.
  5. ನೀವು ಮಾರಾಟ ಮಾಡಬೇಕೆಂದಿರುವ ಚಿನ್ನವನ್ನು mg ಗಳಲ್ಲಿ ನಮೂದಿಸಿ. ಚಿನ್ನದ ಮಾರುಕಟ್ಟೆಯ ದರ ತೋರಿಸುವುದು. ಕನಿಷ್ಟ ದರ 1ರೂ. ಆಗಿದ್ದರೆ, ಗರಿಷ್ಟ 2ಲಕ್ಷದ ವರೆಗೂ ನೀವು ಮಾರಾಟ ಮಾಡಬಹುದು. ಚೆಕ್‌ ಮಾರ್ಕ್‌ ಒತ್ತಿ. ಮಾರಾಟವಾದ ನಂತರ ಬಂದತಹ ಹಣ ನಿಮ್ಮ ಅಕಾಂಟ್‌ನಲ್ಲಿ ಕಾಣಿಸುವುದು. ಇವೆಲ್ಲವೂ ಕೆಲವೇ ನಿಮಿಷಗಳಲ್ಲಿ ಆಗುವುದು.

ಇದನ್ನೂ ಓದಿ : WhatsApp web ನ ಸುರಕ್ಷತೆಗಾಗಿ ಟ್ರಾಫಿಕ್‌ ಲೈಟ್‌! ಈ ಬ್ರೌಸರ್‌ ಎಕ್ಸಟೆಂನ್ಷನ್‌ ನ ಉಪಯೋಗ ನಿಮಗೆ ತಿಳಿದಿದೆಯೇ!

(Guideline to how to buy or sell gold on google pay app)

Comments are closed.