Free Logo Creation: ಫ್ರೀಯಾಗಿ ಲೋಗೋ ಕ್ರಿಯೇಟ್ ಮಾಡುವುದು ಹೇಗೆ?

ಸಾಮಾಜಿಕ ಜಾಲತಾಣಗಳನ್ನು (Social Networking Media) ಕ್ರಿಯೇಟ್ ಮಾಡುವಾಗ ನಮಗೆ ನಾವು ಬಳಸುವ ಲೋಗೋ (Logo), ಇಡುವ ಹೆಸರು, ಹಾಕುವ ಕಾಂಟೆಂಟ್ಗಳು ಮುಖ್ಯ ಎನಿಸಿಕೊಳ್ಳುತ್ತವೆ.


ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ (Technology) ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದೆ. ಅಲ್ಲದೇ ದಿನದಿಂದ ದಿನಕ್ಕೆ ಹೊಸ ಹೊಸದಾದ ಅಪ್ಡೇಟ್ ಗಳನ್ನು ನೀಡುತ್ತಿದೆ. ಅದಕ್ಕೆ ತಕ್ಕಂತೆ ಇಂದು ಯೂಟ್ಯೂಬ್, ವೆಬ್ಸೈಟ್, ಬ್ಲಾಗ್, ಬ್ಯುಸಿನೆಸ್‌ಗಳು ಹೆಚ್ಚಾಗುತ್ತಲೇ ಇದೆ. ಈ ರೀತಿ ಸಾಮಾಜಿಕ ಜಾಲತಾಣಗಳನ್ನು (Social Networking Media) ಕ್ರಿಯೇಟ್ ಮಾಡುವಾಗ ನಮಗೆ ನಾವು ಬಳಸುವ ಲೋಗೋ (Logo), ಇಡುವ ಹೆಸರು, ಹಾಕುವ ಕಾಂಟೆಂಟ್ಗಳು ಮುಖ್ಯ ಎನಿಸಿಕೊಳ್ಳುತ್ತವೆ. ಹಾಗಾದರೆ ಲೋಗೋಗಳನ್ನು ಕ್ರಿಯೇಟ್ ಮಾಡುವುದು ಹೇಗೆ? ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ.


ಹೌದು. ಇದೀಗ ಬ್ರಾಂಡ್, ಬ್ಯುಸಿನೆಸ್, ಕಂಪನಿ ಯಾವುದಕ್ಕಾದರೂ ಫ್ರೀಯಾಗಿ ಲೋಗೋ ಕ್ರಿಯೇಟ್ ಮಾಡಬಹುದಾಗಿದೆ. ಮೊದಲು ಗೂಗಲ್‌ನಲ್ಲಿ (hatchful.shopify.com) ಹ್ಯಾಚ್ಫುಲ್ ಶಾಪಿಂಗ್ ಡಾಟ್ ಕಾಮ್ ಅಂತ ಟೈಪ್ ಮಾಡಿದಾಗ ಅಲ್ಲಿ ಲೋಗೋಗಳನ್ನು ಕ್ರಿಯೇಟ್ ಮಾಡುವ ಲಿಂಕ್ ಸಿಗುತ್ತದೆ. ಅದರ ಮೇಲೆ ಒತ್ತಿದಾಗ ಲಿಂಕ್ ಓಪನ್ ಆಗುತ್ತದೆ. ನಂತರ ಅಲ್ಲಿ ಇರುವ ಗೆಟ್ ಸ್ಟಾರ್ಟ್ ಅನ್ನು ಒತ್ತಿದಾಗ ನಮಗೆ ಹಲವಾರು ಬ್ಯುಸಿನೆಸ್‌ನ ವಿಧಗಳು ಕಾಣಿಸುತ್ತವೆ. ಅದು ಟೇಕ್, ಹೋಮ್, ಫುಡ್, ಗಾರ್ಡನ್ ಇತ್ಯಾದಿ ಯಾವುದೇ ಆಗಿರ ಬಹುದು. ಅದರಲ್ಲಿ ನಮಗೆ ಆಸಕ್ತಿ ಇರುವ ಬ್ಯುಸಿನೆಸ್‌ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು.


ನಂತರ ಒಂದು ಹೊಸದಾದ ಫೇಜ್ ಓಪನ್ ಆಗುತ್ತದೆ ಅದರಲ್ಲಿ ನಮ್ಮ ಬ್ಯುಸಿನೆಸ್‌ನ ಹೆಸರು ಬರೆದು ನೆಕ್ಸ್ಟ್ ಅಂತ ಒತ್ತ ಬೇಕು. ಆಗ ನಮಗೆ ತುಂಬಾ ತರಹದ options ಗಳು ಕಾಣಿಸುತ್ತವೆ. ಅದರಲ್ಲಿ ಇರುವ ಎಲ್ಲಾ optionsಗಳಿಗೆ ಟಿಕ್ ಹಾಕುತ್ತ ಹೋಗಬೇಕು. ನಂತರ ನೆಕ್ಸ್ಟ್ ಎಂದು ಒತ್ತಿದಾಗ ನಮಗೆ ಎಲ್ಲಾ ತರಹದ ಲೋಗೋ ದೊರೆಯುತ್ತದೆ. ಅದರಲ್ಲಿ ನಮಗೆ ಇಷ್ಟವಾಗುವ, ನಮ್ಮ ಬ್ಯುಸಿನೆಸ್‌ಗೆ ಸರಿ ಹೊಂದುವ ಒಂದು ಲೋಗೋ ಸೆಲೆಕ್ಟ್ ಮಾಡಿ ಡೌನ್ಲೋಡ್‌ಗೆ ಕ್ಲಿಕ್ ಮಾಡಬೇಕು. ಆಗ ಅದು ಸೈನ್ ಅಪ್ ಕೇಳುತ್ತದೆ. ಆಗ ನಾವು ಅದಕ್ಕೆ ಒಂದು ಸಲ ಸೈನ್ ಅಪ್ ಆದರೆ ಆಯಿತು. ನಂತರ ಡೌನ್ಲೋಡ್ ಆದ ಆ ಲೋಗೋ ನಮಗೆ ಬೇರೆ ಬೇರೆ ಡಿಸೈನ್‌ಗಳಲ್ಲಿ ಸಿಗುತ್ತದೆ. ಆ ಡಿಸೈನ್ ಲೋಗೋಗಳಲ್ಲಿ ನಮಗೆ ಇಷ್ಟವಾದ ಡಿಸೈನ್ ಅನ್ನು ಸೆಲೆಕ್ಟ್ ಮಾಡಿಕೊಂಡರಾಯಿತು. ಹೀಗೆ ಫ್ರೀ ಆಗಿ ನಾವು ನಮಗೆ ಬೇಕಾದ ರೀತಿಯಲ್ಲಿ ಲೋಗೋವನ್ನು ಅತಿ ಕಡಿಮೆ ಸಮಯದಲ್ಲಿ ಕ್ರಿಯೇಟ್ ಮಾಡಬಹುದು.


ಇದನ್ನೂ ಓದಿ: Fact Checking ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಸತ್ಯ ಪರಿಶೀಲಕರನ್ನು ಹೊಂದಿರುವ ದೇಶ


ಇದನ್ನೂ ಓದಿ:K L RAHUL : ಬೆಂಗಳೂರು ತಂಡಕ್ಕೆ ಮರಳುತ್ತಾರೆ ರಾಹುಲ್‌ : ಆರ್‌ಸಿಬಿಗೆ ಕನ್ನಡಿಗನೇ ನಾಯಕ

Hatchful – Creates Professional logos

Comments are closed.